ಕೋವಿಡ್‌ಗೆ ಔಷಧ ಯಾವಾಗ ತಯಾರಾಗುತ್ತೆ?

ಸಂಶೋಧಕರ ಪ್ರಕಾರ ಕೋವಿಡ್‌ಗೆ ಔಷಧ ಕಂಡುಹಿಡಿಯಲು 1 ವರ್ಷ ಅಥವಾ 18 ತಿಂಗಳು ಬೇಕಾಗುತ್ತದೆ.

Team Udayavani, Jun 12, 2020, 11:46 AM IST

ಕೋವಿಡ್‌ಗೆ ಔಷಧ ಯಾವಾಗ ತಯಾರಾಗುತ್ತೆ?

ಸಾಂದರ್ಭಿಕ ಚಿತ್ರ

ಲಂಡನ್‌: ಕೋವಿಡ್‌ಗೆ ಔಷಧ ಕಂಡು ಹಿಡಿಯುತ್ತಿದ್ದಾರಾ? ಜನ ದೊಡ್ಡ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ಔಷಧ ಕಂಡುಹಿಡಿಯಲು ಇನ್ನೆಷ್ಟು ಸಮಯ ಬೇಕು ಎನ್ನುವ ಪ್ರಶ್ನೆಗಳು ನಮ್ಮಲ್ಲಿ ಸಾಮಾನ್ಯವಾಗಿವೆ. ಔಷಧ ಕಂಡುಹಿಡಿಯುವ ಪ್ರಕ್ರಿಯೆ ಹಲವು ಹಂತಗಳನ್ನು ಒಳಗೊಂಡಿದೆ. ಸೋಂಕು ಪೀಡಿತರಿಗೆ ದೊಡ್ಡ ಸಂಖ್ಯೆಯಲ್ಲಿ ಅದನ್ನು ನೀಡಿದಾಗಲಷ್ಟೇ ಅದರ ಪರಿಣಾಮವನ್ನು ನಿರ್ಧರಿಸಬಹುದು.

ಎಷ್ಟು ಸಮಯ ಬೇಕು?
ಈ ಕಾರಣ ತುರ್ತಾಗಿ ಔಷಧ ಕಂಡುಹಿಡಿಯಬೇಕಾದ ಒತ್ತಡ ದಲ್ಲಿ ಸಂಶೋಧಕ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್‌ ಔಷಧ ಸಂಶೋಧಕರಿಗೆ ಸವಾ ಲಾಗಿರುವುದು ಅತಿ ಕಡಿಮೆ ಸಮಯದಲ್ಲಿ ಔಷಧ ಕಂಡುಹಿಡಿಯಬೇಕಿರುವುದು ಮತ್ತು ದೊಡ್ಡ ಜನಸಂಖ್ಯೆಯಲ್ಲಿ ಔಷಧ ಪ್ರಯೋಗಿಸಿದಾಗ ಅದರ ಪರಿಣಾಮವೇನೆಂದು ತಿಳಿಯುವುದು. ಕೋವಿಡ್‌ ಬಗ್ಗೆ ಈಗ ಹೆಚ್ಚಿನ ಸಂಶೋಧನೆಗಳು ನಡೆದರೂ ಅದರ ಪ್ರತಿಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ, ಪ್ರದೇಶವಾರು ಭಿನ್ನವಾಗಿದೆ. ಸಂಶೋಧಕರ ಪ್ರಕಾರ ಕೋವಿಡ್‌ಗೆ ಔಷಧ ಕಂಡುಹಿಡಿಯಲು 1 ವರ್ಷ ಅಥವಾ 18 ತಿಂಗಳು ಬೇಕಾಗುತ್ತದೆ. ಆದರೆ ನಿರ್ದಿಷ್ಟ ಸಾಂಕ್ರಾಮಿಕ ಕಾಯಿಲೆಯ ಸಮಯವಲ್ಲ ಎಂದಾದರೆ ಔಷಧ ಕಂಡುಹಿಡಿಯಲು 10 ವರ್ಷಗಳೇ ತಗುಲಬಹುದು. ಸದ್ಯ ಹಲವಾರು ತಂಡಗಳು ಕೋವಿಡ್‌ಗೆ ಔಷಧ ಕಂಡುಹಿಡಿಯುವತ್ತ ಕೆಲಸಗಳನ್ನು ಮಾಡುತ್ತಿವೆ. ಕೆಲವೊಂದು ಔಷಧಗಳನ್ನು ಪ್ರಯೋಗಿಸುವ ಹಂತದವರೆಗೆ ಬಂದಿವೆ. ಆದರೆ ಈ ವಿಚಾರದಲ್ಲಿ ಹೆಚ್ಚೆಚ್ಚು ಪ್ರಯೋಗಗಳನ್ನು ಮಾಡಬೇಕಿರುತ್ತದೆ. ಹಾಗಾದಾಗಲೇ ಔಷಧ ಪರಿಣಾಮ ಅಧ್ಯಯನ ಮತ್ತು ಕೋವಿಡ್‌ ವಿರುದ್ಧ ಕೆಲಸ ಮಾಡುವುದರ ಬಗ್ಗೆ ದತ್ತಾಂಶ ಸಂಗ್ರಹಿಸಲು ಸಾಧ್ಯ.

ಪರಿಣಾಮದ ಲೆಕ್ಕಚಾರ
ಲ್ಯಾಬ್‌ನ ಹಂತದಲ್ಲಿ, ಜನ ಸಮೂಹದಲ್ಲಿ ಉಪಯೋಗಿಸುವ ವೇಳೆ ಅದರ ಸುರಕ್ಷತೆ, ಪರಿಣಾಮಕಾರಿ, ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಅಧ್ಯಯನ ಮಾಡಬೇಕು. ಇದರೊಂದಿಗೆ ಸದ್ಯ ಕೋವಿಡ್‌ಗೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಬಲ್ಲ ಹೊಸ ತಲೆಮಾರಿನ ಎಮ್‌ಆರ್‌ಎನ ಔಷಧಗಳ ಸಂಶೋಧನೆಗಳೂ ಪ್ರಗತಿಯಲ್ಲಿವೆ. ವೈರಸ್‌ಗಳು ಜನ ಸಮೂಹದಲ್ಲಿ ತಿರುಗು ತ್ತಲೇ ಇದ್ದಾಗ ಔಷಧ ಶೋಧನೆ ಮಾರ್ಗವೂ ಸುಲಭ.
ಇದರೊಂದಿಗೆ ಔಷಧ ಪ್ರಯೋಗದ ವೇಳೆ ಆರೋಗ್ಯವಂತ ವ್ಯಕ್ತಿಗೆ ಅದು ಬೀರುವ ಪರಿಣಾಮ ಮತ್ತು ರೋಗ ಪೀಡಿತ ವ್ಯಕ್ತಿಯ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ದತ್ತಾಂಶ ಸಂಗ್ರಹಿಸಬೇಕಿರುತ್ತದೆ. ಇಂತಹ ಪ್ರಯೋಗಗಳು ಹಲವು ಹಂತಗಳು ಮತ್ತು ವ್ಯತ್ಯಾಸಗಳನ್ನು ಹೊಂದಿವೆ. ಹೊಸ ತಲೆಮಾರಿನ ಔಷಧಗಳನ್ನು ರೋಗ ತಡೆಗಾಗಿ ಬಳಸುವುದೂ ಇದ್ದು, ಈ ಹಿನ್ನೆಲೆಯಲ್ಲೂ ಔಷಧ ಎಷ್ಟು ಪರಿಣಾಮಕಾರಿ ಎಂದು ನೋಡಬೇಕಾಗಿರುತ್ತದೆ.

ಸದ್ಯದ ಹೊಸ ಔಷಧ ತಯಾರಾದರೂ ಎಲ್ಲರ ಮೇಲೆ ಪ್ರಯೋಗ ಮಾಡಲು, ಪರಿಣಾಮ ದಾಖಲಿಸಿ ಕೊಳ್ಳಲು ಕಷ್ಟವಾಗು ತ್ತದೆ. ಆದ್ದರಿಂದ ವಿಶ್ವದ ವಿವಿಧೆಡೆ ನಡೆಯುತ್ತಿರುವ ಸಂಶೋಧನೆ ಗಳು ಫ‌ಲ ನೀಡಲಿ ಎಂದೇ ಆಶಿಸಬೇಕಾಗುತ್ತದೆ. ಇದರಿಂದ ಆಯಾ ಭಾಗದ ಮನುಷ್ಯರ ಮೇಲೆ ಪರಿಣಾಮ ಬೀರುವ ವಿವಿಧ ಔಷಧಗಳು ತಯಾರಾಗಿ, ವರ್ಷ ಅಥವಾ ತಿಂಗಳ ಬಳಿಕ ಹೊಸ ಔಷಧ ಅಥವಾ ತಡೆ ಔಷಧ ಹುಟ್ಟಲು ಕಾರಣವಾಗಬಹುದು ಎನ್ನುತ್ತಾರೆ ಸಂಶೋಧಕರು.

ಆಯುರ್ವೇದದಲ್ಲಿ ಮದ್ದು?
ಇತ್ತ ಭಾರತದಲ್ಲೂ ಕೋವಿಡ್‌ ವಿರುದ್ಧ ಔಷಧ ಕಂಡುಹಿಡಿಯುವ ಹಲವು ಪ್ರಯತ್ನಗಳು ನಡೆದಿವೆ. ಆಯುರ್ವೇದದಲ್ಲಿ ಹೇಳುವ ಅಶ್ವಗಂಧ ಕೋವಿಡ್‌ನ‌ಂತಹ ವೈರಸ್‌ಗಳಿಗೆ ಪರಿಣಾಮಕಾರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ದಿಲ್ಲಿ ಐಐಟಿಯ ದೈಲ್ಯಾಬ್‌ ಮತ್ತು ಜಪಾನ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್‌ ಡ್‌ ಇಂಡಸ್ಟ್ರಿಯಲ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯ ಸಂಶೋ ಧಕರು ಹೇಳುತ್ತಾರೆ. ಇದರಲ್ಲಿರುವ ಜೈವಿಕ ರಾಸಾಯನಿಕವು ಕೋವಿಡ್‌ ವೈರಾಣು ವಿರುದ್ಧ ಹೋರಾಡಬಲ್ಲ ಶಕ್ತಿ ಹೊಂದಿದೆ. ಇದನ್ನು ಬಳಸಿಕೊಂಡು ಹೊಸ ಮಾದರಿಯ ಔಷಧ ಕಂಡುಹಿಡಿಲು ಯತ್ನಿಸಬಹುದು ಎಂದು ಹೇಳುತ್ತಾರೆ. ಇದರೊಂದಿಗೆ ಭಾರತದ ಕೌನ್ಸಿಲ್‌ ಆಫ್ ಅಗ್ರಿಕಲ್ಚರ್‌ ರಿಸರ್ಚ್‌ನ ತಂಡವೂ, ಅಶ್ವಗಂಧ ಪರಿಣಾಮಕಾರಿ ಔಷಧ ಆಗಬಲ್ಲದು ಎಂದು ಹೇಳುತ್ತದೆ. ಜತೆಗೆ ಆಯುರ್ವೇದದಲ್ಲಿ ಹೇಳುವ ಹಲವು ಗಿಡಮೂಲಿಕೆಗಳಲ್ಲಿ ಕೋವಿಡ್‌ ವೈರಾಣು ಮಣಿಸುವ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಂಗತಿಗಳಿದ್ದು, ಇವುಗಳು ಮಾನವನ ಜೀವಕೋಶ ವ್ಯವಸ್ಥೆಯನ್ನು ಬಲಯುತವಾಗಿಸುತ್ತದೆ ಎನ್ನುತ್ತಾರೆ.

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.