Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ


Team Udayavani, Nov 3, 2024, 11:38 AM IST

9-desi

ಕರ್ನಾಟಕ ರಾಜ್ಯೋತ್ಸವ ಕರ್ನಾಟಕ ರಾಜ್ಯದ ನಾಡಹಬ್ಬ. ಭಾಷೆಯ ಒಲುಮೆ ಇರುವ ಕನ್ನಡಿಗರೆಲ್ಲರೂ ವಿಶೇಷವಾಗಿ ಅದ್ದೂರಿಯಿಂದ ಆಚರಿಸುವ ಹಬ್ಬ ಈ ಕರ್ನಾಟಕ ರಾಜ್ಯೋತ್ಸವ. ಯಾವುದೇ ಒಂದು ಒಲುಮೆ ಎಂದಾಗ ಅದಕ್ಕೊಂದು ಬೇಲಿ ಎಂಬುದು ಇರುವುದಿಲ್ಲ ಎಂಬುದೇ ನಿಜವಾದರೆ ಭಾಷೆಯ ಒಲುಮೆಗೂ ಬೇಲಿ ಎಂಬುದಿಲ್ಲ. ಕನ್ನಡ ನಾಡಿನ ಈ ನಾಡಹಬ್ಬವು ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗದೇ ವಿಶ್ವಾದ್ಯಂತ ಆಚರಿಸುವುದೇ ಇದಕ್ಕೆ ನಿದರ್ಶನ.

1956ರಂದು ಎಲ್ಲ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿದ ಆ ಶುಭದಿನವನ್ನು, ಒಂದು ರಾಜ್ಯವನ್ನಾಗಿ ಘೋಷಣೆ ಮಾಡಿದ ಈ ಶುಭದಿನವನ್ನು ನಾಡಹಬ್ಬವನ್ನಾಗಿ ಆಚರಿಸುತ್ತಿರುವ ಸಕಲರಿಗೂ ಈ ವಿಶೇಷ ದಿನದ ಶುಭಾಶಯಗಳು.

ಕನ್ನಡದ ವ್ಯಾಕರಣವನ್ನು ಸ್ವಲ್ಪವೇ ಬಲ್ಲವರಿಗೂ ಕಾಗುಣಿತ ಎಂಬ ಪದದ ಬಗ್ಗೆ ಅರಿವಿರುತ್ತದೆ. ಸರಳವಾಗಿಯೇ ಹೇಳಿದರೆ,  ವ್ಯಂಜನಾಕ್ಷರವು ಸ್ವರಾಕ್ಷರದೊಂದಿಗೆ ಕೂಡುವ ಪರಿಯೇ ಕಾಗುಣಿತ.  ಉದಾಹರಣೆಗೆ “ಕ್‌’ ಎಂಬ ಅಕ್ಷರವು “ಅ’ ಜತೆ ಸೇರಿದರೆ “ಕ’ ಎಂದಾಗುತ್ತದೆ. “ಕ್‌’ ಎಂಬ ಅಕ್ಷರವು “ಈ’ ಅಕ್ಷರದ ಜತೆ ಕೂಡಿದಾಗ “ಕೀ’ ಎಂದಾಗುತ್ತದೆ. ಇದೇ ಕಾಗುಣಿತ. ಈಗ ನಿಮಗೆ ಪ್ರಶ್ನೆ ಏನೆಂದರೆ “ಮ’ ಅಕ್ಷರವು “ಆ’ ಅಕ್ಷರದ ಜತೆಗೆ ಸೇರಿ “ಮಾ’ ಅಂತಾದರೆ ಇದನ್ನು ಮಾಗುಣಿತ ಎಂದು ಕರೆಯಬಹುದೇ? ಅಥವಾ ಇದನ್ನೂ ಕಾಗುಣಿತ ಎಂದೇ ಕರೆಯಬೇಕೆ?

“ಕ’ ಕಾರವನ್ನಳಿದು ವ್ಯಂಜನವು ವರ್ಗೀಯವೇ ಆಗಲಿ, ಅವರ್ಗೀಯವೇ ಆಗಲಿ ಒಟ್ಟಾರೆ ಎಲ್ಲವೂ ಕಾಗುಣಿತವೇ ಹೌದು. ಇದೇ “ಕ’ ಕಾರದ ಮಹತ್ವ. ವರ್ಗೀಯ ವ್ಯಂಜನದ ಐದರ ಐದು ಸಾಲುಗಳ 25ರ ಮೊದಲನೆಯದ್ದೇ “ಕ’. ಈ ಐದು ಸಾಲುಗಳ ಮೊದಲ ಅಕ್ಷರಗಳು “ಕ’ “ಚ’ “ಟ’ “ತ’ “ಪ’. ಮತ್ತೂಂದು ಪ್ರಶ್ನೆ ಏನೆಂದರೆ,  ಇವು ಇದೇ ರೀತಿಯ ಜೋಡಣೆಯಲ್ಲಿರಬೇಕೇ?

“ಪ’ ಅನಂತರ “ಟ’ ಬರುವುದರಿಂದ ಏನಾದರೂ ತಪ್ಪಿದೆಯೇ? ತೀರಾ ಆಳಕ್ಕೆ ಇಳಿಯದೆ ಹೇಳಿದರೆ, ಬಹುಶ: ಯಾವುದು ಎಲ್ಲಿ ಹೇಳಿದರೂ ಅಡ್ಡಿಯಿಲ್ಲ. ಆದರೆ ಶಿಸ್ತು ಅಂತ ಒಂದಿದೆ ಅಲ್ಲವೇ? ಅದರಂತೆ, ಹಿಂದಿನವರು ಹೇಗೆ ಈ ರಚನೆಯನ್ನು ಮಾಡಿದ್ದರೋ ಅದನ್ನು ಪಾಲಿಸೋಣ. ಪ್ರಶ್ನೆ ಮಾಡಬೇಕು ನಿಜ, ಹಾಗಂತ ಅದು ವಿತಂಡವಾದ ಆಗಬಾರದು ನೋಡಿ. ಒಂದೆರಡು ವರ್ಷಗಳ ಹಿಂದೆ,  ಕನ್ನಡ ಅಕ್ಷರಮಾಲೆಯಲ್ಲಿ ಇಷ್ಟೆಲ್ಲ ಅಕ್ಷರಗಳು ಬೇಕೇ? ಎಂಬ ವಿವಾದ ಎದ್ದಿತ್ತು.  ಬಳಸದೇ ಬಾಲ ಕಳೆದುಕೊಂಡೆವು ಸರಿ, ಆದರೆ ಇದೇ ನೀತಿ ಅನುಸರಿಸಿ ಅಕ್ಷರಗಳನ್ನು ಕಳೆದುಕೊಳ್ಳುವುದು ಬೇಡ. ಬಳಸಿ ಉಳಿಸಿಕೊಳ್ಳೋಣ.

ಮುಂದೆ ಸಾಗೋಣ ಬನ್ನಿ. ಪದಗಳ ಸಮೂಹವು ಒಂದು ಅರ್ಥಪೂರ್ಣ ವಾಕ್ಯವಾಗಬೇಕಾದರೆ ಅಲ್ಲಿ ಮೂರು ಅಂಶಗಳು ಮುಖ್ಯವಾಗುತ್ತದೆ.  ಆ ಮೂರು ಭಾಗಗಳು ಏನೆಂದರೆ “ಕರ್ತೃಪದ, ಕರ್ಮಪದ, ಮತ್ತು ಕ್ರಿಯಾಪದ’. “ಕ’ಕಾರದ ಮಹಾತ್ಮೆ ಇಲ್ಲಿಯೂ ಮುಂದುವರೆದಿದೆ. ಕರ್ತೃ, ಕರ್ಮ, ಕ್ರಿಯಾ ಎಲ್ಲವೂ “ಕ’ ಕಾರಾತ್ಮಕ…

ಒಂದೊಮ್ಮೆ ಒಬ್ಬ ನಮ್ಮ ಬೇಂದ್ರೆ ಅಜ್ಜರನ್ನು ಕೇಳ್ತಾನೆ “ಕನ್ನಡ ಬಗ್ಗೆ ನಿಮ್ಮ ಅಭಿಪ್ರಾಯ ಹೇಳರಿ’ ಅಂತ. ಎಷ್ಟೇ ಆಗಲಿ ನಮ್ಮ ಬೇಂದ್ರೆ ಅಜ್ಜ ನೋಡಿ, ಹೇಳ್ತಾರೆ “ನಮ್‌ ಶರೀರದ ಕಣಕಾಣದಾಗೆ ಕನ್ನಡ ಅದ. ನಮ್‌ ಶರೀರದ ಮೇಲಿನ ಅನೇಕ ಅಂಗಗಳು ಮತ್ತು ವಿಶೇಷಗಳು “ಕ’ ಇಂದೆಲ್ಲಾ ಶುರು ಆಗತಾವು. ಕಣ್ಣು, ಕಿವಿ, ಕಾಲು, ಕೈ, ಕೆನ್ನೆ, ಕನ್ನಡಕ, ಕೋಲು, ಕೊಡೆ, ಕಾಲ್ಮರಿ, ಕುರ್ತಾ’ ಅಂತ. ಕನ್ನಡ ಮತ್ತು ಕರ್ನಾಟಕವನ್ನೂ ಸೇರಿಸಿದರೆ, ಇಲ್ಲೇ ಅರ್ಥವಾಗುತ್ತದೆ “ಕ’ ಕಾರದ ವೈಭವ. ಇಷ್ಟು ಹೇಳಿದ ಅಜ್ಜರು ಕೇವಲ ಒಂದು ಹಾದಿ ಹಾಕಿ ಕೊಟ್ಟರು. ಹಲವರಿಗೆ ಒಂದು ತೊಂದರೆ ಇದೆ. ಸಾಧಕರು ತೀರಿ ಹೋದಾಗ “ಮತ್ತೆ ಹುಟ್ಟಿ ಬನ್ನಿ’ ಅಂತ ಹೇಳ್ಳೋದು. ಬಹುಶ: ಸಾಧಕರ ಆತ್ಮ ಅದನ್ನು ನೋಡಿ ಕೇಳಬಹುದು “ಅಲ್ಲಪ್ಪಾ! ನಾ ಹಾದಿ ತೋರಿಸಿದ್ದೀನಿ, ನೀ ಅದರಾಗ ನಡಿ’ ಅಂತ.

ಸಾಧನಕೇರಿ ಸಾಧಕರ ಮಾತನ್ನೇ ಮುಂದುವರೆಸಿದರೆ, ಶರೀರಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕಾನೇಕ ವಿಷಯಗಳೂ “ಕ’ ಇಂದಲೇ ಶುರುವಾಗ್ತದೆ. “ಕರ, ಕಬj, ಕಪಾಳ, ಕಪಾಲ, ಕೂದಲು, ಕಂಕಣ, ಕಂಕಾಲ, ಕಂಕುಳು, ಕಂಠ, ಕಂಬನಿ, ಕಕ್ಷ, ಕಟಿ, ಕಶೇರು, ಕಿಬ್ಬೊಟ್ಟೆ’  ಇತ್ಯಾದಿ. ಸದ್ಯಕ್ಕೆ ಇಷ್ಟು ಹೇಳಿದ ಮೇಲೆ, ನಿಮ್ಮ ಕೆಲಸ ಏನಪ್ಪಾ ಎಂದರೆ ಇದನ್ನು ಮುಂದುವರೆಸುವುದು. ಒಟ್ಟಾಗಿ ಕನ್ನಡ ಶಬ್ದ ಭಂಡಾರವನ್ನು ಬೆಳೆಸೋಣ. ಬಳಸಿದಷ್ಟೂ ಭಾಷೆ ಬೆಳೆಯುತ್ತದೆ.

ಬೇಂದ್ರೆ ಅಜ್ಜರ ಮಾತು ಬಂದ ಮೇಲೆ, “ಕ’ಕಾರ ಮಹಿಮೆ ಸಾಹಿತ್ಯ ಲೋಕದಲ್ಲಿ ಹೇಗೆ ಹಿರಿಮೆ ಸಾಧಿಸಿದೆ ನೋಡೋಣ ಬನ್ನಿ. “ಕಗ್ಗ, ಕಥೆ, ಕವಿತೆ, ಕವನ, ಕಿರುಗತೆ, ಕಾವ್ಯ, ಕಾದಂಬರಿ, ಕವಿ, ಕಥೆಗಾರ, ಕಥನ, ಕಥಾನಕ, ಕಥಾಚಿತ್ರ, ಕಥಾನಾಯಕ, ಕಥಾನಾಯಕಿ, ಕಾವ್ಯನಾಮ, ಕಾವ್ಯವಾಚನ, ಕೃತಿ, ಕೋವಿದ, ಕೇಶಿರಾಜ, ಕುವೆಂಪು, ಕಾರ್ನಾಡ್‌, ಕಾರಂತ, ಕಂಬಾರ, ಕಾಯ್ಕಿಣಿ’ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. “ಕ’ ಕಾರದ ಮಹಿಮೆ ಅಪಾರ. ಆಗಲೇ ಹೇಳಿದಂತೆ ಈಗ ನಿಮ್ಮ ಸರದಿ. ಪಟ್ಟಿ ಬೆಳೆಸಿ.

ಕರ್ನಾಟಕವು ಪುಣ್ಯಕ್ಷೇತ್ರಗಳ ಬೀಡು. ಈ ವಿಷಯದಲ್ಲೂ “ಕ’ಕಾರ ತನ್ನ ಮಹಿಮೆಯನ್ನು ಬಿಟ್ಟುಕೊಟ್ಟಿಲ್ಲ. “ಕಟೀಲು, ಕುಕ್ಕೆ, ಕದ್ರಿ, ಕೊಲ್ಲೂರು, ಕೂಡಲಸಂಗಮ, ಕುದ್ರೋಳಿ ಹೀಗೆ ಅನೇಕ ಪುಣ್ಯ ಕ್ಷೇತ್ರಗಳು ಕನ್ನಡ ನಾಡಿನಲ್ಲಿದೆ.  ಇನ್ನು ಪ್ರಮುಖ ನದಿಗಳನ್ನು ಹೆಸರಿಸಿದರೆ “ಕಾವೇರಿ, ಕೃಷ್ಣಾ, ಕಬಿನಿ, ಕಾಳಿ, ಕುಮಾರಧಾರ, ಕುಬಾj’. ಕನ್ನಡ ನಾಡು ಯೋಧರ ಬೀಡು ಎಂದಾಗ ಮೊದಲ ಹೆಸರು ಮೂಡುವುದೇ “ಕ’ಕಾರಾತ್ಮಕ “ಕೊಡಗು’. ಜನರಲ್‌ ಕಾರಿಯಪ್ಪ ಅವರನ್ನು ನೆನೆಯದ ಮನ ಉಂಟೆ? “ಕ’ ಕಾರ ಮಹಿಮೆ ಇಲ್ಲೂ ಇಹುದು. ಕೊಡಗು ಎಂಬುದು ಯೋಧರ ಬೀಡು ಎಂಬ “ಕ’ ಕಾರದ “ಕಾಫಿ’ಗೂ ಹೆಸರುವಾಸಿ.

“ಕ’ ಕಾರದ ವಿಶೇಷವು ಇಲ್ಲಿಗೇ ಮುಗಿಯುವುದಿಲ್ಲ. ಅದೊಂದು “ಕಾಂತಾರ’. ನಿಗೂಢವಾದ ಮತ್ತು ಅಪಾರವಾದ ಚಿನ್ನವನ್ನೇ ಹೊತ್ತ ಕೆಜಿಎಫ್‌. ಜತೆಗೆ, ಕಾಂತಾರ ಎಂದ ಮೇಲೆ ಪ್ರಾಣಿ, ಪಕ್ಷಿಗಳ ಬೀಡು ಎಂದೇ ಆಯಿತಲ್ಲವೇ?  ಕಾಡು ಮತ್ತು ನಾಡು ಪ್ರಾಣಿಪಕ್ಷಿಗಳ ಲೋಕದಲಿ “ಕ’ ಕಾರ ಹೇಗಿದೆ ನೋಡುವಾ.  “ಕಪ್ಪೆ, ಕತ್ತೆ, ಕಪಿ, ಕರಡಿ, ಕಲಭ, ಕಾಗೆ, ಕಿರುಬ, ಕುದುರೆ, ಕುರಿ, ಕೊಕ್ಕರೆ, ಕೋಳಿ, ಕೋಣ, ಕೋಗಿಲೆ, ಕೋತಿ, ಕೋಡಗ, ಕೇಸರಿ’ ಮೊದಲಾದವು ಸದ್ಯಕ್ಕೆ ನನ್ನ ಅರಿವಿಗೆ ಬಂದಿದ್ದು. ಮುಂದಿನದು ನಿಮ್ಮ ಸರದಿ.

“ಕ’ ಕಾರಾತ್ಮಕ ಕಾಯಿಲೆ ಅಥವಾ ಖಾಯಿಲೆ ಎಂದರೆ ಪ್ರಾಣ ಹೋಗುವಂಥದ್ದೇ ಆಗಬೇಕಿಲ್ಲ. ಒಟ್ಟಾರೆ ನಮ್ಮ ದೇಹದಲ್ಲಾಗುವ ಸಹ್ಯವಾಗದ ಯಾವುದೇ ಆಗಲಿ ಅದು ಕಾಯಿಲೆಯೇ ಸರಿ. ಅದು “ಕಜ್ಜಿ, ಕೆಮ್ಮು, ಕಫ,  ಕುಷ್ಠ, ಕೆಪ್ಪ, ಕೆರೆತ’ ಯಾವುದೂ ಆಗಬಹುದು. ಕೆಲವೊಮ್ಮೆ ಮನಸ್ಸಿಗೆ ಬಾಧಕವಾಗುವುದು ಇಂಥಾ ಕಾಯಿಲೆಗಳೇ ಆಗಬೇಕಿಲ್ಲ ಬದಲಿಗೆ ನ್ಯೂನತೆಗಳೂ ಆಗಬಹುದು.

ಕೆಲವೊಮ್ಮೆ ಅವು ಹುಟ್ಟಿನಿಂದ ಅಥವಾ ಜೀವನದ ಒಂದು ಹಂತದಲ್ಲಿ ಯಾವುದೋ ಸನ್ನಿವೇಶದಲ್ಲಾದ ಅನಿರೀಕ್ಷಿತ ಘಟನೆಯ ಗ್ರಹಚಾರ ಫಲ.  ಈ ನ್ಯೂನತೆಗಳು ಹೆಚ್ಚಿನ ಬಾರಿ, ದಿನನಿತ್ಯದಲ್ಲಿ ಮಾಡುವ ಕೆಲಸಗಳಿಗೆ ತೊಂದರೆ ಕೊಡುವುದಕ್ಕಿಂತ,  ಮಾನಸಿಕವಾಗಿ ಹಿಂಸೆಯಾಗುವುದೇ ಆಗಿರುತ್ತದೆ. ಅವು “ಕುರುಡ, ಕುರುಡಿ, ಕಿವುಡ, ಕಿವುಡಿ, ಕುಬj, ಕುಬೆj, ಕುರೂಪಿ, ಕುಳ್ಳ, ಕುಳ್ಳಿ’ ಎಂಬೆಲ್ಲ ವಿಶೇಷಣಗಳು ಮಾನಸಿಕವಾಗಿ ಕುಗ್ಗಿಸುತ್ತದೆ.

ಕನ್ನಡ ಭಾಷೆಯು ಒಂದು ಕಡಲು. ಈ ಬರಹದ ಮೂಲಕ ಒಂದೇ ಒಂದು ಅಕ್ಷರವನ್ನು ತೆಗೆದುಕೊಂಡು, ಅದರೊಟ್ಟಿಗಿರುವ ಅನೇಕ ಸಾಧ್ಯತೆಗಳನ್ನು ಸ್ವಲ್ಪಮಟ್ಟಿಗೆ ಹೇಳಿದ್ದೇನೆ. “ಕ’ ಕಾರದಲ್ಲಿನ ಇನ್ನೂ ಅನೇಕಾನೇಕ ವಿಷಯಗಳನ್ನು ಇಲ್ಲಿ ಹೇಳಿಲ್ಲ, ಆದರೂ ಕೊನೆಯ ಹನಿ ಹೀಗಿದೆ.

“ಕಕ್ಕುಲತೆಗಳು ಕಾಣದಾಗಿದೆ.  ಕಚ್ಚಾಟದ ಕೂಗುಗಳು, ಕಟುಕತನಗಳಿಂದ ಕುಟುಂಬಗಳು ಕವಲೊಡೆದಿವೆ.  ಕಾರಂಜಿಯಂತಿದ್ದ ಕನಸುಗಳಿಗೆ ಕಾರ್ಮೋಡ ಕವಿದಿದೆ.  ಕಚುಗುಳಿಗಳು ಕಾಣದಾಗಿವೆ. ಕಾಲಕ್ರಮೇಣ ಕಾರ್ಯಕ್ಷೇತ್ರಗಳಲ್ಲಿ ಕಾಮಗಾರಿಗಳು ಕಾರ್ಯಸ್ವರೂಪವಾಗಲೆಂಬುದೇ ಕಾಮನಪಿತನಲ್ಲಿ ಕೋರಿಕೆ’.

-ಶ್ರೀನಾಥ್‌ ಭಲ್ಲೆ,

ರಿಚ್ಮಂಡ್‌

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.