ಇನ್ನೂ ಮುಗಿದಿಲ್ಲ ಕೋವಿಡ್ 19 ವೈರಸ್ ಅಟ್ಟಹಾಸ ; ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆ
Team Udayavani, Apr 22, 2020, 2:04 PM IST
ದಯವಿಟ್ಟು, ನಮ್ಮನ್ನು ನಂಬಿ. ಕೋವಿಡ್ 19 ವೈರಸ್ ನ ಘೋರ ದೃಶ್ಯಾವಳಿಗಳು ಮುಂದೆ ಬರಲಿವೆ! ಹೀಗೆಂದು ಸಾರಿ ಹೇಳುತ್ತಿರುವುದು ವಿಶ್ವ ಆರೋಗ್ಯ ಸಂಸ್ಥೆ (WHO) ‘ಕೋವಿಡ್ 19 ಯಾರಿಗೂ ಅರ್ಥ ಆಗದ ವೈರಸ್. ಸೋಂಕಿತರಾಗಿ ಸಾಯುತ್ತಿರುವವರನ್ನು ಸಂಖ್ಯೆಗಳಲ್ಲಿ ನೋಡುವುದು ಬೇಡ. ಮನುಷ್ಯರಂತೆ ಕಾಣೋಣ. ಒಂದೊಂದು ಜೀವವೂ ಈಗ ಅಮೂಲ್ಯ’ ಎಂದು WHO ಮುಖ್ಯಸ್ಥ ಟೆಡ್ರಾಸ್ ಘೆಬ್ರೆಯೆಸಸ್ ಹೇಳಿದ್ದಾರೆ.
ಇದು ಸ್ಪ್ಯಾನಿಷ್ ಜ್ವರದಂತೆ: ಜಗತ್ತಿನಾದ್ಯಂತ ಲಕ್ಷಾಂತರ ಜೀವಗಳನ್ನು ನುಂಗಿದ ಕೋವಿಡ್ 19 ವೈರಸ್ ನ್ನು WHO, 1918ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್ ಜ್ವರಕ್ಕೆ ಹೋಲಿಸಿದೆ. “ಕೋವಿಡ್ 19 ವೈರಸ್ ಮಾನವ ಇತಿಹಾಸದ ಘೋರ ಸಾಂಕ್ರಮಿಕ ರೋಗ.
ನೂರು ವರ್ಷಗಳ ಅನಂತರ ಮನುಕುಲ ವೈರಾಣು ಜ್ವರಕ್ಕೆ ತಬ್ಬಿಬ್ಟಾಗುತ್ತಿದೆ. ಆಗ ಸ್ಪ್ಯಾನಿಷ್ ಜ್ವರ ಬಂದಾಗ 10 ಕೋಟಿ ಜನ ಸಾವನ್ನಪ್ಪಿದ್ದರು. ಆದರೆ, ಈಗ ನಮ್ಮಲ್ಲಿ ತಂತ್ರಜ್ಞಾನದ ನೆರವಿದೆ. ಇದರಿಂದ ನಾವು ಯಾವುದೇ ವಿಪತ್ತನ್ನೂ ತಡೆಯಬಹುದು’ ಎಂದು ಹೇಳಿದೆ.
ರಹಸ್ಯ ಮುಚ್ಚಿಟ್ಟಿಲ್ಲ: ಅಮೆರಿಕದಿಂದ ಫಂಡ್ ಪಡೆದು WHO, ಚೀನಕ್ಕೆ ಅಪಾರ ಪ್ರಮಾಣದಲ್ಲಿ ನೆರವಾಗಿದೆ. ಕೋವಿಡ್ 19 ವೈರಸ್ ಕುರಿತು ರಹಸ್ಯಗಳನ್ನು ಮುಚ್ಚಿಡುತ್ತಿದೆ ಎನ್ನುವ ಟ್ರಂಪ್ ಅವರ ಆರೋಪವನ್ನು ಘೆಬ್ರೆ ಯೆಸಸ್ ತಳ್ಳಿಹಾಕಿದ್ದಾರೆ.
ಅಮೆರಿಕದಲ್ಲಿ ಸೋಂಕು ಆರಂಭಗೊಂಡಾಗಿನಿಂದ ನಾವು ಏನನ್ನೂ ಮುಚ್ಚಿಟ್ಟಿಲ್ಲ. ನಮ್ಮ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಸಿಬ್ಬಂದಿ ಪ್ರತಿಯೊಂದು ಮಾಹಿತಿಯನ್ನೂ ಅಲ್ಲಿನ ಸರಕಾರಕ್ಕೆ ನೀಡುತ್ತಲೇ ಬಂದಿದೆ’ ಎಂದು ಹೇಳಿದ್ದಾರೆ.
ನಿರ್ಬಂಧ ಸಡಿಲಿಕೆ ಕೋವಿಡ್ 19 ವೈರಸ್ ಮರು ಅಲೆ
ಜಗತ್ತಿನ ಹಲವು ದೇಶಗಳಲ್ಲಿ ಲಾಕ್‌ಡೌನ್ ಸಡಿಲಿಸುತ್ತಿರುವುದು, ಆರ್ಥಿಕ ಚಟುವಟಿಕೆಗಳನ್ನು ಮತ್ತೆ ಆರಂಭಿಸುತ್ತಿರುವುದು ಕೋವಿಡ್ 19 ವೈರಸ್ ಮರು ಅಲೆಗೆ ನಾಂದಿ ಹಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಇದು ನಿರ್ಬಂಧಗಳನ್ನು ಸಡಿಲಗೊಳಿಸಲು ಸೂಕ್ತ ಸಮಯವಲ್ಲ. ಭವಿಷ್ಯಕ್ಕಾಗಿ ಹೊಸ ಜೀವನ ವಿಧಾನಗಳಿಗೆ ನಾವು ಸಿದ್ಧರಾಗಬೇಕು. ಸಾಮಾಜಿಕ ಅಂತರ ಕಾಪಾಡುವ ಮೂಲಕ ಜನರ ಆರೋಗ್ಯವನ್ನು ರಕ್ಷಿಸುವುದು ಮತ್ತು ಆರ್ಥಿಕ ಚಟುವಟಿಕೆಯನ್ನು ಪೋಷಿಸುವುದರ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಹೇಳಿದೆ.
ಆರೋಗ್ಯ ಅಧಿಕಾರಿಗಳ ಕಾಳಜಿ ನಡುವೆಯೂ, ಅಮೆರಿಕದ ಕೆಲವು ರಾಜ್ಯಗಳು ಆರ್ಥಿಕ ಯೋಜನೆಗಳಿಗೆ ಚಾಲನೆ ಕೊಟ್ಟಿವೆ. ಅಮೆರಿಕದಲ್ಲಿ ಬೋಯಿಂಗ್ ವಿಮಾನ ಕಾರ್ಖಾನೆಗಳೂ ಪುನರಾರಂಭಕ್ಕೆ ತಯಾರಿ ಮಾಡಿಕೊಂಡಿವೆ. ಯುರೋಪಿನಲ್ಲೂ ಹಂತ ಹಂತವಾಗಿ ಕೈಗಾರಿಕೆಗಳು ತೆರೆಯುತ್ತಿವೆ. ಇದೆಲ್ಲದರ ನಡುವೆ, ಜರ್ಮನಿ, ಸ್ಪೇನ್, ಇಟಲಿಗಳಲ್ಲಿ ಕೋವಿಡ್ 19 ವೈರಸ್ ಉಲ್ಪಣಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
MUST WATCH
ಹೊಸ ಸೇರ್ಪಡೆ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.