Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Team Udayavani, Jul 6, 2024, 2:28 PM IST

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

ಭಾರತೀಯ ಪುರಾಣಗಳ ಮೆಲುಕು ಅದರ ಸಾರ ಇಂದಿಗೂ ಪ್ರಸಕ್ತ ಹಾಗೂ ಅನ್ವಯ. ನಮ್ಮ ಧರ್ಮ ನಮ್ಮ ಸಂಸ್ಕೃತಿಯಲ್ಲಿ ಏನೇ ಕಾರ್ಯ ಪ್ರಾರಂಭಿಸುವ ಮುನ್ನ ಶ್ರೀ ಗಣೇಶ ಎನ್ನುವುದು ಪದ್ಧತಿ. ಅವನು “ಆದ್ಯ ಪೂಜ್ಯ’. 700 ವರ್ಷಗಳ ಪ್ರಾಚೀನ ಮುದ್ಗಲ ಪುರಾಣದ ಬಗ್ಗೆ ಜನ ಸಾಮಾನ್ಯರಿಗೆ ಪರಿಚಯಿಸಲು ಸಂಸ್ಕೃತಿ ಸೆಂಟರ್‌ ಆಫ್‌ ಕಲ್ಚರಲ್‌ ಎಕ್ಸೆಲೆನ್ಸ್‌ ಗಣಪತಿಯ ಅಷ್ಟ ಅವತಾರಗಳ ಕಿರು ಪರಿಚಯ ನೃತ್ಯ ರೂಪಕದ ಮೂಲಕ ಭಾರತೀಯ ವಿದ್ಯಾ ಭವನದಲ್ಲಿ ಜೂ.28ರಂದು ಸಂಜೆ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ| ನಂದಕುಮಾರ, ಡಾ| ರಿಷಿ ಹಂಡಾ, ತೇಜೇಂದ್ರ ಶರ್ಮಾ ಎಂಬಿಇ, ಕೌನ್ಸಿಲರ್‌ ಕಾರ್ತಿಕ್‌ ಬೊಂಕೂರ್‌, ಕೌನ್ಸಿಲರ್‌ ಶರದ್‌ ಕುಮಾರ್‌ ಝಾ ದೀಪ ಬೆಳಗಿಸುವ ಮೂಲಕ ಶುಭ ಸಂಜೆಗೆ ನಾಂದಿ ಹಾಡಿದರು. ಭವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ| ನಂದಕುಮಾರ್‌ ಅವರು ವಿಷ್ಣುವಿನ ದಶಾವತಾರ ಜನಪ್ರಿಯ ಆದರೆ ಗಣಪತಿಯ ಅವತಾರಗಳ ಬಗ್ಗೆ ಇಂತಹ ಒಂದು ಕಾರ್ಯಕ್ರಮ ಶ್ಲಾಘನೀಯ ಎಂದರು.

ಪ್ರಸಿದ್ಧ ವೀಣಾ ವಾದರಕಾರದ ಪ್ರಮೋದ್‌ ರುದ್ರಪಟ್ಣ ಅವರು ಮುತ್ತುಸ್ವಾಮಿ ದೀಕ್ಷಿತಾರ್‌ ಅವರ ವಾತಾಪಿ ಗಣಪತಿ ಕೃತಿಯನ್ನು ವೀಣೆಯಿಂದ ಹಂಸಧ್ವನಿ ರಾಗ ಹಾಗೂ ಸತೀಶ್‌ ಗುಮ್ಮಡವೆಲ್ಲಿ ಅವರ ಮೃದಂಗದ ಸಂಗಡ ಭಕ್ತಿ ಭಾವವನ್ನು ಮೂಡಿಸಿತು.

ಗಣೇಶ ಕೌತ್ವಂ ಕೃತಿಯನ್ನು ಶ್ರೇಯಾ ಮತ್ತು ಕೃತಿಕಾ ಹಾಗೂ ಗಣೇಶ ಅಂಜಲಿ ಕೃತಿಯನ್ನು ದೀಕ್ಷಾಗ ಸರವಣನ್‌, ಜನನಿ ರಾಜೇಶ್‌, ಜನನ್ಯಶ್ರೀ ಕಾರ್ತಿಕ್‌, ಮಧುಶ್ರೀ ಪ್ರಸನ್ನ, ಸಾನ್ವಿ ಕುಮಾರ್‌ ಮತ್ತು ಸಾನ್ವಿ ಪವನ್‌ ಅವರಿಂದ ನೃತ್ಯ ರೂಪಕದಿಂದ ಪ್ರೇಕ್ಷಕರನ್ನು ಮನೋರಂಜಿಸಿದರು.

ಗಜಾನನ ಅಷ್ಟ ಅವತಾರಗಳ ಅವಾಹನ ಪ್ರಸ್ತುತಿಯನ್ನು ಸಂಸ್ಕೃತಿ ಸೆಂಟರ್‌ನ ವಿದ್ಯಾರ್ಥಿಯರಾದ ಅದಿತಿ ಮೋಟೆ, ಅಹನಾ ಹೆಗ್ಡೆ, ಅನನ್ಯಾ, ಅನುಜಾ ತಿರುಮಲಶೆಟ್ಟಿ, ಆಯತಿ ಯುವರಾಜ್‌, ದೇವಾಂಶಿ ಉಪ್ಪುಲ, ದಿಯಾ ವಿಶ್ವನಾಥ್‌, ದಿಯಾ ಷಣ್ಮುಗಂ, ಮೀರಾ ಶಾಜಿ, ಸಂವಿತಾ ಗುಂಡ, ಸಾಯಿ ಸಮೃದ್ಧಿ ವುತ್ಪಾಲ, ಶ್ರಾವಣಿ ಶಿವಶಂಕರ್‌, ಸುಚೇತಾ ಮಂಗಳಗಿರಿ, ಸ್ವೆಚ್ಛಾ ಮಾಣಿಕಿರೆಡ್ಡಿ, ವನಮಾಲಾ ಆಚಾ, ವಿನ್ಮಾಯಿ ಗೋಪತಿ ಮತ್ತು ಯೋಶಿತಾ ಚಾಮರ್ಥಿ ಪ್ರಸ್ತುತ ಪಡಿಸಿದರು.

ವಕ್ರತುಂಡ ಮತ್ಸರಾಸುರನ ಮರ್ದನ ಮಾಡುವಾಗ ಆಶ್ಚರ್ಯಕರವಾಗಿ ಈ ರೂಪದಲ್ಲಿ ಇದು ಸಿಂಹ ವಾಹನಾಗಿದ್ದಾನೆ. ಏಕದಂತನು ಮದಾಸುರನನ್ನು ನಾಶಪಡಿಸುತ್ತಾನೆ. ಮಹೋದರನು ಮೋಹಾಸುರನನ್ನು ನಾಶಪಡಿಸುತ್ತಾನೆ. ಗಜಾನನನು ಲೋಭಾಸುರನನ್ನು ನಾಶಪಡಿಸುತ್ತಾನೆ. ಈ ಅವತಾರಗಳನ್ನು ಅನ್ವಿ ಪ್ರಭು, ಹೃಷಿಕೇಶ್‌ ಕಿಝಿಕ್ಕಿಯಿಲ್‌, ಲಕ್ಷ್ಮೀ ಪಿಳ್ಳೈ, ಮಂಜು ಸುನಿಲ್‌, ಮೊನಿದೀಪ ಸೀಲ್‌, ಸಾನ್ವಿಕಾ ಕೊಮ್ಮಿನೇನಿ, ಲಲಿತಾ ಕೋಟ್ಲ , ರಾಗಸುಧಾ ವಿಂಜಮುರಿ ಮತ್ತು ಡಾ| ಶ್ರೀನಿವಾಸ ಪ್ರಸ್ತುತ ಪಡಿಸಿದರು.

ಅಸ್ತಿತ್ವದಲ್ಲಿರುವ ಪಾತ್ರದಲ್ಲಿನ ದುರ್ಗುಣಗಳು ಮತ್ತು ದೋಷಗಳು ಇಂದಿಗೂ ನಮ್ಮಲ್ಲಿ ಕೋಪ, ದುರಾಸೆ, ದುರಹಂಕಾರ, ಅಸೂಯೆ, ಗೊಂದಲ, ಅಹಂಕಾರ ಇವುಗಳಿಂದ ಬಾಂಧವ್ಯ ನಾಶವಾಗುತ್ತವೆ . ನಮ್ಮ ಗ್ರಂಥಗಳಲ್ಲಿ ಗಣೇಶನ ಎಂಟು ರೂಪಗಳನ್ನು ನಾವು ಉತ್ತಮವಾಗಿ ನಿಯಂತ್ರಿಸಬಹುದು ಮತ್ತು ಸಮಾಜದಲ್ಲಿ ಜವಾಬ್ದಾರಿಯುತ ಜೀವಿಗಳಾಗಿ ನೈತಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸೌಂದರ್ಯವನ್ನು ನಮ್ಮ ಗ್ರಂಥಗಳ ಸಾರವನ್ನು ಉಳಿಸಿ ಬೆಳಸಬಹುದು ಎಂದು ಡಾ| ರಾಗಸುಧಾ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಪಂಚದಲ್ಲೇ ಪ್ರಪ್ರಥಮ ಬಾರಿ ಮುದ್ಗಲ ಪುರಾಣದ ಬಗ್ಗೆ ಈ ರೀತಿಯ ಪ್ರಸ್ತುತಿ ಎಂದು ಹೆಮ್ಮಪಟ್ಟರು. ಕಾರ್ಯಕ್ರಮದ ಪ್ರಸ್ತುತಿ ರಾಧಿಕಾ ಜೋಶಿ ಹಾಗೂ ವಂದನಾರ್ಪಣೆ ಸುಶೀಲ್‌ ರಾಪಾತ್ವಾರ್‌ ಮಾಡಿದರು. ವರ್ಷಗಳ ಸಂಶೋಧನೆ ಹಾಗೂ ಪರಿಶ್ರಮದ ಪ್ರತಿಫಲವೇ “ಆದ್ಯ ಪೂಜ್ಯ’ ನೃತ್ಯ ರೂಪಕ ಎಂದು ಸಂಸ್ಕೃತಿ ಸೆಂಟರ್‌ನ ಸಂಸ್ಥಾಪಕಿ ಡಾ| ರಾಗಸುಧಾ ವಿಂಜಮೂರಿ ಪ್ರೇಕ್ಷಕರಿಗೆ ತಿಳಿಸಿದರು.

*ರಾಧಿಕಾ ಜೋಶಿ, ಲಂಡನ್‌

ಟಾಪ್ ನ್ಯೂಸ್

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ

Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

6

Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ

5

Drunk & Drive Case: ಅತಿ ವೇಗದ ಚಾಲನೆ: 522 ಕೇಸ್‌, 1.29 ಲಕ್ಷ ದಂಡ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.