ವೈದ್ಯಕೀಯ ಮಾನ್ಯತೆಯ ಮಾಸ್ಕ್ ಧರಿಸಿ ; ನಿಮಗೊಪ್ಪುವ ಮಾಸ್ಕ್ ಯಾವುದು?
ಎಲ್ಲ ಮಾಸ್ಕ್ ಗಳು ನಿಮ್ಮನ್ನು ಕೋವಿಡ್ ಸೋಂಕಿನಿಂದ ರಕ್ಷಿಸಲಾರವು
Team Udayavani, May 29, 2020, 1:23 PM IST
ಮಣಿಪಾಲ: ಕೋವಿಡ್ ವೈರಸ್‌ನ ಸೋಂಕಿಗೆ ಒಳಗಾಗುವುದನ್ನು ತಪ್ಪಿಸುವ ಸಲುವಾಗಿ ಈಗ ಎಲ್ಲರೂ ಮಾಸ್ಕ್ ಧಾರಿಗಳಾಗಿದ್ದಾರೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಈಗ ನಾನಾ ನಮೂನೆಯ, ಆಕಾರದ, ಗಾತ್ರದ ಮಾಸ್ಕ್ಗಳು ಲಭ್ಯವಿವೆ. ಆದರೆ ಈ ಎಲ್ಲ ಮಾಸ್ಕ್ಗಳು ನಿಮ್ಮನ್ನು ಕೋವಿಡ್ ವೈರಸ್‌ನಿಂದ ರಕ್ಷಿಸುತ್ತವೆಯೇ? ಯಾರು ಯಾವ ರೀತಿಯ ಮಾಸ್ಕ್ ಧರಿಸಬೇಕು?ಈ ಕುರಿತಾದ ಕಿರು ಮಾಹಿತಿ ಇಲ್ಲಿದೆ.
ಸಾಮಾನ್ಯ ಮಾಸ್ಕ್: ಕಾಗದ ಅಥವಾ ಬಟ್ಟೆಯಿಂದ ಮಾಡಿದ ಮಾಸ್ಕ್ ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಸುರಕ್ಷಿತವಾಗಿದ್ದರೂ ಉಳಿದೆಡೆ ಇದನ್ನು ಬಳಸುವಂತಿಲ್ಲ. ಅದರಲ್ಲೂ ಆಸ್ಪತ್ರೆಯ ತೀವ್ರ ನಿಗಾ ಘಟಕದೊಳಗೆ ಹೋಗುವ ಸಂದರ್ಭದಲ್ಲಿ ಈ ಮಾಸ್ಕ್ ಧರಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇಲ್ಲಿ ಸೋಂಕಿಗೊಳಗಾಗುವ ಅಪಾಯ ಹೆಚ್ಚಿರುವುದರಿಂದ ವೈದ್ಯಕೀಯವಾಗಿ ಮಾನ್ಯತೆ ಪಡೆದಿರುವ ಮಾಸ್ಕ್ ಧರಿಸಬೇಕು.
ಸರ್ಜಿಕಲ್ ಮಾಸ್ಕ್: ಕಾಗದ ಅಥವಾ ಬಟ್ಟೆಯ ಮೂರು ಸ್ತರಗಳಿಂದ ತಯಾರಿಸಿದ ಸರ್ಜಿಕಲ್ ಮಾಸ್ಕ್ ಎಲ್ಲ ಸ್ಥಳಗಳಲ್ಲಿ ಧರಿಸಲು ಸುರಕ್ಷಿತ. ಕೆಮ್ಮು ಅಥವಾ ಸೀನುವಾಗ ಹೊರಬೀಳುವ ಹನಿಯನ್ನು ಈ ಮಾಸ್ಕ್ ತಡೆಯುತ್ತದೆ. ಆದರೆ 100 ನ್ಯಾನೊಮೀಟರ್‌ನಷ್ಟು (ಒಂದು ಮೀಟರ್‌ನ 100 ಕೋಟಿಯಲ್ಲೊಂದು ಭಾಗ) ಸೂಕ್ಷ್ಮವಾಗಿರುವ ವೈರಸ್ ಕಣಗಳು ಮಾತ್ರ ಈ ಮಾಸ್ಕ್ನೊಳಗೆ ನುಸುಳಿ ಹೋಗುವ ಸಾಧ್ಯತೆ ಇರುತ್ತದೆ.
ಮೂಗು ಮತ್ತು ಬಾಯಿಯನ್ನು ಮುಚ್ಚುವ ಮಾಸ್ಕ್ ಹನಿಗಳನ್ನು ತಡೆಯುವ ಸಾಮರ್ಥ್ಯ ಹೊಂದಿದ್ದರೂ ವೈರಸ್ ಕಣಗಳನ್ನು ತಡೆಯುವ ಪೂರ್ಣ ಭರವಸೆಯಿಲ್ಲ ಎನ್ನುತ್ತಾರೆ ಉಸಿರಾಟ ಸಂರಕ್ಷಣ ಸಾಧನಗಳ ಅತಿ ದೊಡ್ಡ ಪೂರೈಕೆದಾರ ಸೇಫ್ಟಿ ಫಾರ್ 3ಎಂ ಕಂಪೆನಿಯ ಮುಖ್ಯಸ್ಥ ಡಾ| ನಿಕ್ಕಿ ಮೆಕ್‌ಕಲಫ್.
ಮಾಸ್ಕ್ ಮುಖಕ್ಕೆ ಬಲವಾಗಿ ಅಂಟಿಕೊಂಡಿರಬೇಕು. ಇದರಲ್ಲಿ ಗಾಳಿ ಮೂಗಿನಿಂದ ಹೊರತಾಗಿ ಇತರೆಡೆಗಳಿಂದ ಹೊರ ಹೋಗುವ ಅಥವಾ ಹೊರ ಬರುವ ಅವಕಾಶ ಇರಬಾರದು.ಉಸಿರಾಡುವಾಗ ಎಲ್ಲ ಗಾಳಿ ಫಿಲ್ಟರ್ ಮೂಲಕವೇ ಹಾದುಹೋಗಬೇಕು. ಈ ಫಿಲ್ಟರ್‌ಗಳಲ್ಲಿ ಸೂಕ್ಷ್ಮಾತಿಸೂಕ್ಷ್ಮ ಕಣಗಳನ್ನು ತಡೆಯುವ ಸಾಧನ ಅಳವಡಿಸಿರುತ್ತೇವೆ ಇಂಥ ಮಾಸ್ಕ್ ಹೆಚ್ಚು ಸುರಕ್ಷಿತ ಎನ್ನುತ್ತಾರೆ ಡಾ| ನಿಕ್ಕಿ.
FFP ಮಾಸ್ಕ್: ಇದು ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಒಕ್ಯುಪೇಶನಲ್ ಸೇಫ್ಟಿ ಆ್ಯಂಡ್ ಹೆಲ್ತ್ ಸಂಸ್ಥೆ ಮಾನ್ಯತೆ ಹೊಂದಿರುವ ಮಾಸ್ಕ್. ಎಷ್ಟು ಶತಮಾನ ಕಣಗಳನ್ನು ತಡೆಯುತ್ತದೆ ಎಂಬುದರ ಆಧಾರದಲ್ಲಿ ಮಾಸ್ಕ್ಗೆ ನಂಬರ್ ಕೊಡಲಾಗುತ್ತದೆ. ಎನ್95 ಮತ್ತು ಎನ್99 ಮಾಸ್ಕ್ಗಳು ಶೇ. 95ರಿಂದ ಶೇ. 99 ಸೂಕ್ಷ್ಮ ಕಣಗಳನ್ನು ತಡೆಯುತ್ತವೆ. ಎನ್100 ಮಾಸ್ಕ್ ಶೇ. 99.97 ಕಣಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ.
ಎಫ್ಎಫ್ಪಿ 1 ಮಾಸ್ಕ್: ಯುರೋಪ್‌ನಲ್ಲಿ ಮಾಸ್ಕ್ಗೆ ನಂಬರ್ ಕೊಡುವ ಪದ್ಧತಿ ತುಸು ಭಿನ್ನ. ಇಲ್ಲಿನ ಎಫ್ಎಫ್ಪಿ1 ಮಾಸ್ಕ್ ಶೇ. 80ರಷ್ಟು ಕಣಗಳನ್ನು ಸೋಸುತ್ತದೆ. ಎಫ್ಎಫ್ಪಿ2 ಮಾಸ್ಕ್ ಗಳು ಶೇ. 94, ಎಫ್ಎಫ್ಪಿ3 ಶೇ.99.97 ಕಣಗಳನ್ನು ತಡೆಯುತ್ತವೆ.
ಗಾಳಿ ಶುದ್ಧೀಕರಿಸುವ ಮಾಸ್ಕ್: ಎಫ್ಎಫ್ಪಿ3ಯಷ್ಟೇ ಸಾಮರ್ಥ್ಯವಿರುವ ಆದರೆ ನೋಡಲು ಭಿನ್ನವಾಗಿರುವ ಹೆಲ್ಮೆಟ್ ಶೈಲಿಯ ಮಾಸ್ಕ್ಗಳಿವೆ. ಗಾಳಿ ಶುದ್ಧೀಕರಣ ವ್ಯವಸ್ಥೆಯನ್ನು ಈ ಮಾಸ್ಕ್ಗಳು ಹೊಂದಿವೆ. ಇದಕ್ಕೆ ಪೂರ್ತಿ ಮುಖವನ್ನು ಮುಚ್ಚುವ ಕವಚ ಅಳವಡಿಸಲಾಗಿದೆ. ಕಟ್ಟಿಕೊಳ್ಳುವ ಬೆಲ್ಟ್ನಲ್ಲಿರುವ ಪುಟ್ಟ ಯಂತ್ರಕ್ಕೆ ಸಣ್ಣ ಟ್ಯೂಬ್ ಜೋಡಿಸಲಾಗಿದೆ. ಈ ಯಂತ್ರ ಗಾಳಿಯನ್ನು ಶುದ್ಧೀಕರಿಸಿ ಕೊಡುತ್ತದೆ. ಇದು ಪಿಪಿಇ ಕಿಟ್‌ನ ಭಾಗವಾಗಿ ಈಗ ಲಭ್ಯವಿದೆ. ಸೌತಾಂಪ್ಟನ್ ವಿವಿ ಈ ಮಾದರಿಯ 1000 ಮಾಸ್ಕ್ ತಯಾರಿಸಿ ಕೊಟ್ಟಿದ್ದಾರೆ. ಸಾರ್ವಜನಿಕ ಬಳಕೆಗೆ ಇನ್ನೂ ಲಭ್ಯವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.