Desi Swara: ಭಾರತ ರಾಯಭಾರ ಕಚೇರಿಯಲ್ಲಿ ಧ್ವಜಾರೋಹಣ
Team Udayavani, Aug 24, 2024, 11:34 AM IST
ಐರ್ಲೆಂಡ್: ಇಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಆ.15ರಂದು ಭಾರತದ ರಾಯಭಾರ ಕಚೇರಿಯಲ್ಲಿ ಭಾರತದ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ಈ ಆಚರಣೆಯಲ್ಲಿ ಭಾಗವಹಿಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಮಕ್ಕಳು, ಹಿರಿಯರು ವರ್ಣವರ್ಣದ ಉಡುಗೆ ತೊಟ್ಟಿದ್ದರು.
ಭಾರತದ ರಾಯಭಾರಿ ಕಚೇರಿಯಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಐರಿಶ್ ಕನ್ನಡಿಗರು ಹಾಗೂ ಐರ್ಲೆಂಡ್‌ನಲ್ಲಿ ನೆಲೆಸಿರುವ ಇತರ ರಾಜ್ಯದ ಮುಖಂಡರು ನೆರೆದಿದ್ದರು. ಭಾರತದ ರಾಯಭಾರಿಗಳಾದ ಅಖೀಲೇಶ್ ಮಿಶ್ರ ಅವರು ಧ್ವಜಾರೋಹಣೆ ಮಾಡಿದ ಅನಂತರ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ ಭಾರತ ಮತ್ತು ಐರ್ಲೆಂಡ್ ದೇಶದ ನಡುವಿನ ಬಾಂಧವ್ಯ, ಕೊಡುಗೆ ಬಗ್ಗೆ ಮಾತನಾಡಿದರು.
ಹಬ್ಬದ ಅಂಗವಾಗಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಂದು ಸಾಯಂಕಾಲ ಅಖೀಲೇಶ್ ಮಿಶ್ರಾ ಅವರು ಐರ್ಲೆಂಡಿನಲ್ಲಿ ನೆಲೆಸಿರುವಂತ ಭಾರತೀಯ ಸಮುದಾಯದ ಗಣ್ಯರು, ಸಂಘಗಳ ಮುಖಂಡರಿಗೆ ಔತಣಕೂಟವನ್ನು ಅವರ ಮನೆಯಲ್ಲಿ ಆಯೋಜಿದ್ದರು. ಇವರ ಜತೆಗೆ ಇತರ ದೇಶದ ರಾಯಭಾರಿಗಳು, ಐರ್ಲೆಂಡ್ ಸರಕಾರದ ಮಂತ್ರಿಗಳು, ಬೇರೆಬೇರೆ ಕೌಂಟಿ ಮೇಯರ್‌ಗಳು ಆಗಮಿಸಿದ್ದರು.
ರಾಯಭಾರಿಗಳು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ ಐರ್ಲೆಂಡಿನಲ್ಲಿ ಭಾರತೀಯರ ಕೊಡುಗೆ ವಿಶೇಷವಾಗಿ ಮಹಿಳೆಯರ ಬಗ್ಗೆ ಹೆಚ್ಚು ಒತ್ತು ಕೊಟ್ಟು ವಿವರಿಸಿದರು. ಭಾರತೀಯ ಮಹಿಳೆಯರ ಆದಾಯ ಐರ್ಲೆಂಡಿನಲ್ಲಿ ನಂಬರ್ ಒಂದು ಸ್ಥಾನದಲ್ಲಿದೆ ಎಂದು ಹೇಳಿದರು. ನಿರಂಜನ ಆನಂದ್ ಅವರ ಭರತನಾಟ್ಯ, ಅಂಜಲಿ ಮತ್ತು ಸತಾಕ್ಷಿ ಅವರ ಕಥಕ್ ನೃತ್ಯ ನೋಡುಗರ ಮನ ಗೆದ್ದಿತು
.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಭಾರತದ ಐರ್ಲೆಂಡ್ ರಾಯಭಾರಿಯಾಗಿರುವ ಕೆವಿನ್ ಕೆಲ್ಲಿ ಅಧ್ಯಕ್ಷತೆ ವಹಿಸಿದ್ದರು. ಭಾರತದ ರಾಯಭಾರಿ ಕಚೇರಿಯಲ್ಲಿ ಮೊದಲನೇ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುರುಘರಾಜ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟು ಧನ್ಯವಾದ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಔತಣ ಕೂಟಕ್ಕೆ ಬಂದಿದ್ದ ಗಣ್ಯರಿಗೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಊಟವನ್ನು ಆಯೋಜಿಸಲಾಗಿತ್ತು. ಮೈಸೂರ್ ರಸಂ ಸೇರಿ ಬಗೆ ಬಗೆಯ ಆಹಾರಗಳನ್ನು ಜನರು ತಿಂದು ಆನಂದಿಸಿದರು.
ವರದಿ: ಸುರೇಶ ಮರಿಯಪ್ಪ, ಐರ್ಲೆಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್!
Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ
Cyber Crime: ಸೈಬರ್ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ
Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್ ಗಾಂಧಿ
Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.