16ರಿಂದ 2ನೇ ಏರ್‌ಲಿಫ್ಟ್ ; 31 ದೇಶಗಳತ್ತ 149 ‘ವಂದೇ ಭಾರತ್’ ವಿಮಾನಗಳ ಸಂಚಾರ
Team Udayavani, May 13, 2020, 9:04 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ನಿಂತ ನೆಲ, ದೇಶದಲ್ಲೇ ಅತಂತ್ರರಾಗಿದ್ದ ಅನಿವಾಸಿ ಭಾರತೀಯರನ್ನು ಕರೆತರಲು ಎರಡನೇ ಮೆಗಾ ಏರ್‌ಲಿಫ್ಟ್ ಸಜ್ಜಾಗಿದೆ.
ವಂದೇ ಭಾರತ್‌ನ ಈ ಮುಂದುವರಿದ ಕಾರ್ಯಾಚರಣೆ, ಮೇ 16- 22ರವರೆಗೆ ನಡೆಯಲಿದ್ದು, 31 ದೇಶಗಳ ಭಾರತೀಯರು ಈ ಪ್ರಯೋಜನ ಪಡೆಯಲಿದ್ದಾರೆ.
ಹೌದು, ಇದು ಮೊದಲ ಹಂತದ ಏರ್‌ಲಿಫ್ಟ್ ಗಿಂತ ದೊಡ್ಡ ಕಾರ್ಯಾಚರಣೆ. ಮೊದಲ ಹಂತದಲ್ಲಿ 64 ವಿಶೇಷ ವಿಮಾನಗಳಷ್ಟೇ ಬಳಕೆಯಾಗುತ್ತಿವೆ.
ಆದರೆ, 2ನೇ ಹಂತದಲ್ಲಿ ಬರೋಬ್ಬರಿ 149 ವಿಮಾನಗಳು ಹಾರಾಡಲಿವೆ. ಈಗಾಗಲೇ ಮೊದಲ ಹಂತದಲ್ಲಿ 6,097 ಅನಿವಾಸಿ ಭಾರತೀಯರು ಭಾರತ ತಲುಪಿದ್ದು, ಮೇ 15ರ ಒಳಗಾಗಿ ಇನ್ನೂ 9 ಸಾವಿರ ಮಂದಿ ತಾಯ್ನಾಡಿಗೆ ಮರಳುವ ನಿರೀಕ್ಷೆಯಿದೆ.
2ನೇ ಏರ್‌ಲಿಫ್ಟ್ ಎಲ್ಲೆಲ್ಲಿಂದ?: 2ನೇ ಏರ್‌ಲಿಫ್ಟ್ ನಲ್ಲಿ ಹೆಚ್ಚು ವಿಮಾನಗಳು ಅಮೆರಿಕದತ್ತ ಹಾರಾಡಲಿವೆ. ಯುಎಸ್- 13, ಯುಎಇ- 11, ಕೆನಡಾ- 10, ಇಂಗ್ಲೆಂಡ್- 9, ಆಸ್ಟ್ರೇಲಿಯಾ- 7 ಹಾಗೂ ರಷ್ಯಾದಲ್ಲಿ 6 “ವಂದೇಭಾರತ್’ನ ವಿಶೇಷ ವಿಮಾನಗಳು ಇಳಿಯಲಿವೆ.
ಉಳಿದಂತೆ, ಫ್ರಾನ್ಸ್, ಇಟಲಿ, ಜರ್ಮನಿ, ಐರ್ಲೆಂಡ್, ಆಗ್ನೇಯಾ ಏಷ್ಯಾ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನೂ 2ನೇ ಏರ್‌ಲಿಫ್ಟ್ ಕೈಹಿಡಿಯಲಿದೆ. ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳಗಳತ್ತಲೂ ತಲಾ ಒಂದೊಂದು ವಿಮಾನ ಹಾರಲಿದೆ.
ಸರ್ಕಾರದ ಗುರಿಯೇನು? ಭಾರತ ಕೈಗೊಂಡಿರುವ ಜಲ ಮತ್ತು ವಾಯು ಮಾರ್ಗ ಮೂಲಕ ಸ್ಥಳಾಂತರ ಯೋಜನೆಯು ಮೇ ಮಧ್ಯಭಾಗದ ಒಳಗಾಗಿಯೇ 2 ಲಕ್ಷ ಜನರನ್ನು ಕರೆತರುವ ಗುರಿ ಹೊಂದಿದೆ. ಜೂನ್ ಮಧ್ಯಭಾಗದಲ್ಲಿ ಅಂದಾಜು 3.5 – 4 ಲಕ್ಷ ಭಾರತೀಯ ಪ್ರಜೆಗಳನ್ನು ಕರೆತರುವ ಬೃಹತ್ ಗುರಿ, ಕೇಂದ್ರ ಸರ್ಕಾರದ ಮುಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ
Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್
Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ
Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.