Desi Swara: ದುಬೈ, ಅಬುಧಾಬಿ- ಸೆ. 30, ಅ. 1ರಂದು ಯಕ್ಷಸಂಭ್ರಮ
Team Udayavani, Sep 30, 2023, 1:25 PM IST
ದುಬೈ: ಯಕ್ಷಗಾನ ಜೋಡಿ ಪ್ರದರ್ಶನ “ಯಕ್ಷ ಸಂಭ್ರಮ’ ದುಬೈ ಮತ್ತು ಅಬುಧಾಬಿಯಲ್ಲಿ ಸೆ.30 ಮತ್ತು ಅ. 1ರಂದು ನೆರವೇರಲಿದೆ.
ಬಡಗುತಿಟ್ಟಿನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರಿ ಅವರ ಗಾನ ಸಾರಥ್ಯದಲ್ಲಿ ದಿಗ್ಗಜ ಕಲಾವಿದರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಚಿತ್ರಾಕ್ಷಿ ಕಲ್ಯಾಣ (ರಾಜ ರುದ್ರ ಕೋಪ) ಎಂಬ ಪ್ರಸಂಗವನ್ನು ಜೇಮ್ಸ್ ನವ ಮಿಲೇನಿಯಂ ಸ್ಕೂಲ್ ಅಲ್ -ಖೈಲ್ ದುಬೈಯಲ್ಲಿ ಸೆ. 30ರ ಸಂಜೆ 5ರಿಂದ ಹಾಗೂ ಅಬುಧಾಬಿಯಲ್ಲಿ ಚಂದ್ರಹಾಸ ಚರಿತ್ರೆ (ದುಷ್ಟಬುದ್ಧಿ ) ಎಂಬ ಪ್ರಸಂಗವನ್ನು ಜೇಮ್ಸ್ ವರ್ಲ್ಡ್ ಅಕ್ಯಾಡೆಮಿ ಅಲ ರೀಮ್ ಐಲ್ಯಾಂಡ್ ಅಬುಧಾಬಿಯಲ್ಲಿ ಅ. 1ರ ಸಂಜೆ 3 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.
ಮುಮ್ಮೇಳದಲ್ಲಿ ಕಲಾವಿದರಾದ ಸುಬ್ರಹ್ಮಣ್ಯ ಚಿಟ್ಟಾಣಿ, ಕಾರ್ತಿಕ್ ಚಿಟ್ಟಾಣಿ, ಸುಧೀರ್ ಉಪ್ಪೂರ್, ಅಶೋಕ್ ಭಟ್ ಸಿದ್ದಾಪುರ, ಎಂ.ಜಿ .ಹೆಗಡೆ, ರವೀಂದ್ರ ದೇವಾಡಿಗ ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರಿ, ಸುನಿಲ್ ಭಂಡಾರಿ ಮತ್ತು ಪ್ರಸನ್ನ ಹೆಗ್ಗಾರ್ ಅವರು ಭಾಗವಹಿಸಲಿದ್ದಾರೆ. ಅವರ ಜತೆ ಸ್ಥಳೀಯ ಕಲಾವಿದರಾದ ವಿನಾಯಕ ಹೆಗೆಡೆ, ವಿಶ್ವೇಶ್ವರ ಅಡಿಗ, ಕಿಶೋರ್ ಗಟ್ಟಿ ಮತ್ತು ಅನನ್ಯಾ ವೇದವ್ಯಾಸ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ದುಬೈ ಕಾರ್ಯಕ್ರಮದಲ್ಲಿ ಕೆಎನ್‌ಆರ್‌ಐ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಉದ್ಯಮಿ ಶ್ಯಾಮ್ ಭಟ್ ಅವರು ಮುಖ್ಯ ಅತಿಥಿಗಳಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಪಾಲ್ಗೊಳ್ಳುವರು. ಪ್ರದರ್ಶನಗಳಿಗೆ ಉಚಿತ ಪ್ರವೇಶವಿದ್ದು ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಗಣಪತಿ ಭಟ್ ಹಾಗೂ ಪ್ರಶಾಂತ್ ಭಟ್ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.