Desi Swara: ರೈನ್ ಮೈನ್ ಕನ್ನಡ ಸಂಘ ;ಗಣೇಶ ಚತುರ್ಥಿ ಆಚರಣೆ
ಮೂಷಿಕ ವಾಹನನ ಚಂದ್ರಯಾನದ ಫೋಟೋಬೂತ್ ಎಲ್ಲರನ್ನು ಆಕರ್ಷಿಸಿತು.
Team Udayavani, Sep 30, 2023, 12:36 PM IST
ಜರ್ಮನಿ:ಇಲ್ಲಿನ ರೈನ್ ಮೈನ್ ಕನ್ನಡ ಸಂಘವು ಪ್ರತೀ ವರ್ಷದಂತೆ ಈ ಬಾರಿಯೂ ಗಣೇಶ ಚತುರ್ಥಿಯನ್ನು ಆಚರಿಸಿತು. ಇದರೊಂದಿಗೆ ಸಂಘದ ನೂತನ ಕಾರ್ಯ ಹಾಗೂ ಸಹ ಕಾರ್ಯಕಾರಿ ಸಂಘದ ಸೇವಾವಧಿಯ ಆರಂಭಕ್ಕೆ ಮುನ್ನುಡಿ ಇಡಲಾಯಿತು.
ಜರ್ಮನಿಯಲ್ಲಿ ನೆಲೆಸಿರುವ ಯಕ್ಷಗಾನ ಕಲಾವಿದರಾದ ಅಜಿತ್ ಪ್ರಭು ಅವರು ಮಣ್ಣಿನಿಂದ ರಚಿಸಿದ ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು, ಇದು ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು. ಆಗಮಿಸಿದ ಎಲ್ಲರೂ ಭಕ್ತಿ-ಭಾವದಿಂದ ಪೂಜೆ ಸಲ್ಲಿಸಿದರು. ಮಹಿಳೆಯರು ಭಜನೆಯ ಮೂಲಕ ಸೇವೆ ನೀಡಿದರು. ಸುಮಾರು 300ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೂಷಿಕ ವಾಹನನ ಚಂದ್ರಯಾನದ ಫೋಟೋಬೂತ್ ಎಲ್ಲರನ್ನು ಆಕರ್ಷಿಸಿತು.
ಮಕ್ಕಳು ಸೇರಿದಂತೆ ಎಲ್ಲರಿಗೂ ವಿವಿಧ ಆಟೋಟ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರವಂತಿ ಅನೂಪ್ ಹಾಗೂ ಜಯಂತ್ ಬದ್ರಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.
ಸುಮಾರು 40ಕ್ಕೂ ಹೆಚ್ಚಿನ ಸ್ವಯಂ ಸೇವಕರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ್ದರು. ತ್ರಿಜಗವಂದಿತನ ಪೂಜೆ ನಿರ್ವಿಘ್ನವಾಗಿ ನಡೆಸಿ ಎಲ್ಲರ ಸಮ್ಮುಖದಲ್ಲಿ ವಿಸರ್ಜನೆ ಮಾಡಲಾಯಿತು.
*ವರದಿ – ಶೋಭಾ ಚೌಹಾಣ್, ಫ್ರಾಂಕ್‌ಫರ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.