Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

Team Udayavani, May 11, 2024, 11:30 AM IST

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

ಮ್ಯೂನಿಕ್‌: ದಿನಗಳು ಕ್ಷಣಗಳಂತೆ ಉರುಳಿ ಬಂದೇ ಬಿಟ್ಟಿತು ಮತ್ತೆ ಯುಗಾದಿ. ಹಲವು ವರ್ಷಗಳಿಂದ ಆಚರಿಸುತ್ತಾ ಬಂದಿರುವ ಈ ಯುಗಾದಿ ಹಬ್ಬ ಜರ್ಮನಿಯ ಸಿರಿಗನ್ನಡಕೂಟ ಮ್ಯೂನಿಕ್‌ e.V. ಸದಸ್ಯರನ್ನು ಚೈತ್ರದ ಚಳಿಯ ಮಬ್ಬು ವಾತಾವರಣದಲ್ಲೂ ಹುಮ್ಮಸ್ಸು ಮೂಡಿ ಬರುವಂತೆ ಮಾಡಿತ್ತು. ಕೂಟದ ನೂತನ ಅಧ್ಯಕ್ಷ ಶ್ರೀಧರ ಲಕ್ಷ್ಮಾಪುರ ಅವರೊಡನೆ ಕೂಡಿ ಸ್ವಯಂಸೇವಕರು ನಗರದ Stæãdtisches Willi&Graf & Gymnasium ಶಾಲೆಯ ರಂಗಮಂದಿರವನ್ನು ಹಬ್ಬಕ್ಕೆಂದು ಸಜ್ಜುಗೊಳಿಸಿದರು. ಎಪ್ರಿಲ್‌ 20ರಂದು ಇಲ್ಲಿ ವಾಸಿಸುವ ಎಲ್ಲ ಕನ್ನಡಿಗರು ಸೇರಿ ಹಬ್ಬವನ್ನು ಆಚರಿಸಿದರು.

ಹಿಮ ಮಿಶ್ರಿತ ಮಳೆಯಲ್ಲೇ ನಡುಗುತ್ತಾ ರಂಗಮಂದಿರದ ಬಾಗಿಲಿಗೆ ತಲುಪಿದ ಆಯೋಜಕರು ಹಬ್ಬಕ್ಕೆ ಬರುವವರನ್ನು ಸಂತೋಷದಿಂದ ಬರಮಾಡಿಕೊಳ್ಳಲು, ನೋಂದಾಯಿತ ಸದಸ್ಯರನ್ನು ಗುರುತಿಸಲು ಸುಸಜ್ಜಿತ QR ಕೋಡ್‌ ಬಳಸಿ ಬಂದವರಿಗೆ ಬಣ್ಣದ ಕಂಕಣ ತೊಡಿಸಿ ಸ್ವಾಗತಿಸಿದರು.

ಮ್ಯೂನಿಕ್‌ ನಗರದಲ್ಲಿರುವ ಭಾರತೀಯ ರಾಯಭಾರಿ ಮೋಹಿತ್‌ ಯಾದವ್‌ ಹಾಗೂ ಅವರ ಪತ್ನಿ ಭಾವನ ಯಾದವ್‌ ಮತ್ತು ಭಾರತೀಯ ರಾಯಭಾರ ಕಚೇರಿಯ ಸಾಂಸ್ಕೃತಿಕ ಉಸ್ತುವಾರಿ ನಿರಂಜನ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆಡಳಿತ ಮಂಡಳಿಯ ಶ್ರೀಧರ ಲಕ್ಷ್ಮಾಪುರ, ಸೀತಾರಾಮ ಶರ್ಮಾ, ಮಹೇಂದ್ರ ಭದ್ರನ್ನವರ್‌, ಚಂದನ ಮಾವಿನಕೆರೆ, ಕಮಲಾಕ್ಷ ಎಚ್‌.ಎ., ದಿವ್ಯ ಎಚ್‌.ಎನ್‌ , ವೈಷ್ಣವಿ ಕಲ್ಕರ್ಣಿ ಆದರದಿಂದ ಬರಮಾಡಿಕೊಂಡರು.

ಕಾರ್ಯಕ್ರಮದ ಸಾಂಸ್ಕೃತಿಕ ಉಸ್ತುವಾರಿ ದಿವ್ಯ ಎಚ್‌.ಎನ್‌, ಉಪಾಧ್ಯಕ್ಷೆ ವೈಷ್ಣವಿ ಕುಲ್ಕರ್ಣಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಚಂದನ ಮಾವಿನಕೆರೆ ಅವರ ನೇತೃತ್ವದಲ್ಲಿ ಸಂಜಯ ಪಾಟೀಲ, ಜಯಲಕ್ಷ್ಮೀ ಹಾಗೂ ಅನೂಹ್ಯ ಅವರು ಎಲ್ಲರನ್ನೂ ಸ್ವಾಗತಿಸಿ ತಮ್ಮ ಹಾಸ್ಯಮಯ ನಿರೂಪಣೆಯಿಂದ ಸಭಿಕರನ್ನು ನಕ್ಕು ನಗಿಸಿದರು.

ಮೊದಲಿಗೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಭಾರತದಿಂದ ಬಂದಿದ್ದ ಹಿರಿಯ ದಂಪತಿಗಳು ದೀಪವನ್ನು ಬೆಳಗಿದರು, ಕರ್ನಾಟಕ ಶಾಸ್ತ್ರೀಯ ಸಂಗೀತ ಶಾಲೆಯ (CMA & Carnatic Music Academy) ಪುಟ್ಟ ಮಕ್ಕಳ ಪ್ರಾರ್ಥನೆಯೊಂದಿಗೆ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿರಿಗನ್ನಡಕೂಟ ಮ್ಯೂನಿಕ್‌ ಸಂಘದ ಕಾರ್ಯದರ್ಶಿಗಳಾದ ಸೀತಾರಾಮ ಶರ್ಮ ಅವರು ಪೂಜೆ ನಡೆಸಿ ಯುಗಾದಿಯ ಮಹತ್ವ ಹಾಗೂ ಪಂಚಾಂಗ ಶ್ರವಣ ಮಾಡಿಸಿದರು. ಅನಂತರ ಸಭಿಕರಿಗೆಲ್ಲ ಬೇವು ಬೆಲ್ಲ ಹಂಚಲಾಯಿತು.

ಲಿಟಿಲ್‌ ಚಾಂಪಿಯನ್‌ ತಂಡದ 5 – 6 ವರ್ಷದ ಪುಟಾಣಿಗಳು ವಿವಿಧ ಹಾಡುಗಳಿಗೆ ಮು¨ªಾಗಿ ಹೆಜ್ಜೆ ಹಾಕಿ ಮನರಂಜಿಸಿದರು. ಸವಿರಾಗ ತಂಡದ 1 – 3ನೇ ತರಗತಿಯ ಮಕ್ಕಳು ಕೈವಾರ ಅಮರ ನಾರೇಯಣ ಅವರ ಶ್ರೀರಾಮ ಕೃತಿಯನ್ನು ಹಾಡಿ ಸಭಿಕರು ಚಪ್ಪಾಳೆ ತಟ್ಟುವಂತೆ ಮಾಡಿದರು. ಅನಂತರ ಬಂದ 3-6 ವರ್ಷದ ಪ್ರಚಂಡ ಪುಟಾಣಿಗಳ ಕುಣಿತ ನೋಡಿ ಎಲ್ಲರೂ ಬೆರಗಾದರು.

ಇದಾದ ಮೇಲೆ ಮ್ಯೂನಿಕ್‌ ಮಿನಿ ಮೂವರ್ಸ್‌ ತಂಡದ 8-10 ವರ್ಷದ ಮಕ್ಕಳು ಟಗರು ಇತ್ಯಾದಿ ಹಾಡುಗಳ ಹೆಜ್ಜೆಗೆ ಜನರು ಮರುಳಾದರು. ಅನಂತರ ಬಂದ ಲಘು ಸಂಗೀತದ ತಂಡ ಕೇಳುಗರಿಗೆ ಸವಿ ಬಡಿಸಿದರು. ಭರತ ನಾಟ್ಯ ಹಾಗೂ ಕುಚ್ಚಿಪುಡಿ ಜುಗಲ್ಬಂದಿ ನೃತ್ಯ ಪ್ರದರ್ಶಿದ ಗೋಪಿ ತರಂಗಮ್‌ ತಂಡದ 16 ತಿಂಗಳ ಪುಟ್ಟ ಕೃಷ್ಣ ಎಲ್ಲರ ಮನಸ್ಸನ್ನು ಕದ್ದ. ನಾಟ್ಯಾಂಜಲಿ ಜೂನಿಯರ್‌ ಮಕ್ಕಳು ಸುಂದರ ಶಾಸ್ತ್ರೀಯ ನೃತ್ಯ ಮಾಡಿ ಮನ ತಣಿಸಿದರು. ಕೊನೆಯದಾಗಿ ವಿಂಗ್ಸ್‌ ಆಫ್ ವಾದ್ಯ ಗುಂಪಿನಿಂದ ವೀಣಾ ಜುಗಲಬಂದಿ , ಕೊಳಲು ತಬಲಾ ಮತ್ತು ಮೃದಂಗಗಳ ಅದ್ಭುತ ಸಂಗೀತಕ್ಕೆ ತಕ್ಕಂತೆ ಧಿಡೀರ್‌ ಚಿತ್ರ ಬಿಡಿಸಿ ಸಭಿಕರನ್ನು ಬೆರಗು ಗೊಳಿಸಿದರು.

ಇತ್ತೀಚೆಗಷ್ಟೆ ನಮ್ಮನ್ನು ಅಗಲಿದ ಕನ್ನಡ ಚಿತ್ರರಂಗದ ನೆಚ್ಚಿನ ಹಿರಿಯ ನಟ, ಕರ್ನಾಟಕದ ಪ್ರಚಂಡ ಕುಳ್ಳ ಎಂದೇ ಪ್ರಖ್ಯಾತಿಯಾದ ದ್ವಾರಕೀಶ್‌ ಅವರನ್ನು ಸ್ಮರಿಸಿ ಮೌನಾಚರಣೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ದಕ್ಷಿಣ ಜರ್ಮನಿ ಹೊಣೆ ಹೊತ್ತು ಭಾರತಕ್ಕಾಗಿ ಬಹಳಷ್ಟು ಕೆಲಸ ಮಾಡಿ ಸದ್ಯದಲ್ಲೇ ಬೇರೆಡೆಗೆ ವರ್ಗಾವಣೆ ಆಗಲಿರುವ ಮೋಹಿತ್‌ ಯಾದವ್‌ ಅವರ ಬಗ್ಗೆ ಒಂದು ಕಿರು ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಅನಂತರ ಮ್ಯೂನಿಕ್‌ ನಗರದಲ್ಲಿ ನಮ್ಮ ಕೂಟಕ್ಕೆ ದೊರೆತ ಸಲಹೆ ಪ್ರೋತ್ಸಾಹಗಳನ್ನು ನೆನೆದು ಧನ್ಯವಾದಗಳನ್ನು ಸಲ್ಲಿಸಲಾಯಿತು.

ಈ ಬಾರಿ ಸಿರಿಗನ್ನಡ ಕೂಟದಿಂದ sustainability ವಿಷಯವನ್ನು ಆಧರಿಸಿ ಕಸದಿಂದ ರಸ ಸ್ಪರ್ಧೆ ಏರ್ಪಡಿಸಲಾಗಿತ್ತು, 4 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತ್ಯಾಜ್ಯವಾಗಿರುವ ವಸ್ತುಗಳಿಂದ ವಿಭಿನ್ನವಾಗಿ ದಿನಬಳಗೆ ಬೇಕಾಗುವ ಚಂದದ ವಸ್ತುಗಳನ್ನು ತಯಾರಿಸಿದರು. ಇವರಲ್ಲಿ ಮಾನಸ ಪುಟ್ಟಪ್ಪ ಮತ್ತು ತಂಡಕ್ಕೆ ದ್ವಿತೀಯ ಬಹುಮಾನ ಮತ್ತು ರೇಶ್ಮಾ ಮತ್ತು ತಂಡಕ್ಕೆ ಪ್ರಥಮ ಬಹುಮಾನದ ಭಾಜನರಾದರು. ಸ್ಪರ್ಧೆಯಲ್ಲಿ ಗೆದ್ದ ತಂಡಗಳಿಗೆ ಮೋಹಿತ್‌ ಯಾದವ್‌ ರವರು ಪ್ರಶಸ್ತಿಗಳನ್ನು ನೀಡಿ ಪ್ರಶಂಸಿದರು ಮತ್ತು ಸಿರಿಗನ್ನಡ ಕೂಟದ 2024ರ ಸಂಭ್ರಮ ನಾಮಾಂಕಿತ ಕರ್ನಾಟಕ ರಾಜ್ಯೋತ್ಸವಾಚರಣೆಯು ನವೆಂಬರ್‌ 17 ಎಂದು ವಿಶೇಷ ಕೌಂಟ್‌ ಡೌನ್‌ ವೀಡಿಯೋ ಮೂಲಕ ಘೋಷಿಸಿದರು.

ಯುಗಾದಿ ಅಂದರೆ ಒಬ್ಬಟ್ಟು ಸಿಹಿ ಊಟ ಇಲ್ಲದೇ ಇರುತ್ತದೆಯೇ? ಹಲವು ಬಗೆಯ ರುಚಿ ರುಚಿಯಾದ ಊಟ ಯುರೋಪ್‌ ನಲ್ಲಿರುವ ಜನಕ್ಕೆ ದೂರದ ನಮ್ಮ ಊರಿನ ನೆನಪು ಬರುವಂತೆ ಮಾಡಿತು. ಮಾವಿನ ಸೀಕರಣೆ ಸವಿದು ವೀಳ್ಯದ ಎಲೆ ಜಗಿದು ಮುಂದಿನ ಕಾರ್ಯಕ್ರಮಕ್ಕೆ ಎಲ್ಲರೂ ಸಜ್ಜಾದರು.

ಮಕ್ಕಳಿಗಾಗಿ ಅರವಿಂದ ಸುಬ್ರಹ್ಮಣ್ಯ ಮತ್ತು ಅವರ ಪತ್ನಿ ರೇಶ್ಮಾ ಮೋರ್ಟು ಅವರು ಕನ್ನಡದಲ್ಲಿ ಭಾರತೀಯ ಕಾಲಮಾನಗಳ ಪರಿಚಯ ಮಾಡಿಸಿ ಯುಗಾದಿಯ ಕಥೆ ಹೇಳಿ, ರತ್ತೋ ರತ್ತೋ ಇತ್ಯಾದಿ ಊರ ಆಟಗಳನ್ನು ಆಡಿಸಿ ನಲಿಸಿದರು. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಸಹ ವೈಷ್ಣವಿ ಕುಲ್ಕರ್ಣಿ ಅವರ ಮೇಲುಸ್ತುವಾರಿಯಲ್ಲಿ ಮತ್ತು ಸ್ವಯಂ ಸೇವಾ ಕಾರ್ಯಕರ್ತರ ಸಹಕಾರದಲ್ಲಿ ಕವಡೆ, ಲಗೋರಿ, ಕುಂಟೆಬಿÇÉೆ ಆಟಗಳನ್ನು ಆಡಿಸಿ ಬಾಲ್ಯದ ನೆನಪುಗಳು ಹಸಿಯಾಗುವಂತೆ ಮಾಡಿದರು.
ಬಗೆಬಗೆಯ ದೇಸಿ ತಿಂಡಿ ತಿನಿಸುಗಳು, ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಇರಿಸಿದ್ದ ಸದಸ್ಯರು ಜನರ ಗಮನ ಸೆಳೆದಿದ್ದರು.

ಕೂಟದ ಮೊದಲಿನ ಆಡಳಿತ ಮಂಡಳಿಯ ಸದಸ್ಯರು ತಮ್ಮ ಅನುಭವವನ್ನು ಮೆಲಕು ಹಾಕಿದರು, ಅವರ ಸೇವೆಯನ್ನು ನೆನೆದು ನೂತನ ಮಂಡಳಿಯ ಸದಸ್ಯರು ನೆನಪಿನ ಕಾಣಿಕೆಗಳನ್ನು ಕೊಟ್ಟು ವಂದಿಸಿದರು.
ಕಾರ್ಯಕ್ರಮ ಸುಗಮವಾಗಲು ದಣಿವೆನ್ನದೆ ಶ್ರಮಿಸಿದ ಕಾರ್ಯಕರ್ತರಿಗೆ ಆಡಳಿತ ಮಂಡಳಿ ಧನ್ಯವಾದ ತಿಳಿಸಿದರು.

ವರದಿ – ಅರವಿಂದ ಬಾಯರಿ
ಚಿತ್ರ ಕೃಪೆ – ಅಮಿತ್‌ ಕಡಸೂರ್‌

ಟಾಪ್ ನ್ಯೂಸ್

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.