NRI: “ಸತ್ಕುಲ ಪ್ರಸೂತರು’ ಶ್ರೇಣಿಕೃತ ಸಮಾಜದ ಕಥನ-ಕಾದಂಬರಿ ಲೋಕಾರ್ಪಣೆ
ಮಿನ್ನೆಸೋಟ ಓದುಗರ ಕಟ್ಟೆ ಆಶ್ರಯ
Team Udayavani, Aug 31, 2024, 12:44 PM IST
ಮಿನ್ನೆಸೋಟ: ಅನಿವಾಸಿ ಭಾರತೀಯರಾಗಿರುವ ಸಾಹಿತಿ ಡಾ| ಗುರುಪ್ರಸಾದ ಕಾಗಿನೆಲೆ ಅವರ ನೂತನ ಕಾದಂಬರಿ “ಸತ್ಕುಲ ಪ್ರಸೂತರು’ ಶ್ರೇಣಿಕೃತ ಸಮಾಜ ವ್ಯವಸ್ಥೆಯ ಮನಸ್ಥಿತಿಯನ್ನು ಉಗ್ಗಡಿಸುವ ಕಥನವಾಗಿದೆ ಎಂದು ಬಳ್ಳಾರಿಯ ಹಿರಿಯ ಸಂಶೋಧಕ, ಸಾಹಿತಿ ಡಾ| ಚಿಕ್‌ಕ್ಯಾಟೆಮಠದ ವೀರಭದ್ರಯ್ಯ ಹೇಳಿದರು.
ಅವರು ಅಮೆರಿಕದ ಮಿನ್ನೆಸೋಟ ನಗರದ ಕನ್ನಡ ಓದುಗರ ಕಟ್ಟೆ ಹಮ್ಮಿಕೊಂಡಿದ್ದ ಕನ್ನಡ ಪುಸ್ತಕಾವಲೋಕನ ಮತ್ತು ಲೋಕಾರ್ಪಣೆ ಸಮಾರಂಭದಲ್ಲಿ “ಸತ್ಕುಲ ಪ್ರಸೂತರು’ ಕೃತಿ ಕುರಿತು ಮಾತನಾಡಿದರು.
“ಸತ್ಕುಲ ಪ್ರಸೂತರು’ ಕೃತಿಯ ಶೀರ್ಷಿಕೆಯೇ ಸೂಚಿಸುವ ಹಾಗೆ ಉತ್ಛ ಕುಲದಲ್ಲಿ ಮತ್ತು ನಿಮ್ನ ವರ್ಗದಲ್ಲಿ ಜನಿಸಿದವರ ಜತೆಗೆ ನಡೆದ ಅಂತರ್ಜಾತಿಯ ವಿವಾಹದ ಕಥಾವಸ್ತುವನ್ನು ಹೊಂದಿದೆ. ಕಾದಂಬರಿಯಲ್ಲಿ ಚಿತ್ರಿತವಾದ ಮೂರು ಧರ್ಮಗಳ ಅಂತರಂಗ-ಬಹಿರಂಗಗಳ ನಡುವಿನ ಸಂಘರ್ಷದ ಚಿತ್ರಣ ಇಲ್ಲಿ ಎದ್ದು ಕಾಣುತ್ತದೆ. ಭಾರತದ ಹೊರಗೆ ಕಟ್ಟಿಕೊಂಡ ಬದುಕಿನಲ್ಲಿ ನುಸುಳಿಕೊಂಡಿರಬಹುದಾದ ವಿಭಿನ್ನ ಧರ್ಮಗಳ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಆಚಾರ-ವಿಚಾರಗಳ ತೌಲನಿಕ ವಿದ್ಯಾಮನದ ವಿಶ್ಲೇಷಣೆ ಈ ಕಾದಂಬರಿಯಲ್ಲಿದೆ ಎಂದರು.
ಇನ್ನೋರ್ವ ಅತಿಥಿಯಾಗಿದ್ದ ಲೇಖಕ ಸ್ವಾಮಿ ಬೇಗೂರ್ ಮಾತನಾಡಿ, “ಸತುRಲ ಪ್ರಸೂತರು’ ಒಂದು ವಿಭಿನ್ನವಾದ ಕಾದಂಬರಿ. ಇದರಲ್ಲಿ ವಿವಿಧ ಧರ್ಮಗಳ ನಡುವಿನ ಸೂಕ್ಷ್ಮಸಂವೇದನೆಯ ಸಂಗತಿಗಳಿವೆ. ಮನುಷ್ಯ ಜಾತಿ, ಧರ್ಮ, ವರ್ಣ, ವರ್ಗದ ಚೌಕಟ್ಟನ್ನು ಮೀರಿ ಓರ್ವ ಶ್ರೇಷ್ಠ ಮನುಜನಾಗಿ “ಮಾನವ ಧರ್ಮ’ವನ್ನು ಎತ್ತಿ ಹಿಡಿಯಬೇಕೆನ್ನುವ ಅಂಶವು ಓದುಗರ ಅನುಭವಕ್ಕೆ ಬರುತ್ತದೆ ಎಂದರು.
ಕನ್ನಡ ಓದುಗರ ಕಟ್ಟೆಯ ಹರೀಶ ಕೃಷ್ಣಪ್ಪ ಮಾತನಾಡಿ, ಇಲ್ಲಿ ಲೇಖಕರೇ ಒಂದು ಪಾತ್ರವಾಗಿ, ಆ ಪಾತ್ರವೇ ಸಂಪೂರ್ಣ ಕಾದಂಬರಿಯ ನಿರೂಪಣೆಯನ್ನು ಮಾಡುತ್ತದೆ. ಓದಿದಷ್ಟೂ ಅದರಲ್ಲಿರುವ ವಿಷಯಗಳು, ಪಾತ್ರಗಳು ಹಾಗೂ ಸನ್ನಿವೇಶಗಳು ಗಮನಸೆಳೆಯುತ್ತವೆ ಎಂದರು.
ಕಾದಂಬರಿಯ ಲೇಖಕ ಡಾ| ಗುರುಪ್ರಸಾದ್ ಮಾತನಾಡಿ “ಸತ್ಕುಲ ಪ್ರಸೂತರು’ ಸಂಪೂರ್ಣ ಕಾಲ್ಪನಿಕ ಕಾದಂಬರಿ. ಇಲ್ಲಿ ಲೇಖಕನೇ ನಿರೂಪಕನಾಗಿ ಕಥೆಯನ್ನು ಕೊನೆಯವರೆಗೆ ತೆಗೆದುಕೊಂಡು ಹೋಗುತ್ತಾನೆ. ಓದುಗನ ತನ್ಮಯತೆಯಲ್ಲಿ ಅದು ತನ್ನದೇ ಕಥೆ ಎಂಬ ಅನುಭವವಾಗುತ್ತದೆ. ಕಾದಂಬರಿಯ ಎಲ್ಲ ಪಾತ್ರ ಮತ್ತು ಸನ್ನಿವೇಶಗಳನ್ನು ಕಾಲ್ಪನಿಕವಾಗಿ ಹೆಣೆಯಲಾಗಿದೆ ಎಂದರು.
ಮಿನ್ನೆಸೋಟ ಸಂಗೀತ ಕನ್ನಡ ಕೂಟದ ಅಧ್ಯಕ್ಷ ರಮೇಶ್ ಮುನಿಸ್ವಾಮಿ ಮಾತನಾಡಿದರು. ಅನಿತಾ ಮೋಹನ್ ಮಠದ ನಿರೂಪಿಸಿದರು. ಸಮ್ಮಾನ ಕನ್ನಡ ಬಳಗದ ಅಧ್ಯಕ್ಷ ಅರವಿಂದ ಝಳಕಿ ಅವರು ಲೇಖಕರಾದ ಡಾ| ಗುರುಪ್ರಸಾದ್ ಕಾಗಿನೆಲೆ ಮತ್ತು ಡಾ| ಚಿಕ್‌ಕ್ಯಾಟೆಮಠದ ವೀರಭದ್ರಯ್ಯ ಅವರನ್ನು ಸಮ್ಮಾನಿಸಿದರು.
ಕನ್ನಡ ಓದುಗರ ಕಟ್ಟೆ ಹಿರಿಯ ಸದಸ್ಯ ಮೋಹನ್ ಮಠದ ವಂದಿಸಿದರು. ಉಮಾ ಹರೀಶ್ ಕೃಷ್ಣಪ್ಪ, ನಳಿನಿ ಸ್ವಾಮಿ ಬೇಗೂರು, ಅನಿತಾ ಮೋಹನ ಮಠದ, ಆಶೀಶ್ ಲೀಲಾ ಕುಂಬಾರ, ಪದ್ಮನಾಭನ್ ಗೋವಿಂದನ್, ಸುರೇಶ್ ನಿಜಗುಣ, ದಿನೇಶ್ ಪಟ್ಟಣಶೆಟ್ಟಿ, ಮಮತಾ ಸುರೇಶ್ ಪೂಜಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.