Desiswara: ಕಸ್ತೂರಿ ಕನ್ನಡ ಸಂಘ: ಗಣೇಶ ಚತುರ್ಥಿ, ದಾಸ ವೈಭವ ಕಾರ್ಯಕ್ರಮ
Team Udayavani, Nov 3, 2024, 11:01 AM IST
ಓಹಾಯೋ: ಕಸ್ತೂರಿ ಕನ್ನಡ ಸಂಘದ ಸದಸ್ಯರು ತಮ್ಮ ದೇಸಿ ಸಂಸ್ಕೃತಿ ಮತ್ತು ಹಬ್ಬದ ಆಚರಣೆಗಳಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದು ಎಂದರೆ ತಪ್ಪಾಗಲಾರದು. ಇತ್ತೀಚಿಗೆ ಫಾರ್ಮಾಸಿಟಿ ಹಾಲ್‌ನಲ್ಲಿ ವೈಭವಯುತವಾಗಿ ನಡೆದ ಗಣೇಶ ಚತುರ್ಥಿ ಪೂಜೆ ಮತ್ತು ದಾಸವೈಭವ ಇದಕ್ಕೆ ಸಾಕ್ಷಿಯಾಗಿದೆ.
ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷೆ ಮಮತಾ ಅವರ ನೇತೃತ್ವದಲ್ಲಿ ಸಂಘದ ಕಾರ್ಯ ಕಾರಿ ಸಮಿತಿ ಸದಸ್ಯರು ಸಭಾಂಗಣ ವನ್ನು ತಳಿರು ತೋರಣ ಗಳಿಂದ, ಹಲವಾರು ಬಗೆಯ ಆಲಂಕೃತ ವಸ್ತುಗಳಿಂದ ಅಲಂಕರಿ ಸಿದ್ದರು. ಮುಖ್ಯ ಮಂಟಪದ ಅಲಂ ಕಾರ ಅಲ್ಲಿ ನೆರೆದ ಜನರನ್ನು ಆಕರ್ಷಿಸಿತ್ತು.
ಸಂಘದ ಸದಸ್ಯರು, ಮಕ್ಕಳು ಕುಣಿದು ಕುಪ್ಪಳಿಸುತ್ತಾ ಉತ್ಸಾಹ ದಿಂದ ಗಣಪತಿಯನ್ನು ಮೆರ ವಣಿಗೆಯ ಮೂಲಕ ತಂದು ಪ್ರತಿ ಷ್ಠಾಪಿಸಿ ದರು. ಶಿವ-ವಿಷ್ಣು ದೇವ ಸ್ಥಾನದ ಅರ್ಚ ಕರಾದ ಶ್ರೀಧರ ಶಾಸಿŒ ಗಳು ಪೂಜಾ ಕಾರ್ಯಕ್ರಮವನ್ನು ವಿಧಿ- ವಿಧಾನ ಗಳಿಂದ ಅಚ್ಚುಕಟ್ಟಾಗಿ ನೆರವೇರಿಸಿದರು. ಹಲವಾರು ಮಕ್ಕಳು ತಾವು ತಂದ ಚಿಕ್ಕ ಗಣೇಶನ ವಿಗ್ರಹಕ್ಕೆ ಭಕ್ತಿಪೂರ್ವಕವಾಗಿ ಅಭಿಷೇಕ ಮಾಡಿದರೆ, ಇನ್ನೂ ಹಲ ವಾರು ಜನರು ಮತ್ತು ಮಕ್ಕಳು ಭಕ್ತಿಗೀತೆಗಳನ್ನೂ, ಶ್ಲೋಕಗಳನ್ನು ಹೇಳುತ್ತಾ ಗಣೇಶನ ಅನುಗ್ರಹಕ್ಕೆ ಪಾತ್ರರಾದರು.
ಮಹಾಮಂಗಳಾರತಿ ಮತ್ತು ಇತರ ಪೂಜಾ ಕಾರ್ಯಕ್ರಮದ ಅನಂತರ ವಿಶೇಷ ಭೋಜನ ಏರ್ಪಡಿಸಲಾಗಿತ್ತು.
ವಿನಾಯಕನಿಗೆ ಪ್ರಿಯವಾದ ಕಡಲೆ ಕಾಳು ಉಸುಳಿ, ಕಡುಬು, ಪಾಯಸ ವಿಶೇಷವಾಗಿತ್ತು. ರುಚಿರುಚಿಯಾದ ಊಟದ ಅನಂತರ ದಾಸ ವೈಭವ ಕಾರ್ಯಕ್ರಮಕ್ಕೆ ಅಲ್ಲಿ ನೆರೆದ ಜನರು ಅಣಿಯಾದರು.
ಪ್ರತೀ ವರ್ಷದಂತೆ ಈ ವರ್ಷವೂ ದಾಸ ವೈಭವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಡಾ| ನವೀನ್ ಉಲಿ ಅವರು ಎಂದಿನಂತೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರ ವೇರಿಸಿದರು. ಕನ್ನಡ ಸಾರಸ್ವತ ಲೋಕಕ್ಕೆ ಹರಿದಾಸರ ಕೊಡುಗೆ ಅಪಾರ. ಇಂದಿನ ಪೀಳಿಗೆಯ ಮಕ್ಕಳನ್ನು ಪ್ರೋತ್ಸಾ ಹಿಸಿ, ಅವರಲ್ಲಿ ಸಂಗೀತದ ಜ್ಞಾನ ಭಂಡಾರ ವನ್ನು ಬೆಳೆಸುವ ಸದ್ದುದ್ದೇಶದಿಂದ ಡಾ| ನವೀನ್ ಉಲಿಯವರು ಸಂಗೀತ ವಿದ್ವಾಂಸ ರಿಂದ ತರಬೇತಿ ಪಡೆದ ಮಕ್ಕಳು ಹಾಗೂ ಗುರುಗಳನ್ನು ಆಹ್ವಾನಿಸಿ, ಅವರಿಂದ ದಾಸರ ಕೀರ್ತನೆಗಳನ್ನು ಹಾಡಿಸು ತ್ತಾರೆ. ದಾಸರಿಗೆ ನಮಿಸುವ ಹಾಗೂ ಗೌರವ ಸೂಚಿಸುವ ಕಾರ್ಯ ಕ್ರಮ ಇದಾಗಿದೆ. ಮಕ್ಕಳ ಮತ್ತು ಗುರುಗಳ ಕೀರ್ತನೆಗಳನ್ನೂ, ಸಂಗೀತವನ್ನೂ ಆಲಿಸಿ ಅಲ್ಲಿ ನೆರೆದಿದ್ದ ಜನಸಮೂಹ ತಲೆದೂಗಿದರು. ಸಂಗೀ ತದಲ್ಲಿ ಮೈಮರೆತ ಪ್ರೇಕ್ಷಕರಿಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಸಂಗೀತದ ಗುಂಗಿನಲ್ಲೇ ಎಲ್ಲರೂ ಸಂಜೆಯ ಚಹಾ ಮತ್ತು ತಿಂಡಿಗಳನ್ನು ಸವಿದರು.
ಕಸ್ತೂರಿ ಕನ್ನಡ ಸಂಘವು ತಮ್ಮ ಭಾಷೆ, ಸಂಸ್ಕೃತಿ, ಹಬ್ಬದಾಚರಣೆಗಳನ್ನು ಉಳಿಸಿ ಬೆಳೆಸುವ ನಿಲುವನ್ನು ಹೊಂದಿದೆ ಮತ್ತು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿ ಹೆಜ್ಜೆಯನ್ನು ಇಡುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದುಗೂಡಿ ಈ ಪರಂಪರೆಯನ್ನು ಉಳಿಸಿ ಬೆಳೆಸೋಣ.
ವರದಿ: ರಶ್ಮಿ, ಸಲೋನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.