Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಯುಗಾದಿಯ ಶುಭ ಸಂದೇಶದಲ್ಲಿ ತಿಳಿಸಿದರು.

Team Udayavani, May 4, 2024, 2:20 PM IST

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

ದಕ್ಷಿಣ ಕನ್ನಡ, ಉಡುಪಿ ಪ್ರದೇಶದಿಂದ ವಲಸೆ ಬಂದು ಉತ್ತರ ಅಮೆರಿಕದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ವಿಪ್ರ ಕುಟುಂಬಗಳನ್ನು ಒಟ್ಟು ಸೇರಿಸಿ, ಅಮೆರಿಕದಲ್ಲಿ ನೆಲೆಸಿರುವ ಮುಂದಿನ ತಲೆಮಾರಿನವರಿಗೂ ಶಿವಳ್ಳಿ/ಊರಿನ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ ಮಾಡಿಸುತ್ತಾ, ಆ ಸಂಪ್ರದಾಯ, ಪರಂಪರೆಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಹುಟ್ಟುಹಾಕಿರುವ ಶಿವಳ್ಳಿ ಕುಟುಂಬ ಆಫ್ ನಾರ್ಥ್ ಅಮೆರಿಕ ಎಪ್ರಿಲ್‌ 27, 28ರಂದು ಈ ವರ್ಷದ ಸೌರಮಾನ ಯುಗಾದಿ ಹಬ್ಬದ ಸಂಭ್ರಮ 2024 ಆಚರಣೆಯನ್ನು ವರ್ಚುವಲ್‌ ವೇದಿಕೆಯಲ್ಲಿ ನಡೆಸಿದ್ದು, ಕಾರ್ಯಕ್ರಮ ಉತ್ತಮವಾಗಿ ಮೂಡಿಬಂತು.

ಉಡುಪಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣನ ಆರಾಧನೆ ಮಾಡುವುದರಿಂದ ಬರುವ ಸಂಕಷ್ಟವೆಲ್ಲ ದೂರವಾಗಿ, ಮನಸ್ಸಿನ ಅಭೀಷ್ಟಗಳು ಪೂರ್ಣವಾಗಿ, ಲೋಕಕ್ಕೆ ಕ್ಷೇಮವಾಗುವುದು ಎಂದು ತಮ್ಮ ನಾಲ್ಕನೇಯ ಪರ್ಯಾಯವನ್ನು ನಡೆಸುತ್ತಿರುವ ಪೂಜ್ಯ ಪುತ್ತಿಗೆ ಶ್ರೀಗಳು ತಮ್ಮ ಸಂದೇಶದಲ್ಲಿ ಮಾತನಾಡುತ್ತ ಉತ್ತರ ಅಮೆರಿಕಾದ ಶಿವಳ್ಳಿ ಕುಟುಂಬದ ಎಲ್ಲ ಸದಸ್ಯರಿಗೂ ಒಳ್ಳೆಯದಾಗಲಿ ಎಂದು ಹರಸಿದರು.

ನಮ್ಮ ಊರಿನ ಸಂಸ್ಕೃತಿಯನ್ನು ಉಳಿಸುಕೊಳ್ಳುವುದರ ಜತೆಗೆ, ತಮ್ಮ ಪೀಳಿಗೆಯ ಮುಂದಿನ ಮಕ್ಕಳಿಗೆ ಸನಾತನ ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳುವ, ಶ್ರೀರಾಮಚಂದ್ರನಿಗೆ ಅತಿಪ್ರಿಯವಾದ ದೇಶ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿ ಕೊಳ್ಳುತ್ತಿರುವ ಉತ್ತರ ಅಮೆರಿಕಾದ ಶಿವಳ್ಳಿ ಕುಟುಂಬದ ಸದಸ್ಯರಿಗೆಲ್ಲ ಉಡುಪಿಯ ಶ್ರೀಕೃಷ್ಣನ ಮತ್ತು ಅಯೋಧ್ಯೆಯ ಶ್ರೀರಾಮನ ಪೂರ್ಣ ಅನುಗ್ರಹವಿರಲಿ ಎಂದು ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಯುಗಾದಿಯ ಶುಭ ಸಂದೇಶದಲ್ಲಿ ತಿಳಿಸಿದರು.

ಆಸ್ಟಿನ್‌ ಶ್ರೀಕೃಷ್ಣ ಮಠದ ಮುಖ್ಯ ಅರ್ಚಕರಾದ ಶ್ರೀ ಅವಿನಾಶ್‌ ಆಚಾರ್ಯ ಅವರು ಕ್ರೋಧಿ ಸಂವತ್ಸರದ ರಾಶಿ ಫ‌ಲ ವಾಚಿಸಿ, ಕೊನೆಗೆ ನಾವು ಪ್ರತಿನಿತ್ಯ ಜಪ ಪೂಜೆಗಳನ್ನು ತಪ್ಪದೇ ಮಾಡಿದಲ್ಲಿ ರಾಶಿಫ‌ಲದಲ್ಲಿ ತೊಡಕು ಇದ್ದರೂ, ಭಗವಂತನ ಕೃಪಾಕಟಾಕ್ಷ ನಮಗೆ ಖಂಡಿತ ದೊರೆಯುವುದು ಎಂದು ತಿಳಿಸಿದರು.

ಸಂವತ್ಸರ ಅಂದರೆ ಸಂಕ್ರಾಂತಿಯ ಮರುದಿನ, ವತ್ಸರ ಅಥವಾ ವಸಂತ ಆದರೂ 2 ಮಾನಗಳು ತುಂಬಾ ಅಗತ್ಯ, ಅದೇ ರೀತಿ ವರ್ಷದಲ್ಲಿ 3 ಅಭ್ಯಂಗ ಸ್ನಾನ ಮಾಡುವುದು ಪ್ರತಿಯೊಬ್ಬರಿಗೆ ಅತ್ಯಗತ್ಯ, ಅದು ಯಾವುದೆಂದರೆ ಸೌರಮಾನ ಯುಗಾದಿ, ಚಾಂದ್ರಮಾನ ಯುಗಾದಿ ಮತ್ತು ನರಕ ಚತುರ್ದಶಿ. ಹಾಗಾಗಿ ಸೌರಮಾನ ಮತ್ತು ಚಾಂದ್ರಮಾನ ಎರಡು ಯುಗಾದಿಗಳನ್ನು ನಾವೆಲ್ಲರೂ ಆಚರಿಸಬೇಕು ಎಂಬ ಕಿವಿ ಮಾತನ್ನು ತಿಳಿಸುವುದರ ಜತೆಗೆ ವಿಷುಕಣಿ, ಪಂಚಾಂಗ ಶ್ರವಣ ಮತ್ತು ಯುಗಾದಿಯ ಮಹತ್ವವನ್ನು ಮುಖ್ಯ ಅತಿಥಿಗಳಾದ ವಿದ್ವಾನ್‌ ಕೃಷ್ಣರಾಜ್‌ ಭಟ್‌ ಕುತ್ಪಾಡಿಯವರು ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿದರು.

ಭರತನ ನಾಟ್ಯಶಾಸ್ತ್ರದಲ್ಲಿ ಬ್ರಹ್ಮನೇ ಸೃಷ್ಟಿಸಿದ ಐದನೇ ವೇದ ನಾಟ್ಯವೇದ ಇಂದು ಕಲೆಗಳೊಂದಿಗೆ ಜೀವಂತವಾಗಿದೆ ಎಂದು ಮತ್ತೋರ್ವ ಅತಿಥಿ ವಿದೂಷಿ ಭ್ರಮರಿ ಶಿವಪ್ರಕಾಶ್‌ ತಿಳಿಸುತ್ತ, ಈ ಕಲೆಯನ್ನು ನಾವು ಉಳಿಸಿ ಬೆಳೆಸೋಣ ಎಂದು ಹೇಳಿದರು.
ಕಾರ್ಯಾಧ್ಯಕ್ಷ ಶ್ರೀಶ ಜಯ ಸೀತಾರಾಂ ಮತ್ತು ಡೈರೆಕ್ಟರ್‌ಗಳಾದ ರಾಜೇಂದ್ರ ಕೆದ್ಲಾಯ, ಮನಮೋಹನ್‌ ಕಟಪಾಡಿ, ಹಾಗೂ ಪ್ರಶಾಂತ ಕುಮಾರ್‌ ಅವರು ಶಿವಳ್ಳಿ ಕುಟುಂಬ ಉತ್ತರ ಅಮೆರಿಕದ ಮೂಲ ಉದ್ದೇಶಗಳು, ಕುಟುಂಬದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕುಟುಂಬದ ಅಧ್ಯಕ್ಷರಾದ ಸಂತೋಷ್‌ ಗೋಳಿ ಮತ್ತು ಉಪಾಧ್ಯಕ್ಷರಾದ ಪ್ರಕಾಶ್‌ ಉಡುಪ ಅವರು ವಿನೂತನ ಶೈಲಿಯಲ್ಲಿ ಈ ವರ್ಷದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು, ಮುಂದಿನ ವರ್ಷದಲ್ಲಿ ಕಾರ್ಯಕಾರಿ ಸಮಿತಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತ, ಎಲ್ಲ ಸದಸ್ಯರು ಸಹಕಾರವನ್ನು ನೀಡಬೇಕೆಂದು ಕೋರಿದರು.

ಬಳಿಕ ಉತ್ತರ ಅಮೆರಿಕದ ಶಿವಳ್ಳಿ ಕುಟುಂಬದ ಸದಸ್ಯರು ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಳಗದ ಪ್ರಬುದ್ಧ ಗಾಯಕ, ಗಾಯಕಿಯರೆಲ್ಲರ ಶಾಸ್ತ್ರೀಯ ಗಾಯನಗಳು, ನೃತ್ಯ, ಭರತನಾಟ್ಯ, ವಿಶೇಷವಾಗಿ ಕುಟುಂಬದ ಎಳೆಯ ಮಕ್ಕಳು ಪ್ರಸ್ತುತ ಪಡಿಸಿರುವ ಎಲ್ಲ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ ಮತ್ತು ನೃತ್ಯ ಪ್ರದರ್ಶನ ಅತ್ಯಂತ ಉತ್ತಮಮಟ್ಟದಾಗಿತ್ತು. ಶಿವಳ್ಳಿ ಕುಟುಂಬದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಸಂದೇಶ್‌ ಭಾರ್ಗವ್‌ ಅವರು ಸ್ವಾಗತ ಭಾಷಣ ಮಾಡಿದರು. ಮತ್ತೂಬ್ಬ ಸದಸ್ಯರಾದ ಮೇಘ ರಾವ್‌ ಅವರು ಧನ್ಯವಾದ ಸಮರ್ಪಣೆ ಮಾಡಿದರು.

ವರದಿ: ಪ್ರಶಾಂತ ಕುಮಾರ್‌, ಮಿಚಿಗನ್‌

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.