![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 31, 2024, 2:10 PM IST
ಬಹ್ರೈನ್: ಇಪ್ಪತ್ತನೆಯ ವರುಷದ ಸಂಭ್ರಮದಲ್ಲಿರುವ ಇಲ್ಲಿನ ಅನಿವಾಸಿ ಮೊಗವೀರ ಸಮುದಾಯದ ಸಂಘಟನೆಯಾದ “ಮೊಗವೀರ್ಸ್ ಬಹ್ರೈನ್’ ಸಂಘಟನೆಯ ನೂತನ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದಿದ್ದು ಇದರ ವಿದ್ಯುಕ್ತ ಪದಗ್ರಹಣ ಸಮಾರಂಭವು ಇಲ್ಲಿನ ಅದ್ಲಿಯಾ ಪರಿಸರದಲ್ಲಿರುವ “ಬಾನ್ ಸಾಂಗ್ ತಾಯ್’ ಹೊಟೇಲಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರಗಿತು.
ನಾಡಿನಿಂದ ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಗಮಿಸಿದ್ದ ಮೊಗವೀರ ಸಮುದಾಯದ ಸಾಧಕರು, ದ್ವೀಪದ ಆಹ್ವಾನಿತ ಅತಿಥಿಗಳು, ಇಲ್ಲಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು. ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್, ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಅತಿಥಿಗಳು ಒಂದಾಗಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಯ್ನಾಡಿನಿಂದ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷರಾದ ಜಯ. ಸಿ. ಕೋಟ್ಯಾನ್, ಗೌರವ ಅತಿಥಿಗಳಾಗಿ ಜಯಂತಿ ಜಯ ಕೋಟ್ಯಾನ್, ಬಡ ಎರ್ಮಾಳ್ ಫಿಶರ್‌ಮ್ಯಾನ್ ಪ್ರೈಮರಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ದಿನೇಶ್ ಎರ್ಮಾಳ್ ಜತೆಗೆ ಮೊಗವೀರ್ಸ್ ಒಮಾನ್‌ನ ಅಧ್ಯಕ್ಷರಾದ ಪದ್ಮಾಕರ್ ಮೆಂಡನ್, ಸೌದಿ ಅರೇಬಿಯಾದಿಂದ ರವಿ ಕರ್ಕೇರ ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾದಂತಹ ಜಯ ಕೋಟ್ಯಾನ್ ಹಾಗೂ ಇತರ ಅತಿಥಿಗಳನ್ನು ಮೊಗವೀರ್ಸ್ ಬಹ್ರೈನ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ , ಸ್ಮರಣಿಕೆಗಳೊಂದಿಗೆ ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿಸ ಜಯ ಕೋಟ್ಯಾನ್ ಹಾಗೂ ಇತರರು ಮೊಗವೀರ್ಸ್ ಬಹ್ರೈನ್‌ನ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಹೊಗಳಿ ಶುಭಹಾರೈಸಿದರು.
ಅಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್ , ನೆರೆದವರನ್ನು ಉದ್ದೇಶಿಸಿ ಮಾತನಾಡಿ ಇಪ್ಪತ್ತರ ಹೊಸ್ತಿಲಲ್ಲಿರುವ “ಮೊಗವೀರ್ಸ್ ಬಹ್ರೈನ್‌ಗೆ ಎಲ್ಲರ ಬೆಂಬಲ ಅತ್ಯಗತ್ಯ ಎಂದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಮೊಗವೀರ್ಸ್ ಬಹ್ರೈನ್ ಸಂಘಟನೆಯ ಸದಸ್ಯರಿಂದ ಹಾಡು, ನೃತ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ವೇದಿಕೆಯಲ್ಲಿ ಪ್ರದರ್ಶನಗೊಂಡು ಎಲ್ಲರ ಮನಸೂರೆಗೊಂಡಿತು.
ವೇದಿಕೆಯಲ್ಲಿ ಜಯ.ಸಿ .ಕೋಟ್ಯಾನ್, ದಿನೇಶ್ ಎರ್ಮಾಳ್, ಒಮಾನ್ ಮೊಗವೀರ್ಸ್‌ನ ಅಧ್ಯಕ್ಷ ಪದ್ಮಾಕರ್ ಮೆಂಡನ್, ಮೊಗವೀರ್ಸ್ ಬಹ್ರೈನ್‌ನ ಅಧ್ಯಕ್ಷೆ ಶಿಲ್ಪ ಶಮಿತ್ ಕುಂದರ್, ಉಪಾಧ್ಯಕ್ಷ ವಿನೋದ್ ಶ್ರೀಯಾನ್, ಕನ್ನಡ ಸಂಘದ ಉಪಾಧ್ಯಕ್ಷ ಮಹೇಶ್ ಪೂಜಾರಿ, ರವಿ ಕರ್ಕೇರ ಸೌದಿ ಅರೇಬಿಯಾ, ನಾಗೇಶ್ ನಾಯ್ಕ್ ಹಾಗೂ ರಂಜನ್ ಸಾಲಿಯಾನ್ ಉಪಸ್ಥಿತರಿದ್ದರು.
ಸುರೇಖ ತೀರ್ಥ ಸುವರ್ಣ ಹಾಗೂ ದಿವ್ಯ ಚಂದ್ರ ಅಚ್ಚುಕಟ್ಟಾಗಿ ನಿರೂಪಿಸಿದರು.
ವರದಿ: ಕಮಲಾಕ್ಷ ಅಮೀನ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.