Desi Swara: ಕರ್ನಾಟಕ ಸಂಘ ಶಾರ್ಜಾ- ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ
"ಮಯೂರ ಸ್ಮರಣ ಸಂಚಿಕೆ'ಯನ್ನು ಬಿಡುಗಡೆಗೊಳಿಸಲಾಯಿತು
Team Udayavani, Dec 2, 2023, 1:40 PM IST
ದುಬೈ: ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ನ.18ರಂದು ಶಾರ್ಜಾ ಈವಾನ್ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ, 21ನೇ ವಾರ್ಷಿಕೋತ್ಸವ ಮತ್ತು ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಕಾರಯಕಾರಿ ಸಮಿತಿಯ ಸರ್ವ ಸದಸ್ಯರು ಕನ್ನಡ ಧ್ವಜಾರೋಹಣ ಮಾಡಿ, ಜ್ಯೋತಿ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುಎಇಯ ವಿವಿಧ ತಂಡಗಳಾದ ಸಿಂಫೋನಿ ಮ್ಯೂಸಿಕ್ ಸ್ಕೂಲ್, ಬಿಲ್ಲವಾಸ್ ಫ್ಯಾಮಿಲಿ, ರಸ್ ಅಲ್ ಖೈಮಾ ಕರ್ನಾಟಕ ಸಂಘ, ನೃತ್ಯ ಕಣ್ಮಣಿಗಳು, ರಮಣ ಲಾಸ್ಯ, ಪದ್ಮಶಾಲಿ ಸಮುದಾಯ, ಸ್ಮೈಲ್ ಕ್ರಿಯೇಶನ್ಸ್, ಗೋಲ್ಡನ್ ಸ್ಟಾರ್ ಮ್ಯೂಸಿಕ್ ಶಾರ್ಜಾ ತಂಡಗಳಿಂದ ಆಕರ್ಷಕ ಜಾನಪದ ನೃತ್ಯ, ಮಂಗಳೂರಿನಿಂದ ಆಗಮಿಸಿದ ಗಾಯಕ ಮಹ್ಮದ್ ಇಕ್ಬಾಲ್, ಹರೀಶ್ ಶೇರಿಗಾರ್ ಮತ್ತು ಸನ್ನಿಧಿ ವಿಶ್ವನಾಥ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ಸ್ಮರಣ ಸಂಚಿಕೆ ಬಿಡುಗಡೆ
ಶಾರ್ಜಾ ಕರ್ನಾಟಕ ಸಂಘದ ದ್ವೀದಶಮಾನೋತ್ಸವದ ಸವಿ ನೆನೆಪಿಗಾಗಿ ಗಣೇಶ್ ರೈ ಪ್ರಧಾನ ಸಂಪಾದಕತ್ವದಲ್ಲಿ, ಸ್ಮರಣ ಸಂಚಿಕೆ ಸಮಿತಿಯ ಆಶ್ರಯದಲ್ಲಿ ಮುದ್ರಣವಾಗಿದ್ದ “ಮಯೂರ ಸ್ಮರಣ ಸಂಚಿಕೆ’ಯನ್ನು ಬಿಡುಗಡೆಗೊಳಿಸಲಾಯಿತು.
ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ
ಕರ್ನಾಟಕ ಸಂಘ ಶಾರ್ಜಾದ ಪ್ರತಿಷ್ಠಿತ “ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ’ ಯನ್ನು ಸಮಾಜ ಸೇವೆಗಾಗಿ ಮೋಹನ್ ನರಸಿಂಹಮೂರ್ತಿ ಅವರಿಗೆ ಪ್ರದಾನ ಮಾಡಲಾಯಿತು.
ಅನಂತರ ಸುಗಂಧರಾಜ್ ಬೇಕಲ್, ಆರತಿ ಆಡಿಗ, ಜಸ್ಮಿತಾ ವಿವೇಕ್ ಅವರಿಗೆ “ವಿಶೇಷ ಗೌರವ ಪುರಸ್ಕಾರ’ದಿಂದ ಸಮ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಸಂಘ ಶಾರ್ಜಾದ ಸಲಹೆಗಾರರಾದ ಪ್ರವೀಣ್ ಕುಮಾರ್ ಶೆಟ್ಟಿ, ಹರೀಶ್ ಶೇರಿಗಾರ್, ಜೊಸೇಫ್ ಮಥಾಯಸ್, ರಾಮಚಂದ್ರ ಹೆಗ್ಡೆ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಸರ್ವೋತ್ತಮ್ ಶೆಟ್ಟಿ, ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ರಸ್ ಅಲ್ ಖೈಮಾ ಕರ್ನಾಟಕ ಸಂಘದ ಅಧ್ಯಕ್ಷರು ಸಂತೋಷ್ ಹೆಗ್ಡೆ, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರು ಸತೀಶ್ ಪೂಜಾರಿ, ಉಪಾಧ್ಯಕ್ಷರು ವಿಶ್ವನಾಥ್ ಶೆಟ್ಟಿ, ಪೋಷಕರು ಮಾಕರ್ ಡೆನಿಸ್ ಈ ವೇಳೆ ವೇದಿಕೆಯಲ್ಲಿದ್ದರು. ಗಣೇಶ್ ರೈ ಸಭಾ ಕಾರ್ಯಕ್ರಮದ ನಿರೂಪಕರಾಗಿದ್ದರು.
ಮುಖ್ಯ ಅತಿಥಿಗಳಾಗಿದ್ದ ಇಂಡಿಯನ್ ಅಸೊಸಿಯೇಶನ್ ಶಾರ್ಜಾ ಅಧ್ಯಕ್ಷರಾದ ಅಡ್ವಕೇಟ್ ವೈ.ಎ.ರಹಿಂ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಎಲ್ಲ ಪ್ರಾಯೋಜಕರನ್ನು ಈ ವೇಳೆ ಗೌರವಿಸಲಾಯಿತು.
ಅನಿವಾಸಿ ಭಾರತೀಯರಿಗೆ ಆಯೊಜಿಸಲಾದ ರಾಷ್ಟ್ರ ಮಟ್ಟದ ದೇಹದಾಡ್ಯì ಸ್ಪರ್ಧೆಗೆ ಮುಖ್ಯ ತೀರ್ಪುಗಾರರಾಗಿ, ವಿಶೇಷ ಅಹ್ವಾನಿತ ಅತಿಥಿಯಾಗಿ ಮಂಗಳೂರಿನಿಂದ ಮಿಸ್ಟರ್ ಇಂಡಿಯಾ ಜಗದೀಶ್ ಪೂಜಾರಿಯವರು ಮತ್ತು ವಿನೋದ್ ಗೌಡ ರವರನ್ನು ಆಹ್ವಾನಿಸಲಾಗಿತ್ತು. ಜಗದೀಶ್ ಪೂಜಾರಿಯವರ ಸಾಧನೆಗೆ ಕರ್ನಾಟಕ ಸಂಘ ಶಾರ್ಜಾ ವತಿಯಿಂದ “ಮಯೂರ ಶ್ರೀ’ ಬಿರುದನ್ನು ನೀಡಿ ಸಮ್ಮಾನಿಸಿ ಗೌರವಿಸಲಾಯಿತು. ವಿನೋದ್ ಗೌಡ ಮತ್ತು ಮಹ್ಮದ್ ಇಕ್ಬಾಲ್ ಅವನ್ನು ಸಮ್ಮಾನಿಸಲಾಯಿತು.
ಯುಎಇ ರಾಷ್ಟ್ರ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ “ಮಯೂರ ಶ್ರೀ 2023′ ಪ್ರಶಸ್ತಿಯನ್ನು ದೇಹದಾರ್ಢ್ಯ ಪಟು ರವಿಕುಮಾರ್ ಪೂಜಾರಿ ಪಡೆದರು, ದ್ವಿತೀಯ ಸುಮಂತ್ ಆಚಾರ್ಯ, ತೃತಿಯ ಸುದೀಶ್ ವಿಟ್ಲ ಮತ್ತು ಬೆಸ್ಟ್ ಪೋಸರ್ ರಕ್ಷಿತ್ ಕುಮಾರ್ ಪಡೆದುಕೊಂಡರು. ಆರತಿ ಆಡಿಗ, ದೀಪಾ ರೈ, ಆರ್.ಜೆ. ಎರೋಲ್ ಅವರು ಕಾರ್ಯಕ್ರಮ ನಿರೂಪಕರಾಗಿದ್ದರು.
*ವರದಿ: ಬಿ. ಕೆ. ಗಣೇಶ್ ರೈ, ದುಬೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.