Desi Swara: ಶಾರ್ಜಾದಲ್ಲಿ ರಾಧಾಷ್ಟಮಿಯ ಸಡಗರ, ಪೂಜೆ, ಉಯ್ಯಾಲೆ ಸೇವೆ

ದೇವಿ ರಾಧಾ ಅಷ್ಟಮಿಗೆ ಹೊಸ ಅರ್ಥಬಂದಿತ್ತು ಎನ್ನುವುದು ನನ್ನ ಭಾವನೆ.

Team Udayavani, Sep 21, 2024, 10:31 AM IST

Desi Swara: ಶಾರ್ಜಾದಲ್ಲಿ ರಾಧಾಷ್ಟಮಿಯ ಸಡಗರ, ಪೂಜೆ, ಉಯ್ಯಾಲೆ ಸೇವೆ

ರಾಧಾಷ್ಟಮಿಯನ್ನು ಯುಎಇ ದೇಶದಲ್ಲಿ ವಿದ್ಯುಕ್ತವಾಗಿ ಆಚರಿಸಲಾಗುತ್ತದೆ. ನಾನು ವಾಸವಿರುವ ನಮ್ಮ ಶಾರ್ಜಾದಲ್ಲಿ ನಡೆದ ರಾಧಾಷ್ಟಮಿಯ ಸಂಭ್ರಮವನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ರಾಧಾಷ್ಟಮಿಯಂದು, ರಾಧಾ ಕೃಷ್ಣ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಸಂಪೂರ್ಣವಾಗಿ ಹೂವುಗಳಲ್ಲಿ ಅಲಂಕರಿಸಲಾಗುತ್ತದೆ. ಹೆಚ್ಚುವರಿಯಾಗಿ, ರಾಧಾಷ್ಟಮಿಯು ರಾಧೆಯ ಪಾದಗಳ ದರ್ಶನ (ವೀಕ್ಷಣೆ) ಪಡೆಯುವ ಏಕೈಕ ದಿನವಾಗಿದೆ.

ರಾಧಾಷ್ಟಮಿಯು ಮಹಾಭಿಷೇಕದಿಂದ ಪ್ರಾರಂಭವಾಗುತ್ತದೆ. ಮನೆಗಳು ಮತ್ತು ಸತ್ಸಂಗದಲ್ಲಿ, ರಾಧಾ ದೇವಿಯ ವಿಗ್ರಹವನ್ನು ಪಂಚಾಮೃತ – ಹಾಲು, ತುಪ್ಪ, ಜೇನುತುಪ್ಪ, ಸಕ್ಕರೆ ಮತ್ತು ಮೊಸರುಗಳ ಐದು ವಿಭಿನ್ನ ಆಹಾರ ಮಿಶ್ರಣಗಳ ಸಂಯೋಜನೆಯೊಂದಿಗೆ ಅಭಿಷೇಕ ಮಾಡಲಾಗುತ್ತದೆ ಮತ್ತು ಅವಳಿಗೆ ಹೊಸ ಉಡುಪನ್ನು ಧರಿಸುತ್ತಾರೆ ಹಾಗೂ ಈ ದಿನದಂದು, ನಾವೆಲ್ಲರೂ ಸೇರಿ ಭಕ್ತಿ ಗೀತೆಗಳು, ಕೀರ್ತನೆಗಳನ್ನು ಹಾಡಿ, ರಾಧಾರಾಣಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ ಮತ್ತು ರಾಧಾರಾಣಿಗೆ, ಕೃಷ್ಣನಿಗೆ ಯಾವುದೇ ರೀತಿ ಭಕ್ತಿಭಾವಗಳನ್ನು ಸಲ್ಲಿಸುತ್ತೇವೆಯೋ ಉಯ್ಯಾ ಲೆ ಸೇವೆ, ಸಕಲ ಶೋಡಷ ಸೇವೆ ಹಾಗೂ ಮಹಾಮಂತ್ರಗಳನ್ನು ಜಪಿಸುತ್ತೇವೆಯೋ ಅದೇ ಪ್ರಕಾರವಾಗಿ ರಾಧಾರಾಣಿಯನ್ನು ಉಯ್ಯಾಲೆ ಸೇವೆಯನ್ನು ಮಾಡುವುದರ ಮೂಲಕ ಮೋಕ್ಷ ಪ್ರಾಪ್ತಿಗಾಗಿ ದೇವಿಯನ್ನು ಬೇಡಿ ಕೊಂಡು ಎಲ್ಲರೂ ಭಕ್ತಿ ಭಾವದಲ್ಲಿ ತೇಲಾಡುವ ಮೂಲಕ ದೇವಿ ರಾಧಾ ಅಷ್ಟಮಿಗೆ ಹೊಸ ಅರ್ಥಬಂದಿತ್ತು ಎನ್ನುವುದು ನನ್ನ ಭಾವನೆ.

ಭಾದ್ರಪದ ಮಾಸದ ಶುಕ್ಲ ಪಕ್ಷದ 11ನೇ ದಿನದಂದು ಆಚರಿಸಲಾಗುವ ಪರಿವರ್ತಿನಿ ಏಕಾದಶಿಯು ಹಿಂದೂ ಧರ್ಮದಲ್ಲಿ ಮಹತ್ತರವಾದ ಮನ್ನಣೆಯನ್ನು ಪಡೆದುಕೊಂಡಿದೆ. ಈ ಪವಿತ್ರ ಉಪವಾಸವು ರಾಕ್ಷಸ ರಾಜ ಬಲಿಯ ಮೇಲೆ ಭಗವಾನ್‌ ವಿಷ್ಣುವಿನ ವಿಜಯವನ್ನು ಸ್ಮರಿಸುವ ದಿನವಾಗಿದೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸಂಕೇತಿಸುತ್ತದೆ. ಈ ಶುಭ ದಿನದಂದು ಭಕ್ತರು ಉಪವಾಸ ವ್ರತವನ್ನು ಮಾಡಿ, ಕೃಷ್ಣನ, ಧ್ಯಾನ, ಮಹಾಮಂತ್ರ ಪಠಣ ಮಾಡಿದರೆ, ಮೋಕ್ಷ ಪ್ರಾಪ್ತಿ ಎನ್ನುವ ನಂಬಿಕೆ. ಹಿಂದಿನ ತಪ್ಪುಗಳಿಂದ ವಿಮೋಚನೆ ಮತ್ತು ಅಧ್ಯಾತ್ಮಿಕ ಬೆಳವಣಿಗೆಯನ್ನು ಪಡೆದುಕೊಳ್ಳುತ್ತಾರೆ.

ಪರಿವರ್ತಿನಿ ಏಕಾದಶಿ ವ್ರತವನ್ನು ಮಾಡುವ ವ್ಯಕ್ತಿ ಜನನ ಮತ್ತು ಮರಣ ಚಕ್ರದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾನೆ. ಶಾಂತಿ, ಸಮೃದ್ಧಿ ಮತ್ತು ದೈವಿಕ ಆಶೀರ್ವಾದವನ್ನು ಹೊಂದುತ್ತಾನೆ. ಈ ಉಪವಾಸವನ್ನು ಆಚರಿಸುವ ಮೂಲಕ, ಕೃಷ್ಣನಲ್ಲಿ ದೈವಿಕದೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಕಲುಷಿತ ತುಂಬಿದ, ಮನಸ್ಸು ಶುದ್ಧವಾಗುತ್ತದೆ. ಭಗವತಿ ಶ್ರೀತುಳಸಿಯನ್ನು ಆರಾಧಿಸುವ ಮೂಲಕ ಕೃಷ್ಣನ ಕೃಪೆಗೆ ಪಾತ್ರರಾಗಿ, ಸದಾ ಎಲ್ಲರಲ್ಲೂ ನಾರಾಯಣನನ್ನು ಕಾಣುವ ಮನಸ್ಸು ನಮ್ಮದಾಗುತ್ತದೆ.

*ಮಹಾಲಕ್ಷ್ಮೀ ಸುಬ್ರಹ್ಮಣ್ಯ, ಶಾರ್ಜಾ

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.