Desi Swara: “ಹರಿ ಹರ’ ರ ಧರೆಗಿಳಿಸಿದ ಸಂಕೀರ್ಣ- ದೈವಿಕ ಪ್ರಯಾಣದ ಅನುಭೂತಿ

ದುಬೈಯಲ್ಲಿ ಗುಣಮಟ್ಟದ ಪರಿಪೂರ್ಣ ನೃತ್ಯ ಶಿಕ್ಷಣವನ್ನು ನೀಡುತ್ತಿದೆ

Team Udayavani, Jul 13, 2024, 10:35 AM IST

Desi Swara: “ಹರಿ ಹರ’ ರ ಧರೆಗಿಳಿಸಿದ ಸಂಕೀರ್ಣ- ದೈವಿಕ ಪ್ರಯಾಣದ ಅನುಭೂತಿ

ದುಬೈ:ಭರತನಾಟ್ಯ ಕಲೆಯು ಮುದ್ರೆ, ಭಾವ, ಹೆಜ್ಜೆ ಮೊದಲಾದ ಸಂಕೇತಗಳಿಂದ ಸಮ್ಮೋಹನಗೊಳಿಸುವ ಭಾಷೆ. ಅಭಿವ್ಯಕ್ತಿಶೀಲ ಚಲನೆಗಳ ಮೂಲಕ, ನರ್ತಕರು ಆಳವಾದ ಅರ್ಥವನ್ನು ತಿಳಿಸುತ್ತಾರೆ, ಪ್ರತೀ ಕಥೆಯು ಪುರಾಣ, ನಂಬಿಕೆ ಇಂತಹ ಸಮಯಾತೀತ ಸಂಪ್ರದಾಯದ ಮೂಲಕ ನಮ್ಮನ್ನು ಸಾಂಸ್ಕೃತಿಕ ಪ್ರಯಾಣದಲ್ಲಿ ಭರತ ಮುನಿಯ ಸೃಷ್ಟಿಯ ಅದ್ಭುತ ಲೋಕಕ್ಕೆ ಕರೆದೊಯ್ದದದ್ದು “ಸಂಕೀರ್ಣ’ ನೃತ್ಯ ಶಾಲೆಯ “ಹರಿಹರ’ ನೃತ್ಯ ಸಮರ್ಪಣೆ.

ಗುರು, ವಿದೂಷಿ ಸಪ್ನಾ ಕಿರಣ್‌ ಅವರ ನೇತೃತ್ವದ ನೃತ್ಯ ಶಾಲೆ “ಸಂಕೀರ್ಣ’ ದುಬೈಯಲ್ಲಿ 2000 ಇಸವಿಯಲ್ಲಿ ಆರಂಭಗೊಂಡು, ಭಾರತದ ಆಸಕ್ತ ವಿದ್ಯಾರ್ಥಿಗಳಿಗೆ ದುಬೈಯಲ್ಲಿ ಗುಣಮಟ್ಟದ ಪರಿಪೂರ್ಣ ನೃತ್ಯ ಶಿಕ್ಷಣವನ್ನು ನೀಡುತ್ತಿದೆ. ಇತ್ತೀಚೆಗೆ ಮಹಾತಪಸ್ವಿ ಹರ, ಲೋಕಪಾಲಕ ಹರಿಯ ವಿವಿಧ ಅವತಾರಗಳ, ಆಯಾಮಗಳ ನೃತ್ಯ ಸಮರ್ಪಣೆ “ಹರಿ ಹರ’ ಯಶಸ್ವಿಯಾಗಿ ನೆರವೇರಿತು.

“ಹರಿಹರ’ ಶೀರ್ಷಿಕೆಯು ಹರಿ (ವಿಷ್ಣು) ಮತ್ತು ಹರ (ಶಿವ) ಏಕತೆಯನ್ನು ಸಂಕೇತಿಸುತ್ತದೆ, ಇದು ಸಂರಕ್ಷಣೆ ಮತ್ತು ರೂಪಾಂತರದ ಸಂಶ್ಲೇಷಣೆಯನ್ನು ಪ್ರತಿಬಿಂಬಿಸುತ್ತದೆ. ಸಂಕೀರ್ಣದ ಪ್ರತಿಭಾವಂತ ನೃತ್ಯಗಾರರು ಈ ಇಬ್ಬರು ಮಹಾನ್‌ ದೇವರುಗಳ ದಂತಕಥೆಗಳು ಮತ್ತು ಕಥೆಗಳನ್ನು ಚಿತ್ರಿಸುವ ದೈವಿಕ ಪ್ರಯಾಣದಲ್ಲಿ ಕಿಕ್ಕಿರಿದ ಪ್ರೇಕ್ಷಕರನ್ನು ಕರೆದೊಯ್ದರು. ಗುರು ಸಪ್ನಾ ಎರಡು ವಿಷಯಾಧಾರಿತ ಪ್ರದರ್ಶನಗಳ ಮೂಲಕ ವೇದಿಕೆಗೆ ತನ್ನ ವಿಶಿಷ್ಟವಾದ ಪ್ರಕಾಶವನ್ನು ಸೇರಿಸಿದರು. ನೃತ್ಯ ತಂಡದಲ್ಲಿ 5 ವರ್ಷದಿಂದ ಹಿಡಿದು ವಯಸ್ಕರ ವರೆಗೂ 40ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪುಷ್ಪಾಂಜಲಿ, ಅಲರಿಪ್ಪು, ಜತಿಸ್ವರ ಮತ್ತು ತೊಡಯಂಗಳಂತಹ ಸಾಂಪ್ರದಾಯಿಕ ನೃತ್ಯಗಳು ನೋಟುಸ್ವರಗಳು, ಪದಗಳು ಮತ್ತು ಕೃತಿಗಳಿಂದ ಪೂರಕವಾಗಿದ್ದ ಜತೆಗೆ, ಶಿವನ ನವರಸಗಳು ಮತ್ತು ಆತನ ಆನಂದ ತಾಂಡವಂ, ವಿಷ್ಣುವಿನ ದಶಾವತಾರ, ರಾಮನ ಅನುಗ್ರಹ ಮತ್ತು ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಕೃಷ್ಣನ ಗಿತೋಪದೇಶದ ಪ್ರದರ್ಶನ ಪ್ರೇಕ್ಷಕರ ಮೈ ನವಿರೇಳಿಸಿತು. ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸುವ ನೃತ್ಯಗಾರರು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸುಂದರ ಮತ್ತು ಉತ್ಸಾಹಭರಿತ ಜಾನಪದ ಹಾಡುಗಳನ್ನು ಪ್ರದರ್ಶಿಸಿದರು.

ಈ ರೋಮಾಂಚಕ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದುಬೈಯ ಕನ್ನಡ ಪಾಠ ಶಾಲೆಯ ಸಂಸ್ಥಾಪಕ ಹಾಗೂ ದುಬೈ ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಅತಿಥಿಗಳಾಗಿ ಶ್ರೀನಿವಾಸ ಶೆಟ್ಟಿ ಮತ್ತು ನಮಸ್ತೆ ಯೋಗದ ವಿಪುಲ ಶೆಟ್ಟಿ, ಸಪ್ನಾ ಕಿರಣ್‌ ಅವರ ಪೋಷಕರಾದ ಅನಿಲ್‌ ರಾವ್‌ ಮತ್ತು ಚಂದ್ರಕಲಾ ರಾವ್‌ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಶಿಧರ್‌, ಸಂಕೀರ್ಣ ಅವರ ನೃತ್ಯದ ಗುಣಮಟ್ಟಕ್ಕೆ ಅವರು ಮಾರುಹೋಗಿದ್ದು, ಪ್ರತಿಯೊಂದು ಪಾತ್ರವೂ ಕಥೆಯನ್ನು ಹೇಳುತ್ತದೆ ಮತ್ತು ಇದು ಒಂದು ದೃಶ್ಯ ರಸದೌತಣವಾಗಿದೆ. ಪ್ರಸಿದ್ಧ ದುಬೈ ಡ್ಯಾನ್ಸ್‌ ಕಪ್‌ಗೆ ಭರತನಾಟ್ಯ ವಿಭಾಗವನ್ನು ಸೇರಿಸಲು ಇದುವೇ ಸ್ಫೂರ್ತಿ ನೀಡಿದೆ. ಸಂಕೀರ್ಣ ಶಾಲೆಗೆ ಸರ್ವ ಸಹಕಾರ ನೀಡುವುದಾಗಿ ತಿಳಿಸಿ, ಕನ್ನಡತಿಯ ಸಾಧನೆಯನ್ನು ಶ್ಲಾ ಸಿದರು. ವಿಪುಲಾ ಶೆಟ್ಟಿ ಅವರು ಮಾತನಾಡುತ್ತಾ ನೃತ್ಯಗಾರರು ಮತ್ತು ಗುರು ಸಪ್ನಾ ಅವರ ಸಮರ್ಪಣ ಮನೋಭಾವವನ್ನು ಶ್ಲಾಘಿಸಿದರು.

“ನಮಸ್ತೆ’ಯೋಗ ಸಂಕೀರ್ಣದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು. ಅನಿಲ್‌ ರಾವ್‌ ಅವರು ಈ ಕಾರ್ಯಕ್ರಮಕ್ಕಾಗಿ ಅವಿರತವಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಯುಎಇಯ ಹೆಸರಾಂತ ವ್ಯಕ್ತಿಗಳಾದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಕರ್ನಾಟಕ ಸಂಘ ದುಬೈ ಪ್ರಧಾನ ಕಾರ್ಯದರ್ಶಿ ಮನೋಹರ ಹೆಗ್ಡೆ , ಕನ್ನಡ ಪಾಠ ಶಾಲೆಯ ನಾಗರಾಜ ರಾವ್‌, ಕನ್ನಡ ಪಾಠ ಶಾಲೆಯ ಮುಖ್ಯ ಶಿಕ್ಷಕಿ ರೂಪ ಶಶಿಧರ್‌ ಹಾಗೂ ಯುಎಇ ಬ್ರಾಹ್ಮಣ ಸಮಾಜದ ಶಿವರಾಂ ಭಟ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತ್ಯಂತ ಕೌಶಲತೆಯಿಂದ ಆರತಿ ಅಡಿಗ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ: ಆರತಿ ಅಡಿಗ ದುಬೈ

ಟಾಪ್ ನ್ಯೂಸ್

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ

Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ

Mollywood: ಚಿತ್ರದ ಬಗ್ಗೆ ನೆಗೆಟಿವ್‌ ರಿವ್ಯೂ ಕೊಟ್ಟ ಯುವಕನಿಗೆ ಖ್ಯಾತ ನಟನಿಂದ ಬೆದರಿಕೆ

Mollywood: ಚಿತ್ರದ ಬಗ್ಗೆ ನೆಗೆಟಿವ್‌ ರಿವ್ಯೂ ಕೊಟ್ಟ ಯುವಕನಿಗೆ ಖ್ಯಾತ ನಟನಿಂದ ಬೆದರಿಕೆ

ಸಿಎಂ ಗೆ ರೈತ ಬಗ್ಗೆ ಕಾಳಜಿ ಇದ್ದರೆ ವಕ್ಫ್‌ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ

ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್‌ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.