Desi Swara: ವಾರ್ಷಿಕ “ತಾಲ್ ಯಾತ್ರಾ’ ಉತ್ಸವ: ಸ್ಕಿಲ್ಸ್ ಡೆವಲಪ್‌ಮೆಂಟ್ ಸೆಂಟರ್ ದೋಹಾ
Team Udayavani, Jun 22, 2024, 11:20 AM IST
ಕತಾರ್:ಇಲ್ಲಿನ ಸ್ಕಿಲ್ಸ್ ಡೆವಲಪ್‌ಮೆಂಟ್ ಸೆಂಟರ್ ದೋಹಾವು ತನ್ನ 12ನೇ ವರ್ಷದ TAAL YATRA ವಾರ್ಷಿಕೋತ್ಸವವನ್ನು ಜೂ.1ರಂದು ಆಚರಿಸಿತು. ಈ ವೇಳೆ ಹಿಂದೂಸ್ಥಾನಿ ಸಂಗೀತದ ತಬಲಾ ವಿಭಾಗದ ವಾರ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಬಲಾ ಶಿಕ್ಷಕ ಪಂಡಿತ ಸಂತೋಷ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ, 3 ರಿಂದ 63 ವಯಸ್ಸಿನ ಸುಮಾರು 35 ವಿದ್ಯಾರ್ಥಿಗಳು ಕಲಿತಿದ್ದು, ಕುಲಕರ್ಣಿಯವರು ಹಾಗೂ ವಿದ್ಯಾರ್ಥಿಗಳು ವೇದಿಕೆಯಲ್ಲಿ ತಬಲಾ ವಾದನ ಮಾಡಿದರು. ಹಿಂದೂಸ್ಥಾನಿ ವೋಕಲ್ ಶಿಕ್ಷಕ ಪ್ರಸಾದ್ ಪೂಜಾರ್ ಸೇರಿದಂತೆ ಗಾಯಕರೊಂದಿಗೆ ಈ ಕಾರ್ಯಕ್ರಮ ನೆರವೇರಿತು. ಭಾರತೀಯ ಕಾಲೇಜುಗಳಲ್ಲಿ ಓದುತ್ತಿರುವ ಸುಮಾರು 3 ವಿದ್ಯಾರ್ಥಿಗಳು ಕೇವಲ TAAL YATRA ಕ್ಕಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದು SDAಯ ಒಂದು ಪ್ರಸಿದ್ಧ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ.
ಸಾಮೂಹಿಕ ಮುಖಂಡರು, ಕರ್ನಾಟಕ ಸಂಘ ಕತಾರ್‌ನ ಪ್ರಸ್ತುತ ಅಧ್ಯಕ್ಷ ರವಿ ಶೆಟ್ಟಿ ಮತ್ತು ಮಾಜಿ ಅಧ್ಯಕ್ಷ ಅರುಣ್ ಕುಮಾರ್, ಐಸಿಸಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಗಿಲು ಮತ್ತು ಮಾಜಿ ಅಧ್ಯಕ್ಷೆ ಮಿಲಾನ್ ಅರುಣ್, ಬಿಲ್ಲವಾಸ್ ಕತಾರ್‌ಅಧ್ಯಕ್ಷ ಸಂದೀಪ್ ಸಾಲಿಯಾನ್, ಮಹಾರಾಷ್ಟ್ರ ಮಂಡಲ್ ಅಧ್ಯಕ್ಷ ರಾಕೇಶ್ ವಾಘ, ಶಾಲೆಗಳ ಮುಖ್ಯಸ್ಥರು, ತುರ್ಕಿಯ ಸಂಸ್ಕೃತಿ ಕೇಂದ್ರದ ಪ್ರತಿನಿಧಿಗಳು ಮತ್ತು ಕಾರ್ಪೊರೇಟ್ ಮುಖಂಡರು ಉಪಸ್ಥಿತರಿದ್ದರು. ಹೋಸ್ಟ್ ಮಿಸಸ್ ಸುಷ್ಮಾ ಹರೀಶ್, ಮ್ಯಾನೇಜಿಂಗ್ ಡೈರೆಕ್ಟರ್ ಬಾಬುರಾಜನ್ ಅವರನ್ನು ಹಿಂದೂಸ್ಥಾನಿ ಸಂಗೀತದ ಕೇಂದ್ರದಲ್ಲಿ ಅವರ ಬೆಂಬಲ ಮತ್ತು ಉತ್ತೇಜನಕ್ಕಾಗಿ ವಿಶೇಷವಾಗಿ ಶ್ಲಾಘಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.