ಮಕ್ಕಳ ಮೇಲೆ ಕೋವಿಡ್ ಸುದೀರ್ಘ ಪರಿಣಾಮ ಬೀರೀತೇ?
190 ದೇಶಗಳ 1.6 ಶತಕೋಟಿ ಮಕ್ಕಳ ಶಿಕ್ಷಣದ ಮೇಲೆ ಕೋವಿಡ್ ಪರಿಣಾಮ
Team Udayavani, Jun 5, 2020, 1:44 PM IST
ಸಾಂದರ್ಭಿಕ ಚಿತ್ರ
ಮಣಿಪಾಲ : ಕೋವಿಡ್ ವೈರಸ್ ಮಕ್ಕಳ ಬಾಳಿನುದ್ದಕ್ಕೂ ಪರಿಣಾಮ ಬೀರಬಹುದೇ? ಹೌದು ಎನ್ನುತ್ತಾರೆ ಕೆಲವು ತಜ್ಞರು. ಕೋವಿಡ್‌ನಿಂದಾಗಿ ಮಕ್ಕಳ ಶಿಕ್ಷಣ, ಕೌಶಲ, ಮಾನಸಿಕ ಮತ್ತು ದೈಹಿಕ ಆರೋಗ್ಯ ಏರುಪೇರಾಗಿದೆ. ಈ ಎಲ್ಲ ಅಂಶಗಳು ದೀರ್ಘಕಾಲ ಅವರನ್ನು ಕಾಡಲಿದೆ. ಬಹುತೇಕ ಬಾಳಿನುದ್ದಕ್ಕೂ ಅವರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ ಎನ್ನುವುದು ತಜ್ಞರ ಅಭಿಮತ.
ಶಾಲೆಗಳನ್ನು ಮರಳಿ ತೆರೆಯುವುದು ಈಗ ಹೆಚ್ಚಿನೆಲ್ಲ ದೇಶಗಳ ಮುಂದಿರುವ ಸವಾಲು. ಇದು ಅತಿ ಹೆಚ್ಚು ಚರ್ಚೆಗೀಡಾದ ವಿಚಾರವೂ ಹೌದು. ಬ್ರಿಟನ್‌ನಲ್ಲಿ ಶಾಲೆಗಳನ್ನು ತೆರೆದಿದ್ದರೂ ಹಾಜರಾತಿ ಬಹಳ ಕಡಿಮೆಯಿದೆ ಹಾಗೂ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ.
ಯುನೆಸ್ಕೊ ವರದಿಯ ಪ್ರಕಾರ 190 ದೇಶಗಳ 1.6 ಶತಕೋಟಿ ಮಕ್ಕಳ ಶಿಕ್ಷಣದ ಮೇಲೆ ಕೋವಿಡ್ ವೈರಸ್ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ. ಅರ್ಥಾತ್ ಶೇ. 90 ಮಕ್ಕಳ ಶಿಕ್ಷಣ ಕೋವಿಡ್‌ನಿಂದಾಗಿ ಬಾಧಿತವಾಗಿದೆ. ಇನ್ನೂ ಜಗತ್ತಿನ ಅರ್ಧಕ್ಕೂ ಹೆಚ್ಚು ದೇಶಗಳಲ್ಲಿ ಶಾಲೆಗಳನ್ನು ಯಾವ ರೀತಿ ಮರಳಿ ತೆರೆಯಬೇಕೆನ್ನುವ ವ್ಯವಸ್ಥಿತ ಯೋಜನೆಯೇ ಸಿದ್ಧವಾಗಿಲ್ಲ.
ಶಾಲೆಗಳನ್ನು ಮುಚ್ಚುವುದರಿಂದ ಕೋವಿಡ್ ವೈರಸ್ ಪ್ರಸರಣವನ್ನು ಎಷ್ಟು ಪರಿಣಾಮಕಾರಿಯಾಗಿ ತಡೆಯಲಾಗಿದೆ ಎಂಬ ದತ್ತಾಂಶ ಯಾವ ದೇಶದ ಬಳಿಯೂ ಇಲ್ಲ. ಆದರೆ ಎಲ್ಲ ದೇಶಗಳು ಆದ್ಯತೆಯಲ್ಲಿ ಶಾಲೆಗಳನ್ನು ಮುಚ್ಚಿವೆ.
ನಾಟಿಂಗಾಮ್ ವಿವಿಯ ಸಾಂಕ್ರಾಮಿಕ ರೋಗ ತಜ್ಞ ರಿಚರ್ಡ್ ಆರ್ಮಿಟೇಜ್ ಹೇಳುವ ಪ್ರಕಾರ ಶಾಲೆಗಳನ್ನು ಮುಚ್ಚಿರುವುದರಿಂದ ವೈರಸ್ ಪ್ರಸರಣವನ್ನು ಎಷ್ಟು ತಡೆಯಲಾಗಿದೆ ಎಂಬ ಪ್ರಶ್ನೆಯನ್ನು ಶಾಲೆಗಳನ್ನು ಮರಳಿ ತೆರೆಯಲು ಸಮರ್ಥನೆಯಾಗಿ ಬಳಸಿಕೊಳ್ಳಬಾರದು.
ಜನರು ಹೆಚ್ಚಿರುವ ಒಳಾಂಗಣಗಳಲ್ಲಿ ವೈರಸ್ ಹರಡುವ ಸಾಧ್ಯತೆ ಅಧಿಕ ಎನ್ನುವುದು ನಮಗೆ ಗೊತ್ತಿದೆ. ಅದರಲ್ಲೂ ಮಕ್ಕಳು ವೈರಸ್‌ಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚು ಇದೆ.
ಅಲ್ಲದೆ ಅವರು ಸುಲಭ ವಾಹಕರೂ ಆಗಬಹುದು. ಮನೆಯಲ್ಲಿರುವ ಅಜ್ಜ-ಅಜ್ಜಿಗೆ, ಅಪ್ಪ-ಅಮ್ಮನಿಗೆ ಸುಲಭವಾಗಿ ವೈರಸ್ ತಗಲುವ ಸಾಧ್ಯತೆಯಿರುವುದರಿಂದ ಮಕ್ಕಳನ್ನು ಸುರಕ್ಷಿತ ಸ್ಥಳಗಳಲ್ಲಿಡುವುದೇ ಸರಿ ಎನ್ನುತ್ತಾರೆ ಆರ್ಮಿಟೇಜ್.
ಒಂಟಿತನ ಅಪಾಯಕಾರಿ
ಮಕ್ಕಳಿಗೆ ಶೈಕ್ಷಣಿಕ ವರ್ಷ ನಷ್ಟವಾಗುವ ಭೀತಿ ಮಾತ್ರ ಅಲ್ಲ ಒಂಟಿತನವೂ ಅಪಾಯಕಾರಿಯಾಗಿ ಪರಿಣಮಿಸಬಹುದು. ಸೋಂಕಿತ ಮಕ್ಕಳನ್ನು ಕ್ವಾರಂಟೈನ್‌ಗೆ ಒಳಪಡಿಸುವುದರಿಂದ ಅವರು ಒಂಟಿಯಾಗುತ್ತಾರೆ. ಈ ಒಂಟಿತನ ಅವರ ಮಾನಸಿಕ ಆರೋಗ್ಯವನ್ನು ಏರುಪೇರು ಮಾಡಬಹುದು.
ಸೋಂಕಿತರಲ್ಲದಿದ್ದರೂ ಮನೆಯಲ್ಲಿ ಮಕ್ಕಳನ್ನು ಏಕಾಂಗಿತನ ಕಾಡುವ ಸಾಧ್ಯತೆಯಿದೆ. ಇದು ಅವರ ಸೂಕ್ಷ್ಮ ಮನಸುಗಳ ಮೇಲೆ ಗಾಢವಾದ ಪರಿಣಾಮಗಳನ್ನು ಉಂಟು ಮಾಡಬಹುದು. ಸಾಮಾಜಿಕ ಮಿಲನ ಇಲ್ಲದಿರುವುದರಿಂದ ಮಕ್ಕಳು ಸಾಮಾಜಿಕ ಮೌಲ್ಯಗಳನ್ನು ಕಲಿಯುವ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.
ಬಡಮಕ್ಕಳಿಗೆ ದೊಡ್ಡ ಹೊಡೆತ
ಕೋವಿಡ್ ವೈರಸ್ ಬಡ ಮಕ್ಕಳಿಗೆ ದೊಡ್ಡ ಹೊಡೆತವನ್ನೇ ನೀಡಿದೆ. ಲಾಕ್‌ಡೌನ್‌ದಿಂದಾಗಿ ಜಾಗತಿಕವಾಗಿ ಇರುವ ಅಸಮಾನತೆ ಇನ್ನಷ್ಟು ಹೆಚ್ಚಾಗಿದ್ದು, ಇದರ ಮೊದಲ ಬಲಿಪಶುಗಳು ಮಕ್ಕಳು. ಸಂಪನ್ಮೂಲದ ಕೊರತೆ ಈ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಲಿದೆ. ಕೋವಿಡ್ ಹಾವಳಿ ಮುಗಿದರೂ ಬಡ ಮಕ್ಕಳ ಬದುಕಿನ ಮೇಲೆ ಶಾಶ್ವತವಾದ ಬರೆ ಎಳೆಯಬಹುದು.
ಸಾಮಾಜಿಕ ಬಿಕ್ಕಟ್ಟು
ಬೆಲ್ಜಿಯಂನ ಲಿಯುವೆನ್ ವಿವಿಯ ಸಮಾಜಶಾಸ್ತ್ರ ಉಪನ್ಯಾಸಕ ವಿಮ್ ವ್ಯಾನ್ ಲ್ಯಾಂಕರ್ ಸೇರಿದಂತೆ ಕೆಲವು ತಜ್ಞರು ಕೋವಿಡ್‌ನಿಂದ ಗಂಭೀರ ಸಾಮಾಜಿಕ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದಿಡೀ ತಲೆಮಾರನ್ನು ಕೋವಿಡ್ ಕಾಡಲಿದೆ. ಮಕ್ಕಳ ಬೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕುಂಠಿತಗೊಳಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಪ್ರೊ| ಲ್ಯಾಂಕರ್.
2007ರಲ್ಲಿ ಮೇರಿಲ್ಯಾಂಡ್‌ನಲ್ಲಿ ಕೆಲವು ತಿಂಗಳ ಮಟ್ಟಿಗೆ ಶಾಲೆಗಳನ್ನು ಮುಚ್ಚಿದಾಗ ಚಿಕ್ಕ ಮಕ್ಕಳ ಮಾನಸಿಕ ಸ್ಥಿತಿಯಲ್ಲಿ ವಿಪರೀತವಾದ ಬದಲಾವಣೆಗಳಾಗಿದ್ದವು. 0.57 ಮಕ್ಕಳು ನಿರೀಕ್ಷಿತ ಗ್ರೇಡ್ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದರು.ಹವಾಮಾನ ವೈಪರೀತ್ಯದಿಂದಾಗಿ ಪ್ರತಿ ತಿಂಗಳು ಸರಾಸರಿ 5 ದಿನಗಳ ಶಾಲೆ ನಷ್ಟವಾದಾಗ ತೇರ್ಗಡೆ ಪ್ರಮಾಣದಲ್ಲಿ ಶೇ. 3 ಕುಸಿತವಾಗಿರುವುದು ಕಂಡುಬಂದಿದೆ. ಈ ರೀತಿ ಕೋವಿಡ್ ಕಾಲದಲ್ಲೂ ನಿರೀಕ್ಷಿಸಬಹುದು ಎನ್ನುತ್ತಾರೆ ವಾಶಿಂಗ್ಟನ್ ಡಿಸಿಯ ಅಮೆರಿಕನ್ ವಿವಿಯ ಉಪನ್ಯಾಸಕ ಡೇವ್ ಮಾರ್ಕೊಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.