ವೈರಸ್‌ನ R ನಂಬರ್ ಎಂದರೇನು?
Team Udayavani, May 22, 2020, 11:19 AM IST
ಸಾಂದರ್ಭಿಕ ಚಿತ್ರ
ಮಣಿಪಾಲ : ಕೋವಿಡ್ ವೈರಸನ್ನು ಅರ್ಥ ಮಾಡಿಕೊಳ್ಳುವಲ್ಲಿ ಒಂದು ಸರಳವಾದ ಆದರೆ ಅಷ್ಟೇ ಮಹತ್ವದ ಸಂಖ್ಯೆಯಿದೆ. ಇದನ್ನುR ನಂಬರ್ ಎನ್ನುತ್ತಾರೆ? ಈ ನಂಬರ್ ಸರಕಾರಗಳಿಗೆ ಜನರ ಪ್ರಾಣವನ್ನು ಉಳಿಸಿಕೊಳ್ಳುವ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಮಾರ್ಗಸೂಚಿಯನ್ನು ಒದಗಿಸುತ್ತದೆ.
ಹಾಗಾದರೆ ಈ R ನಂಬರ್ ಎಂದರೇನು?
R ನಂಬರ್ ಎಂದರೆ reproduction number ಎಂದರ್ಥ. ವೈರಸ್ ಯಾವ ಪ್ರಮಾಣದಲ್ಲಿ ಪುನರುತ್ಪತ್ತಿಯಾಗುತ್ತಿದೆ ಎನ್ನುವುದನ್ನು ತಿಳಿಸುವ ಸಂಖ್ಯೆಯಿದು. ಒಬ್ಬ ಸೋಂಕಿತನಿಂದ ಇನ್ನೊಬ್ಬ ಸೋಂಕಿತನಿಗೆ ಸರಾಸರಿಯಾಗಿ ಎಷ್ಟು ವೈರಸ್ ಹರಡುತ್ತದೆ ಎನ್ನುವುದನ್ನು ಈ ಸಂಖ್ಯೆಯ ಮೂಲಕ ಕಂಡುಕೊಳ್ಳಲಾಗುತ್ತದೆ. ದಡಾರ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಗರಿಷ್ಠ 15 reproduction number ಹೊಂದಿತ್ತು. ಕೋವಿಡ್ ವೈರಸ್ 3 reproduction number ಹೊಂದಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಆದರೆ ಇದಿನ್ನೂ ದೃಢಪಟ್ಟಿಲ್ಲ.
ಲೆಕ್ಕಾಚಾರ ಹೇಗೆ?
ಮರಣದ ಪ್ರಮಾಣ, ಆಸ್ಪತ್ರೆಗೆ ದಾಖಲಾದವರ ಸಂಖ್ಯೆ, ಪೊಸಿಟಿವ್ ಆದ ಪ್ರಕರಣಗಳ ಸಂಖ್ಯೆ ಈ ಮುಂತಾದ ದತ್ತಾಂಶಗಳನ್ನು ವಿಶ್ಲೇಷಿಸಿ ಈ ಸಂಖ್ಯೆಯನ್ನು ಪಡೆದುಕೊಳ್ಳಲಾಗುತ್ತದೆ. ಈ ಮೂಲಕ ವೈರಸ್ ಹರಡುವ ವೇಗ ಎಷ್ಟು ಎನ್ನುವುದನ್ನು ಲೆಕ್ಕ ಹಾಕುತ್ತಾರೆ. ಇದರ ಆಧಾರದಲ್ಲಿ ಸರಕಾರಗಳು ಅದನ್ನು ನಿಯಂತ್ರಿಸಲು ಕಾರ್ಯ ಯೋಜನೆ ರೂಪಿಸುತ್ತವೆ. reproduction number ಒಂದಕ್ಕಿಂತ ಹೆಚ್ಚು ಇದ್ದರೆ ಅಪಾಯಕಾರಿ ಎಂದು ಲೆಕ್ಕ. ಇಂಥ ಸಂದರ್ಭದಲ್ಲಿ ವೈರಸ್ ಹರಡುವ ವೇಗ ನಿಯಂತ್ರಣಕ್ಕೆ ಸಿಗುವುದು ಕಷ್ಟವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.