Desi Swara: ಪಂಪ ಕನ್ನಡ ಕೂಟ: ಅದ್ದೂರಿ ಗಣೇಶೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ
ಗಣೇಶನ ವಿಗ್ರಹವನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದರು
Team Udayavani, Oct 19, 2024, 10:09 AM IST
ಮಿಚಿಗನ್: ಪಂಪ ಕನ್ನಡ ಕೂಟ, ಮಿಚಿಗನ್‌ನ ಹೊಸ ಕಾರ್ಯಕಾರಿ ಸಮಿತಿಯ ಮೊದಲ ಸಾಂಸ್ಕೃತಿಕ ಕಾರ್ಯಕ್ರಮವು ಸೆ.21ರ ಗೌರಿ ಗಣೇಶೋತ್ಸವದ ಕಾರ್ಯಕ್ರಮದಿಂದ ಪ್ರಾರಂಭವಾಯಿತು. ಮಿಚಿಗನ್‌ನ ಕನ್ನಡಿಗರಿಗೆ ಕಳೆದ 53 ವರ್ಷಗಳಿಂದ ಈ ತರಹದ ಸಂಭ್ರಮದ ಅವಕಾಶಗಳನ್ನು ಪಂಪ ಕನ್ನಡ ಕೂಟವು ಸದಾ ಒದಗಿಸುತ್ತಾ ಬಂದಿದೆ.
ನೂತನ ಸಮಿತಿಯು ಜುಲೈ ತಿಂಗಳಿನಲ್ಲಿ ಯಶಸ್ವಿಯಾಗಿ ವಾಲಿಬಾಲ್ ಮತ್ತು ಥ್ರೋ ಬಾಲ್ ಪಂದ್ಯಾವಳಿಯನ್ನು ನಡೆಸಿಕೊಟ್ಟು, ಆಗಸ್ಟ್ ಕೊನೆಯಲ್ಲಿ ಗಮ್ಮತ್ತಿನ ಪಂಪವನ ಮಹೋತ್ಸವವನ್ನು (ಪಿಕ್‌ನಿಕ್) ಆಚರಿಸಿದ ಅನಂತರ ಗೌರಿ ಗಣೇಶೋತ್ಸವದ ತಯಾರಿಯಲ್ಲಿ ತೊಡಗಿಸಿಕೊಂಡರು.
ಸಂಘದ ಅಧ್ಯಕ್ಷರಾದ ಪ್ರಮೋದ್ ಗೋಪಾಲ್ ಅವರು ಮತ್ತು ಸಮಿತಿಯವರು ಶಾಂತಲಾ ಮೂರ್ತಿಯವರು ಮಾಡಿದಂತಹ ಸುಂದರವಾದ ಗಣೇಶನ ವಿಗ್ರಹವನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದರು. ಅಲಂಕಾರ ಸಮಿತಿಯ ಸ್ನೇಹ ಸುರೇಶ್, ಪೂರ್ಣಿಮಾ ಶಬದಿ ಅವರು ರಚಿಸಿದ ವೈಭವವಾದ ಗಣೇಶನ ಮಂಟಪದಲ್ಲಿ ವಿಗ್ರಹ ಸ್ಥಾಪನೆಯ ಅನಂತರ ಪೂಜೆ ನೆರವೇರಿಸಲಾಯಿತು.
ಅನಂತರ ಸಾಂಸ್ಕೃತಿಕ ಸಮಿತಿಯ ನೇತೃತ್ವ ವಹಿಸಿದ್ದ ಕಿಶೋರ್ ಎನ್. ಸಿ., ಅವರೊಂದಿಗೆ ಶಿಲ್ಪಾ ವಾರಿ, ನೇತ್ರ ಶ್ರೀಧರ್, ಚೈತ್ರಾ ಚಿರಂಜೀವಿ ಮತ್ತು ಅಶ್ವಿನಿ ಶೇಕಣ್ಣವರ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇದರಲ್ಲಿ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಬಹಳ ಜನಪ್ರಿಯವಾದ ಆದರ್ಶ ದಂಪತಿಗಳು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಲಾಯಿತು.
ಆಹಾರ ಸಮಿತಿಯ ನೇತೃತ್ವದಲ್ಲಿ ಪುಷ್ಕಳವಾದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಭೋಜನದ ವ್ಯವಸ್ಥೆ ಮತ್ತು ಉಸ್ತುವಾರಿಯನ್ನು ವಾಣಿ ಮಂಜುನಾಥ್, ಚಲಪತಿ, ಸತೀಶ್ ವೇಮಲಿ, ಶ್ರೀದೇವಿ ದೇವರಾಜ್ ಮತ್ತು ಪ್ರಕಾಶ್ ರೆಡ್ಡಿಯವರು ವಹಿಸಿದ್ದರು.
ಕೋಶಾಧಿಕಾರಿಯಾದ ಅಶುತೋಷ್ ಹಾರಪ್ಪನಹಳ್ಳಿ ಅವರು ಆಗಮಿಸಿದ ಸುಮಾರು 400ಕ್ಕೂ ಅಧಿಕ ಅತಿಥಿಗಳ ನೋಂದಣಿ ಮತ್ತು ಪ್ರವೇಶ ಚೀಟಿಯನ್ನು ತ್ವರಿತವಾಗಿ ವಿತರಣೆ ಮಾಡುತ್ತಿದ್ದರೆ, ಉಪಾಧ್ಯಕ್ಷರಾದ ನವೀನ್ ಹತಪಕ್ಕೀಯವರು ಎಲ್ಲ ವ್ಯವಸ್ಥೆಗಳ ಮೇಲ್ವಿಚಾರಣೆಯಲ್ಲಿ ತೊಡಗಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಶಿವಶಾರ್ದುಲ್ ಪರ್ಕಶನ್ಸ್ ಅವರ ತಂಡದಿಂದ ಧೋಲ್ ತಾಷೆ ಜರಗಿತು.
ಧೋಲ್ ತಾಷೆ ಮೊಳಗಲು ಪ್ರಾರಂಭವಾದಂತೆ ಗಣೇಶನ ವಿಗ್ರಹವನ್ನು ಒಬ್ಬರಾದಂತೆ ಒಬ್ಬರು ಜೋಪಾನವಾಗಿ ಹಿಡಿದುಕೊಂಡು ಅದ್ದೂರಿಯಾದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಭಕ್ತರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತ ಧೋಲ್ ತಾಷೆಯ ಬಗೆಬಗೆಯ ಗೀತೆಗಳ ನಾದದೊಂದಿಗೆ ಭಕ್ತಿ ಭಾವದಲ್ಲಿ ಮೈಮರೆತರು. ಸಂಜೆ ಗಣೇಶನ ಮೂರ್ತಿಯ ವಿಸರ್ಜನೆಯ ಕಾರ್ಯಕ್ರಮದೊಂದಿಗೆ ಪಂಪ ಕನ್ನಡ ಕೂಟದವರು ನೆರೆವೇರಿಸಿದ ಅದ್ದೂರಿಯಾದ ಗಣೇಶೋತ್ಸವದ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ಛಾಯಾಗ್ರಹಣದ ಜವಾಬ್ದಾರಿಯನ್ನು ರಾಜೇಶ್ ಎಂ. ಬಿ. ಅವರು ವಹಿಸಿ ಸುಂದರವಾದ ನೆನಪುಗಳನ್ನು ಸೆರೆಹಿಡಿದರೆ, ಎಎಂ ಮೀಡಿಯಾದ ದೀಪಕ್ ಮತ್ತು ಮಿಲನ್ ಅವರು ಕಾರ್ಯಕ್ರಮದ ವೀಡಿಯೋ ಉಸ್ತುವಾರಿಯನ್ನು ವಹಿಸಿದ್ದರು.
ಈ ಕಾರ್ಯಕ್ರಮದ ಪ್ರಾಯೋಜಕರಾದ ಅಭಿನಯ ಸ್ಕೂಲ್ ಒಫ್ ಡಾನ್ಸ್, ಆrಜಿಜಜಠಿಛಿr ಮೈಂಡ್ಸ್, ಫುಡ್ ಪಾರ್ಟ್‌ನರ್ ಖುರಿಸ್ ಟ್ರಾಯ್ ಮತ್ತು ದಿನಸಿ ಪಾರ್ಟ್‌ನರ್ ಪಂಜಾಬ್ ಗ್ರೋಸರ್ಸ್ ರೋಚೆಸ್ಟರ್ ಹಿಲ್ಸ್ ಅವರಿಗೆ ಹೃತೂ³ರ್ವಕ ಕೃತಜ್ಞತೆಗಳು. ವಿಶೇಷವಾಗಿ ನಮ್ಮವರೇ ಆದ ಅಮರನಾಥ್ ಗೌಡ ಅವರಿಗೆ ಮತ್ತು ಪಂಪ ನಿರ್ದೇಶಕರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ಆದರ್ಶ ದಂಪತಿಗಳ ವಿಜೇತರಿಗೆ ಬಹುಮಾನ ಪ್ರಾಯೋಜಿಸಿದ ಶರಣಮ್ಮ ಬನ್ನೂರ್, ಮಹೇಶ್ ಪಾಟೀಲ್ ಮತ್ತು ನಾಗಮಣಿ ವಿಶ್ವನಾಥ್ ಅವರಿಗೂ ಹೃತೂ³ರ್ವಕ ಧನ್ಯವಾದಗಳು. ಪಂಪ ಕನ್ನಡ ಕೂಟದ ಎಲ್ಲ ಸದಸ್ಯರ ಪಾಲ್ಗೊಳ್ಳುವಿಕೆ ಮತ್ತು ಪ್ರೋತ್ಸಾಹಕ್ಕಾಗಿ ಕೂಟದ ಕಾರ್ಯಕಾರಿ ಸಮಿತಿಯವತಿಯಿಂದ ಹೃತೂ³ರ್ವಕವಾದ ಧನ್ಯವಾದಗಳು.
ವರದಿ: ವೆಂಕಟೇಶ್ ಪೊಳಲಿ, ಕಾರ್ಯದರ್ಶಿ ಪಂಪ ಕನ್ನಡ ಕೂಟ, ಮಿಚಿಗನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.