ವೆಟ್ ಮಾರ್ಕೆಟ್ ಕಥೆ ಕೇಳಿ: ಶೇ. 94ರಷ್ಟು ಈಗಾಗಲೇ ಓಪನ್
Team Udayavani, Apr 24, 2020, 5:18 PM IST
ಸಾಂದರ್ಭಿಕ ಚಿತ್ರ
ಮಣಿಪಾಲ: ಕೋವಿಡ್-19 ಬಂದ ಬಳಿಕ ವೆಟ್ ಮಾರ್ಕೆಟ್ ಅಥವಾ ಸಜೀವ ಮಾರುಕಟ್ಟೆ ಎಂಬ ಪದಗಳು ಹೆಚ್ಚು ಬಳಕೆಯಲ್ಲಿವೆ. ತಾಜಾ ಉತ್ಪನ್ನಗಳನ್ನು ಜಮೀನಿನಿಂದ ತರುವಂತೆಯೇ ಮಾರುಕಟ್ಟೆಯಲ್ಲಿ ಆಗ ತಾನೇ ಪ್ರಾಣಿಗಳನ್ನು ಕಡಿದು ಮಾಂಸ ಮಾರುವಂಥ ಕೇಂದ್ರವನ್ನು ವೆಟ್ ಮಾರ್ಕೆಟ್ ಎನ್ನಲಾಗುತ್ತಿದೆ. ಇತ್ತೀಚೆಗೆ ಈ ಮಾರುಕಟ್ಟೆ ಎಂಬ ಪದವು ಪಾಶ್ಚಿಮಾತ್ಯರಿಗೆ ಕೋವಿಡ್ -19ನ ಮೂಲ. ಜಾಗತಿಕವಾಗಿ ಸುಮಾರು 2 ಮಿಲಿಯನ್ ಜನರಿಗೆ ಸೋಂಕು ತಗುಲಿದ ಕೋವಿಡ್ -19 ವೈರಸ್ ಈ ಮಾರುಕಟ್ಟೆಯಲ್ಲಿ ಹುಟ್ಟಿಕೊಂಡಿದೆ ಎಂಬ ಆರೋಪ ಇತ್ತು. ವುಹಾನ್‌ನಲ್ಲಿರುವ ಈ ಮಾಂಸ ಮಾರುಕಟ್ಟೆಯಲ್ಲಿ ಮುಳ್ಳುಹಂದಿಗಳು ಮತ್ತು ಜಿಂಕೆಗಳಂತಹ ಕಾಡು ಪ್ರಾಣಿಗಳನ್ನು ಆಹಾರ ಮತ್ತು ಔಷಧಿಗಾಗಿ ಮಾರಲಾಗುತ್ತಿತ್ತು.
ಈ ವೆಟ್‌ಮಾರ್ಕೆಟ್‌ಗಳಲ್ಲಿ ಪ್ರಾಣಿಗಳನ್ನೂ ತರಕಾರಿಗಳು, ಧಾನ್ಯ ಹಾಗೂ ಇತರೆ ಗೃಹೋಪಯೋಗಿ ಉತ್ಪನ್ನಗಳೊಂದಿಗೆ ಮಾರಲಾಗುತ್ತದೆ. ಜೀವಂತ ಪ್ರಾಣಿಗಳನ್ನು ಮಾರುವುದೇ ಇಲ್ಲಿಯ ವಿಶೇಷ. ಹರಡುವ ಸಾಧ್ಯತೆ ಜೀವಂತ ಪ್ರಾಣಿಗಳನ್ನು ಮಾರುವ ಈ ಮಾರುಕಟ್ಟೆಗಳ ಮೂಲಕ ವೈರಸ್‌ಗಳು ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ಆಘಾತಕಾರಿ ವಿಷಯ ಎಂದರೆ ಪ್ರಾಣಿಗಳನ್ನು ಕಾಡುಗಳಿಂದ ಸೆರೆಹಿಡಿಯಲ್ಪಟ್ಟಿದ್ದರೆ ಅಪಾಯ ಹೆಚ್ಚು ಎನ್ನಲಾಗುತ್ತಿದೆ. ಪೋಷಿಸಿದ ಪ್ರಾಣಿಗಳು ಮತ್ತು ಕಾಡಿನಿಂದ ಹಿಡಿದು ತಂದ ಪ್ರಾಣಿಗಳಲ್ಲಿ ತುಂಬಾ ವ್ಯತ್ಯಾಸ ಇರುತ್ತದೆ.
ವಿಶೇಷವಾಗಿ ಏಷ್ಯಾದಂಥ ಭಾಗದಲ್ಲಿ ಜನರಿಗೆ, ಕೋಳಿ, ಹಂದಿಮಾಂಸ, ಮೀನು ಮತ್ತು ತರಕಾರಿಗಳಂತಹ ತಾಜಾ ಆಹಾರವನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಮುಂದಾಗುತ್ತಾರೆ. ಹಾಗಾಗಿ ಇದು ಹೆಚ್ಚು ಜನಪ್ರಿಯ. ಬಿಲಿಯನ್ ಡಾಲರ್ ವ್ಯಾಪಾರ ಈ ಮಾರುಕಟ್ಟೆಗಳು ಹಾಂಗ್‌ಕಾಂಗ್, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್, ತೈವಾನ್, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿಯೂ ಇವೆ. ಚೀನ ಸರಕಾರ 2017ರಲ್ಲಿ ನೀಡಿದ ವರದಿಯಂತೆ 73 ಬಿಲಿಯನ್ ಡಾಲರ್ ಮೌಲ್ಯದ ವಹಿವಾಟು ಈ ಮಾರುಕಟ್ಟೆಗಳಲ್ಲಿ ನಡೆಯುತ್ತದೆ.
2013 ರಲ್ಲಿ ಸಾರ್ಸ್ ವೈರಸ್ ಕಾರಣದಿಂದ ಅಧಿಕಾರಿಗಳು ಸಿವೆಟ್ ಬೆಕ್ಕುಗಳು ಮತ್ತು ಹಾವುಗಳಂತಹ ಕೆಲವು ಪ್ರಾಣಿಗಳ ಮಾರಾಟ ನಿಷೇಧಿಸಿದ್ದರು. ಆದರೆ ಕೆಲವೇ ತಿಂಗಳುಗಳ ಬಳಿಕ ನಿಷೇಧ ರದ್ದಾಯಿತು. ಅದೇ ರೀತಿ ಕೋವಿಡ್-19 ಕಾರಣದಿಂದ ಚೀನ ಸರಕಾರವು ಫೆಬ್ರವರಿ ಅಂತ್ಯದಲ್ಲಿ ಆಹಾರಕ್ಕಾಗಿ ಬಳಸುವ ಕಾಡು ಪ್ರಾಣಿಗಳ ವ್ಯಾಪಾರ ನಿಷೇಧಿಸಿತ್ತು. ಚೀನದ ಸರಕಾರಿ ಮಾಧ್ಯಮ ಕ್ಸಿಸ್ಸುವಾ ಪ್ರಕಾರ, ಮಾರ್ಚ್ 22ರ ಹೊತ್ತಿಗೆ ಈ ಮಾರುಕಟ್ಟೆಗಳ ಪೈಕಿ ಶೇ. 94ರಷ್ಟು ಪುನಃ ತೆರೆಯಲ್ಪಟ್ಟಿದೆ. ಅವುಗಳಲ್ಲಿ ಎಷ್ಟು ಕಾಡು ಪ್ರಾಣಿಗಳ ವ್ಯಾಪಾರವನ್ನು ಸಂಪೂರ್ಣವಾಗಿ ನಿಲ್ಲಿಸಿವೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.