Desi Swara: ರೈನ್‌-ಮೈನ್‌ ಕನ್ನಡ ಸಂಘ: ಸಂಗೀತ ಸಂಜೆ, ಹಾಸ್ಯ ನಾಟಕದ ಪುಳಕ


Team Udayavani, Jul 27, 2024, 11:16 AM IST

Desi Swara: ರೈನ್‌-ಮೈನ್‌ ಕನ್ನಡ ಸಂಘ: ಸಂಗೀತ ಸಂಜೆ, ಹಾಸ್ಯ ನಾಟಕದ ಪುಳಕ

ಪ್ರತೀ ಮೊದಲುಗಳು ಜೀವನದುದ್ದಕ್ಕೂ ಸದಾ ಜೀವಂತ. ಹೀಗೆ ಯುರೋಪಿನ ಕನ್ನಡಿಗರ ನೆನಪಿನಾಳದಲ್ಲಿ ಅಚ್ಚಳಿಯದೇ ಉಳಿಯುವಂತೆ ನಡೆದ ಉತ್ಸವ ಜರ್ಮನಿಯ ಫ್ರಾಂಕ್‌ಫ‌ರ್ಟ್‌ನ ರೈನ್‌ಮೈನ್‌ ಕನ್ನಡ ಸಂಘ ನಡೆಸಿಕೊಟ್ಟ ವಾರ್ಷಿಕೋತ್ಸವ 2024.

ಯುರೋಪ್‌ನ ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನ, ಕನ್ನಡ ಸಾಹಿತ್ಯ ಸಮ್ಮೇಳನ, ರಾಜೇಶ್‌ ಕೃಷ್ಣನ್‌ರವರ ರಸಸಂಜೆ, ಕನ್ನಡದ ಮೊದಲ ನಿಘಂಟಿನ ರಚನೆಕಾರ ಕಿಟ್ಟೆಲ್‌ರವರ ಕುಟುಂಬ ಕನ್ನಡದ ಕಾರ್ಯಕ್ರಮಕ್ಕೆ ಬಂದದ್ದು ಮೊದಲು ಇಷ್ಟೇ ಅಲ್ಲದೆ ಒಂದು ಕಾರ್ಯಕ್ರಮಕ್ಕಾಗಿ ಯುರೋಪಿನ 28ಕ್ಕೂ ಹೆಚ್ಚು ಕನ್ನಡ ಸಂಘಗಳು ಒಟ್ಟು ಸೇರಿದ್ದೂ ಇದೇ ಮೊದಲು… ಇವೆಲ್ಲ ಮೊದಲುಗಳನ್ನು ಯುರೋಪಿನಲ್ಲಿ ಸಾಧ್ಯಮಾಡಿದ್ದು ರೈನ್‌ ಮೈನ್‌ ಕನ್ನಡ ಸಂಘ.

ಅಮೆರಿಕದ ನಾವು ವಿಶ್ವ ಕನ್ನಡಿಗರು ಸಂಸ್ಥೆಯ ಇನ್ನೂರಕ್ಕೂ ಹೆಚ್ಚು ಕನ್ನಡಿಗರು ಆರ್‌.ಎಂ.ಕೆ.ಎಸ್‌.ನ ಪದಾಧಿಕಾರಿಗಳು, ಸದಸ್ಯರು ಸೇರಿ ತಾಯಿ ಭುವನೇಶ್ವರಿಯ ಮೆರವಣಿಗೆಯನ್ನು ಮಾಡುವುದರ ಮೂಲಕ ನಾವಿಕೋತ್ಸವಕ್ಕೆ ಮುನ್ನಡೆ ದೊರಕಿತು.

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ನಾಡೋಜ ಮಹೇಶ್‌ ಜೋಶಿ, ಕನ್ನಡದ ಮೇಷ್ಟ್ರು ಕೃಷ್ಣೇಗೌಡ್ರು, ನಾವಿಕ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್‌, ವಲ್ಲೀಕ್‌ ಶಾಸ್ತ್ರೀ ರೈನ್‌ಮೈನ್‌ ಕನ್ನಡ ಸಂಘದ ಅಧ್ಯಕ್ಷರು ವೇದ ಕುಮಾರ್‌ ಸ್ವಾಮಿ, ಸಂಚಾಲಕರು ವಿಶ್ವನಾಥ ಬಾಳೆಕಾಯಿ, ಸಂಯೋಜಕರಾದ ರವೀಂದ್ರ ಕುಲಕರ್ಣಿ, ಜರ್ಮನಿಯಲ್ಲಿನ ಭಾರತೀಯ ರಾಯಭಾರಿ ಪರ್ವತಸೇನಿ ಹರೀಶ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಮೈನವಿರೇಳಿಸುವಂತಿತ್ತು. ರಾಣಿ ಅಬ್ಬಕ್ಕ ದೇವಿಯ ಬಗೆಗಿನ ನೃತ್ಯ, ಸೊಜುಗಾದ ಸೂಜು ಮಲ್ಲಿಗೆಯ ಹರಡಿ ಮಾದೇವ ಎಂದು, ಲಯ ತಂಡದವರು, ಗಂಗಾಧರ ಗಜ ಚರ್ಮಾಂಬರ ಎಂದು, ಮಯೂರಿ ತಂಡದವರು ಶಿವನನ್ನು ನೃತ್ಯದ ಮೂಲಕ ಆರಾಧಿಸಿದರು. ಆರೋಹಣಾ ತಂಡ ರಾಗಿ ತಂದೀರಾ ಯೋಗಿ ರಾಗಿ, ಭೋಗ್ಯರಾಗಿ ಎಂದರೆ, ದೀಪವೂ ನಿನ್ನದೆ, ಗಾಳಿಯೂ ನಿನ್ನದೆ ಆರದಿರಲಿ ಬೆಳಕು ಎಂದು ತಮ್ಮ ಸ್ವರ ಮಾಧುರ್ಯದಿಂದ ಬಾಲಾ ಮತ್ತು ತಂಡದವರು ಪುಳಕಿತಗೊಳಿಸಿದರು.

ವಿದೇಶದಲ್ಲಿ ದೇಶೀಯ ಸೊಗಡನ್ನು ಕರ್ನಾಟಕದ ಹಲವು ಜಿಲ್ಲೆಗಳನ್ನು ಪ್ರತಿನಿಧಿಸುವ ಉಡುಗೆ-ತೊಡುಗೆಗಳು, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದರಿಂದ ಭಾವ ಸಂಗೀತ, ನಾವಿಕ ಕಾರ್ಯಕಾರಿ ಸಮಿತಿಯಿಂದ “ಹಚ್ಚೇವು ಕನ್ನಡದ ದೀಪ’ ನೃತ್ಯ, ಮುದ್ರಾ ಸ್ಕೂಲ್‌ ಆಫ್ ಡ್ಯಾನ್ಸ್‌ ಅವರಿಂದ ನೃತ್ಯ ಮತ್ತು ವೀರ ರಘುನಾಥ್‌ ತಂಡದವರಿಂದ ಗಾನಸುಧೆ ಕಾರ್ಯಕ್ರಮ, ಕ್ಯಾಲಿಫೋರ್ನಿಯಾದ “ರಂಗಧ್ವನಿ’ ತಂಡದಿಂದ “ಬೆಸ್ತು ಬಿದ್ದ ರಾಜ’ ಹಾಸ್ಯ ನಾಟಕ, ಇವೆಲ್ಲಕ್ಕೂ ಕಳಸಪ್ರಾಯವಾಗಿ ಜರ್ಮನಿಯ “ಯಕ್ಷ ಮಿತ್ರರು’ ತಂಡದಿಂದ “ಮೇಧಿನಿ ಸೃಷ್ಟಿ’ ಯಕ್ಷಗಾನ ನೆರೆದವರ ಚಪ್ಪಾಳೆಯನ್ನು ಇಮ್ಮಡಿಗೊಳಿಸಿತು.

ಇದು ಪ್ರಪಂಚದ ಉಗಮದ ಹಿಂದೂ ಸಿದ್ಧಾಂತವನ್ನು ಒಳಗೊಂಡಿದ್ದು, ಆದಿಮಾಯೆಯ ಆಜ್ಞೆಯಿಂದ ಬ್ರಹ್ಮ, ವಿಷ್ಣು, ಶಿವನ ಜನನವಾಗಿ, ದಾನವರೊಂದಿಗೆ 5,000 ವರ್ಷಗಳ ಕಾಲ ಯುದ್ಧ ನಡೆಯುವ ಸಂದರ್ಭ ಸೃಷ್ಟಿಯಾಗಿ, ವಿಷ್ಣು ಉಪಾಯದಿಂದ ರಾಕ್ಷಸರ ಮೇದಸ್ಸಿನಿಂದ ವಿಷ್ಣು ಮೇದಿನಿಯನ್ನು ಸೃಷ್ಟಿಸಿ ಬ್ರಹ್ಮನಿಗೆ ಜೀವಿಗಳನ್ನು ಸೃಷ್ಟಿಸಲು ದಾರಿ ಮಾಡಿಕೊಡುವ ಕಥೆ ಇದಾಗಿದೆ.

ನಾವಿಕೋತ್ಸವದ ಬಹುಮುಖ್ಯ ಆಕರ್ಷಣೆ ನಮ್ಮ ಕನ್ನಡ ನಾಡಿನ ಹೆಮ್ಮೆಯ ಗಾಯಕ ರಾಜೇಶ್‌ ಕೃಷ್ಣನ್‌ರವರ ಉಪಸ್ಥಿತಿ. ಇವರ ಪ್ರತೀ ಸಾಲಿಗೂ, ಹಾಡಿಗೂ ಮಾತಿಗೂ ಯುರೋಪಿನ ಕನ್ನಡಿಗರು ಮನತುಂಬಿಕೊಂಡರು. ಒಂದು ತಾಸಿಗೂ ಹೆಚ್ಚು ವಿರಾಮವಿಲ್ಲದೆ ನಿರಂತರವಾಗಿ ಹರಿಯುತ್ತಿದ್ದ ಗಾನಸುಧೆ ಎಲ್ಲರ ಆಯಾಸವನ್ನು ಮರೆಸಿ ಮನಸ್ಸನ್ನು ಪ್ರಪುಲ್ಲಗೊಳಿಸಿತು. ಯುರೋಪಿನಲ್ಲಿ ಮೊಟ್ಟಮೊದಲ ಕನ್ನಡ ಮ್ಯೂಸಿಕ್‌ ಕಾನ್ಸರ್ಟ್‌ ಜನರ ನೆನಪಿನಲ್ಲಿ ಚಿರಸ್ಥಾಯಿ.

ಕಾಂಜಾಣಂ ಕಾರ್ಯಸಿದ್ಧೀ ಎನ್ನುವಂತೆ ಯಾವುದೇ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಲು ಆರ್ಥಿಕವಾಗಿ ಸದೃಢವಾಗಿರುವುದು ಬಹುಮುಖ್ಯ. ಈ ನಿಟ್ಟಿನಲ್ಲಿ ನಾವಿಕೋತ್ಸವಕ್ಕಾಗಿ ನಮ್ಮ ಬೆಂಬಲಕ್ಕಾಗಿ ನಿಂತ Total Environment Homes, Bangaluru, Winnest Financial and Investment advisors, Wealth and asset management Bengaluru, DNAG, Investment and Insurance Advisors, Munic Germany, Horbach- one stop financial Services consulting, smartfins- Real Estate Investment and wealth Management Services, ASIIT-IT solutions in SAP, BALAJI Sweets- authentic Indian Sweets in Berlin Germany ಎಲ್ಲ ಪ್ರಾಯೋಜಕರಿಗೂ RKMS ಧನ್ಯವಾದಗಳನ್ನು ಅರ್ಪಿಸುತ್ತದೆ.

ಹನ್ನೆರಡು ತಾಸುಗಳ ಕಾರ್ಯಕ್ರಮಕ್ಕೆ ಹನ್ನೆರಡು ತಿಂಗಳುಗಳ ಯೋಜನೆ, ಮೂರ್‍ನಾಲ್ಕು ತಿಂಗಳುಗಳ ಕಠಿನ ಪರಿಶ್ರಮ, ನೂರಕ್ಕೂ ಹೆಚ್ಚು ಸ್ವಯಂ ಸೇವಕರ ಸಮಯದ ಹೂಡಿಕೆ ಹಾಗೂ ಸಮರ್ಪಣೆಯ ಫ‌ಲ ನಾವಿಕೋತ್ಸವ. ಮುಖ್ಯವಾಗಿ ನಾವಿಕ ಸಂಸ್ಥೆಯ ಪ್ರಸ್ತಾವನೆಯನ್ನು ಒಪ್ಪಿ ಇಂತಹ ಐತಿಹಾಸಿಕ ಕಾರ್ಯಕ್ರಮವನ್ನು ಜರುಗಿಸಲು ಒಪ್ಪಿ ರೈನ್‌ ಮೈನ್‌ ಕನ್ನಡ ಸಂಘ ಯುರೋಪಿನ ಕನ್ನಡ ಸಂಘಗಳಲ್ಲಿ ಮುಂಚೂಣಿಯಲ್ಲಿದೆ ಎಂದರೆ ಅತಿಶಯೋಕ್ತಿಯಲ್ಲ.

ರೈನ್‌ ಮೈನ್‌ ಕನ್ನಡ ಸಂಘದ ಕಾರ್ಯಕಾರಿ, ಸಹಕಾರ್ಯಕಾರಿ, ಕನ್ನಡ ಕಲಿ ಶಿಕ್ಷಕರು ಮತ್ತು ಸ್ವಯಂ ಸೇವಕರು ಮತ್ತು ಸದಸ್ಯರು ತಮ್ಮದೇ ರೀತಿಯಲ್ಲಿ ಬಳುವಲಿ ನೀಡಿದ್ದಾರೆ. ಆರ್‌ಎಂಕೆಎಸ್‌ನ ಅಧ್ಯಕ್ಷರು ವೇದಕುಮಾರ ಸ್ವಾಮಿ ಯುರೋಪಿನ ಕನ್ನಡ ಸಂಘಗಳ ಜತೆ ಚರ್ಚೆ ನಿರ್ಧಾರಗಳಲ್ಲಿ ತೊಡಗಿಸಿಕೊಂಡರೆ, ಸಂಚಾಲಕರಾಗಿ ವಿಶ್ವನಾಥ ಬಾಳೆಕಾಯಿಯವರು ನಾವಿಕ ಸಂಸ್ಥೆಯ ಜತೆಗೆ ಹಲವಾರು ಗಂಟೆಗಳ ಚರ್ಚೆ ಯೋಜನೆ, ಉಪಾಧ್ಯಕ್ಷರಾದ ರಿಯಾಜ್‌ ಶಿರಸಂಗಿಯವರು ಹಲವಾರು ಪ್ರಾಯೋಜಕರೊಡನೆ ಆರ್ಥಿಕವಾಗಿ ಸಹಕರಿಸಲು ಒಪ್ಪಿಸಿ ಜತೆಗೆ ಕಾರ್ಯಕ್ರಮದ ರೂಪುರೇಷೆಗಳನ್ನು ಹಾಕಿದರು.

ಕಾರ್ಯದರ್ಶಿ ಲೋಕನಾಥ್‌ ಚೌಹಾನ್‌ ಸಭಾಂಗಣದ ಮತ್ತು ಜನರ ಆಹಾರದ ವ್ಯವಸ್ಥೆ, ಸಹಕಾರ್ಯದರ್ಶಿ ಪ್ರದೀಪ್‌ ಶೆಟ್ಟಿಯವರು ಮೆರವಣಿಗೆಯ ಉಸ್ತುವಾರಿ, ಜನ ಸಂಪರ್ಕಾಧಿಕಾರಿಯಾಗಿ ಜಯಂತ್‌ ಬದ್ರಿಯವರು ಕಾರ್ಯಕ್ರಮದ ತಾಂತ್ರಿಕ ವ್ಯವಸ್ಥೆಗಳನ್ನು, ಖಜಾಂಚಿ ಅಕ್ಷಯ್‌ ಕಬಾಡಿ ಹಣಕಾಸು ವ್ಯವಸ್ಥೆಯನ್ನು ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದರು.

RMKSನ ಸಹಕಾರ್ಯಕಾರಿ ಸಮಿತಿಯ ಪೂಂಜಾ ಹುಲ್ಗೂರ್‌ ಸಾಮಾಜಿಕ ಜಾಲತಾಣದ ಪವರ್‌ಬ್ಯಾಂಕ್‌ನಂತೆ RMKS ಫೇಸ್‌ಬುಕ್‌, ಇನ್ಸ್ಟಾ ಗ್ರಾಮ್‌, ಯೂಟ್ಯೂಬ್‌ಗಳನ್ನು ಪ್ರತೀ ದಿನವೂ ಕ್ರಿಯಾಶೀಲವಾಗಿ ಇಟ್ಟು ಯುರೋಪಿನಾದ್ಯಂತದ ಕನ್ನಡಿಗರಿಗೆ ತಲುಪಿಸುವಲ್ಲಿ ಶ್ರಮಿಸಿದರು. ನಮ್ಮ ರೇಡಿಯೋ ವತಿಯಿಂದ RMKS ನವರ ಸಂದರ್ಶನವೂ ಒಂದು ಮಹತ್ವದ ಮೆಟ್ಟಿಲು.

ಇವೆಲ್ಲದರ ಜೊತೆ ನೂರಾರು ಸಹೃದಯ ಸ್ವಯಂ ಸೇವಕರು RMESನ ಸಮಿತಿಗೆ ಕೈಜೋಡಿಸಿ ಮನರಂಜನಾ ಕಾರ್ಯಕ್ರಮ, ಊಟ, ಉಪಾಹಾರಗಳು ಎಲ್ಲರಿಗೂ ದೊರಕುವಲ್ಲಿ, ಜನಸಂದಣಿಯನ್ನು ನಿಯಂತ್ರಿಸುವಲ್ಲಿ, ಸಭಾಂಗಣವನ್ನು ಅಲಂಕರಿಸುವಲ್ಲಿ, ಜನರನ್ನು ನೋಂದಣಿ ಮಾಡಿಕೊಳ್ಳುವಲ್ಲಿ ಅಗತ್ಯ ವಸ್ತುಗಳ ಖರೀದಿ ಕಾರ್ಯಕ್ರಮದ ಅನಂತರ ಸಭಾಂಗಣದ ಸ್ವತ್ಛತೆ ಪ್ರತಿಯೊಂದಕ್ಕೂ ಅವರ ಸಹಾಯ ಅಗಣ್ಯ.

ವರುಣ್‌ ಛಾಯಾಪತಿ, ಶೋಭಾ ಚೌಹಾØಣ್‌, ವಿಶ್ವಾಸ್‌ ಭಟ್‌, ನಿರಂಜನ್‌, ವೆಂಕಟೇಶ್‌, ಶಿವರಾಜ್‌ ಗೌಡ, ಗುರು, ಕಮಲಾಕ್ಷ, ನಮ್ಯ ದರ್ಶನ್‌, ಗಿರೀಶ್‌ ರಾವಂದೊರ್‌, ನಾಜಿಯಾ, ಸುನೀಲ್‌ ಪಾಟಿಲ್‌, ಪ್ರಸಾದ್‌, ಪವನ್‌, ಚಿರಂತ್‌ ಹುಲ್ಗೂರ್‌, ಹರ್ಷ ಸತ್ಯನಾರಾಯಣ್‌ ಪೂಜಾ ಸುದೀಪ್‌, ಪ್ರದೀಪ್‌, ರಾಜೇಶ್‌ ಲಲ್ವಾಡ್‌, ವರುಣ್‌, ವಿನೀತ್‌, ಅಕ್ಷತ, ಐಶ್ವರ್ಯ, ರಶ್ಮಿ, ದರ್ಶನ್‌ ಪ್ರಭುದೇವ, ಗಣೇಶ್‌ ಇಟಗಿ, ಪ್ರಶಾಂತಿ ವಿಜಯ್‌ ಹುಗ್ಗಿ, ನಾಗರಾಜ್‌, ಸುಪ್ರೀತ, ಹರ್ಷಿತ, ಮ್ಯಾಡಿ ಮತ್ತು ರಕ್ಷಿ ಹೀಗೆ ಸ್ವಯಂ ಸೇವಕರ ಹೆಸರು ಪಟ್ಟಿ ಮಾಡುತ್ತಾ ಹೋದರೆ ಅದು ಹನುಮಂತನ ಬಾಲದಂತೆ ಕೊನೆಯಾಗುವುದಿಲ್ಲ. ಒಂದೊಳ್ಳೆ ಕಾರ್ಯಕ್ರಮ ಎಲ್ಲರ ಸವಿನೆನಪಿನಲ್ಲಿ ಹತ್ತಾರು ವರುಷಗಳು ಉಳಿದು ಮುಂದೆಯೂ ರೈನ್‌ ಮೈನ್‌ ಕನ್ನಡ ಸಂಘದ ಕಾರ್ಯಕ್ರಮ ಮತ್ತೊಂದು ಕಾರ್ಯಕ್ರಮಕ್ಕೆ ಉದಾಹರಣೆಯಾಗಿ ನಿಲ್ಲಲಿ. ಇಂತಹ ಹತ್ತು ಹಲವು ಕಾರ್ಯಕ್ರಮಗಳು ಕನ್ನಡಿಗರನ್ನೂ ಒಟ್ಟುಗೂಡಿಸುತ್ತಿರಲಿ.

*ವರದಿ: ಶೋಭಾ ಚೌಹ್ಹಾಣ್‌, ಫ್ರಾಂಕ್‌ಫ‌ರ್ಟ್‌

ಟಾಪ್ ನ್ಯೂಸ್

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.