Desi Swara: ನ್ಯೂಜೆರ್ಸಿಯಲ್ಲಿ ಮೋದಕ ಪ್ರಿಯನ ಆರಾಧನೆ
ಗಣಪತಿಗೆ ಎಲ್ಲ ಏಳು ದಿನಗಳ ಕಾಲ ತ್ರಿಕಾಲ ಪೂಜೆ ನಡೆಯುತ್ತಿತ್ತು.
Team Udayavani, Oct 7, 2023, 4:29 PM IST
ನ್ಯೂಜೆರ್ಸಿ: ಅಮೆರಿಕ ನ್ಯೂಜೆರ್ಸಿಯಲ್ಲಿ ಇತ್ತೀಚೆಗೆ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಶಾಪಿಂಗ್ ಮಾಲ್ ಒಂದರ ಹತ್ತಿರದ ಖಾಲಿ ಸ್ಥಳದಲ್ಲಿ ವಿಶಾಲವಾದ ಪೆಂಡಾಲ್ ನಿರ್ಮಿಸಿ ಅದರಲ್ಲಿ ಏರ್ಪಡಿಸಲಾಗಿತ್ತು. ಸಪ್ತಾಶ್ವಗಳ ಮೇಲೆ ವಿರಾಜಮಾನನಾದ ಬೃಹತ್ ಗಾತ್ರದ ಗಣಪತಿಯ ಮೂರ್ತಿ, ಪಕ್ಕದಲ್ಲಿ 1500ಪೌಂಡ್ (680ಕಿ.ಲೋ.) ತೂಕದ ಮೋದಕ ಆಕರ್ಷಕವಾಗಿತ್ತು. ಪಕ್ಕದಲ್ಲಿ ಬೃಹದಾಕಾರದ ಕಾಣಿಕೆ ಹುಂಡಿಯನ್ನು ಮೂಷಿಕದ ರೂಪದಲ್ಲಿ ಇರಿಸಲಾಗಿತ್ತು.
ಇಲ್ಲಿರುವ ಗಣಪತಿಗೆ ಎಲ್ಲ ಏಳು ದಿನಗಳ ಕಾಲ ತ್ರಿಕಾಲ ಪೂಜೆ ನಡೆಯುತ್ತಿತ್ತು. ಪ್ರತೀ ದಿನವೂ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಗಣಪತಿಯನ್ನು ಇರಿಸಿದ್ದ ಮಂಟಪದ ಹೊರಭಾಗದಲ್ಲಿ ಮಳಿಗೆಗಳು, ವೇದಿಕೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಣೆಯ ಕೇಂದ್ರವಾಗಿತ್ತು. ಕಾರ್ಯಕ್ರಮದ ಪ್ರಾಯೋಜಕರೂ ಸೇರಿದಂತೆ ಉದ್ಯಮಿಗಳು ವಿವಿಧ ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಈ ಸ್ಪರ್ಧೆ ಶುಲ್ಕ ರಹಿತವಾಗಿದ್ದು, ಹೆಚ್ಚಿನವರು ಭಾಗವಹಿಸಿ ಬಹುಮಾನ ಪಡೆದುಕೊಳ್ಳುತ್ತಿದ್ದರು.
ವಿಶೇಷವೆಂದರೆ ಕೆಲವು ಮಳಿಗೆಗಳನ್ನು ಇನ್‌ಸ್ಟಾ ಗ್ರಾಂನ್ನಲ್ಲಿ ಹಿಂಬಾಲಿಸಿದರೆ ಅದಕ್ಕೂ ಬಹುಮಾನ ನೀಡುವ ಕೊಡುಗೆಗಳಿದ್ದವು. ಅಲ್ಲಿದ್ದ ಇನ್ನೊಂದು ಆಕರ್ಷಣೆ ಮೋದಿ ಟಾಯ್ಸ್ . ಈ ಮಳಿಗೆಯಲ್ಲಿ ವಿಶಿಷ್ಟ ರೀತಿಯ ಮ್ಕಳ ಆಟದ ಸಾಮಗ್ರಿಗಳಿದ್ದವು. ಗಣಪತಿ, ಹನುಮಂತ, ಸರಸ್ವತಿ, ಲಕ್ಷ್ಮೀ ಮುಂತಾದ ಗೊಂಬೆಗಳನ್ನು ಒತ್ತಿದಾಗ ಆಯಾ ದೇವರನ್ನು ಸ್ತುತಿಸುವ ಹಾಡು ಮೂಡಿಬರುತ್ತಿದ್ದು ಮಕ್ಕಳಿಗೆ ಇದೊಂದು ರೀತಿಯಲ್ಲಿ ವಿಶಿಷ್ಟ ಆಕರ್ಷಣೆಯಾಗಿತ್ತು ಎನ್ನಬಹುದು. ಪ್ರತೀ ದಿನ ಪೂಜೆಯ ವೇಳೆ ಪ್ರಸಿದ್ಧ ನಾಸಿಕ್ ಬ್ಯಾಂಡ್ ಇದ್ದುದು ಇನ್ನೊಂದು ವೈಶಿಷ್ಟ್ಯವಾಗಿತ್ತು.
ವರದಿ: ವಂದಿತಾ ಗೌತಮ್ ಕಿಣಿ, ನ್ಯೂಜೆರ್ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.