Desi Swara: ಕರ್ನಾಟಕ ಸಂಘ ಕತಾರ್- ಸಂಸ್ಥಾಪನ ದಿನಾಚರಣೆ: ರಜತ ವರ್ಷದ ಆಚರಣೆ ಆರಂಭ
ಲೈವ್ ಯೂಟ್ಯುಬ್ ಸ್ಟ್ರೀಮ್ ಮೂಲಕ ಅಧಿಕೃತವಾಗಿ ಬಿಡುಗಡೆ ಮಾಡಿದರು
Team Udayavani, Nov 30, 2024, 10:11 AM IST
ದೋಹಾ: ದೋಹಾದ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಸಹವರ್ತಿ ಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ ತನ್ನ “ಸ್ಥಾಪಕ ದಿನ’ವನ್ನು 2024ರ ನ.12ರಂದು ಆಚರಿಸಿತು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಮುಂಬಯಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಮತ್ತು ಮಾಜಿ ನಿರ್ವಹಣಾ ಸಮಿತಿಯ ಸದಸ್ಯರು ಮತ್ತು ಸಂಘದ ಹಿರಿಯ ಸದಸ್ಯರು ಉಪಸ್ಥಿತರಿದ್ದರು.
ಅಧ್ಯಕ್ಷರು ರವಿ ಶೆಟ್ಟಿ, ಜ್ಯೋತಿ ರವಿ ಶೆಟ್ಟಿ, ಸಲಹಾ ಸಮಿತಿ ಅಧ್ಯಕ್ಷರು ಮಹೇಶ್ ಗೌಡ, ಮಾಜಿ ಅಧ್ಯಕ್ಷರಾದ ಅರುಣ್ ಕುಮಾರ್, ವಿ.ಎಸ್.ಮನ್ನಂಗಿ, ದೀಪಕ್ ಶೆಟ್ಟಿ, ಮಧು ಎಚ್.ಕೆ., ಡಾ| ಸಂಜಯ್ ಕುದರಿ, ಹಿರಿಯ ಸದಸ್ಯರು ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷರು ಮಿಲನ್ ಅರುಣ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಐಸಿಸಿ ಉಪಾಧ್ಯಕ್ಷರು ಸುಬ್ರಹ್ಮಣ್ಯ ಹೆಬ್ಟಾಗಿಲು, ಸಂಘದ ಹಿರಿಯ ಹಾಗೂ ಸಕ್ರಿಯ ಸದಸ್ಯರು ಸತೀಶ್ ಬಿ.ಆರ್., ಹಾಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಅಧ್ಯಕ್ಷರಾದ ರವಿ ಶೆಟ್ಟಿಯವರು ತಮ್ಮ ಭಾಷಣದಲ್ಲಿ, ಸಂಘವನ್ನು ಪ್ರಸ್ತುತ ಮಟ್ಟಕ್ಕೆ ಏರಿಸುವಲ್ಲಿ ಅಪಾರ ಕೊಡುಗೆ ನೀಡಿದ ಮಾಜಿ ಅಧ್ಯಕ್ಷರು, ಸಮಿತಿ ಸದಸ್ಯರು, ಸಮರ್ಪಿತ ಸ್ವಯಂಸೇವಕರು ಮತ್ತು ಪ್ರಾಯೋಜಕರಿಗೆ ಹೃತೂ³ರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಈ ರಜತ ಮಹೋತ್ಸವ ವರ್ಷದಲ್ಲಿ ಸಂಘವನ್ನು ಮುನ್ನಡೆಸಲು ತಾವು ಮತ್ತು ತಮ್ಮ ತಂಡ ಅದೃಷ್ಟಶಾಲಿ ಎಂಬ ಭಾವನೆ ವ್ಯಕ್ತ ಪಡಿಸಿದರು.
ಆಚರಣೆಯ ಭಾಗವಾಗಿ ಸಂಘದ ಮಾಜಿ ಅಧ್ಯಕ್ಷರು ಎಚ್.ಕೆ.ಮಧು ಅವರು ಬರೆದ ರಜತ ಗೀತೆಯನ್ನು ಮಿಲನ್ ಅರುಣ್ ಅವರು ಲೈವ್ ಯೂಟ್ಯುಬ್ ಸ್ಟ್ರೀಮ್ ಮೂಲಕ ಅಧಿಕೃತವಾಗಿ ಬಿಡುಗಡೆ ಮಾಡಿದರು. ಈ ಗೀತೆಯು ಪ್ರೇಕ್ಷಕರಿಂದ ಮತ್ತು ಯೂಟ್ಯುಬ್‌ನಲ್ಲಿ ವ್ಯಾಪಕ ಮೆಚ್ಚುಗೆ ಪಡೆಯಿತು. ಬೆಳ್ಳಿ ಮಹೋತ್ಸವ ಲಾಂಛನವನ್ನು ಹೊಂದಿರುವ ಹೊಸ ಬ್ಯಾನರ್ ಅನ್ನು ಸಹ ಅನಾವರಣಗೊಳಿಸಲಾಯಿತು.
ಮಾಜಿ ಅಧ್ಯಕ್ಷರು ಮತ್ತು ಹಿರಿಯ ಸದಸ್ಯರು ತಮ್ಮ ಅನುಭವಗಳನ್ನು ಮತ್ತು ಸಂಘದ ಪ್ರೀತಿಯ ನೆನಪುಗಳನ್ನು ಹಂಚಿಕೊಂಡರು, ವರ್ಷಗಳಲ್ಲಿ ಅದರ ಬೆಳವಣಿಗೆ ಮತ್ತು ಸಾಧನೆಗಳನ್ನು ಪ್ರತಿಬಿಂಬಿಸಿದರು. ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಅವರು ಈ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು ಮತ್ತು ಸಿಹಿ ಮತ್ತು ಲಘು ಉಪಹಾರದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಕರ್ನಾಟಕ ಸಂಘ ಕತಾರ್, ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸುವ ಮೂಲಕ, ಕತಾರ್‌ನಲ್ಲಿರುವ ಕರ್ನಾಟಕ ಸಮುದಾಯವನ್ನು ಒಂದುಗೂಡಿಸುವ ತನ್ನ ರಜತ ಪಥದಲ್ಲಿ ಹೆಮ್ಮೆಯಿಂದ ಮುಂದುವರಿಯುತ್ತಿದೆ. ಸಂಘವು ವಿಜೃಂಭಣೆಯಿಂದ ಜರಗಿದ ಕರ್ನಾಟಕ ರಾಜ್ಯೋತ್ಸವ-ರಜತ ಸಂಭ್ರಮಕ್ಕೆ ನಿಷ್ಠೆ ಮತ್ತು ಶ್ರದ್ಧಾ ಭಾವದಿಂದ ವೇದಿಕೆಯನ್ನು ಸಿದ್ಧಪಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.