ಕರ್ನಾಟಕ ಸಂಘ ಕತಾರ್: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ
Team Udayavani, Sep 28, 2024, 11:05 AM IST
ದೋಹಾ: ಕರ್ನಾಟಕ ಸಂಘ ಕತಾರ್ ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ “ಅಭಿಯಂತರ ದಿನಾಚರಣೆ’ಯನ್ನು ಸೆ.15ರಂದು ಕತಾರ್‌ನ ದೋಹಾದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಹಾಲ್‌ನಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕತಾರ್‌ನ ಭಾರತೀಯ ರಾಯಭಾರಿ ಗೌರವಾನ್ವಿತ ವಿಪುಲ್ ಮತ್ತು ಗೌರವಾನ್ವಿತ ಅತಿಥಿಯಾಗಿ ಕಹ್ರಾಮಾ ವಿದ್ಯುತ್ ಪ್ರಸರಣ ವಿಭಾಗದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಮುಖ್ಯಸ್ಥರಾದ ಅಬ್ದುಲ್ಲಾ ಇಬ್ರಾಹಿಂ ವೈ.ಎ. ಫಖ್ರೂ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾರತ ರತ್ನ ಸರ್. ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಸಾಧನೆಯ ಬಗ್ಗೆ ಕಿರು ವೀಡಿಯೋ ಪ್ರಸ್ತುತಿಯನ್ನು ನೀಡಲಾಯಿತು. ರವಿ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಭಿಕರನ್ನು ಸ್ವಾಗತಿಸಿ, ಎಲ್ಲರಿಗೂ ಅಭಿಯಂತರ ದಿನದ ಶುಭಾಶಯಗಳನ್ನು ಕೋರಿದರು.
ಈ ದಿನ ಆಚರಿಸಲು ಕರ್ನಾಟಕ ಸಂಘ ಕತಾರ್‌ನೊಂದಿಗೆ ಸಹಕರಿಸಿದ ಇಂಡಿಯನ್ ಕಲ್ಚರಲ್ ಸೆಂಟರ್‌ಗೆ ಮತ್ತು ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಹಕರಿಸಿದ ಸಹ ಆಡಳಿತ ಮಂಡಳಿ ಸದಸ್ಯರು ಮತ್ತು ಸ್ವಯಂಸೇವಕರನ್ನು ಶ್ಲಾ ಸಿ ಧನ್ಯವಾದ ಅರ್ಪಿಸಿದರು.
ಅಸ್ಟಾಡ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನ ಕಮಿಷನಿಂಗ್ ಮೆನೇಜರ್ ಸೀನು ಪಿಳ್ಳೈ ಅವರು “ಕಟ್ಟಡ ನಿರ್ಮಾಣ ಉದ್ಯಮದಲ್ಲಿ ಮಾದರಿ ಬದಲಾವಣೆ’ ಕುರಿತು ಮುಖ್ಯ ತಂತ್ರಜ್ಞಾನ ಭಾಷಣ ಮಾಡಿದರು ಮತ್ತು ಹವಾಮಾನ ಬದಲಾವಣೆಯಿಂದಾಗಿ ಮತ್ತು ಮಾಂಟ್ರಿಯಲ್ ಪ್ರೋಟೋಕಾಲ್, ಕ್ಯೂಟೋ ಪ್ರೋಟೋಕಾಲ್ ಮತ್ತು ಪ್ಯಾರಿಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಭವಿಸುವ ಬದಲಾವಣೆಗಳ ಹೇಳಿದರು.
ಕರ್ನಾಟಕ ಸಂಘ ಕತಾರ್‌ನ ಪ್ರತಿಭಾನ್ವಿತ ಸದಸ್ಯ, ಟೆಕ್ನಿಪ್ ಎನರ್ಜಿಸ್‌ನ ಎಲೆಕ್ಟ್ರಿಕಲ್ ಎಂಜಿನಿಯರ್ ಕಿಶೋರ್ ವಿ. ಅವರು “ನಮ್ಮ ಸುತ್ತಲಿನ ಇಂಧನ ಪರಿವರ್ತನೆ’ ಎಂಬ ವಿಷಯದ ಬಗ್ಗೆ ಪ್ರಮುಖ ಟಿಪ್ಪಣಿ ನೀಡಿದರು. ಅಧ್ಯಕ್ಷ ರವಿ ಶೆಟ್ಟಿ ಮತ್ತು ಸಲಹಾ ಸಮಿತಿ ಸದಸ್ಯರು, ವಿ.ಎಸ್.ಮನ್ನಂಗಿ ಅವರು ತಾಂತ್ರಿಕ ಭಾಷಣ ಮಾಡಿದ ಎಂಜಿನಿಯರ್‌ಗಳಿಗೆ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು.
ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಮಣಿಕಂಠನ್ ಎ.ಪಿ ಅವರು ತಮ್ಮ ಭಾಷಣದಲ್ಲಿ, ಹನ್ನೊಂದು ತಂಡದ ಸದಸ್ಯರ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಮಿತಿಯಲ್ಲಿ ಏಳು ಎಂಜಿನಿಯರ್‌ಗಳಿದ್ದಾರೆ ಮತ್ತು ಅವರು ಸಮುದಾಯ ಮಟ್ಟದಲ್ಲಿ ತರುವ ವ್ಯತ್ಯಾಸವನ್ನು ನಾವೆಲ್ಲ ನೋಡಬಹುದು ಎಂದು ತಿಳಿಸಿ ಕರ್ನಾಟಕ ಸಂಘವು ಪ್ರತೀ ವರ್ಷ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ವಿವಿಧ ತಾಂತ್ರಿಕ ಕಾರ್ಯಕ್ರಮಗಳೊಂದಿಗೆ ಎಂಜಿನಿಯರುಗಳ ದಿನವನ್ನು ಆಯೋಜಿಸುತ್ತಿದೆ ಎಂದು ಶ್ಲಾಘಿ ಸಿದರು.
ಮುಖ್ಯ ಅತಿಥಿಗಳಾದ ಕತಾರ್‌ನ ಭಾರತೀಯ ರಾಯಭಾರಿ ವಿಪುಲ್ ಮಾತನಾಡಿ, ಕತಾರ್‌ನಲ್ಲಿರುವ ಭಾರತೀಯ ಎಂಜಿನಿಯರ್‌ಗಳ ಕೊಡುಗೆಗಳನ್ನು ಶ್ಲಾಘಿಸಿದರು. ಗೌರವಾನ್ವಿತ ಅತಿಥಿ ಅಬ್ದುಲ್ಲಾ ಇಬ್ರಾಹಿಂ ವೈ.ಎ.ಫಖ್ರೂ ಕತಾರ್‌ನಲ್ಲಿರುವ ಭಾರತೀಯರು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಕತಾರ್ ಅಭಿವೃದ್ಧಿಗೆ ಬೆಂಬಲ ನೀಡಿದ್ದಾರೆ ಎಂದರು. ಎರಡೂ ಸಂಘದ ಅಧ್ಯಕ್ಷರು ಜಂಟಿಯಾಗಿ ಮುಖ್ಯ ಅತಿಥಿ ಮತ್ತು ಗೌರವ ಅತಿಥಿಗಳಿಗೆ ವಿಶೇಷ ಸ್ಮರಣಿಕೆಗಳನ್ನು ನೀಡಿದರು.
ಕರ್ನಾಟಕ ಸಂಘ ಕತಾರ್ ತನ್ನ ಎಂಜಿನಿಯರಿಂಗ್ ಮತ್ತು ಸಾಮಾಜಿಕ ಬೆಂಬಲ ಕ್ಷೇತ್ರದಲ್ಲಿನ ಕೊಡುಗೆಗಳನ್ನು ಗುರುತಿಸಿ ತನ್ನ ಎಂಜಿನಿಯರ್ ಸದಸ್ಯರಾದ ವೆಂಚರ್‌ಗಲ್ಫ್ ಎಂಜಿನಿಯರಿಂಗ್ ನ ಆಪರೇಶನ್ಸ್ ಮ್ಯಾನೇಜರ್ ಹರೀಶ್ ಬಾಳಿಗಾ ಮತ್ತು ಗಲ್ಫ್ ನ ಅಲ್ ಮಿಸ್ನಾದ್‌ನ ಗುಣಮಟ್ಟ ನಿಯಂತ್ರಣ ಎಂಜಿನಿಯರ್ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ “ಅಭಿಯಂತರಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಿತು. ಪ್ರಶಸ್ತಿ ಪುರಸ್ಕೃತರಿಬ್ಬರೂ ಕರ್ನಾಟಕ ಸಂಘ ಕತಾರ್‌ಗೆ ಧನ್ಯವಾದ ಅರ್ಪಿಸಿದರು ಮತ್ತು ಎಂಜಿನಿಯರ್‌ಗಳಾಗಿ ತಮ್ಮ ಅನುಭವ ಮತ್ತು ಸಮುದಾಯದೊಂದಿಗಿನ ಅವರ ಒಡನಾಟವನ್ನು ಹಂಚಿಕೊಂಡರು.
ಕರ್ನಾಟಕ ಸಂಘ ಕತಾರ್ ಸ್ಥಾಪನೆಯಾಗಿ 25 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ರಜತ ಮಹೋತ್ಸವದ ವಿಶೇಷ ಲಾಂಛನವನ್ನು ಕತಾರ್‌ನ ಭಾರತೀಯ ರಾಯಭಾರಿ ಗೌರವಾನ್ವಿತ ವಿಪುಲ್ ಅವರು ಅನಾವರಣಗೊಳಿಸಿದರು. ಕರ್ನಾಟಕ ಸಂಘ ಕತಾರ್‌ನ ಹಿರಿಯ ಮಾಜಿ ಅಧ್ಯಕ್ಷರಾದ ಅರುಣ್ ಕುಮಾರ್ ಅವರು ಅನಾವರಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ ಹಾಗೂ ಇಂಡಿಯನ್ ಕಮ್ಯೂನಿಟಿ ಬೆನೆವೋಲೆಂಟ್ ಫೋರಂನ ಮಾಜಿ ಅಧ್ಯಕ್ಷರು ಬಾಬುರಾಜನ್, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ ಮಿಲನ್ ಅರುಣ್, ಕರ್ನಾಟಕ ಸಂಘದ ಸಲಹಾ ಮಂಡಳಿ ಸದಸ್ಯರಾದ ಅರುಣ್ ಕುಮಾರ್, ವಿ.ಎಸ್.ಮನ್ನಂಗಿ, ದೀಪಕ್ ಶೆಟ್ಟಿ, ಎಚ್.ಕೆ.ಮಧು, ಹಲವಾರು ಸಹ-ಸಂಸ್ಥೆಗಳ ಅಧ್ಯಕ್ಷರು, ಸಮುದಾಯದ ಮುಖಂಡರು, ಇಂಡಿಯನ್ ಕಲ್ಚರಲ್ ಸೆಂಟರ್, ಕರ್ನಾಟಕ ಸಂಘ ಕತಾರ್ ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕ ಸಂಘ ಕತಾರ್‌ನ ಉಪಾಧ್ಯಕ್ಷರಾದ ರಮೇಶ ಕೆ.ಎಸ್.ಅವರು ಕಾರ್ಯಕ್ರಮವನ್ನು ಸಮರ್ಥವಾಗಿ ನಿರ್ವಹಿಸಿದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.