ಸ್ವರಭ್ರಾಮರಿ ಹಾಡಿನ ಲೋಕಾರ್ಪಣೆ, ಯುಎಇ ಕನ್ನಡ ಮಕ್ಕಳ ಗಾಯನ ಸ್ಪರ್ಧೆ
25ಕ್ಕೂ ಹೆಚ್ಚು ಕರ್ನಾಟಕ ಮೂಲದ ಪುಟಾಣಿ ಹಾಡುಗಾರರು ಭಾಗವಹಿಸಿದ್ದರು
Team Udayavani, Nov 4, 2023, 11:46 AM IST
ದುಬೈ : ಬೆಂಗಳೂರು, ಮಂಗಳೂರು, ಬೆಳ್ತಂಗಡಿ ಮತ್ತು ದುಬೈಯಿಂದ ಕಾರ್ಯನಿರ್ವಹಿಸುತ್ತಿರುವ ಸ್ವರ ಭ್ರಾಮರಿ ಸಾಮಾಜಿಕ ಜಾಲತಾಣ ವೇದಿಕೆ, ದುಬೈಯಲ್ಲಿ ಮೊದಲ ಬಾರಿಗೆ ಕರಾಮದ ಎಸ್.ಎನ್.ಜಿ ಸಭಾಂಗಣದಲ್ಲಿ ಪ್ರತ್ಯಕ್ಷ ಕಾರ್ಯಕ್ರಮವನ್ನು ದಿನಾಂಕ ಅ.22ರಂದು ಯಶಸ್ವಿಯಾಗಿ ಆಯೋಜಿಸಿತ್ತು.
ಸ್ವರ ಭ್ರಾಮರಿ ತಂಡದ ದುಬೈ ವಿಭಾಗಾದ ಸಂಚಾಲಕರಾದ ಯುವರಾಜ್ ಕೆ. ದೇವಾಡಿಗ ಮತ್ತು ಪ್ರತಿಮಾ ಯುವರಾಜ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಯುವರಾಜ್ ಅವರು ಸ್ವತಃ ರಾಗ ಸಂಯೋಜಿಸಿ ಹಾಡಿರುವ ದಾಸರಪದ “ಸಾವಧಾನದಿಂದಿರು ಮನವೇ’ ಎಂಬ ಹಾಡಿನ ಆಡಿಯೋ ಮತ್ತು ಸಂಸ್ಕೃತಿ ನೃತ್ಯ ಅಕಾಡೆಮಿಯ ಶಶಿರೇಖಾ ಅವರು ನಿರ್ದೇಶಿಸಿ ಅವರ ಶಿಶ್ಯವೃಂದ ನರ್ತಿಸಿದ ವೀಡಿಯೋವನ್ನು ಲೋಕಾರ್ಪಣೆ ಗೊಳಿಸಲಾಯಿತು.
ಅತಿಥಿಗಳಾದ ದಿನೇಶ್ ಚಂದ್ರಶೇಖರ ದೇವಾಡಿಗ, ಹರೀಶ್ ಬಂಗೇರ, ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ದಯಾ ಕಿರೋಡಿಯನ್, ಮನೋಹರ ಹೆಗ್ಡೆ, ಜಯಂತ್ ಶೆಟ್ಟಿ , ಕರ್ನಾಟಕ ಸಂಘ ಶಾರ್ಜಾದ ನೋಯೆಲ್ ಅಲ್ಮೇಡಾ, ಸುಗಂದರಾಜ್ ಬೇಕಲ್, ವಿಶ್ವನಾಥ್ ಶೆಟ್ಟಿ, ಕನ್ನಡ ಪಾಠ ಶಾಲೆಯ ಖಜಾಂಚಿ ನಾಗರಾಜ ರಾವ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಓ. ಎಂ .ಜಿ ಮೂವೀಸ್‌ನ ಮಮತಾ ಸೆಂಥಿಲ್, ಗಲ್ಫ್ ಗೆಳತಿಯರು ಬಳಗದ ಮೇಘ ಶೆಟ್ಟರ್, ಸಂಸ್ಕೃತಿ ನೃತ್ಯ ಅಕಾಡೆಮಿಯ ಶ್ರೀಕಾಂತ್ ಬೈಂದೂರ್ ಮತ್ತು ಸ್ವರ ಭ್ರಾಮರಿ ತಂಡದ ಪ್ರೋತ್ಸಾಹಕರಾದ ಸುರೇಶ್ ಶೆಟ್ಟಿ, ಮಹೇಶ್ ಅತ್ತಾವರ, ಅಶೋಕ್ ಅಂಚನ್, ಯಶ್ ಕರ್ಕೇರ, ಪ್ರತಾಪ್ ಶೆಟ್ಟಿ, ಆನಂದ್ ಪಿ., ಅಮರ್ ನಂತೂರ್, ಮನೋಜ್ ಕುಲಾಲ್, ಚೇತನ್ ಗೌಡ ಹಾಗೂ ಚಂದ್ರಗೌಡ ಲೋಕಾರ್ಪಣೆಗೈದರು.
ಈ ಸಂದರ್ಭದಲ್ಲಿ ಯುಎಇಯಲ್ಲಿ ನೆಲೆಸಿರುವ ಕನ್ನಡದ ಮಕ್ಕಳಿಗೆ ಗೀತ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಸೀನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ 25ಕ್ಕೂ ಹೆಚ್ಚು ಕರ್ನಾಟಕ ಮೂಲದ ಪುಟಾಣಿ ಹಾಡುಗಾರರು ಭಾಗವಹಿಸಿದ್ದರು. ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಸಂಗೀತ ಕಲಾವಿದೆ ವಿದುಷಿ ಸುಮಾ ನಾರಾಯಣ್, ವಿದುಷಿ ಮಧುರ ವಿಶ್ವನಾಥ್ ಮತ್ತು ರಜನೀಶ್ ಅಮೀನ್ ಅವರು ಭಾಗವಹಿಸಿದರು.
ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಹಾದ್ಯುತ್ ಕೌಶಿಕ್, ದ್ವಿತೀಯ ಸ್ಥಾನವನ್ನು ಅನಿರುಧ್ ರಾವ್, ತೃತೀಯ ಬಹುಮಾನವನ್ನು ಆರಾಧನಾ ಭಟ್ ಮತ್ತು ಸಮಾಧಾನಕರ ಬಹುಮಾನಗಳನ್ನು ಆರ್ಯ ಐತಾಳ್ ಮತ್ತು ಧ್ಯಾನ್ ಗಣೇಶ್ ಅವರು ಪಡೆದುಕೊಂಡರು. ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಲವಲೀನಾ ಸಂದೀಪ್, ದ್ವಿತೀಯ ಸ್ಥಾನವನ್ನು ಸನ್ನಿಧಿ ಶೆಟ್ಟಿ, ತೃತೀಯ ಸ್ಥಾನವನ್ನು ಶನಲ್ ಲೋಬೊ, ಸಮಾಧಾನಕರ ಬಹುಮಾನವನ್ನು ಶಾನೋನ್ ರುತ್ ವಾಸ್ ಹಾಗೂ ಧ್ರುವ ಬಾಳಿಗಾ ಪಡೆದುಕೊಂಡರು.
ಸ್ವರ ಭ್ರಾಮರಿ ವತಿಯಿಂದ ಯುವರಾಜ್, ಪ್ರತಿಮಾ ಯುವರಾಜ್ ಹಾಗೂ ಅವರ ಜತೆ ಸೌಮ್ಯ ಸುರೇಶ್ ಶೆಟ್ಟಿ, ಯಶೋಧ ಮಹೇಶ್, ದಿವ್ಯಾ ಪ್ರತಾಪ್ ಶೆಟ್ಟಿ, ವಿನುತಾ ಆನಂದ್ ಹಾಗೂ ಡಯಾನಾ ಯಶ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದ ಆರತಿ ಅಡಿಗರನ್ನು ಗೌರವಿಸಿ ಸಮ್ಮಾನಿಸಿದರು. ಗೋಲ್ಡನ್ ಸ್ಟಾರ್ಷ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್‌ನ ವಿದ್ಯಾರ್ಥಿಗಳು ವೈವಿಧ್ಯಮಯ ಸಿನೆಮೀಯ ನೃತ್ಯಗಳನ್ನು ಮತ್ತು ಸಂಸ್ಕೃತಿ ನೃತ್ಯ ಅಕಾಡೆಮಿ, ಶಾಸ್ತ್ರೀಯ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದರು. ಯುವರಾಜ್ ದೇವಾಡಿಗ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.