![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 23, 2020, 6:03 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಈಗ ದೇಶದಲ್ಲಿ ತೀವ್ರ ಸೋಂಕು ಪೀಡಿತ ಪ್ರದೇಶಗಳನ್ನು ನಿರ್ವಹಿಸುತ್ತಿರುವುದು ಭಿಲ್ವಾರ ಮಾಡೆಲ್ ಮೂಲಕ. ಹಾಗೆಂದರೆ ಏನು ಎಂಬುದೇ ಕುತೂಹಲದ ಸಂಗತಿ.
ಕೋವಿಡ್ ವೈರಸ್ ನಿಗ್ರಹಿಸಲು ದೇಶಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಸೋಂಕಿತ ಪ್ರದೇಶಗಳನ್ನು ನಿರ್ವಹಿಸಲು ರೆಡ್, ಆರೆಂಜ್, ಗ್ರೀನ್ ಝೋನ್ ಎಂದೆಲ್ಲಾ ವಿಭಾಗಿಸಿ ಗಮನಹರಿಸಲಾಗುತ್ತದೆ.
ಇಂಥದೊಂದು ಕ್ರಮ ಹುಟ್ಟಿಕೊಂಡಿದ್ದು ರಾಜಸ್ಥಾನದ ಭಿಲ್ವಾರಾದಲ್ಲಿ. ಮೊದಲ ಪ್ರಕರಣ ಪತ್ತೆಯಾದ ಬಳಿಕ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು ಈ ಬಿಲ್ವಾರಾದಲ್ಲಿ. ಇಲ್ಲಿನ ಸರಕಾರ ಮತ್ತು ಜಿಲ್ಲಾಡಳಿತ ನಡೆಸಿದ್ದು ಸಂಘಟಿತ ಹೋರಾಟ.
ಏನಿದು ‘ಭಿಲ್ವಾರಾ ಮಾಡೆಲ್?
ಭಿಲ್ವಾರಾ ಕೋವಿಡ್ ವೈರಸ್ ಹಾಟ್ ಸ್ಪಾಟ್ ಎಂದೇ ಕರೆಯಲಾಗಿತ್ತು. ಖಾಸಗಿ ಆಸ್ಪತ್ರೆ ವೈದ್ಯರೊಬ್ಬರಿಗೆ ಸೋಂಕು ತಗುಲಿದ ಬಳಿಕ ಪ್ರಕರಣಗಳು ಏರಿಕೆಯಾದವು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ನೋಡಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ನಗರದಾದ್ಯಂತ ನಿಷೇಧಾಜ್ಞೆ (144 ಸೆಕ್ಷನ್) ಜಾರಿಗೊಳಿಸಿತು. ಇದರನ್ವಯ ಗುಂಪು ಸೇರುವಂತಿಲ್ಲ. ಅತ್ಯಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ವ್ಯವಹಾರಗಳು-ಸೇವೆಗಳು ಸ್ಥಗಿತಗೊಂಡವು.
ಜಿಲ್ಲಾಧಿಕಾರಿಗಳು ತನ್ನ ಸುತ್ತ ಮುತ್ತಲಿನ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಗಡಿಯನ್ನು ಸೀಲ್ ಡೌನ್ ಮಾಡಲು ಮನವಿ ಮಾಡಿದರು. ಗಡಿ ಬಂದ್ ಆಯಿತು. ಬಿಲ್ವಾರ ನಗರ ಬಿಟ್ಟು ಯಾರೂ ಹೊರ ಹೋಗುವಂತಿಲ್ಲ. ನಗರಕ್ಕೂ ಯಾರೂ ಬರುವಂತಿಲ್ಲ ಎಂದು ಜಿಲ್ಲಾಡಳಿತ ಘೋಷಿಸಿತು. ಕಾರ್ಖಾನೆಗಳು, ಶಾಲೆಗಳು, ವ್ಯವಹಾರಗಳು, ಸಂಸ್ಥೆಗಳು ಬಾಗಿಲು ಮುಚ್ಚಿದವು.
ನಗರದಲ್ಲಿ ಖಾಸಗಿ ವಾಹನಗಳ ಓಡಾಟವನ್ನು ತತ್‌ಕ್ಷಣವೇ ಸ್ಥಗಿತಗೊಳಿಸಲಾಯಿತು. ಇಡೀ ನಗರದಾದ್ಯಂತ “ನೋ ಮೂಮೆಂಟಟ್ ಝೋನ್’ ಆಯಿತು. ಕ್ಷಿಪ್ರ ಪರೀಕ್ಷೆಗೆ ಜನರನ್ನು ಒಳಪಡಿಸಲಾಯಿತು.
ಒಟ್ಟು ಕೋವಿಡ್ ಸೋಂಕಿತರು ದಾಖಲಾದ ಪ್ರದೇಶಗಳ ಆಧಾರದಲ್ಲಿ 6 ವಿಶೇಷ ಪ್ರದೇಶಗಳನ್ನು ಘೋಷಿಸಿ ಹೆಚ್ಚಿನ ನಿಗಾ ವಹಿಸಲಾಯಿತು. ಸೋಂಕಿತರ ಪತ್ತೆಗೆ ಹಾಗೂ ಜನರನ್ನು ತಪಾಸಣೆಗೆ ಒಳಪಡಿಸಲು ವಿಶೇಷ ತಂಡಗಳನ್ನೂ ರಚಿಸಲಾಯಿತು.
Rapid ಫೈಂಡಿಂಗ್
ಜಿಲ್ಲೆಯಾದ್ಯಂತ ಸೋಂಕಿತ ಜ್ವರದ ಲಕ್ಷಣ, ಸೋಂಕಿನ ಲಕ್ಷಣ, ಪ್ರವಾಸದ ಇತಿಹಾಸ ಸೇರಿದಂತೆ ಬಹುತೇಕ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಜತೆಗೆ ಪ್ರದೇಶಗಳನ್ನು ವಿಭಾಗಿಸಿ ತಂಡಗಳನ್ನು ರಚಿಸಿ ಉಸ್ತುವಾರಿ ವಹಿಸಲಾಯಿತು.
ಪ್ರತಿ ತಂಡದಲ್ಲಿ 8ರಿಂದ 10 ಮಂದಿ ಇರುತ್ತಿದ್ದರು. ಈ ತಂಡಕ್ಕೆ ಒಬ್ಬರು ಉಸ್ತುವಾರಿ. ದಿನ ಪೂರ್ತಿ 24×7ಕಾಲ ಕಾರ್ಯನಿರ್ವಹಿಸುವ ಕೋವಿಡ್ ವಾರ್ ರೂಂ ಸ್ಥಾಪಿಸಲಾಯಿತು.
ಶಂಕಿತರ ತಪಾಸಣೆ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಪರೀಕ್ಷಾ ಕೇಂದ್ರಗಳು ಸಜ್ಜಾಗಿದ್ದವು. ಶಂಕಿತರನ್ನು ನೇರವಾಗಿ ಕ್ವಾರಂಟೈನಲ್ಲಿಡಲಾಗುತ್ತಿತ್ತು. ಇವರಲ್ಲಿ ವಲಸೆ ಕಾರ್ಮಿಕರೂ ಸೇರಿದ್ದರು.
24 ಬೆಡ್‌ಗಳುಳ್ಳ 4 ಖಾಸಗಿ ಆಸ್ಪತ್ರೆಗಳು, 27 ಹೊಟೇಲ್‌ಗಳಿಂದ 1,541 ರೂಮ್‌ಗಳನ್ನು ಕ್ವಾರಂಟೈನ್‌ಗೆ ಬಳಸಲಾಗಿತ್ತು. ಜನರಿಗೆ ಸೀಲ್‌ಡೌನ್‌ನಿಂದ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ ಅಗತ್ಯ ಆಹಾರ ಕಿಟ್‌ಗಳನ್ನು ಮನೆಬಾಗಿಲಿಗೆ ತಲುಪಿಸಲಾಗಿತ್ತು.
ಕೆಲವೆಡೆಗಳಿಗೆ ತಯಾರಿಸಿದ ಆಹಾರಗಳನ್ನು ಪೂರೈಸಲಾಗಿತ್ತು. ಒಟ್ಟೂ ಸೋಂಕನ್ನು ಕ್ಷಿಪ್ರಗತಿಯಲ್ಲಿ ತಡೆಯುವಲ್ಲಿ ಯಶಸ್ವಿಯಾಯಿತು ಈ ಮಾದರಿ. ಹಾಗಾಗಿಯೇ ಇಡೀ ರಾಷ್ಟ್ರವೇ ಅದನ್ನು ಅನುಸರಿಸುತ್ತಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.