Desi Swara: ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ, ದುಬೈ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ
ಡಿಸೆಂಬರ್ 10: ದುಬೈ ದಸರಾ ಉತ್ಸವ
Team Udayavani, Oct 14, 2023, 2:02 PM IST
ಅಬುಧಾಬಿ:ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಸಂಯುಕ್ತ ಅರಬ್ ಸಂಸ್ತಾನದಲ್ಲಿರುವ ಕನ್ನಡಿಗರಿಗಾಗಿ ಹೆಮ್ಮೆಯ ದುಬೈ ಕನ್ನಡ ಸಂಘದವರು ವರ್ಷಂಪ್ರತಿ ನಡೆಸಿಕೊಂಡು ಬರುವ “ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ ‘ ಹಾಗೂ “ದುಬೈ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ’ ಸಮಾರಂಭವು ಡಿ.10ರಂದು ಎಥಿಸಲಾತ್ ಸ್ಫೋ ರ್ಟ್ಸ್ ಅಕಾಡೆಮಿಯ ಒಳ ಮತ್ತು ಹೊರಾಂಗಣದಲ್ಲಿ ಬೆಳಗ್ಗೆ 8ರಿಂದ ಸಂಜೆ 8ರ ವರೆಗೆ ಅದ್ದೂರಿಯಾಗಿ ಸಂಘದ ಅಧ್ಯಕ್ಷರಾದ ಮಧು ದಾವಣಗೆರೆ ಅವರ ಮುಂದಾಳತ್ವದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದು 6ನೇ ವರ್ಷದ ದಸರಾ ರ್ಯಕ್ರಮವಾಗಿದೆ. ವಿವಿಧ ಸ್ಪರ್ಧೆಗಳು ಈ ಕಾರ್ಯಕ್ರಮದಲ್ಲಿ ಹೆಮ್ಮೆಯ ದುಬೈ ಕನ್ನಡ ಸಂಘದ ವತಿಯಿಂದ ಭಾರತ ದೇಶಕ್ಕೆ ಆಟವಾಡಿ ರಾಜ್ಯದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಪಸರಿಸಿದ ಕ್ರೀಡೆಯಲ್ಲಿ ಸಾಧನೆಗೈದ ಕನ್ನಡಿಗ ಕ್ರೀಡಾಪಟುಗಳಿಗೆ ದುಬೈ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಲಿದ್ದಾರೆ.
ಈ ಕೌಟುಂಬಿಕ ದಸರಾ ಉತ್ಸವದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಕವಿಗೋಷ್ಠಿ, ಕ್ವಿಜ್, ಕವನ, ಲೇಖನ ಸ್ಪರ್ಧೆ, ರಂಗೋಲಿ, ಅಂತ್ಯಾಕ್ಷರಿ, ದಸರಾ ಗೊಂಬೆ ಸ್ಪರ್ಧೆ, ಖೋಖೋ, ಕಬಡ್ಡಿ, ಬ್ಯಾಡ್ಮಿಂಟನ್, ತ್ರೋಬಾಲ್, ವಾಲಿಬಾಲ್, ಕ್ರಿಕೆಟ್, ಆ್ಯತ್ಲೆಟಿಕ್ಸ್, ಫುಟ್ಬಾಲ್, ಟೇಬಲ್ ಟೆನಿಸ್, ಚೆಸ್, ಹಗ್ಗ ಜಗ್ಗಾಟ ಮುಂತಾದ ಹತ್ತು ಹಲವು ಕಲೆ ಮತ್ತು ಸಾಹಿತ್ಯ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ದಸರಾ ಕಾರ್ಯಕ್ರಮದ ಸಮಾಲೋಚನ ಸಭೆಯಲ್ಲಿ ಹೆಮ್ಮೆಯ ದುಬೈ ಕನ್ನಡ ಸಂಘದ ಅಧ್ಯಕ್ಷರಾದ ಮಧು ದಾವಣಗೆರೆ, ಉಪಾಧ್ಯಕ್ಷರಾದ ಹಾದಿಯ ಮಂಡ್ಯ, ಮಾಜಿ ಅಧ್ಯಕ್ಷರುಗಳಾದ ಮಮತಾ ಮೈಸೂರು, ಸುದೀಪ್ ದಾವಣಗೆರೆ, ಮುಖ್ಯ ಕಾರ್ಯದರ್ಶಿ ರಫೀಕಲಿ ಕೊಡಗು, ಸಮಿತಿ ಸದಸ್ಯರುಗಳಾದ ವಿಷ್ಣುಮೂರ್ತಿ, ಶಂಕರ್ ಬೆಳಗಾವಿ, ವರದರಾಜ್ ಕೋಲಾರ, ಮೊಹಿನುದ್ದೀನ್ ಹುಬ್ಬಳ್ಳಿ ಮತ್ತು ಉಪ ಸಮಿತಿ ಸದಸ್ಯರುಗಳಾದ ಸ್ವಾತಿ ಚಿತ್ರದುರ್ಗ, ನಜಿರಾ ಮಂಡ್ಯ, ಪ್ರತಾಪ್ ಮಡಿಕೇರಿ, ಅಶ್ರಫ್ ದಕ್ಷಿಣ ಕನ್ನಡ, ಇರ್ಫಾನ್ ಕೊಡಗು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.