Spices: ಸಂಬಾರು ಪದಾರ್ಥಗಳು ಮತ್ತು ಆರೋಗ್ಯ

ಜೀವನದ ವೈವಿಧ್ಯಮಯ ಮಸಾಲೆಯ ಘಮ...

Team Udayavani, Dec 17, 2023, 3:07 PM IST

12-desiswara

ಮೆಣಸು, ಜೀರಿಗೆ, ಏಲಕ್ಕಿ, ಲವಂಗ ಮುಂತಾದ ಸಾಂಬಾರು ಪದಾರ್ಥಗಳು ಇಲ್ಲದಿದ್ದರೆ ಬದುಕು ಹೇಗಿರುತ್ತಿತ್ತು? ಬಹುಶಃ ಅದು ಬಲು ಬರಡಾಗುತ್ತಿತ್ತು. ನಮ್ಮ ಆಹಾರದಲ್ಲಿ ಸ್ವಾರಸ್ಯವೇ ಇರುತ್ತಿರಲಿಲ್ಲ. ಆಹಾರವನ್ನು ರುಚಿಕಟ್ಟಾಗಿ ಮಾಡುವ, ಸತ್ವ ಸಂಪನ್ನವಾಗಿಸುವ ಸಾಧನ ಸಾಂಬಾರು ಮಸಾಲೆ.  ಆದ್ದರಿಂದಲೇ ಕವಿ ಹೇಳಿದ್ದಾನೆ: “ಅನುಭವದ ವೈವಿಧ್ಯವೇ ಜೀವನದ ಮಸಾಲೆ’.  ವಿವಿಧ ಸಾಂಬಾರು ಪದಾರ್ಥಗಳು ಬಾಯಿಗೆ ರುಚಿಕರ ಮಾತ್ರವಲ್ಲ, ಹೊಟ್ಟೆಗೂ ಆರೋಗ್ಯಕರ ಮತ್ತು ಹಲವಾರು ಔಷಧಗಳಿಗೆ ಆಗರ.

ಜಗತ್ತಿನ ಇತಿಹಾಸವನ್ನೇ ರಚಿಸಿದ ಖ್ಯಾತಿ ಸಾಂಬಾರಿಗಿದೆ. ಪ್ರಪಂಚದ 70ಕ್ಕೂ ಹೆಚ್ಚು ಸಾಂಬಾರು ಪದಾರ್ಥಗಳಲ್ಲಿ ಅರ್ಧಕ್ಕೂ ಹೆಚ್ಚು ಭಾರತದಲ್ಲಿ ಬೆಳೆಯುತ್ತವೆ. ಭಾರತದಲ್ಲಿ ಬೆಳೆಯುವ ಸಾಂಬಾರು ಪದಾರ್ಥಗಳು ಒಂದು ರೀತಿಯ ವಿಶಿಷ್ಟವಾದ ಗುಣಗಳನ್ನು ಹೊಂದಿ ಜನಪ್ರಿಯವಾಗಿದೆ.

ಸುಗಂಧ ಬರಿತ ಏಲಕ್ಕಿ, ಮೈ ನಿಮಿರಿಸುವ ಮೆಣಸು, ಹೊಸತು ತುಂಬವ ಶುಂಠಿ, ಸುಂದರ ಬಣ್ಣದ ಅರಿಶಿನ, ಬಾಯಿ ಚಪ್ಪರಿಸುವಂತೆ ಮಾಡುವ ಲವಂಗ, ಅಡುಗೆಗೆ ರುಚಿ ಕೊಡುವ ದಾಲಿcನ್ನಿ, ಮೈ ನಡುಗಿಸುವ ಮೆಣಸಿನ ಕಾಯಿ, ತಂಪಾಗಿಸುವ ಮೆಂತ್ಯೆ, ಘಮಘಮಿಸುವ ಸಾಸುವೆ, ಅಡುಗೆಗೆ ಬೇಕಾದ ಜಾಕಾಯಿ ಜಾಪತ್ರೆ, ಸುವಾಸನಾಭರಿತವಾದ ಜೀರಿಗೆ, ಮಸಾಲೆಗೆ ಮುಖ್ಯವಾದ ಬೆಳ್ಳಗಿನ ಬೆಳ್ಳುಳ್ಳಿ, ಊಟವಾದ ಮೇಲೆ ನೆನಪಾಗುವ ಬಡಾಸೋಂಪು… ಒಂದೇ ಎರಡೇ ಲೆಕ್ಕವಿಲ್ಲದಷ್ಟು!

ಆಹಾರ ಪದಾರ್ಥಗಳಿಗೆ ಒಂದು ರೀತಿಯ ಸ್ವಾಧನೀಯ ರುಚಿ ಕೊಡುವ ಶಕ್ತಿ ಸಾಂಬಾರು ಪದಾರ್ಥಗಳಿಗಿದೆ. ಹೆಚ್ಚಾಗಿ ಚಿರಪರಿಚಿತವಾಗಿರುವುದು ಹಸಿವನ್ನು ಉಂಟು ಮಾಡುವ ವಸ್ತು ಎಂದು. ಸಾಮಾನ್ಯ ಮನುಷ್ಯನ ದೇಹಕ್ಕೆ ಬೇಕಾದ ಸಸಾರ ಜನಕ,  ಖನಿಜ ವಸ್ತುಗಳು, ಲವಣ ಸತ್ವ, ಸಾಧಾರಣ ತೈಲ ಇತ್ಯಾದಿ ಯಥೇತ್ಛವಾಗಿ ದೊರಕಿಸಿ ಕೊಡುತ್ತವೆ.

ಸಾಮಾನ್ಯವಾಗಿ ಸಾಂಬಾರ ಪದಾರ್ಥಗಳನ್ನು ಆಹಾರ ವಸ್ತುಗಳನ್ನು ಕೆಡದಂತೆ ಕಾಪಾಡಲು ಮತ್ತು ಸುರಕ್ಷಿತವಾಗಿಡುವಲ್ಲಿ ಬಳಸುವರು. ಕೆಲವು ಸಾಂಬಾರು ವಸ್ತುಗಳು ಶಿಲೀಂದ್ರ ನಾಶಕ ಗುಣಲಕ್ಷಣಗಳನ್ನು ಒಳಗೊಂಡಿದೆ. ಮನುಷ್ಯನ ದೇಹದ ಲಾಲಾರಸ ಮತ್ತು ಜಠರ ರಸಗಳನ್ನು ಹೆಚ್ಚಾಗಿ ಉತ್ಪಾದಿಸಿ ದೇಹವನ್ನು ಉದ್ರೇಕಿಸುವ ಮೂಲಕ ಜೀರ್ಣಶಕ್ತಿಯನ್ನು ಕರುಳಿನ ದ್ವಾರಗಳನ್ನು ತೀಕ್ಷ್ಣಗೊಳಿಸುತ್ತದೆ.

 ಕರಿಮೆಣಸು

ದೇಹಕ್ಕೆ ಶೃಂಗಾರ ಸಾರಿಗೆ ಸಾಂಬಾರು ಮೆಣಸು. ಇದು ಸಾಂಬಾರು ಪ್ರಪಂಚದ ರಾಜ. ಸಾವಿರಾರು ವರ್ಷ ಗಳಿಂದಲೂ ವಿಶ್ವದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಲ ಜನಾಂಗದವರೂ ಉಪಯೋಗಿಸುತ್ತಿರುವುದರಲ್ಲಿ ಕರಿಮೆಣಸಿಗೆ ಪ್ರಪ್ರಥಮ ಸ್ಥಾನ. ಹಿಂದಿನ ಕಾಲದಲ್ಲಿ ಆರ್ಯ ಜನಾಂಗದವರು ಮೆಣಸನ್ನು ಶಕ್ತಿ ಸಾಮರ್ಥ್ಯವುಳ್ಳ ಔಷಧ ಎಂದು ಉಪಯೋಗಿಸುತ್ತಿದ್ದರು. ಮನಸ್ಸಿನಲ್ಲಿ ಒಂದು ವಿಧವಾದ ಜಿಗುಟಾದ, ಖಾರದ ಗುಣವುಳ್ಳ ಪೈಪರಿನ್‌ ಎಂಬ ರಾಸಾಯನಿಕ ಪದಾರ್ಥ ಹೊಂದಿದೆ.

 ಏಲಕ್ಕಿ

ಏಲಕ್ಕಿ ಸಾಂಬಾರ ಸಾಮ್ರಾಜ್ಯದಲ್ಲಿ ಹಸುರು ಚಿನ್ನ, ಸುಗಂಧರಾಣಿ ಮುಂತಾದ ಹೆಸರುಗಳಿಂದ ವಿಶ್ವವಿಖ್ಯಾತ ವಾಗಿದೆ. ನಾಗರಿಕತೆಯ ಕಾಲದಿಂದಲೂ ಇದು ಪ್ರಖ್ಯಾತಿ ಗಳಿಸಿತ್ತು. ಔಷಧ ಪ್ರಪಂಚದಲ್ಲಿ ಏಲಕ್ಕಿ ಒಂದು ಹೊಸ ಅಧ್ಯಾಯವನ್ನೇ ಸ್ಥಾಪಿಸಿದೆ. ಏಲಕ್ಕಿ ಶಕ್ತಿಶಾಲಿ, ಸುರಭಿಯುಕ್ತ, ವಾತಹರ, ಮೂತ್ರವರ್ಧಕ, ಹೊಟ್ಟೆ ನೋವು ವಾಂತಿ ಮತ್ತ ಹೊಟ್ಟೆ ತೊಳಸುವಿಕೆಗಳಿಗೆ ಅತ್ಯಂತ ಪರಿಣಾಮಕಾರಿ. ಹೃದ್ರೋಗ ಮತ್ತು ಶ್ವಾಸ ನಲಿಕೆಗೆ ಒಳ್ಳೆಯ ಔಷಧ. ಇದು ಕಾಮೋತೇಜಕಾರಿ ಹಾಗೂ ಜೀರ್ಣಕಾರಿ ಕೂಡ.

 ದಾಲಿcನ್ನಿ

ಮಸಾಲ ಪ್ರಪಂಚದಲ್ಲಿ ಸರ್ವ ಶ್ರೇಷ್ಠ ಸಾಂಬಾರು ದಾಲಿcನ್ನಿ. ಲೋರೇಸಿಯಾ ಕುಟುಂಬಕ್ಕೆ ಸೇರಿದ ದಾಲಿcನ್ನಿ, ಮರದ ತೊಗಟೆಯನ್ನು ಸೀಳಿ ಒಣಗಿಸಿಟ್ಟ ಸಂಬಾರ ಪದಾರ್ಥ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಹೃದಯೋತ್ತೇಜಕವಾದ ಔಷಧ ತಯಾರಿಸಲು, ಅಜೀರ್ಣ, ಅತಿಸಾರ, ಭೇದಿ, ವಾಂತಿ ಮುಂತಾದ ರೋಗಗಳನ್ನು ಗುಣಪಡಿಸಲು, ಹೊಟ್ಟೆಯೂಬ್ಬರ ಮತ್ತು ಹೊಟ್ಟೆ ತುಳಸುವಿಕೆಯನ್ನು ನಿವಾರಿಸಲು ಹಾಗೂ ಶುಕ್ಲ ದೋಷ ಕಾಯಿಲೆಗೆ ಕೊಡುವ ಚುಚ್ಚುಮದ್ದಿನಲ್ಲಿ ಆಂಟಿಸೆಪ್ಟಿಕ್‌ ಆಗಿಯೂ ಉಪಯೋಗಿಸಲಾಗುತ್ತಿದೆ.

 ಲವಂಗ

ಮಸಾಲೆಗಳ ಮುಕುಟಮಣಿ ಲವಂಗ. ಒಂದು ಬಿರಿಯುವ ಮೊಗ್ಗುಗಳ ಒಣಗಿದ ರೂಪಕವಾಗಿದೆ. ಲವಂಗವು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚಿನಿಂದಲೂ ಚಿರಪರಿಚಿತ. ಇದನ್ನು ಔಷಧ ತಯಾರಿಕೆ, ಸೌಂದರ್ಯ ಸಾಧನಗಳಲ್ಲಿ, ಟೂತ್‌ಪೇಸ್ಟ್‌ ತಯಾರಿಕೆಯಲ್ಲಿ ಭಕ್ಷ ಭೋಜನಗಳಲ್ಲಿ, ಜೀರ್ಣಶಕ್ತಿಯನ್ನು ಉತ್ತೇಜಿಸುವಲ್ಲಿ, ವಾತಹರವಾಗಿ, ಹಲ್ಲು ನೋವು ನಿವಾರಣೆಗಾಗಿ, ಹೊಟ್ಟೆಯುಬ್ಬರ ತಡೆಯುವಲ್ಲಿ, ಗರ್ಭಿಣಿಯರಿಗೆ ವಾಂತಿನಿಲ್ಲಿಸಲು ಮತ್ತು ಹಲ್ಲು ನೋವಿನ ನಿವಾರಣೆಗೆ ಲವಂಗದ ಎಣ್ಣೆಯನ್ನು ಬಳಸಲಾಗುತ್ತಿದೆ.

 ಶುಂಠಿ

ಬಹುಮುಖ ಬೇಡಿಕೆಯ ಸಾಂಬಾರುಗಳಲ್ಲಿ ಶುಂಠಿ ಒಂದು. ಆಹಾರ ಪದಾರ್ಥಗಳಿಗೆ ಪರಿಮಳ ಕೊಡಲು, ನಾನಾ ರೋಗ ರುಜಿನಗಳನ್ನು ಗುಣಪಡಿಸಲು ಉಪಯೋಗಿಸುವ ಶುಂಠಿ ಸುವಾಸನೆಯಿಂದ ಮತ್ತು ರುಚಿಯಿಂದ ಕೂಡಿರುವ ನೆಲದೊಳಗೆ ಬಿಡುವ ಗೆಡ್ಡೆ. ಔಷಧಗಳಲ್ಲಿ ವಾತಹರ, ಉತ್ತೇಜಕ ಅಜೀರ್ಣವ್ಯಾಧಿ, ವಾಯು ರೋಗಗಳ ನಿವಾರಕ ಔಷಧಿಯಾಗಿ ಇದನ್ನು ಉಪಯೋಗಿಸುತ್ತಾರೆ.

 ಅರಿಶಿನ

ಪ್ರಾಕೃತಿಕ ಬಣ್ಣದ ಸಾಂಬಾರು ಅರಿಶಿನ. ಸಾಂಬಾರ ಪದಾರ್ಥವಾಗಿ, ಬಣ್ಣಗಳನ್ನು ಅಧಿಕವಾಗಿ ವರ್ಧಿಸುವ ಗಿಡಮೂಲಿಕೆಯಾಗಿ, ಆಂಟಿಸೆಪ್ಟಿಕ್‌ ಮತ್ತು ಚರ್ಮದ ಕಾಂತಿಯನ್ನು ವರ್ಧಿಸುವ ವಸ್ತುವಾಗಿ – ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಬೆಳೆಯಲಾಗುವ ಒಂದು ಗೆಡ್ಡೆ . ವೈದ್ಯಕೀಯ ಕ್ಷೇತ್ರದಲ್ಲಿ ರಕ್ತವನ್ನು ಶುದ್ಧೀಕರಿಸುವುದು, ಕೆಮ್ಮು, ನೆಗಡಿ, ಗಂಟಲು ನೋವು, ಹೊಟ್ಟೆನೋವು, ಅನೇಕ ಚರ್ಮ ವ್ಯಾಧಿಗಳು, ಸಿಡುಬು, ಉಳುಕಿದ ಕೀಲುಗಳಿಗೆ ಎಣ್ಣೆ, ಮುಲಾಮು ಸಿದೌœಶಧವಾಗಿ ಉಪಯೋಗಿಸುತ್ತಾರೆ.

 ಮೆಣಸಿನಕಾಯಿ

ನವರಸಗಳಲ್ಲಿ ಒಂದು ಮೆಣಸಿನಕಾಯಿ. ಇದನ್ನು ಹಸಿ ಅಥವಾ ಒಣಗಿದ ರೂಪದಲ್ಲಿ ಉಪಯೋಗಿಸುತ್ತಾರೆ. ಉತ್ತೇಜಕವಾದ ಈ ಸಾಂಬಾರವನ್ನು ತಿಂದಾಗ ಸಲೈವ ರಸವು ಹೆಚ್ಚಾಗಿ ಜೀರ್ಣ ಶಕ್ತಿಗೆ ಉಪಕಾರಿಯಾಗುವುದು. ಹೊಟ್ಟೆ ಹಸುವನ್ನುಂಟು ಮಾಡುವ ಮೆಣಸಿನಕಾಯಿಯನ್ನು ಹಣ್ಣಾದ, ಒಣಗಿದ ಮತ್ತು ಪುಡಿ ಮಾಡಿದ ರೀತಿಯಲ್ಲಿ ಬಳಸಬಹುದು.

ವಾತಹರ, ಅಗ್ನಿಮಾನ್ಯ ಹೊಟ್ಟೆಯುಬ್ಬರ, ಗಂಟಲು ಕೆರೆತಕ್ಕೆ ಇದು ಗುಣಕಾರಿ, ಇತ್ತೀಚಿಗೆ ಕ್ಯಾನ್ಸರ್‌ ಸಂಶೋಧನ ಕೇಂದ್ರವು ಮೆಣಸಿನಕಾಯಿ ಕ್ಯಾನ್ಸರ್‌ ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ.

 ಕೊತ್ತಂಬರಿ

ಎಲ್ಲರ ಮನೆಯ ಅಂಗಳದಲ್ಲಿ ಬೆಳೆಯುವ ಕೊತ್ತಂಬರಿ ಎಲ್ಲರಿಗೂ ಪ್ರಿಯವಾದ ಲಾಭದಾಯಕ ಸಾಂಬಾರ ಸೊಪ್ಪು, ಅಡಿಗೆ ಮಾತ್ರವಲ್ಲದೆ ಔಷಧ ಪ್ರಪಂಚದಲ್ಲಿ ಅಜೀರ್ಣವಾದಾಗ, ಜಠರದಲ್ಲಿ ವಾಯು ಸೇರಿದಾಗ, ವಾಂತಿಯಾಗುವಾಗ ಮತ್ತು ಮತ್ತಿತರ ಹೊಟ್ಟೆಯ ತೊಂದರೆಯಾದಾಗ ಸೇವಿಸುತ್ತಾರೆ.

 ಮೆಂತ್ಯ

ಎಲ್ಲರ ಮನೆಯ ಹಿತ್ತಲಲ್ಲಿ ಬೆಳೆಯುವ ಮತ್ತು ತಂಪೆರಯುವ ಸಾಂಬಾರ ಮೆಂತ್ಯದಿಂದಾಗುವ ಪ್ರಯೋಜನಗಳು ಅಪಾರ. ಈಜಿಪ್ಟ್ ದೇಶದವರು ಜ್ವರದ ತಾಪವನ್ನು ಕಡಿಮೆ ಮಾಡಲು ಉಪಯೋಗಿಸುತ್ತಿದ್ದರು. ಇದು ಪಚನ ಕ್ರಿಯೆಯನ್ನು ಸುಲಭಗೊಳಿಸುವುದಲ್ಲದೆ ಉತ್ತೇಜನ ಕ್ರಿಯೆಯನ್ನು ಪರಿವರ್ತನೆಗೊಳಿಸುವುದು. ಮೆಂತ್ಯ ಬೀಜಗಳು ಭೇದಿ, ಕೆಮ್ಮು, ಬೆಳೆದ ಪಿತ್ತ ಜನಕಾಂಗ, ಜಠರ ಪ್ಲೀಹ, ಮೂಳೆ ರೋಗ, ಮಧುಮೇಹ, ಆಮಶಂಕೆ, ಅಜೀರ್ಣವ್ಯಾದಿ ಇನ್ನು ಮುಂತಾದ ರೋಗಗಳಿಗೆ ಸೂಕ್ತ ಪರಿಹಾರ ನೀಡುತ್ತದೆ.

 ಜೀರಿಗೆ

ಪ್ರಧಾನ ಸಂಬಾರ ಪದಾರ್ಥಗಳಲ್ಲಿ  ಚಮತ್ಕಾರಿ ಸಂಬಾರ ಪದಾರ್ಥ ಜೀರಿಗೆ.  ಜೀರಿಗೆಯ ತೈಲವನ್ನು ಸುಗಂಧದ ದ್ರವ್ಯಗಳಲ್ಲಿ ಮತ್ತು ಮಾದಕ ಪಾನೀಯಗಳಲ್ಲಿ ಬಲವರ್ಧಕ ದ್ರವ್ಯಗಳಲ್ಲಿ ಉಪಯೋಗಿಸುತ್ತಾರೆ. ಜೀರಿಗೆಯ ಕಾಳುಗಳು ಜಟರೋತ್ತೇಜಕ, ಮೂತ್ರಸ್ರಾವ ಉತ್ತೇಜಕ, ವಾತಹರ ಉತ್ತೇಜಕ, ಅಜೀರ್ಣ ವ್ಯಾಧಿ, ರಕ್ತವನ್ನು ಹೆಪ್ಪು ಕಟ್ಟಿಸುವ ಗುಣಗಳಿಗೆ ಪ್ರತಿಬಂಧಕವಾಗಿ ಕೆಲಸ ಮಾಡಲು ಉಪಯೋಗಿಸುತ್ತಾರೆ. ಪಶು ವೈದ್ಯಕೀಯ ಔಷಧಗಳಲ್ಲೂ ಸಹ ಇದನ್ನು ಬಹಳವಾಗಿ ಉಪಯೋಗಿಸುತ್ತಾರೆ.

 ಕೇಸರಿ

ವಿಶ್ವದಲ್ಲಿ ಅತ್ಯಂತ ಬೆಳೆಬಾಳುವ ಕಾಶ್ಮೀರದ ರಾಜ ಸಾಂಬಾರು ಕುಸುಮ ಕೇಸರಿ. ಸುಗಂಧ ಸೂಸುವ ಕಟುವಾದ ಸ್ವಾದ ಹೊಂದಿದ ಪ್ರಶಂಸನೀಯ ಸಂಬಾರು ಪದಾರ್ಥ. ಇದನ್ನು ಅನೇಕ ರೋಗಗಳ ನಿವಾರಣೆಗಾಗಿ ಉಪಯೋಗಿಸುತ್ತಾರೆ. ಗರ್ಭಿಣಿಯರಿಗೆ ಇದನ್ನು ಔಷಧ ಪತ್ಯವಾಗಿ ಕೊಡುತ್ತಾರೆ. ಮೂತ್ರ ವಿಸರ್ಜನೆಯ ತೊಂದರೆ, ಮಧುಮೇಹ ರೋಗ, ಜ್ವರ, ಮನೋರೋಗ ಪರಿಹಾರ ಮತ್ತು ಮಕ್ಕಳಿಗೆ ಶೀತ ಶಮನಕ್ಕಾಗಿ ಬಳಸುತ್ತಾರೆ. ನಿತ್ಯವೂ ಬಿಸಿ ಹಾಲಿಗೆ ಒಂದೆರಡು ಕೇಸರಿ ಎಳೆಗಳನ್ನು ಹಾಕಿ ಕುಡಿದರೆ ಉತ್ತಮ ಆರೋಗ್ಯ ದೊರಕುತ್ತದೆ.

ಇಷ್ಟೇ ಅಲ್ಲದೆ ಕರಿಬೇವು, ಜಾಜಿ ಕಾಯಿ, ಜಾಪತ್ರೆ, ಸಾಸಿವೆ, ಬಡಾ ಸೋಂಪು, ಓಮ, ಬೆಳ್ಳುಳ್ಳಿ, ಈರುಳ್ಳಿ , ಆಲ್‌ ಸ್ಪೈಸ್‌, ವೆನಿಲ್ಲಾ ಮುಂತಾದ ಇತರ ಸಂಬಾರು ಪದಾರ್ಥಗಳು ಸಹ ಬಳಕೆಯಲ್ಲಿ ಇವೆ. ಅಬ್ಟಾ! ನೋಡಿದಿರಾ ಹೇಗೆ ಸಂಬಾರು ಪದಾರ್ಥಗಳು ನಮ್ಮ ಬಾಳಿನ ಅವಿಭಾಜ್ಯ ಅಂಗವಾಗಿ ಬೆರೆತಿದೆ. ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿ ಮತ್ತು ಆರೋಗ್ಯವನ್ನು ಅಭಿವೃದ್ಧಿ ಪಡಿಸಿ ಕಾಪಾಡಿಕೊಳ್ಳಿ.

-ನಂದಾ ಸುರೇಂದ್ರ,

ನ್ಯೂಯಾರ್ಕ್‌

ಟಾಪ್ ನ್ಯೂಸ್

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.