Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ
Team Udayavani, Jun 29, 2024, 1:20 PM IST
ದೋಹಾ:ಕತಾರ್‌ನಲ್ಲಿರುವ ಏಷ್ಯನ್ ಕ್ರಿಕೆಟ್ ಆಟದ ಮೈದಾನದಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 10ನೇ ಆವೃತ್ತಿಯನ್ನು ಕತಾರ್‌ನ ಭಾರತೀಯ ರಾಜದೂತಾವಾಸದ ನೇತೃತ್ವದಲ್ಲಿ ಭಾರತೀಯ ಕ್ರೀಡಾ ಕೇಂದ್ರದ ಸಹಯೋಗದೊಂದಿಗೆ ನಡೆಸಲಾಯಿತು.
ಕತಾರ್‌ನ ಭಾರತೀಯ ಸಮುದಾಯಗಳು, ಭಾರತೀಯ ಸಾಂಸ್ಕೃತಿಕ ಕೇಂದ್ರ ಐಸಿಸಿ ಭಾರತೀಯ ಸಮುದಾಯ ಹಿತೈಷಿ ವೇದಿಕೆ ಐಸಿಬಿಎಫ್ ಹಾಗೂ ಭಾರತೀಯ ವ್ಯಾಪಾರಿಗಳ ಹಾಗೂ ವೃತ್ತಿಪರ ಸಮಿತಿಗಳ ಐಬಿಪಿಸಿ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಚಿತ್ರ ಪ್ರದರ್ಶಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಭಾರತೀಯ ರಾಯಭಾರಿಗಳಾದ ವಿಫುಲ್ ಅವರು ಮಾತನಾಡಿ, ಸ್ವಯಂ ಹಾಗೂ ಸಮಾಜಕ್ಕೆ ಯೋಗ ಎಂಬುದರ ಬಗ್ಗೆ ಒತ್ತು ನೀಡಿ ಮಾನವನ ಸಂಪೂರ್ಣ ಪ್ರಗತಿಗೆ ಭಾರತದ ಪುರಾತನ ಸಾಂಪ್ರದಾಯದ ಯೋಗವು ಮಹತ್ತರ ಕೊಡುಗೆ ನೀಡುತ್ತದೆ. ನಿರಂತರವಾಗಿ ಯೋಗಾಭ್ಯಾಸ ಹಾಗೂ ಧ್ಯಾನ ಪ್ರಾಣಾಯಾಮಗಳನ್ನು ಮಾಡುವುದರ ಮೂಲಕ ಮನುಷ್ಯನ ಮನಸ್ಸು ಹಾಗೂ ಶರೀರಕ್ಕೆ ಸಕಾರಾತ್ಮಕ ಪರಿವರ್ತನೆ ಆಗುತ್ತದೆ ಹಾಗೂ ಪ್ರಕೃತಿಯ ಸಮೀಪ ಕರೆದುಕೊಂಡು ಹೋಗುವುದಲ್ಲದೇ ಸಮಾಜದಲ್ಲಿ ಸೌಹಾರ್ದತೆಯನ್ನು ಪಸರಿಸುವಲ್ಲಿ ಕಾರಣವಾಗುತ್ತದೆ ಎಂದು ಹೇಳಿದರು.
ಯೋಗಾಭ್ಯಾಸ ಕಾರ್ಯಕ್ರಮದ ಮುಖ್ಯ ಅಂಶವೆಂದರೆ ಆಗಮಿಸಿದ್ದ 2,000ಕ್ಕೂ ಹೆಚ್ಚು ಯೋಗ ಪಟುಗಳು ಹಾಗೂ ಆಸಕ್ತರು, ಇವರಲ್ಲಿ ಮಕ್ಕಳು, ಯುವಜನರು ಹಾಗೂ ಮಹಿಳೆಯರು ಸೇರಿ ಸಮಾಜದ ವಿವಿಧ ಭಾಗದ ಜನರು ಇದ್ದರು. ಆಗಮಿಸಿದ್ದ ಎಲ್ಲರೂ ಒಂದೇ ಮೂಲ ಮಾರ್ಗದರ್ಶನದ ಆಧಾರದ ಮೇಲೆ ಯೋಗಾಭ್ಯಾಸವನ್ನು ಮಾಡಿದ್ದು ವಿಶೇಷ. ಹಿರಿಯರು ಹಾಗೂ ಕಿರಿಯರು ಸೇರಿ ಉತ್ಸಾಹ ಹಾಗೂ ಉಲ್ಲಾಸದಿಂದ ಯೋಗಾಭ್ಯಾಸವನ್ನು ಮಾಡಿದರು. ಕಾರ್ಯಕ್ರಮಕ್ಕೆ ಕಾರಣಿಕರ್ತರಾದ ಭಾರತೀಯ ಕ್ರೀಡಾ ಕೇಂದ್ರ, ಭಾರತೀಯ ಸಾಂಸ್ಕೃತಿಕ ಕೇಂದ್ರ, ಭಾರತೀಯ ಸಮುದಾಯ ಹಿತೈಷಿ ವೇದಿಕೆ ಮತ್ತು ಭಾರತೀಯ ವ್ಯಾಪಾರ ಹಾಗೂ ವೃತ್ತಿಪರ ಸಮಿತಿಯ ಅಧ್ಯಕ್ಷರುಗಳನ್ನು ಸಮ್ಮಾನಿಸಿ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಯಿತು.
ಯೋಗಾಭ್ಯಾಸದ ಮಹತ್ತರ ಕಾರ್ಯಕ್ರಮದಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 20 ಗುಂಪುಗಳನ್ನಾಗಿ ವಿಂಗಡಿಸಿ ಕಾರ್ಯಕರ್ತರನ್ನು ಒಳಗೊಂಡು ಆಗಮಿಸಿದ್ದ 2,000ಕ್ಕೂ ಹೆಚ್ಚು ಜನರಿಗೆ ಯೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸ್ಥಳದಲ್ಲಿ ಕೇಳಲಾಯಿತು ಹಾಗೂ ಕಿರು ಉಡುಗೊರೆಗಳನ್ನು ವಿತರಿಸಲಾಯಿತು. ಬೈಂದೂರು ಮೂಲದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಟಾಗಿಲು, ಹಾಗೂ ಸಾವಿರಾರು ಮಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.