ಅಭಿಯಂತರ ದಿನ ಆಚರಣೆ; ಕರ್ನಾಟಕ ಸಂಘ ಕತಾರ್, ಭಾರತೀಯ ಸಾಂಸ್ಕೃತಿಕ ಕೇಂದ್ರ
ಮಣಿಕಂಠನ್ ಅಧ್ಯಕ್ಷೀಯ ಭಾಷಣವನ್ನು ಮಾಡಿ ಗಾಂಧೀಜಿಯವರ ತ್ಯಾಗವನ್ನು ಸ್ಮರಿಸಿದರು.
Team Udayavani, Oct 7, 2023, 11:10 AM IST
ಕತಾರ್: ಇಲ್ಲಿನ ಕನ್ನಡ ಸಂಘವು ಪ್ರತೀ ವರ್ಷದಂತೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ನೆನಪಿಗಾಗಿ ಆಚರಿಸುವ ಎಂಜಿನಿಯರ್ ದಿನವನ್ನು ಇಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಇತ್ತೀಚೆಗೆ ಆಚರಿಸಿತು. ಮೊದಲ ಬಾರಿಗೆ ಕರ್ನಾಟಕ ಸಂಘ ಕತಾರ್ ಭಾರತೀಯ ಸಾಂಸ್ಕೃತಿಕ ಕೇಂದ್ರದೊಂದಿಗೆ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಿದ್ದು ವಿಶೇಷವಾಗಿತ್ತು.
ಕತಾರ್‌ನ ಭಾರತೀಯ ರಾಯಭಾರಿ ಎಚ್.ಇ. ವಿಪುಲ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಕತಾರ್‌ನ ಎಂಜಿನಿಯರ್ ಜಬೋರ್ ಮೊಹಮ್ಮದ್, ಕಾರ್ಯಾಚರಣೆ ಮತ್ತು ಐಟಿ ವಿಭಾಗದ ಮುಖ್ಯಸ್ಥ; ಕತಾರ್‌ಸಾಂಸ್ಕೃತಿಕ ಗ್ರಾಮ ಮತ್ತು ಎಂಜಿನಿಯರ್ ಫಾಹಿದ್ ಅಲ್-ಹೆಂಜೆಬ್ , ಪ್ರಾಜೆಕ್ಟ್ ಹೆಡ್, ಕ್ಯೂಕೆಮ್ ಉಪಸ್ಥಿತರಿದ್ದರು.
ಈ ವೇಳೆ ಸಾರ್ವಜನಿಕ ಕಾರ್ಯಗಳ ಪ್ರಾಧಿಕಾರ ಅಶYಲ್ ನೆಟ್‌ವರ್ಕ್ ಆಪರೇಶನ್ ಮತ್ತು ನಿರ್ವಹಣೆ ಪ್ರಾಧಿಕಾರದ ಹಿರಿಯ ಎಂಜಿನಿಯರ್ ಅರವಿಂದರ್ ಸಿಂಗ್ ಅವತಾರ್ ಸಿಂಗ್ ಅವರು ಟೆಕ್ನಿಕಲ್ ಪ್ರೊಜೆಕ್ಟ್‌ನ ಕುರಿತು ಕಿರು ವಿವರಣೆ ನೀಡಿದರು.
ಕತಾರ್‌ನ ಸುಮಾರು 14 ಪ್ರಮುಖ ಭಾರತೀಯ ಶಾಲೆಗಳ ವಿದ್ಯಾರ್ಥಿಗಳಿಂದ ವೈಜ್ಞಾನಿಕ ಮತ್ತುಎಂಜಿನಿಯರಿಂಗ್ ಮಾದರಿಗಳ ಪ್ರದರ್ಶನವು ಈ ಕಾರ್ಯಕ್ರಮದ ಮತ್ತೂಂದು ಪ್ರಮುಖ ಅಂಶವಾಗಿತ್ತು. ಕರ್ನಾಟಕ ಸಂಘ ಕತಾರ್ ಸಲಹಾ ಸಮಿತಿಯ ಸದಸ್ಯರು, ಸಮಾಜದ ಮುಖಂಡರು ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಎ.ಪಿ. ಮಣಿಗಂಡನ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷರಾದ ಮಹೇಶ್ ಗೌಡ ಅವರು ಕಾರ್ಯಕ್ರಮವನ್ನು ಆಯೋಜಿಸಲು ನೆರವು ನೀಡಿದ ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದರು ಮತ್ತು ಸಭಾಂಗಣದಲ್ಲಿ ಹಾಜರಿದ್ದ ಎಲ್ಲ ಎಂಜಿನಿಯರ್ ಗಳನ್ನು ಅಭಿನಂದಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಎಚ್.ಇ.ವಿಫುಲ್ ಅವರು ಕಾರ್ಯಕ್ರಮ ಆಯೋಜನೆಗಾಗಿ ಸಂಘಕ್ಕೆ ಧನ್ಯವಾದ ತಿಳಿಸಿದರು ಹಾಗೂ ಪ್ರದರ್ಶನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲ ಶಾಲೆಗಳು ಮತ್ತು ವಿದ್ಯಾರ್ಥಿಗಳನ್ನು ಈ ವೇಳೆ ಸಮ್ಮಾನಿಸಲಾಯಿತು. ಸಮೀರ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಮೋಹನ್ ವಂದಿಸಿದರು.
ಗಾಂಧಿ ಜಯಂತಿ ಆಚರಣೆ, ಬಹುಮಾನ ವಿತರಣೆ ಇಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಭಾರತದ ರಾಯಭಾರ ಕಚೇರಿಯ ಸಂಯೋಜನೆಯಲ್ಲಿ ಅ.2ರಂದು ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸಲಾಯಿತು.
ಭಾರತೀಯ ರಾಯಭಾರ ಕಚೇರಿಯ ಡಿಸಿಎಂ ಸಂದೀಪ್ ಕುಮಾರ್, ಕಾರ್ಯದರ್ಶಿ ಸಚಿನ್ ಶಂಕಪಾಲ್ ಹಾಗೂ ಭಾರತೀಯ ಸಮುದಾಯದ ನಾಯಕರು ಉಪಸ್ಥಿತರಿದ್ದರು. ಐಸಿಸಿಯ ಸಾಮಾನ್ಯ ಕಾರ್ಯದರ್ಶಿ ಮೋಹನ್ ಕುಮಾರ್ ಸ್ವಾಗತಿಸಿದರು, ಎ.ಪಿ. ಮಣಿಕಂಠನ್ ಅಧ್ಯಕ್ಷೀಯ ಭಾಷಣವನ್ನು ಮಾಡಿ ಗಾಂಧೀಜಿಯವರ ತ್ಯಾಗವನ್ನು ಸ್ಮರಿಸಿದರು.
ಮಾತನಾಡಿದ ಸಂದೀಪ್ ಕುಮಾರ್ ಗಾಂಧೀಜಿಯವರ ದೂರದೃಷ್ಟಿತ್ವವು ಗಾಂಧೀಜಿಯವರ ಬೆಳೆವಣಿಗೆಗೆ ಹೇಗೆ ಸಹಕಾರಿಯಾಗಿದೆ ಎಂದು ಸ್ಮರಿಸಿದರು. ಐಸಿಸಿಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಟಾಗಿಲು ವಂದಿಸಿದರು. ಸುಮಾ ಮಹೇಶ್ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಭಾರತೀಯ ಶಾಲೆಗಳ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.