![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Sep 23, 2023, 2:30 PM IST
ಕತಾರ್: ಕತಾರ್ ದೇಶಕ್ಕೆ ಆಗಮಿಸಿದ ಭಾರತದ ನೂತನ ರಾಯಭಾರಿಗಳಾದ ವಿಫುಲ್ ಅವರನ್ನು ಆ.4ರಂದು ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್‌ನ ಆಡಳಿತ ಮಂಡಳಿಯ ನಿಯೋಗವು ಭೇಟಿಯಾಗಿ ಸಂಘವು ಕತಾರ್‌ನಲ್ಲಿ ಕೈಗೊಂಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು.
ಇದನ್ನೂ ಓದಿ:iPhone 15ಗಾಗಿ ಮೊಬೈಲ್ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!
ಜತೆಗೆ ಮುಂಬರುವ ದಿನಗಳಲ್ಲಿ ಸಂಘದ ಕಾರ್ಯಕ್ರಮಗಳ ಬಗ್ಗೆ ಭಾರತೀಯ ರಾಯಭಾರಿಗಳಿಗೆ ವಿವರಿಸಿದರು. ಅವರು ಸಂಘಕ್ಕೆ ಶುಭ ಹಾರೈಸಿದರು.
ನಿಯೋಗದ ನಾಯಕತ್ವವನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಎ.ಪಿ. ಮಣಿಕಂಠ ಅವರು ವಹಿಸದ್ದರು. ಅವರೊಂದಿಗೆ ಸಂಘದ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಮತ್ತು ಆಡಳಿತ ಮಂಡಳಿಯ ಎಲ್ಲ ಸದಸ್ಯರು ಹಾಗೂ ಭಾರತೀಯ ಧೂತವಾಸ ಕಚೇರಿಯ ಪ್ರಥಮ ಕಾರ್ಯದರ್ಶಿಸಚಿನ್ ಶಂಕಪಾಲ್ ಅವರು ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.