ಕೋವಿಡ್ 19 ವೈರಸ್: ನಿಜಕ್ಕೂ ಪರಿಣಾಮಕಾರಿಯೇ ಪ್ಲಾಸ್ಮಾ ಥೆರಪಿ?


Team Udayavani, Apr 29, 2020, 6:26 AM IST

ಕೋವಿಡ್ 19 ವೈರಸ್: ನಿಜಕ್ಕೂ ಪರಿಣಾಮಕಾರಿಯೇ ಪ್ಲಾಸ್ಮಾ ಥೆರಪಿ?

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕೋವಿಡ್‌-19 ಸೋಂಕು ನಿವಾರಣೆಗೆ ಈಗಲೂ ನಿರ್ದಿಷ್ಟ ಔಷಧ/ಲಸಿಕೆ ಪತ್ತೆಯಾಗಿಲ್ಲ. ಆದರೂ ವಿಶ್ವಾದ್ಯಂತ ವಿವಿಧ ಚಿಕಿತ್ಸಾ ವಿಧಾನಗಳಂತೂ ಪ್ರಾಯೋಗಿಕವಾಗಿ ನಡೆಯುತ್ತಿವೆ. ಈ ಚಿಕಿತ್ಸಾ ವಿಧಾನಗಳಲ್ಲಿ, ಕೆಲವು ದಿನಗಳಿಂದ ಜಾಗತಿಕವಾಗಿ  ಸದ್ದು ಮಾಡುತ್ತಿರುವುದೆಂದರೆ, ‘ಪ್ಲಾಸ್ಮಾ ಥೆರಪಿ’.

ಭಾರತದಲ್ಲೂ ಕೋವಿಡ್ 19 ವೈರಸ್ ನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡುತ್ತಿರುವ ಸುದ್ದಿ ಸದ್ದು ಮಾಡುತ್ತಿರುವ ವೇಳೆಯಲ್ಲೇ, ಈ ಚಿಕಿತ್ಸೆ ನಿಜಕ್ಕೂ ಪರಿಣಾಮಕಾರಿಯೇ ಎನ್ನುವ ಪ್ರಶ್ನೆ ಏಳುತ್ತಿದೆ.

ಕೇಂದ್ರ ಸರ್ಕಾರವಂತೂ ವೈಜ್ಞಾನಿಕ ಸಾಕ್ಷ್ಯ ಲಭ್ಯವಾಗುವವರೆಗೆ ಪ್ಲಾಸ್ಮಾ ಥೆರಪಿ ಪ್ರಾಯೋಗಿಕ ಹಂತದಲ್ಲಿಯೇ ಇರಲಿದೆ, ಇದು ಅಂಗೀಕೃತ ಚಿಕಿತ್ಸೆಯಲ್ಲ, ಅಂಕೆ ತಪ್ಪಿದರೆ ಅಪಾಯಕಾರಿಯೂ ಆಗಬಲ್ಲದು ಎಂದು ಎಚ್ಚರಿಸಿದೆ.

ಇದೇ ವೇಳೆಯಲ್ಲೇ ದೆಹಲಿಯ ಆಸ್ಪತ್ರೆಯೊಂದು ಪ್ಲಾಸ್ಮಾ ಥೆರಪಿಯಿಂದ ರೋಗಿಯೊಬ್ಬರು ಗುಣಮುಖರಾಗಿದ್ದಾರೆಂದು ಹೇಳುತ್ತಿದೆ. ಹಾಗಿದ್ದರೆ ಏನಿದು ಪ್ಲಾಸ್ಮಾ ಥೆರಪಿ? ಇಲ್ಲಿದೆ ಮಾಹಿತಿ…

ಏನಿದು ಪ್ಲಾಸ್ಮಾ ಥೆರಪಿ?
ನಮ್ಮ ದೇಹದ ಮೇಲೆ ಹೊರಗಿನ ವೈರಸ್ಸು ಅಥವಾ ಬ್ಯಾಕ್ಟೀರಿಯಾಗಳು ದಾಳಿ ಮಾಡಿದಾಗ, ನಮ್ಮ ರೋಗ ನಿರೋಧಕ ವ್ಯವಸ್ಥೆಯು ಅವುಗಳನ್ನು ಮಟ್ಟ ಹಾಕಲು ಕೆಲವು ಪ್ರೋಟೀನುಗಳನ್ನು ಬಿಡುಗಡೆ ಮಾಡುತ್ತದೆ. ಈ ಪ್ರೋಟೀನನ್ನೇ ನಾವು ಆ್ಯಂಟಿಬಾಡಿ (ಪ್ರತಿಕಾಯ) ಎನ್ನುತ್ತೇವೆ. ವ್ಯಕ್ತಿಯ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಆ್ಯಂಟಿ ಬಾಡಿಗಳು ಉತ್ಪನ್ನವಾದರೆ ಆತ ಬೇಗನೇ ಚೇತರಿಸಿಕೊಳ್ಳುತ್ತಾನೆ.

ಆದರೆ, ಕೆಲವರ ರೋಗನಿರೋಧಕ ಶಕ್ತಿ ಕುಂಠಿತವಾಗಿ ಅವರ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಆ್ಯಂಟಿ ಬಾಡಿ ಉತ್ಪತ್ತಿ ಆಗದೇ ಇರಬಹುದು. ಆಗ, ಚೇತರಿಸಿಕೊಂಡ ವ್ಯಕ್ತಿಯ ದೇಹದಲ್ಲಿನ ಆ್ಯಂಟಿಬಾಡಿಗಳನ್ನು ತೀವ್ರ ಅಸ್ವಸ್ಥವಾಗಿರುವ ಅಥವಾ ರೋಗ ಸಂಭಾವ್ಯತೆ ಅಧಿಕವಿರುವರಿಗೆ ಕೊಡಲಾಗುತ್ತದೆ. ಇದರಿಂದಾಗಿ, ಆ್ಯಂಟಿಬಾಡಿ ದಾನ ಪಡೆದವರ ರೋಗನಿರೋಧಕ ವ್ಯವಸ್ಥೆಗೆ ಬಲ ದೊರೆಯುತ್ತದೆ. ಈ ಆ್ಯಂಟಿಬಾಡಿಗಳು ‘ಪ್ಲಾಸ್ಮಾ’ ಎನ್ನುವ ನಮ್ಮ ರಕ್ತದ ದ್ರವ ಭಾಗದಲ್ಲಿ ಇರುತ್ತವೆ. ರಕ್ತದಿಂದ ಬಿಳಿ ರಕ್ತ ಕಣ, ಕೆಂಪು ರಕ್ತಕಣ ಹಾಗೂ ಪ್ಲೇಟ್‌ ಲೆಟ್‌ಗಳನ್ನು ಪ್ರತ್ಯೇಕಿಸಿದಾಗ ಪ್ಲಾಸ್ಮಾ ದೊರೆಯುತ್ತದೆ.

ಈ ರೀತಿಯ ಚಿಕಿತ್ಸಾ ವಿಧಾನ ಹಿಂದೆಯೂ ಇತ್ತೇ?
1890ರಲ್ಲಿ ಜರ್ಮನಿಯ ವೈದ್ಯ ಎಮಿಲ್‌ ವಾನ್‌ ಬೆಹ್ರಿಂಗ್‌ ಇದೇ ರೀತಿಯ ಚಿಕಿತ್ಸೆಯನ್ನು ಮೊದಲು ಪ್ರಯೋಗಿಸಿದ್ದರು. ಡಿಫ್ತೀರಿಯಾದಿಂದ ಬಳಲುತ್ತಿದ್ದ ಮೊಲವೊಂದರ ಸೀರಂನ್ನು (ರಕ್ತಸಾರ) ಹೊರತೆಗೆದ ಅವರು, ಈ ರಕ್ತಸಾರವು ಡಿಫ್ತೀರಿಯಾ ತಡೆಗಟ್ಟಲು ಪರಿಣಾಮಕಾರಿ ಎನ್ನುವುದನ್ನು ಪತ್ತೆಹಚ್ಚಿದರು.

ಇದಷ್ಟೇ ಅಲ್ಲದೇ, ಮನುಷ್ಯರ ಮೇಲೂ ಶತಮಾನದ ಹಿಂದೆ ಈ ರೀತಿಯ ಪ್ರಯೋಗಗಳಾಗಿದ್ದವು. 1918ರಲ್ಲಿ ಸ್ಪಾನಿಶ್‌ ಫ್ಲ್ಯೂ ಸಾಂಕ್ರಾಮಿಕದ ವೇಳೆ, 1920ರಲ್ಲಿ ಡಿಫ್ತೀರಿಯಾ ಹಾವಳಿ ಇದ್ದವೇಳೆ, ಗುಣಮುಖರಾದವರ ಸೀರಂ ಅನ್ನು ಅನ್ಯ ರೋಗಿಗಳಿಗೆ ಕೊಡಲಾಗಿತ್ತು.

ಆದರೆ ಆ ವೇಳೆ, ಅದರಿಂದ ಪ್ರಯೋಜನವೇನೂ ಆಗಿರಲಿಲ್ಲ. ಬದಲಾಗಿ ಸೈಡ್‌ಎಫೆಕ್ಟ್ ಗಳು ಹೆಚ್ಚಾಗಿದ್ದವು. ಆ ಸಮಯದಲ್ಲಿ ವೈದ್ಯಕೀಯ ವಿಜ್ಞಾನ ಅಂಬೆಗಾಲಿಡುತ್ತಿದ್ದದ್ದು ಇದಕ್ಕೆ ಕಾರಣವಾಗಿತ್ತು. ಆದರೆ ಈಗ, ಅಂದರೆ ಕಳೆದೊಂದು ದಶಕದಲ್ಲಿ  ಕನ್ವಲ್‌ಸೆಂಟ್‌ ಪ್ಲಾಸ್ಮಾ ಥೆರಪಿಯು ವೈರಾಣು ಸಾಂಕ್ರಾಮಿಕದ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಿದೆ.

2009-2010ರ ವೇಳೆಯ ಎಚ್‌1ಎನ್‌1 ಸಾಂಕ್ರಾಮಿಕದ ಸಮಯದಲ್ಲಿ ಹಾಗೂ 2018ರ ವೇಳೆ ಎಬೊಲಾ ಪೀಡಿತರಿಗಂಎ ಚಿಕಿತ್ಸೆ ನೀಡುವಲ್ಲಿ…ಅಲ್ಲದೇ ಸಾರ್ಸ್‌, ಮರ್ಸ್‌ ವೈರಾಣು ಆಪತ್ತಿನ ಸಮಯದಲ್ಲೂ ಈ ಚಿಕಿತ್ಸಾ ವಿಧಾನವನ್ನು ಬಳಸಲಾಗಿದೆ.

ನಿರ್ಭೀತಿಯಿಂದ ಪ್ಲಾಸ್ಮಾ ದಾನ ಮಾಡಬಹುದು
ಕೋವಿಡ್ ಸೋಂಕಿನಿಂದ ಗುಣಮುಕ್ತರಾದವರು ಯಾವುದೇ ಭಯವಿಲ್ಲದೇ ಪ್ಲಾಸ್ಮಾ ದಾನ ಮಾಡಬಹುದು. ಪ್ಲಾಸ್ಮಾ ದಾನ ಮಾಡುವುದರಿಂದಾಗಿ, ದೌರ್ಬಲ್ಯ, ನಿಶ್ಶಕ್ತಿ ಕಾಡುವುದಿಲ್ಲ. ಈ ಬಗ್ಗೆ ಅನವಶ್ಯಕ ಆತಂಕ ಬೇಡ ಎನ್ನುತ್ತಾರೆ ವೈದ್ಯರು.

14 ದಿನದಿಂದ 20 ದಿನ
ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ಪ್ಲಾಸ್ಮಾ ದಾನ ಮಾಡಬಹುದು ಎನ್ನುವುದು ಸುಳ್ಳು. ಸೋಂಕಿತನೊಬ್ಬ ಸಂಪೂರ್ಣವಾಗಿ ರೋಗದಿಂದ ಗುಣಮುಕ್ತನಾದ ನಂತರವೇ (ಅದೂ ಕನಿಷ್ಠ 14 ದಿನಗಳ ನಂತರ) ಆತನಿಂದ ಪ್ಲಾಸ್ಮಾ ಪಡೆಯಲಾಗುತ್ತದೆ.

ರಕ್ತದಾನದಂತೆಯೇ…
ಪ್ಲಾಸ್ಮಾ ದಾನ ಕೂಡ ರಕ್ತದಾನದಂತೆಯೇ ಇರುತ್ತದೆ. ಒಂದು ಮಷೀನ್‌, ದಾನಿಗಳಿಂದ ಪಡೆದ ರಕ್ತದಿಂದ ಕೆಂಪು ರಕ್ತ ಕಣಗಳನ್ನು ಹಾಗೂ ಪ್ಲಾಸ್ಮಾವನ್ನು ಬೇರ್ಪಡಿಸುತ್ತದೆ. ಈ ಪ್ರಕ್ರಿಯೆಗೆ ಹೆಚ್ಚೆಂದರೆ ಒಂದು ತಾಸು ಸಮಯ ಬೇಕಾಗುತ್ತದೆ.

ಹಾಗೆಂದು, ಚೇತರಿಸಿಕೊಂಡವರೆಲ್ಲ ಪ್ಲಾಸ್ಮಾ ದಾನಕ್ಕೆ ಅರ್ಹರಾಗುತ್ತಾರೆ ಎಂದೇನೂ ಇಲ್ಲ. ವ್ಯಕ್ತಿಯು ದೈಹಿಕವಾಗಿ ಸದೃಢನಾಗಿರಬೇಕು. ಕೋವಿಡ್‌-19 ನಿಂದ ಗುಣಮುಖರಾದವರಲ್ಲಿ ಅನೇಕರು 60-65ವರ್ಷಕ್ಕೂ ಮೇಲ್ಪಟ್ಟವರಿದ್ದು, ಇವರಲ್ಲಿ ಅನ್ಯ ಖಾಯಿಲೆಗಳು, ಆರೋಗ್ಯ ಸಮಸ್ಯೆಗಳು ಇರುತ್ತವೆ. ಹೀಗಾಗಿ, ಸೋಂಕಿನಿಂದ ಗುಣಮುಖರಾದವರೆಲ್ಲ ದಾನಿಗಳಾಗಲಾರರು.

ಪ್ಲಾಸ್ಮಾ ಥೆರಪಿ ಅಂಗೀಕೃತ ಚಿಕಿತ್ಸೆಯಲ್ಲ-ಕೇಂದ್ರದ ಎಚ್ಚರಿಕೆ
ಕೋವಿಡ್‌ 19 ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಅನುಮತಿಗೊಳಪಟ್ಟ ಚಿಕಿತ್ಸೆಯಲ್ಲ, ಇದು ಅಪಾಯಕ್ಕೂ ಎಡೆಮಾಡಿಕೊಡಬಲ್ಲದು ಎಂದು ಕೇಂದ್ರ ಸರ್ಕಾರ ಮಂಗಳವಾರ ಎಚ್ಚರಿಸಿದೆ. ದೇಶದಲ್ಲಿ ಕೋವಿಡ್‌ 19ಗೆ ಯಾವುದೇ ಅಂಗೀಕೃತ ಚಿಕಿತ್ಸೆ ಇಲ್ಲ, ಇದರಲ್ಲಿ ಪ್ಲಾಸ್ಮಾ ಥೆರಪಿ ಕೂಡಾ ಸೇರಿದೆ.

ಪ್ಲಾಸ್ಮಾ ಥೆರಪಿ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಒಂದು ವೇಳೆ ಇದನ್ನು ಸಮರ್ಪಕವಾಗಿ ಬಳಕೆ ಮಾಡದಿದ್ದರೆ, ಇದು ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್‌ ಅಗರ್ವಾಲ್‌ ತಿಳಿಸಿದ್ದಾರೆ.

ಕೋವಿಡ್‌ 19 ವೈರಸ್‌ಗೆ ಪ್ಲಾಸ್ಮಾ ಥೆರಪಿ ಫ‌ಲಕಾರಿ ಎಂಬುದು ವೈಜ್ಞಾನಿಕ ಸಾಕ್ಷ್ಯ ಲಭ್ಯವಾಗುವವರೆಗೆ ಇದು ಪ್ರಾಯೋಗಿಕ ಹಂತದಲ್ಲಿಯೇ ಇರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.