ಆನ್‌ಲೈನ್‌ ಗಣೇಶನ ಆರಾಧನೆ….!

Team Udayavani, Sep 23, 2023, 5:44 PM IST

ಆನ್‌ಲೈನ್‌ ಗಣೇಶನ ಆರಾಧನೆ….!

ಗಣೇಶನ ಹಬ್ಬ ಚತುರ್ಥಿಯನ್ನು ಭಾರತದಲ್ಲಿ ಮಾತ್ರವಲ್ಲದೇ ಇಂದು ಬೇರೆ ಬೇರೆ ದೇಶಗಳಲ್ಲೂ ಆಚರಿಸಲಾಗುತ್ತಿದೆ. ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಹಬ್ಬಗಳನ್ನು ಆಚರಿಸುವುದು ಸಹಜವೇ. ಭಾರತದ ಆಚರಣೆ, ಸಂಪ್ರದಾಯದಿಂದ ಆಕರ್ಷಿತರಾದ ವಿದೇಶಿಗರು ಈಗೀಗ ಆಚರಣೆಗಳನ್ನು ಮಾಡುತ್ತಾರೆ. ಅದರಲ್ಲೂ ಇದು ಆನ್‌ಲೈನ್‌ ಯುಗ. ಪೂಜೆ, ಮದುವೆಗಳೇ ಆನ್‌ಲೈನ್‌ನಲ್ಲಿ ಆಗುತ್ತವಂತೆ, ಇನ್ನು ಹಬ್ಬ ಯಾವ ಲೆಕ್ಕ ಹೇಳಿ.

ಹೀಗೆ ಇತ್ತೀಚೆಗೆ ಬ್ರಹ್ಮಮುಹೂರ್ತದಲ್ಲಿ ಇಟಲಿಯಲ್ಲಿ ಗಣೇಶನ ಹಬ್ಬ ನಡೆಯಿತು. ಅದು ಝೂಮ್‌ ಮೀಟಿಂಗ್‌ನ ವೀಡಿಯೋ ಕಾಲ್‌ನ ಮೂಲಕ. ಕಂಪ್ಯೂಟರ್‌ ತೆರೆಯ ಮೇಲೆ ಗಣೇಶನ ಚಿತ್ರ ಮೂಡಿತ್ತು! ವೀಡಿಯೋ ಕಾಲ್‌ನಲ್ಲೇ ಎಲ್ಲರೂ ಸೇರಿ ತಾವಿದ್ದ ಸ್ಥಳಗಳಿಂದಲೇ ತಯಾರಿಸಿದ್ದ ತಿಂಡಿ, ಹಣ್ಣುಗಳನ್ನು ತೆರೆಯ ಮೇಲಿನ ದೇವರಿಗೆ ಅರ್ಪಿಸಿದ್ದರು.

ಮೂಡಲದಲ್ಲಿ ರವಿ ಬರಲು ಕಾದಿದ್ದ ವಾತಾವರಣ. ಹಕ್ಕಿಗಳ ಚಿಲಿಪಿಲಿ , ಮನಸ್ಸಿನಲ್ಲೇ ಭಕ್ತಿಯ ಗಂಗೆ ಹರಿಯುವ ಶಬ್ದ , ಹೊರಟಿತ್ತು ಓಂಕಾರ ಸಮುದ್ರ ತೀರದ ಊರಿಂದ. ಇಟಲಿಯ ಅನೇಕ ಭಾಗಗಳಿಂದ ಮೂವತ್ತಕ್ಕೂ ಮೇಲ್ಪಟ್ಟ ಇಟಾಲಿಯನ್‌ ಭಕ್ತರು ಝೂಮ್‌ ಮಂಟಪದಲ್ಲಿ ಸೇರಿ ಮಾನಸಿಕವಾಗಿ ವಿನಾಯಕ ಚೌತಿ ಆಚರಿಸಿದ್ದರು . ಗಣೇಶನಿಗೆ ಪ್ರಥಮ ಪ್ರಾರ್ಥನೆ ಗಾಯತ್ರಿ ಮಂತ್ರ ಜಪಿಸಿದ ಅನಂತರ ಪಿಯ ಅವರು ಹಬ್ಬದ ಆಚರಣೆಯ ವಿವರಣೆ ನೀಡಿದರು. ಬಳಿಕ ಕೋರಿನ್ನ ಅನ್ನುವವರು ಮಧುರ ಕಂಠದಿಂದ “ಗಣಾನಾಂತ್ವ ಗಣಪತಿಗಮ್‌ ‘ ಹಾಡಿದರು.

ಗಣೇಶನ ಸಂದೇಶ ಪವಾಡಗಳ ಮೂಲಕ ಮಾನವನಿಗೆ , ಮಾತನಾಡುವ ಭಾಗ್ಯ ನನ್ನದಾಗಿತ್ತು. ಗಣೇಶನ ಮಹಿಮೆ ಅವನರೂಪದ ಸಂಕೇತಗಳು ಎಲ್ಲವನ್ನು ವಿವರಿಸಿದವರು ರೊಬೆತೋರ್‌, ಆಧ್ಯಾತ್ಮಿಕದ ಸಂಶೋಧನೆ ನಡೆಸುವ ಬ್ರೂನ ಅವರ ಮಾತಿನ ಲಹರಿ ಎಲ್ಲರನ್ನು ಭಕ್ತಿಮಾರ್ಗಕ್ಕೆ ಮುನ್ನಡೆಯಲು ಹುರಿದುಂಬಿಸಿತ್ತು.

ಗಣೇಶನಿಗೆ ಪೂಜೆ, ಮಂಗಳಾರತಿ ಎಲ್ಲವೂ ವರ್ಚುವಲ್‌ ಆಗಿ ನಡೆಯುತ್ತಿತ್ತು. ಪೇ ಸರೋ ಅನ್ನುವ ಸಮುದ್ರ ತೀರದಲ್ಲಿರುವ ಊರಿನಿಂದ ಹಬ್ಬದಾಚರಣೆ ಆಯೋಜಿಸಿದ್ದವರು ಅಮಿಲ್ಕರೆ ಎನ್ನುವವರು. ಆನ್‌ಲೈನ್‌ ಫ್ಲಾಟ್‌ಫಾರ್ಮ್ ಮೂಲಕ ಎಲ್ಲರೂ ಹಬ್ಬದ ಆಚರಣೆಯುಲ್ಲಿ ಒಂದಾಗುವಂತೆ ಮಾಡಿದ್ದರು. ಶಾಂತಿ ಎನ್ನುವವರು ಸುಮಧುರ ಕಂಠದಿಂದ ಹಾಡಿ ನಮನ ಸಲ್ಲಿಸಿದರು. ಎಲ್ಲವನ್ನೂ ಗಮನಿಸಿದ್ದಾಗ ಈ ಇಂಟರ್‌ನೆಟ್‌ನ ಸಾಧ್ಯತೆಗಳ ಬಗ್ಗೆ ಅಚ್ಚರಿ ಅನಿಸಿತ್ತು.

*ಜಯಮೂರ್ತಿ, ಇಟಲಿ

ಟಾಪ್ ನ್ಯೂಸ್

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.