Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

Team Udayavani, Oct 26, 2024, 12:16 PM IST

Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

ದುಬೈ: ದುಬೈ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಯುಎಇ ದುಬೈ ಘಟಕ ಮತ್ತು ಕರ್ನಾಟಕ ಸರಕಾರದ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ವಿಶ್ವದ ಪ್ರಸಿದ್ಧ ಪ್ರವಾಸಿ ತಾಣವಾದ ದುಬೈಯಲ್ಲಿ “ದುಬೈ ಗಡಿನಾಡ ಉತ್ಸವ’ ಜರಗಿತು.

ಯುಎಇಯ ಕಾಸರಗೋಡು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಡಿನಾಡ ಉತ್ಸವದ ಉದ್ಘಾಟನೆಯನ್ನು ಆಕೆ¾à ಸಮೂಹ ಸಂಸ್ಥೆಗಳ ಅಧ್ಯಕ್ಷ ಹರೀಶ್‌ ಶೇರಿಗಾರ್‌ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇಯ ಸಲಹ ಸಮಿತಿಯ ಅಧ್ಯಕ್ಷ ಅಶ್ರಫ್‌ ಶಾ ಮಂತೂರು ವಹಿಸಿದ್ದರು.

ಸಭೆಯಲ್ಲಿ ಸಮಾಜದ ಸಾಧಕ ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷ ಸತೀಶ್‌ ಪೂಜಾರಿ, ಉದ್ಯಮಿ ಸಮಾಜ ಸೇವಕ ರೊನಾಲ್ಡೊ ಮಾರ್ಟಿಸ್‌, ಸಮಾಜ ಸೇವಕ ಶಿವಶಂಕರ ನೆಕ್ರಾಜೆ, ಕೆ.ಸಿ. ಲಿತೇಶ್‌ ಕುಮಾರ್‌ ಕುಂಬ್ಳೆ ಅವರನ್ನು ಸಮ್ಮಾನಿಸಲಾಯಿತು.

ಯುಎಇಯ ಸಂಘಟನ ಪುರಸ್ಕಾರವನ್ನು ಯುಎಇಯ ಕನ್ನಡ ಪರ ಸಂಸ್ಥೆಯಾದ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ, ದಿ ಸ್ಪೀಚ್‌ ಕ್ಲಿನಿಕ್‌ ದುಬೈ ಸಂಸ್ಥೆಗಳನ್ನೂ ಸಮ್ಮಾನಿಸಿ ಗೌರವಿಸಲಾಯಿತು. ಅಲ್‌ ಫರ್ಹಾನ್‌ ಎಕ್ಸೇಂಜ್‌ನ ಗುರುಪ್ರಸಾದ್‌ ಮಂಜೇಶ್ವರ, ರವಿರಾಜ್‌ ಶೆಟ್ಟಿ ಕಾಸರಗೋಡು, ಸಂದೀಪ್‌ ಜೆ.ಅಂಚನ್‌ ಮೂಲ್ಕಿ, ರಶೀದ್‌ ಬಾಯಾರ್‌, ಅಯೂಬ್‌ ಅಟ್ಟೆಗೋಳಿ, ಸಿದ್ಧಿಖ್‌ ಅಜ್ಮಾನ್‌, ರಿಯಾಝ್ ಅಹಮ್ಮದ್‌ ಗುಲ್‌ ಫರಾಸ್‌, ಅಬ್ದುಲ್ಲ ಕಂಡೆಲ್‌ ಪಚ್ಚಂಬಳ, ಮುನೀರ್‌ಪಾರ ಮುಂತಾದವರು ಉಪಸ್ಥಿತರಿದ್ದರು. ವಿಜಯ ಕುಮಾರ್‌ ಶೆಟ್ಟಿ ಗಾಣದಮೂಲೆ ಸ್ವಾಗತಿಸಿದರು. ಅಶ್ರಫ್‌ ಪಿ.ಪಿ.ಬಾಯಾರ್‌ ವಂದಿಸಿದರು.

ಸಾಂಸ್ಕೃತಿಕ ಮೆರುಗು ಸಭಾ ಕಾರ್ಯಕ್ರಮದ ಬಳಿಕ ವಿವಿಧ ತಂಡಗಳಿಂದ ಜಾನಪದ ನೃತ್ಯ, ಭರತನಾಟ್ಯ, ತಿರುವಾದಿರಕಳಿ, ಕೋಲಾಟ, ಒಪ್ಪನ, ದಫ್‌ ಮುಟ್ಟು, ಯಕ್ಷಗಾನ ಮುಂತಾದ ಕಾರ್ಯಕ್ರಮಗಳು ಹಾಗೂ ಚಲನಚಿತ್ರ ಗಾಯಕಿ ಪುಷ್ಪಾ ಆರಾಧ್ಯ ಮತ್ತು ಗಡಿನಾಡ ಗಾಯಕ ಗಾಯಕಿಯರಿಂದ ಸಂಗೀತ ರಸಸಂಜೆ ನಡೆಯಿತು.

ರಾತ್ರಿ ನಡೆದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು. ಕರ್ನಾಟಕ ರಾಜ್ಯೋದಯದ ಸುವರ್ಣ ಸಂಭ್ರಮದ ವಷ‌ìವನ್ನು ವಿಶೇಷ ಕೇಕ್‌ ಕತ್ತರಿಸುವ ಮೂಲಕ ಆಚರಿಸಲಾಯಿತು.

ಕರ್ನಾಟಕದ ಶಿರೂರಿನಲ್ಲಿ ಪ್ರಕೃತಿ ದುರಂತಕ್ಕೊಳಗಾದ ಪ್ರದೇಶದಲ್ಲಿ ರಕ್ಷಣ ಚಟುವಟಿಕೆಯ ಸಂದರ್ಭದಲ್ಲಿ ಸ್ಥಳದಲ್ಲಿ ಮೊಕ್ಕಾಂ ಹೂಡಿ ರಕ್ಷಣ ಕಾರ್ಯಗಳಿಗೆ ನೇತೃತ್ವ ನೀಡಿದ ಮಂಜೇಶ್ವರ ಶಾಸಕ ಎ. ಕೆ.ಎಂ ಅಶ್ರಫ್‌, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ಸಮಾಜ ಸೇವಕರಾದ, ದಾನಿ ಕೆ.ಕೆ.ಶೆಟ್ಟಿ, ಅಬುದಾಬಿ ಇಂಡಿಯನ್‌ ಸೋಶಿಯಲ್‌ ಹಾಗೂ ಕಲ್ಚರಲ್‌ ಸೆಂಟರಿನ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅವರನ್ನು ಸಮ್ಮಾನಿಸಲಾಯಿತು.

ದುಬೈ ಗಡಿನಾಡ ರತ್ನ ಪ್ರಶಸ್ತಿ ಪುರಸ್ಕೃತ ಯುಎಇಯ ಕೆ.ಎನ್‌.ಆರ್‌.ಐ ಪಾರಂ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ ವಕ್ವಾಡಿ, ದುಬೈ ಸಾಂಸ್ಕೃತಿಕ ಸಂಘಟಕ ಜೇಮ್ಸ್‌ ಮೆಂಡೋನ್ಸ, ಕುನಿಲ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಕ್ರುದ್ಧೀನ್‌ ಕುನಿಲ್‌, ದುಬೈ ಉದ್ಯಮಿ ದಾನಿ ಮಹಾಬಲೇಶ್ವರ ಭಟ್‌ ಎಡಕ್ಕಾನ, ಯುಎಇ ಅಲ್‌ಬಾಕ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್‌ ಸಂಸ್ಥೆಯ ಆಡಳಿತ ನಿರ್ದೇಶಕ ಯೂಸಫ್‌ ಉಪ್ಪಳ, ದುಬೈ ಆಸ್ಟರ್‌ ಡಿ.ಎಂ ಹೆಲ್ತ್‌ಕೇರ್‌ ಸಹಾಯಕ ಜನರಲ್‌ ಮ್ಯಾನೇಜರ್‌ ಬಶೀರ್‌ ಬಂಟ್ವಾಳ, ದುಬೈಯ ಬ್ಯುಸಿನೆಸ್‌ ಗೇಟ್‌ ಹಾಗೂ ವೂಮನ್‌ ಸರ್ಕಲ್‌ ಸಂಸ್ಥಾಪಕಿ ಲೈಲಾ ರಹಲ್‌ ಅಲ್‌ ಅತಾನಿ, ಇಕ್ಬಾಲ್‌ ಅಬತೂರು ಮತ್ತು ಮಲಯಾಳ ಚಿತ್ರ ನಿರ್ದೇಶಕ ತುಳಸಿದಾಸ್‌ ಪ್ರಶಸ್ತಿ ಪ್ರದಾನಗೈದರು.

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದ ಅಧ್ಯಕ್ಷ ನ್ಯಾಯವಾದಿ ಇಬ್ರಾಹಿಂ ಖಲೀಲ್‌ ಅರಿಮಲೆ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಕಾಸರಗೋಡು ಘಟಕದ ಅಧ್ಯಕ್ಷ ಎನ್‌.ಚನಿಯಪ್ಪ ನಾಯ್ಕ, ಪ್ರಮುಖರಾದ ಮೋನು ಅಲೂ°ರು, ಅಲ್‌ ಫರ್ದನ್‌, ಆತ್ಮಾನಂದ ರೈ, ದಿನೇಶ್‌ ಶೆಟ್ಟಿ ಕೊಟ್ಟಿಂಜ, ಡಾ|ಬಸವರಾಜ ಹೊನಗಲ್‌, ಜೋಸೆಫ್‌ ಮಾತಿಯಾಸ್‌, ಸುಧಾಕರ ರಾವ್‌ ಪೇಜಾವರ, ಶೇಖ್‌ ಮುಜೀಬ್‌ ರಹಿಮಾನ್‌, ಅಬೂಬಕ್ಕರ್‌ ಬೊಳ್ಳಾರ್‌, ತೋಯ್ದು, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್‌.ಸುಬ್ಬಯ್ಯಕಟ್ಟೆ, ಝಡ್‌.ಎ.ಕಯ್ನಾರ್‌ ಉಪಸ್ಥಿತರಿದ್ದರು.

ಮಂಜುನಾಥ ಕಾಸರಗೋಡು, ಸುಗಂದರಾಜ್‌ ಬೇಕಲ್‌, ಜೇಶ್‌ ಬಾಯಾರ್‌, ಅಮಾನ್‌ ತಲೆಕಳ, ಅನೀಶ್‌ ಶೆಟ್ಟಿ ಜೋಡುಕಲ್ಲು, ಅಲಿ ಸಾಂಗ್‌ ಯುಸುಫ್‌ ಶೇಣಿ, ಆಸೀಫ್‌ ಹೊಸಂಗಡಿ, ಝುಬೈರ್‌ ಕುಬಣೂರು, ಇಬ್ರಾಹಿಂ ಬೇರಿಕೆ ಕಾರ್ಯಕ್ರಮದ ಯಶಸ್ವಿಗೆ ಸಾಥ್‌ ನೀಡಿದರು. ಅಮರ್‌ ದೀಪ್‌ ಕಲ್ಲೂರಾಯ ಸ್ವಾಗತಿಸಿದರು. ಆರತಿ ಅಡಿಗ, ವಿಘ್ನೇಶ್‌ ಕುಂದಾಪುರ ನಿರೂಪಿಸಿದರು. ಇಬ್ರಾಹಿಂ ಬಾಜೂರಿ ವಂದಿಸಿದರು.

ಟಾಪ್ ನ್ಯೂಸ್

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

delhi

ಮದುವೆಯಾಗು ಎಂದು ಬೆನ್ನು ಬಿದ್ದ ಗರ್ಭಿಣಿ ಪ್ರೇಯಸಿಯನ್ನೇ ಹತ್ಯೆಗೈದು ಹೂತು ಹಾಕಿದ ಪ್ರಿಯಕರ

yashasvi jaiswal

INDvsNZ: ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ ಜೈಸ್ವಾಲ್

14-katapady

Katapady:ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿಗಳಿಂದ ಮೆಚ್ಚುಗೆ

Hardik Pandya

Hardik Pandya: ಶೀಘ್ರ ದೊಡ್ಡ ವಿಷಯ ಪ್ರಕಟ: ಹಾರ್ದಿಕ್‌ ಪೋಸ್ಟ್‌ ಕುತೂಹಲ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Maharashtra Assembly Elections: Congress released list of 23 candidates

Maharashtra Assembly Elections: 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

Desi Swara: ಸಾಧನೆಗೆ ಆತ್ಮಸಂತೃಪ್ತಿಯೇ ಅಳತೆಗೋಲು : ಸಾಮಾಜಿಕ ಸಾಧನೆ ಸ್ವಾರ್ಥವಾಗದಿರಲಿ

Desi Swara: ಸಾಧನೆಗೆ ಆತ್ಮಸಂತೃಪ್ತಿಯೇ ಅಳತೆಗೋಲು : ಸಾಮಾಜಿಕ ಸಾಧನೆ ಸ್ವಾರ್ಥವಾಗದಿರಲಿ

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

delhi

ಮದುವೆಯಾಗು ಎಂದು ಬೆನ್ನು ಬಿದ್ದ ಗರ್ಭಿಣಿ ಪ್ರೇಯಸಿಯನ್ನೇ ಹತ್ಯೆಗೈದು ಹೂತು ಹಾಕಿದ ಪ್ರಿಯಕರ

yashasvi jaiswal

INDvsNZ: ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ ಜೈಸ್ವಾಲ್

14-katapady

Katapady:ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿಗಳಿಂದ ಮೆಚ್ಚುಗೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.