Desi Swara: ಕರ್ನಾಟಕ ಸಂಘ ಕತಾರ್-ಅಂತಾರಾಷ್ಟ್ರೀಯ ಯೋಗ ದಿನಾಚರಣೆ
Team Udayavani, Jul 13, 2024, 11:05 AM IST
ದೋಹಾ:ಕರ್ನಾಟಕ ಸಂಘ ಕತಾರ್‌ನ ನೇತೃತ್ವದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ದೋಹಾದ ಹ್ಯಾಮಿಲ್ಟನ್ ಶಾಲಾ ಆವರಣದಲ್ಲಿ ಜೂ.22ರಂದು ಆಚರಿಸಲಾಯಿತು. ಸಂಘದ ಖಜಾಂಚಿಗಳಾದ ಪ್ರದೀಪ ಅವರು ಪ್ರಾರಂಭಿಕ ನುಡಿಗಳೊಂದಿಗೆ ಪ್ರಧಾನ ಕಾರ್ಯದರ್ಶಿಗಳಾದ ಕುಮಾರಸ್ವಾಮಿಯವರನ್ನು ಕಾರ್ಯಕ್ರಮ ನಿರ್ವಹಿಸಲು ಆಹ್ವಾನಿಸಿದರು.
ಅಧ್ಯಕ್ಷರಾದ ರವಿ ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸ್ವಾಮಿ ವಿವೇಕಾನಂದರ ಮಾತಿನಂತೆ ನಿರಂತರ ಅಭ್ಯಾಸದಿಂದ ಯೋಗ ಪ್ರಾಪ್ತಿ ಹಾಗೂ ಸಾಮಾಜಿಕ ಸಾಮರಸ್ಯ, ಸುಖಮಯ ಜೀವನಕ್ಕೆ ಆಗುವ ಪ್ರಯೋಜನಗಳ ಹಾಗೂ ಯೋಗದ ಮಹತ್ವನ್ನು ತಿಳಿಸಿದರು. ಅಧ್ಯಕ್ಷರು, ಸಲಹಾ ಸಮಿತಿ ಸದಸ್ಯರು, ಹಿರಿಯರು, ಕರ್ನಾಟಕ ಮೂಲದ ಸೋದರ ಸಂಘಗಳ ಅಧ್ಯಕ್ಷರೆಲ್ಲ ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಘದ ಮಾಜಿ ಆಡಳಿತ ಮಂಡಳಿ ಸದಸ್ಯರು ಹಾಗೂ ಯೋಗ ತರಬೇತುದಾರರಾದ ಕಿಶೋರ್ ವಿ. ಅವರ ಮುಂದಾಳತ್ವದಲ್ಲಿ ಸುಮಾರು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಸಂಘದ ಸದಸ್ಯರು ಹಾಗೂ ಅವರುಗಳ ಜತೆ ಆಗಮಿಸಿದ ಅನಿವಾಸಿ ಕನ್ನಡಿಗರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು, ಯೋಗಾಭ್ಯಾಸದ ಬಳಿಕ ಶ್ವೇತ ದರೋಕರ್ ಮತ್ತು ತಂಡದವರು ಆಧುನಿಕ ಯೋಗ ಪ್ರದರ್ಶಿಸಿದರು.
ಯೋಗ ಕಲಿಸಿದ ಕಿಶೋರವರಿಗೆ, ಯೋಗ ಪ್ರದರ್ಶಿಸಿದ ಶ್ವೇತರವರಿಗೆ ಮತ್ತು ಶಾಲೆಯ ಆವರಣ ನೀಡಿ ಸಹಕರಿಸಿದ ಆಸ್ಟ್ರೋಕ್ ನ್ಪೋಟ್ಸ್‌ನ ಅಂಥೋನಿಯವರಿಗೆ ಅಧ್ಯಕ್ಷರು ಸ್ಮರಣಿಕೆ ನೀಡಿ ಗೌರವಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಕೆ. ಟಿ. ಸೌಮ್ಯ ಅವರು ವಂದನಾರ್ಪಣೆ ಸಲ್ಲಿಸಿದರು.
ಸಲಹಾ ಸಮಿತಿಯ ಸದಸ್ಯರುಗಳಾದ ಅರುಣ್ ಕುಮಾರ್, ವಿ.ಎಸ್.ಮನ್ನಂಗಿ, ದೀಪಕ್ ಶೆಟ್ಟಿ, ಮಧು ಎಚ್.ಕೆ. ಡಾ| ಸಂಜಯ ಕುದರಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ ಮಿಲನ್ ಅರುಣ್, ಸಂಘದ ಹಿರಿಯ ಸದಸ್ಯರ ಜತೆಗೆ ಕರ್ನಾಟಕ ಮೂಲದ ಸೋದರ ಸಂಘಗಳ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಮಿತಿಯ ಎಲ್ಲ ಸದಸ್ಯರು, ಸ್ವಯಂ ಸೇವಕರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.
ಕಾರ್ಯಕ್ರಮವನ್ನು ಸಭಿಕರೆಲ್ಲರು ಆರೋಗ್ಯಕರ ಹಾಗೂ ಆಹ್ಲಾದಕರ ರುಚಿ ನೀಡಿದ ರಾಗಿ ಪಾನೀಯ ಸೇವನೆಯೊಂದಿಗೆ ಮುಕ್ತಾಯಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.