ಶನಿವಾರ ಒಂದೇ ದಿನ ಭಾರತದಲ್ಲಿ ದಾಖಲೆ ಪ್ರಮಾಣದ 1,035 ಕೋವಿಡ್ 19 ಪ್ರಕರಣ ಪತ್ತೆ
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು (1,574) ಕೋವಿಡ್ ಸೋಂಕು ದೃಢಪಟ್ಟಿರುವ ಪ್ರಕರಣ ಪತ್ತೆಯಾಗಿದೆ.
Team Udayavani, Apr 11, 2020, 4:41 PM IST
Representative Image
ನವದೆಹಲಿ: ಕೋವಿಡ್ 19 ಸೋಂಕು ಜಾಗತಿಕವಾಗಿ ಆತಂಕ ಹುಟ್ಟಿಸಿರುವ ನಡುವೆಯೇ ಭಾರತದಲ್ಲಿ ಶನಿವಾರದಂದು ದಾಖಲೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಇಂದು ಒಂದೇ ದಿನ ಬರೋಬ್ಬರಿ 1035 ಕೋವಿಡ್ ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 7,447ಕ್ಕೆ ಏರಿದಂತಾಗಿದೆ. ಇದರಲ್ಲಿ 239 ಮಂದಿ ಸಾವನ್ನಪ್ಪಿದ್ದು, 643 ಸೋಂಕು ಪೀಡಿತರು ಗುಣಮುಖರಾಇದ್ದಾರೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು (1,574) ಕೋವಿಡ್ ಸೋಂಕು ದೃಢಪಟ್ಟಿರುವ ಪ್ರಕರಣ ಪತ್ತೆಯಾಗಿದೆ. ತಮಿಳುನಾಡಿನಲ್ಲಿ 911, ದೆಹಲಿಯಲ್ಲಿ 903 ಹಾಗೂ ರಾಜಸ್ತಾನದಲ್ಲಿ 553 ಜನರಿಗೆ ಸೋಂಕು ತಗುಲಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಅಧಿಕವಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 110ಕ್ಕೆ ಏರಿದೆ. ಮಧ್ಯಪ್ರದೇಶದಲ್ಲಿ 33 ಮಂದಿ, ಗುಜರಾತ್ ನಲ್ಲಿ 19 ಹಾಗೂ ದಿಲ್ಲಿಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಏಪ್ರಿಲ್ 14ರಂದು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಅಂತ್ಯಗೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಲಾಕ್ ಡೌನ್ ಉದ್ದೇಶ ಎಲ್ಲಾ ಸಾರ್ವಜನಿಕ ಸಾರಿಗೆ ಸಂಚಾರ ಬಂದ್, ಅಂತರ ರಾಜ್ಯ ಓಡಾಟ, ಧಾರ್ಮಿಕ ಕಾರ್ಯಕ್ರಮ ನಿಷೇಧ ಹೀಗೆ ಹಲವು ಅಂಶಗಳು ಸೇರಿವೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.