Desi swara: ಸೆಪ್ಟಂಬರ್ 5: ಶಿಕ್ಷಕರ ದಿನಾಚರಣೆ: ಶಿಕ್ಷಕರ ಶ್ರೀರಕ್ಷೆಯಲ್ಲಿ
Team Udayavani, Sep 5, 2023, 10:00 AM IST
ಕಾಲ ಬದಲಾದ ಹಾಗೇ ವ್ಯವಸ್ಥೆಯು ಬದಲಾಗುತ್ತಾ ಹೋಗುತ್ತದೆ. ಹಳೆಯ ಸಂಗತಿಗಳು ಕೆಲವೊಮ್ಮೆ ನಶಿಸಿದರೆ, ಇನ್ನೂ ಕೆಲವು ಸಮಯಕ್ಕೆ ತಕ್ಕಂತೆ ಮಾರ್ಪಾಡಾಗುತ್ತವೆ. ಶಿಕ್ಷಣದ ವಿಷಯದಲ್ಲೂ ಹಾಗೇ. ಮೊದಲೆಲ್ಲ ಶಿಕ್ಷಕರೆಂದರೆ ಅದೆಷ್ಟು ಭಕ್ತಿ, ಭಾವ, ಗೌರವ. ಶಿಕ್ಷಕರೆಂದರೆ ದೇವರಿಗೆ ಸಮಾನ ಎಂಬಂತೆ. ಆದರೆ ಈಗಿನ ಬದಲಾಗುತ್ತಿರುವ ಆಧುನಿಕ ಯುಗದಲ್ಲಿ ಶಿಕ್ಷಕರ ಮೇಲಿನ ಗೌರವವೂ ನಶಿಸುತ್ತಿದ್ದು, ತಂತ್ರಜ್ಞಾನವು ಶಿಕ್ಷಕರ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಗೂಗಲ್‌ಲೇ ಗುರು ಎಂಬಂತಾಗಿದೆ. ಎಷ್ಟೇ ತಂತ್ರಜ್ಞಾನದ ಮೇಲೆ ಅವಲಂಬಿತರಾದರೂ ಶಿಕ್ಷಣದ ಜತೆಜತೆಗೆ ಶಿಕ್ಷಕರು ನೀಡುತ್ತಿದ್ದ ಜೀವನ ಮೌಲ್ಯಗಳು ಎಂದೆಂದಿಗೂ ನಮಗೆ ಶ್ರೀರಕ್ಷೆಯೇ.
ಶಿಕ್ಷಣ ಮತ್ತು ಶಿಕ್ಷಕರು ದೇಶದ ಅತ್ಯಂತ ಅಮೂಲ್ಯವಾದ ಆಸ್ತಿಗಳು. ಭಾರತವು ನಿರಂತರವಾಗಿ ಶಿಕ್ಷಣ ಮತ್ತು ಗುರುಗಳನ್ನು ವಿಶೇಷ ಗೌರವದಿಂದ ಕಾಣುತ್ತಿದೆ, ಮತ್ತು ಶ್ರೇಷ್ಠ ಗುರು ಪರಂಪರೆಯನ್ನು ಹೊಂದಿದೆ. ಜೀವನದಲ್ಲಿ ಗುರು-ಗುರಿಯಿರಬೇಕು ಎಂಬ ಮಾತನ್ನು ಕೇಳಿರಬಹುದು. ಗುರಿಯ ಬೃಹಾದಾಕಾರವು ಸಾಧಿಸಲು ಗುರುವಿನ ಮಾರ್ಗದರ್ಶನದಿಂದ ಗುಲಗುಂಜಿಯಾಗುವುದೇ. ಗುರು ಎಲ್ಲವನ್ನೂ ಹೇಳಿಕೊಡುವ ವ್ಯಕ್ತಿ. ನಾವು ಸಾಧ್ಯವಾದರೆ ಸಬಲವನ್ನೂ ಕಲಿಸಲು ತಯಾರಿರುವ ವ್ಯಕ್ತಿ ಹಾಗೂ ಮಾರ್ಗವನ್ನು ಬೆಳಗಿಸುವ ದೀಪದಂತೆ ಗುರುಗಳು ನಮ್ಮನ್ನು ಯಶಸ್ಸಿನತ್ತ ಕರೆದೊಯ್ಯುತ್ತಾರೆ. ನಾವು ಅನುಸರಿಸುವ ಮೊದಲ ವ್ಯಕ್ತಿಯೂ ಗುರು.
ಪ್ರಪಂಚದಾದ್ಯಂತ ಶಿಕ್ಷಕರು ಜ್ಞಾನ ಮತ್ತು ಮಾರ್ಗದರ್ಶನವನ್ನು ನೀಡುವ ಪಾತ್ರವನ್ನು ವಹಿಸುತ್ತಾರೆ. ಬೋಧನೆ ಜಾಗತಿಕವಾಗಿ ನಡೆಯುತ್ತಿದ್ದರೂ, ಭಾರತೀಯ ಮಣ್ಣು ವಿಶೇಷವಾಗಿ ಶಿಕ್ಷಕರಿಗೆ ವಿಶಿಷ್ಟ ಗೌರವವನ್ನು ನೀಡುತ್ತಾ ಬಂದಿವೆ. ವಿಶ್ವಾದ್ಯಂತ ಅಕ್ಟೋಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಿದರೆ, ಭಾರತದಲ್ಲಿ ಇದು ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ. ಶಿಕ್ಷಣದ ಪರಿವರ್ತನೆಯು ಶಿಕ್ಷಕರಿಂದ ಪ್ರಾರಂಭವಾಗುತ್ತದೆ ಎನ್ನುವುದು ವಿಶ್ವ ಶಿಕ್ಷಕರ ದಿನ 2023ರ ಥೀಮ್. ಗುರುಗಳನ್ನು ಪೂಜಿಸುವ ಈ ಸಂಪ್ರದಾಯವು ನಮ್ಮ ದೇಶದಲ್ಲಿ ಯುಗಾಂತರಗಳಿಂದ ಮುಂದುವರೆದಿದ್ದರೂ, ಪ್ರಸ್ತುತ ರಾಜಕೀಯ ಮತ್ತು ತಂತ್ರಜ್ಞಾನದ ಪ್ರಾಬಲ್ಯದ ಇಂದಿನ ಆಧುನಿಕ ಯುಗದಲ್ಲಿ, ಸಮಾಜಕ್ಕೆ ಶಿಕ್ಷಕರ ಕೊಡುಗೆಗಳನ್ನು ಒತ್ತಿಹೇಳುವುದು ನಿರ್ಣಾಯಕವಾಗಿವೆ.
ಶಿಕ್ಷಣವು ನಿಸ್ಸಂದೇಹವಾಗಿ ಒಂದು ಅಪಾರ ಮೌಲ್ಯವನ್ನು ಹೊಂದಿರುವ ಸವಲತ್ತು. ಇಂದಿನ ಶಿಕ್ಷಣ ವ್ಯವಸ್ಥೆಯು ಕೌಶಲಯುತ ಜೀವನದುದ್ದಕ್ಕೂ ಆಧಾರವಾಗಬಲ್ಲ ಶಿಕ್ಷಣವನ್ನು ನೀಡುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಪ್ರಶ್ನಾತೀತವಾಗಿ ಉಳಿದಿದೆ. ಇಂದಿನ ಶಿಕ್ಷಣ ವ್ಯವಸ್ಥೆಯು ಹೆಚ್ಚಾಗಿ ಶ್ರೇಯಾಂಕದ ಹಾಗೂ ಲಾಭದ ಮೇಲೆ ಮಾತ್ರ ಕೇಂದ್ರೀಕರಿಸುತ್ತಿದೆ. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯು ಕೇವಲ ಹೆಚ್ಚಿನ ಅಂಕಗಳನ್ನು ಗಳಿಸಲು ಮತ್ತು ಕೆಲವು ಉನ್ನತ ಕಂಪೆನಿಗಳಲ್ಲಿ ಅಥವಾ ಸಾಮಾಜಿಕ ರಚನೆಗಳಲ್ಲಿ ಉದ್ಯೋಗಗಳನ್ನು ಪಡೆಯಲು ವಿದ್ಯಾರ್ಥಿಗಳನ್ನು ಹಗಲು ರಾತ್ರಿ ಸಿದ್ಧಪಡಿಸುತ್ತಿದೆ.
ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ ತಂದೆ-ಮಗಳ ಒಂದು ಸುದ್ದಿ ಹರಿದಾಡುತ್ತಿತ್ತು: ಭಾರತದಲ್ಲಿ ಉನ್ನತ ಶಿಕ್ಷಣ ಪಡೆದ ಅನಂತರ ಖೀಖಅ ಯ ದೊಡ್ಡ ಕಂಪೆನಿಯ ಉದ್ಯೋಗದಲ್ಲಿದ್ದು ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವ ಮಗಳಿಗೆ ತನ್ನ ತಂದೆಯ ನಿಧನದ ಸಮಯದಲ್ಲಿ ಹಾಜರಿರುವ ಮೂಲಭೂತ ಮನಸ್ಥಿತಿ ಇಲ್ಲದಿರುವುದು ಹೇಗೆ ಸಾಧ್ಯ? ತಂದೆಯ ಅಂತಿಮ ವಿಧಿಗಳಲ್ಲಿ ಭಾಗವಹಿಸಲು ಅವಳನ್ನು ವೃದ್ಧಾಶ್ರಮದವರು ಸಂಪರ್ಕಿಸಿದಾಗಲೂ, “ಸಾಧ್ಯವಾದರೆ, ಮುಂದಿನ ಕಾರ್ಯ ಮಾಡಿ, ಇಲ್ಲವೇ ಹೆಣವನ್ನು ಬಿಸಾಡಿ’ ಎನ್ನುವ ಅವಿವೇಕಿತನ ನಿರ್ಧಾರವನ್ನು ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರುವ ಆಕೆಗೆ ತೆಗೆದುಕೊಳ್ಳಲು ಹೇಗೆ ಸಾಧ್ಯವಾಯಿತು? ಭಾರತದ ಚಂದ್ರಯಾನದ ಯಶಸ್ಸನ್ನು ಸಹಿಸಿಕೊಳ್ಳಲು ಸಾಧ್ಯವಾಗದ, ಅದರ ವೈಫಲ್ಯವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಅನೇಕ ವಿದ್ಯಾವಂತ-ಬುದ್ಧಿಹೀನ ವ್ಯಕ್ತಿಗಳು ಪಡೆದ ಶಿಕ್ಷಣವಾದರೂ ಯಾವುದು?? ವೃದ್ಧಾಶ್ರಮಗಳು, ಕೊಲೆಗಳು, ಅತ್ಯಾಚಾರಗಳು, ಹಿಂಸೆ, ದ್ವೇಷ, ಸ್ವಾರ್ಥ ಮತ್ತು ಆತ್ಮಹತ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ಹಿಂದಿನ ಕಾರಣವೇನು? ಒಟ್ಟಾರೆಯಾಗಿ, ಈ ಯುಗದ ಶಿಕ್ಷಣವು ವಿದ್ಯಾರ್ಥಿಗಳಿಗೆ ಕೇವಲ ಜ್ಞಾನವನ್ನು ನೀಡುವುದರ ಹೊರತಾಗಿ, ದೇಶದ ಬಗ್ಗೆ ಅವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಜ್ಞಾನೋದಯವನ್ನು ಮೂಡಿಸುವಲ್ಲಿ ವಿಫಲವಾಗಿರುವುದು ಅಲ್ಲಗಳೆಯಲಾಗದ ಸತ್ಯ.
ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯದ ಒಳನುಸುಳುವಿಕೆಯು ಅದರ ಪಥದಲ್ಲಿ ಆಳವಾದ ಬದಲಾವಣೆಯನ್ನು ಉಂಟುಮಾಡಿದೆ. ಬದಲಾಗುತ್ತಿರುವ ಈ ಶೈಕ್ಷಣಿಕ ದೃಷ್ಟಿಕೋನಗಳ ನಡುವೆ, ಶಿಕ್ಷಕರು ನಿಜವಾದ ಹೊರೆಯನ್ನು ಹೊರುತ್ತಾರೆ. ಶಿಕ್ಷಕನಾಗಿರುವುದು ಖಂಡಿತ ಅತ್ಯಂತ ಕಠಿನ ಮತ್ತು ಸವಾಲಿನ ಪಾತ್ರ.
ಸಮಕಾಲೀನ ಶಿಕ್ಷಣ ವ್ಯವಸ್ಥೆಯು ಶಿಕ್ಷಕರನ್ನು ನಿಷ್ಕ್ರಿಯ ಸ್ಥಿತಿಯಲ್ಲಿರಿಸಿದೆ. ಮೊದಲೆಲ್ಲಾ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರು ಪೆಟ್ಟು ನೀಡಿ ತಿದ್ದಿದರೆ ಯಾರು ಏನು ಹೇಳುತ್ತಿರಲಿಲ್ಲ. ಆದರೆ ಈಗ ಪೆಟ್ಟು ಕೊಡುವುದೇ ಅಪರಾಧವೆಂಬಂತೆ ಆಗಿದೆ.
ಒಟ್ಟಾರೆಯಾಗಿ ಆಧುನಿಕ ಶಿಕ್ಷಣದ ಚೌಕಟ್ಟು ಶಿಕ್ಷಕರನ್ನು ವಿದ್ಯಾರ್ಥಿಗಳ ಕೈಗೊಂಬೆಗಳಾಗಿ ಪರಿವರ್ತಿಸಿದೆ.
ಒಂದೆರಡು ತಿಂಗಳ ಹಿಂದೆ, ಇಂಗ್ಲೆಂಡ್‌ನ ಗ್ಲೌಸೆಸ್ಟನರ್‌ಲ್ಲಿರುವ ಶಾಲೆಯೊಂದರಲ್ಲಿ 15 ವರ್ಷದ ಹದಿಹರೆಯದ ಹುಡುಗನು ತನ್ನ ಗಣಿತ ಶಿಕ್ಷಕನಿಗೆ ಚೂರಿಯಿಂದ ಇರಿದ ಘಟನೆಯು ನಡೆದಿತ್ತು. ಇಂತಹ ಘಟನೆಗಳು ಇಲ್ಲಿ ಸಾಮಾನ್ಯವಾಗಿ ನಡೆಯುತ್ತವೆ. ಕುತೂಹಲದಿಂದ ಇಲ್ಲಿರುವ ಅದೇ ಶಾಲೆಯಲ್ಲಿ ಓದುವ ವಿದ್ಯಾರ್ಥಿಯ ಹೆತ್ತವರಲ್ಲಿ ಈ ವಿಚಾರದ ಕುರಿತು ಚರ್ಚಿಸಿದಾಗ ತಿಳಿಯಿತು ಇಂತಹ 4-5 ಘಟನೆಗಳು ಇಂಗ್ಲೆಂಡ್‌ನಲ್ಲಿ ವರುಷಕ್ಕೆ ನಡೆಯುತ್ತಲೇ ಇರುತ್ತದೆ. ಶಿಕ್ಷಕರ ಮೇಲೆ ಪೋಷಕರಿಗೆ ಇರುವ ಅಭಿಪ್ರಾಯಗಳೂ ಈಗ ಬದಲಾಗಿರುವುದನ್ನೂ ನೋಡಬಹುದು. ಇಂತಹುದೇ ಘಟನೆಗಳು ಭಾರತದಲ್ಲೂ ಚಿಗುರೊಡೆಯಲು ಆರಂಭಿಸಿದರೆ ನೈತಿಕತೆಯ ಅಧಃಪತನಕ್ಕೆ ಇನ್ನೇನು ಬೇಕು? ಈ ನಿಟ್ಟಿನಲ್ಲಿ ಶಿಕ್ಷಕ-ಪೋಷಕ ಹಾಗೂ ಇವರನ್ನೊಳಗೊಂಡ ಸಮಾಜ ಆಲೋಚಿಸಬೇಕಾಗಿದೆ.
ಇಂದಿನ ಕಾಲಘಟ್ಟದಲ್ಲಿ ಶಿಕ್ಷಕರು ತಪ್ಪನ್ನು ನೋಡಿ ಸುಮ್ಮನೆ ಕೂರುವಂತಹ ಪರಿಸ್ಥಿತಿಯಲ್ಲಿದ್ದಾರೆ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಲ್ಲಿ ಅನಗತ್ಯ ಗೊಂದಲಗಳು ಎಡತಾಕುವುದೂ ಸಾಮಾನ್ಯವಾಗಿಬಿಟ್ಟಿದೆ. ನಮ್ಮ ನಡವಳಿಕೆಗಳು, ಜೀವನಶೈಲಿ ಮತ್ತು ಇನ್ನೂ ಹೆಚ್ಚಿನವುಗಳ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಶಿಕ್ಷಕರು ಹೊಂದಿದ್ದಾರೆ. ಬದಲಾಗುತ್ತಿರುವ ಜಗತ್ತಿನಲ್ಲಿ ಗುರುವಿನ ಪಾತ್ರ ಮಹತ್ತರದ್ದು. ಚ್ಯಾಟ್ ಎಕಖಗಳು ಗುರುವಾಗಿರುವ ಸನ್ನಿವೇಶದಲ್ಲಿ ಶಿಕ್ಷಕರ ಮುಂದಿರುವ ಸವಾಲುಗಳು ಬೆಟ್ಟದಷ್ಟು.
ಉತ್ತಮ ಶಿಕ್ಷಣ ಮಾತ್ರವಲ್ಲ, ಸಂಸ್ಕಾರ, ದೇಶಭಕ್ತಿ, ಹಿರಿಯರು ಮತ್ತು ಮಾರ್ಗದರ್ಶಕರಿಗೆ ಗೌರವ ಮತ್ತು ಪೋಷಕರ ಮೇಲಿನ ವಾತ್ಸಲ್ಯದಂತಹ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ- ಇವು ನಮ್ಮ ರಾಷ್ಟ್ರದ ಭವಿಷ್ಯದ ಮೂಲಾಧಾರಗಳಾಗಿವೆ. ವಿಜ್ಞಾನ, ಕ್ರೀಡೆ ಮತ್ತು ಜ್ಞಾನದ ಕ್ಷೇತ್ರಗಳಲ್ಲಿ ಭಾರತದ ಯುವಕರನ್ನು ಪೋಷಿಸುವ ಜವಾಬ್ದಾರಿಯನ್ನು ಶಿಕ್ಷಕರು ಹೊರುತ್ತಾರೆ. ಅಂತೆಯೇ ಶಿಕ್ಷಕರು ಮತ್ತು ಶಾಲೆಗಳಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಕರ್ತವ್ಯವು ಸರಕಾರದ್ದಾದೆ. ಹಾಗೆಯೇ, ಪೋಷಕರು ತಮ್ಮ ಮಕ್ಕಳಲ್ಲಿ ಶಿಕ್ಷಕರ ಬಗ್ಗೆ ಮೆಚ್ಚುಗೆ ಮತ್ತು ಪ್ರೀತಿಯನ್ನು ಬೆಳೆಸುವಲ್ಲಿ ಅನಿವಾರ್ಯ ಪಾತ್ರ ವಹಿಸಲೇಬೇಕು.
ಪ್ರಸ್ತುತ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ನೆಚ್ಚಿನ ಶಿಕ್ಷಕರ ಪ್ರೀತಿಯ ನೆನಪುಗಳಿರುತ್ತವೆ, ಅವರ ಪಾಠಗಳು ಮತ್ತು ಜೀವನವು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಸಪ್ಟೆಂಬರ್ 5ರ ಶಿಕ್ಷಕರ ದಿನದಂದು ನಮಗೆ ಮಾರ್ಗದರ್ಶನ ನೀಡಿದ, ಪ್ರೇರೇಪಿಸಿದ ಮತ್ತು ಉನ್ನತೀಕರಿಸಿದ ಶಿಕ್ಷಕರನ್ನು ಸ್ಮರಿಸುವ ಮತ್ತು ಈ ಉದಾತ್ತ ವೃತ್ತಿಗೆ ನಮ್ಮ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸೋಣ.
-ವಿಟ್ಲ ತನುಜ್ ಶೆಣೈ,
ಚೆಲ್ಟೆನ್ಹ್ಯಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.