Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ


Team Udayavani, Sep 8, 2024, 8:20 AM IST

1-teachers-day

ಗುರುಸಹಿತ ವಿದ್ಯೆ ಕಲಿತು, ಜಗದ್ಗುರು ಶ್ರೀಕೃಷ್ಣನ ಪರಮ ಸ್ನೇಹಿತನೂ ಆಗಿ, ಭಗವದ್ಗೀತೆಗೆ ಕಾರಣನಾದವನು ಒಬ್ಬ. ಗುರುರಹಿತನಾಗಿ ವಿದ್ಯೆ ಕಲಿತು ಅರ್ಜುನನಿಗೇ ಬೆನ್ನಲ್ಲಿ ಚಳಿ ಹುಟ್ಟಿಸಿದವನು ಏಕಲವ್ಯ.  ಗುರುಸಹಿತನಾಗಿ ವಿದ್ಯೆ ಕಲಿಯಲು

ತಾ ಸುಳ್ಳಾಡಿ ವಿದ್ಯೆ ಕಲಿತು, ನೋವನ್ನು ಅವುಡುಗಚ್ಚಿ  ಸಹಿಸಿಕೊಂಡೂ  ಶಾಪಗ್ರಸ್ತನಾದವನು ರಾಧೇಯ.

ಸೆಪ್ಟಂಬರ್‌ 5, ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನುಮದಿನ. ಸ್ವತಂತ್ರ ಭಾರತದ ಎರಡನೇಯ ರಾಷ್ಟ್ರಪತಿ. ಶಿಕ್ಷಣದ ಬಗ್ಗೆ ಅತೀವ ಗೌರವ ಮತ್ತು ಶಿಕ್ಷಣ ವ್ಯವಸ್ಥೆಯ ಬಗ್ಗೆ ಅತೀವ ಕಾಳಜಿ. ಭಾರತದ ಅಗ್ರಗಣ್ಯ ಶಿಕ್ಷಕರಲ್ಲಿ ಒಬ್ಬರಾಗಿರುವವರು ನಮ್ಮ ಡಾ| ರಾಧಾಕೃಷ್ಣನ್‌.  ಭಾರತ ರತ್ನ ಪ್ರಶಸ್ತಿ ವಿಜೇತರು ಎಂಬುದು ಹೆಗ್ಗಳಿಕೆಯ ವಿಷಯ. ಬ್ರಿಟನ್‌ ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾನಿಲಯ ಡಾಕ್ಟರೇಟ್‌ ಮತ್ತು ಅಮೆರಿಕದ ಹಾವರ್ಡ್‌ ವಿಶ್ವವಿದ್ಯಾನಿಲಯಗಳ ಡಾಕ್ಟರೇಟ್‌ ಪದವಿಗಳು ಮತ್ತು ಭಾರತೀಯ ವಿದ್ಯಾಭವನ “ಬ್ರಹ್ಮ ವಿದ್ಯಾ ಭಾಸ್ಕರ’ಗಳು ಅವರಿಗೆ ಸಂದ ಒಂದೆರಡು ಬೃಹತ್‌ ಬಿರುದುಗಳು.  ಇಂಥಾ ಅತ್ಯದ್ಭುತ ಸಾಧನೆಗಳ ಸರದಾರರನ್ನು ನೆನಪಿಸಿಕೊಳ್ಳಲು, ಅವರ ಜನ್ಮದಿನವನ್ನು ಭಾರತಾದ್ಯಂತ “ಶಿಕ್ಷಕರ ದಿನ’ವನ್ನಾಗಿ ಆಚರಿಸಲಾಗುತ್ತದೆ.  ಇವರು ನಮ್ಮನ್ನು ಅಗಲಿಯೇ 49 ವರ್ಷಗಳು ಆಗಿವೆ, ಆದರೂ ಇಂದಿಗೂ ಜನಮನದಲ್ಲಿ ಇವರ ಹೆಸರು ಅಜರಾಮರವಾಗಿದೆ.

* * *

ಮೊದಲಿಗೆ ಕೊಂಚ ಭಿನ್ನ ಮಾತು. ವಿಪರೀತ ಜ್ಞಾನವುಳ್ಳವರಲ್ಲಿ ಕೆಲವರದ್ದು ತಡೆಯಲಾಗದ ಓಘ, ಹಲವರದ್ದು ಶುರುವೇ ಆಗದ ವೇಗ.  ತಮ್ಮಲ್ಲಿರುವ ಜ್ಞಾನವನ್ನು ಹಂಚಿಕೊಳ್ಳುವ ತುಡಿತ ಕೆಲವರದ್ದು, ತಮ್ಮ ಜ್ಞಾನ ಪ್ರದರ್ಶನ ಮಾಡುವ ತುಡಿತ ಕೆಲವರದ್ದು. ಎಷ್ಟು ಹಂಚಿಕೊಳ್ಳಬೇಕೋ ಅಷ್ಟು ನೀಡುವ ಜ್ಞಾನಿಗಳು ಕೆಲವರಾದರೆ, ಎಷ್ಟು ಹೇಳಿದರೆ ಸಾಕಾಗಬಹುದು ಎಂಬುದನ್ನೂ ತುಲನೆ ಮಾಡಲಾಗದೇ ಒದ್ದಾಡುವವರು ಹಲವಾರು.  ಈವರೆಗೆ ಹೇಳಿದ್ದು ನೂರಾರು ವಿಚಾರ ಗಳು.  ಇವೆಲ್ಲದರ ಹಿಂದೆ ಒಂದು ಸಾಮಾನ್ಯ ಅಂಶವಿದೆ. ಅದೇ ಇಂದಿನ ವಿಚಾರ ವಿನಿಮಯ – ಶಿಕ್ಷಣ.

* * *

ಗುರುಸಹಿತ ವಿದ್ಯೆಗೂ, ಗುರುರಹಿತ ವಿದ್ಯೆಗೂ ಬಹಳ ವ್ಯತ್ಯಾಸವಿದೆ.  ಸಹಿತ ಎಂದಾಗ ಅದು ಸ-ಹಿತ ಎಂಬುದಾಗುತ್ತದೆ.  ಅಂದಿನ ದಿನಗಳನ್ನೇ ತೆಗೆದುಕೊಂಡರೆ ವಿದ್ಯೆಯ ಕಲಿಕೆಯೊಂದಿಗೆ ಆಶ್ರಮದ ದಿನನಿತ್ಯದ ಕೆಲಸಗಳಲ್ಲೂ ವಿದ್ಯಾರ್ಥಿಗಳು ಭಾಗಿಯಾಗುತ್ತಿದ್ದರು. ವಿದ್ಯೆ ಪೂರ್ಣವಾಯ್ತು ಎಂದಾಗ ಅದು ಕೇವಲ ಡಿಗ್ರಿ ಸರ್ಟಿಫಿಕೇಟ್‌ ಕೈಗೆ ಬಂತು ಎಂದಾಗದೇ, ತಾವೇ ಬದುಕಿ ಬಾಳುವ ಅಥವಾ ಸಂಸಾರ ಕಟ್ಟಿಕೊಂಡು ಬಾಳ್ವೆ ನಡೆಸುವಷ್ಟು ತಯಾರಾಗಿರುತ್ತಾರೆ. ಸಹಿತ ಎಂದಾಗ ಅದೊಂದು ಪೂರ್ಣಪ್ರಮಾಣದ ವಿದ್ಯೆಯ ಕಲಿಕೆ ಎಂದಾಗುತ್ತದೆ. ಇಂದಿನ ದಿನಗಳಲ್ಲಿ ಆಶ್ರಮ ಪದ್ಧತಿ ಇಲ್ಲದಿದ್ದರೂ, ಒಂದು ತರಗತಿಯಲ್ಲಿ ಕೂತು ಕಲಿವ ಪದ್ಧತಿಯಂತೂ ಇದ್ದೇ ಇದೆ. ಶಿಕ್ಷಕರ ಜತೆಗಿನ ನಿಕಟ ಗುರು-ಶಿಷ್ಯ ಸಂಬಂಧವನ್ನು ಹೊಂದಿ ಕಲಿಕೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶವಂತೂ ಸದಾ ಇದ್ದೇ ಇರುತ್ತದೆ.  ಗುರು ಸಹಿತ ವಿದ್ಯೆ ಕಲಿಕೆಯಲ್ಲಿ ಶಿಸ್ತು ಎಂಬುದು ಮೊದಲ ಕಲಿಕೆಯಾದರೆ ನಿಷ್ಠೆ ಎಂಬುದು ಅದರ ನೆರಳಾಗಿರುತ್ತದೆ.

* * *

ಅಂದಿನ ದಿನಗಳೇ ಅಲ್ಲದೇ ಇಂದಿಗೂ, ಎಂದಿಗೂ ಸಲ್ಲುವ ಮಾತು ಎಂದರೆ “ವಿದ್ಯಾ ದದಾತಿ ವಿನಯಂ’.  ಅಂದು ಕೂಡಾ ಅಷ್ಟೇ, ವಿದ್ಯೆ ಪೂರ್ಣವಾಯ್ತು, ಗುರುದಕ್ಷಿಣೆಯೂ ನೀಡಲಾಯ್ತು, ಮುಂದಿನ ದಾರಿಯನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಯು ಆಶ್ರಮವನ್ನು ಬಿಟ್ಟು ಹೊರಟ ಮೇಲೂ ಕಲಿಕೆಯು ಪೂರ್ಣವಲ್ಲ.  ಕಲಿಕೆಯಿಂದ ವಿದ್ಯೆ ಪೂರ್ಣವಾದರೂ ನಾವೇ ರೂಢಿಸಿಕೊಳ್ಳಬೇಕಾದುದು ವಿನಯ. ಆಶ್ರಮವಾಸ ಮುಗಿಸಿದ ವಿದ್ಯಾರ್ಥಿ, ಕಾಲೇಜು ಮುಗಿಸಿ, ಹೊರಬಂದ ವಿದ್ಯಾರ್ಥಿ ಹೀಗೆ ಸನ್ನಿವೇಶ ಏನೇ ಆಗಲಿ, ವಿದ್ಯೆಯ ಉಪಯೋಗವನ್ನು ಸಾರ್ಥಕಗೊಳಿಸುವ ಹಂತದಲ್ಲೇ ಮೂಡುವುದು ಅಹಂಕಾರ ಅಥವಾ ವಿನಯ.  ಎಲ್ಲಬಲ್ಲ ಜ್ಞಾನಿ ಎಂದುಕೊಂಡು ವ್ಯಾವಹಾರಿಕ ಲೋಕಕ್ಕೆ ಕಾಲಿಟ್ಟಾಗ ಅಹಂಕಾರ ಆವರಿಸುತ್ತದೆ ಎಂಬುದು ಅರಿವಾಗುತ್ತದೆ.  ಕಲಿತಿದ್ದು ಸಾಗರದ ಒಂದು ಬಿಂದು, ಇನ್ನೂ ಕಲಿಯಲಿಕ್ಕಿದೆ ಎಂದುಕೊಳ್ಳುವುದೇ ವಿನಯ. ಅದರಂತೆ ನಡೆದುಕೊಂಡಾಗ ವಿನಯವೇ ರೂಢಿಯಾಗುತ್ತದೆ.

* * *

ಗುರುರಹಿತ ವಿದ್ಯೆಯ ಆಳ-ಅಗಲ ವಿಪರೀತ.  ಗುರುಸಹಿತ ಇದ್ದರೂ ಅರ್ಜುನನಿಗೆ ತಾನೇ ಶ್ರೇಷ್ಠ ಎಂಬುದು ಇತ್ತು.  ಗುರುವನ್ನೇ ಮೀರಿಸಿದ ಶಿಷ್ಯ ಎಂದು ಅವನ ತಲೆ ಹೊಕ್ಕಿತ್ತೋ ಏನೋ ಗೊತ್ತಿಲ್ಲ ಆದರೆ ಬೇರೆಯವರನ್ನು ಮುಂದೆ ಬರಲು ಅಡ್ಡಿಯಾಗುತ್ತಿದ್ದ ಎಂಬ ಮಾತು ಕೂಡ ಹೆಚ್ಚಿನ ಹೇಳಲಾಗಿದೆ.  ನೋಡಿದವರಾರು? ಗುರುರಹಿತ ವಿದ್ಯೆ ಕಲಿತವ ಏಕಲವ್ಯ. ಬಹುಶ: ಮೊದಲ ಆನ್‌ಲೈನ್‌ ವಿದ್ಯಾರ್ಥಿ.  ವಿದ್ಯೆ ಕಲಿತಿದ್ದರೂ ಅದಕ್ಕೊಂದು ಸರ್ಟಿಫಿಕೇಟ್‌ ಇರಲಿಲ್ಲ.  ಇಷ್ಟು ಕಲಿತಿದ್ದಾನೆ ಎಂದು ತಿಳಿಸುವ ಅಥವಾ ಅವನೇ ತಿಳಿದುಕೊಳ್ಳುವ ಮಾನದಂಡ ಅಲ್ಲಿರಲಿಲ್ಲ. ತಾ ಕಲಿತಿದ್ದೇ ವಿದ್ಯೆ ಎಂಬ ಸ್ಥಿತಿ ಅವನದ್ದು. ಕಚ್ಚಾ ವಿದ್ಯೆ ಅವನದ್ದು ಅದಕ್ಕೊಂದು ನಿರ್ದಿಷ್ಟ ರೂಪುರೇಖೆಗಳನ್ನು ನೀಡಲು ಗುರು ಇರಲಿಲ್ಲ. ಗುರುಸ್ಥಾನದಲ್ಲಿರುವ ಸ್ನೇಹ ವಲಯವೂ ಅಲ್ಲಿರಲಿಲ್ಲ.  ಬಹುಶ: ಪೂರ್ಣಪ್ರಮಾಣದ ಗುರುರಹಿತ ವಿದ್ಯೆ ಅವನದ್ದು. ಹಾಗಿದ್ದರೆ ಸ್ವಂತ ಕಲಿಕೆ ಯೋಗ್ಯವೇ? ಅಲ್ಲವೇ? ಚಿಂತನೆ ಮಾಡಿ ಹಂಚಿಕೊಳ್ಳಿ.

* * *

ಮಹಾಭಾರತದ ವಿಚಾರವನ್ನೇ ತೆಗೆದುಕೊಂಡರೆ ಗುರುಸಹಿತ ವಿದ್ಯೆ ಕಲಿತು, ಜಗದ್ಗುರು ಶ್ರೀಕೃಷ್ಣನ ಪರಮ ಸ್ನೇಹಿತನೂ ಆಗಿ, ಭಗವದ್ಗೀತೆಗೆ ಕಾರಣನಾದವನು ಒಬ್ಬ.  ಗುರುರಹಿತನಾಗಿ ವಿದ್ಯೆ ಕಲಿತು ಅರ್ಜುನನಿಗೇ ಬೆನ್ನಲ್ಲಿ ಚಳಿ ಹುಟ್ಟಿಸಿದವನು ಏಕಲವ್ಯ.  ಗುರುಸಹಿತನಾಗಿ ವಿದ್ಯೆ ಕಲಿಯಲು ತಾ ಸುಳ್ಳಾಡಿ ವಿದ್ಯೆ ಕಲಿತು, ನೋವನ್ನು ಅವುಡುಗಚ್ಚಿ ಸಹಿಸಿಕೊಂಡೂ  ಶಾಪಗ್ರಸ್ತನಾದವನು ರಾಧೇಯ.  ಇವರಾರ ವಿಚಾರ ದಲ್ಲೂ ಹೋಲಿಕೆಗೂ ನಿಲುಕದ ವಿದ್ಯಾರ್ಥಿಗಳು ಇನ್ನಿಬ್ಬರು.  ತಮ್ಮ ಗುರುಗಳಿಗೆ ಗುರುದಕ್ಷಿಣೆ ರೂಪದಲ್ಲಿ ಅವರ ಮಗನನ್ನು ರಕ್ಕಸನ ಹಿಡಿತದಿಂದ ರಕ್ಷಿಸಿ ತಂದೊಪ್ಪಿಸಿದ ಕಥೆಯು ಭಾಗವತದಲ್ಲಿದೆ. ಆ ವಿದ್ಯಾರ್ಥಿಗಳು ಯಾರು ಎಂಬುದನ್ನು ಹೇಳಲೇಬೇಕಿಲ್ಲ ಅಲ್ಲವೇ? ಅವರೇ ಕೃಷ್ಣ-ಬಲರಾಮರು.

* * *

ಇಂದಿನ ದಿನಗಳಲ್ಲಿ ಗುರುರಹಿತ ವಿದ್ಯೆಗಳು ನಾನಾ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಒಂದಷ್ಟು ಹಾಸ್ಯ ಸನ್ನಿವೇಶಗಳು ನಿಮ್ಮ ಮುಂದೆ. ಇತ್ತೀಚಿನ ಕೆಲವು ವರ್ಷಗಳ ಹಿಂದಿನ ಮಾತು. ಒಂದು ಸೋಂಬೇರಿ ಜನಾಂಗದ ಮೆಸೇಜ್‌ ಎನ್ನಬಹುದು. HBD, SRK ಅಂತ.  happy birthday ಎಂದು ಹೇಳಲೂ ಸಮಯದ ಅಭಾವವೋ ಅಥವಾ ತ್ವರಿತ ಎಂಬುದರ ಉದಾಹರಣೆಯೂ ಗೊತ್ತಿಲ್ಲ ಆದರೆ ಬಾಯ್ತುಂಬಾ ಅಥವಾ ಕೈತುಂಬಾ Happy Birthday / ಹುಟ್ಟು ಹಬ್ಬದ ಶುಭಾಶಯಗಳು ಎಂದೂ ಹೇಳಲಾಗದಷ್ಟು ಹಿಂದುಳಿದಿದೆ ಮುಂದುವರೆದ ಜನಾಂಗದ ಜ್ಞಾನ.

* * *

ಇರಲಿ, ವಿಷಯ ಅದಲ್ಲ.  ಇದರ ಹಿಂದೆಯೇ ಹಲವಾರು ಮೆಸೇಜ್‌’ಗಳು ಕೂಡ HBD ಅಂತ. ಯಾರಿಗೂ ಗೊತ್ತಿಲ್ಲ, ಯಾರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ ಅಂತ. ಕೆಲವೊಮ್ಮೆ ಕಟ್ಟುಪಾಡು ಎಂಬಂತೆ ವರ್ತನೆ. ಅನಂತರ ಅಲ್ಲೊಂದು ಕೂಗು ಎದ್ದಿತು “SRK birthday” ನವೆಂಬರ್‌ಎರಡನೆಯ ತಾರೀಖು ಅಲ್ವಾ?  ಗೂಗಲ್‌ ಮಾಡಿ ಚಿತ್ರ ಕಳುಹಿಸಿದ ಮಗದೊಬ್ಬ ಜ್ಞಾನಿ.  ಮತ್ತೋರ್ವ ಕನ್ನಡ ಪ್ರೇಮಿ ಹೇಳಿದ್ದು ಜುಲೈ 12 ಅಂತ. ಒಂದೆರಡು ಘಂಟೆಗಳ ಅನಂತರ ಮೊದಲ ಮೆಸೇಜ್‌ ಕಳಿಸಿದಾತ ಉವಾಚ “ಸಾರೀ ಫ್ರೆಂಡ್ಸ್‌, ನಾನು ನಿಮಗೆ forward ಮಾಡಿದ ಮೆಸೇಜ್‌ ಅದು. ಆಮೇಲೆ ನನಗೂ ಡೌಟ್‌ ಬಂತು ಅಂತ.  ಇಲ್ಲಿ ಯಾರದ್ದೂ ತಪ್ಪಿಲ್ಲ. ಆಯಾ ಸಂದರ್ಭದಲ್ಲಿ ಅವರ ಮನಸ್ಸಿಗೆ ಬಂದಿದ್ದು ಹೊರಬಂದಿತ್ತು ಅಷ್ಟೇ.

* * *

ಇಲ್ಲಿ ಆಗಿದ್ದೇನು? ಅದಾರು ಮೊದಲ ಮೆಸೇಜ್‌ ಸೃಷ್ಟಿಸಿದ್ದರೋ ಅವರ ಇಂಗಿತ ಇದ್ದಿದ್ದು SRK ಅಂದ್ರೆ ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಗೆ ಶುಭಾಶಯಗಳನ್ನ ತಿಳಿಸಬೇಕು ಅಂತ. ರಾಧಾಕೃಷ್ಣನ್‌ ಅವರಿಗೆ ತಮ್ಮ ಹೆಸರು SRK ಎಂದಾಗಿದೆ ಎಂದು ಅರಿತರೆ ಎಷ್ಟು ನೊಂದುಕೊಂಡಾರು?  ಅಂದಿನ ಕಾಲದಲ್ಲಿ ಇಡುತ್ತಿದ್ದ ಹೆಸರುಗಳು ದೈವನಾಮ ಸ್ಮರಣೆಯಾದಂತೆಯೂ ಇರಲಿ ಎಂಬ ಉದ್ದೇಶ ಹೊಂದಿತ್ತು. ಆ ಅನಂತರದ್ದು ಅರ್ಥಗರ್ಭಿತವಾಗಿದ್ದರೂ ಅಡ್ಡಿಯಿಲ್ಲ ಎಂದಾಯ್ತು.  ಇಂದು ಹೇಗೆ ಎಂದರೆ ಹೆಂಡತಿಯ ಹೆಸರಿನ ಒಂದು ಭಾಗ, ಗಂಡನ ಹೆಸರಿನ ಒಂದು ಭಾಗವೇ ಮಗುವಿನ ಹೆಸರು ಎಂಬಂತೆ ಆಗಿದೆ. “ಶ್ರಾವಣಿಯ ಗಂಡ ಅನಿರುದ್ಧ. ಇವರ ಪ್ರೀತಿಯ ಕುಡಿ ಶ್ರಾದ್ಧ’. ಇದು ಗುರುವಿಲ್ಲದ ವಿದ್ಯೆ. ಆಚರಣೆ ದಿಕ್ಕರಿಸುವ ಪಥದಲ್ಲಿ ಸಾಗಿದ್ದ ಎಡವಟ್ಟು.

* * *

ಇರಲಿ, ಈಗ SRK ಎಂಬ ಎಡವಟ್ಟಿಗೆ ವಾಪಸ್‌ ಬಂದರೆ ಹಲವಾರು ಮಂದಿ ಅಂದುಕೊಂಡಿದ್ದು ಶಾರುಖ್‌ ಖಾನ್‌ ಅಂತ. ಕನ್ನಡ ಪ್ರೇಮಿ ನುಡಿದಿದ್ದು ಶಿವರಾಜ್‌ ಕುಮಾರ್‌ ಅಂತ. ಎಲ್ಲವೂ ಜ್ಞಾನವೇ ಹೌದು. ಆದರೆ ಸಂದರ್ಭೋಚಿತವಲ್ಲ ಅಷ್ಟೇ. ಯಾರೊಬ್ಬರಿಗೂ ಒಮ್ಮೆ ನಿಂತು ಆಲೋಚಿಸುವಷ್ಟು ವ್ಯವಧಾನವಿಲ್ಲ. HBD, SRK, Forward, ಗೂಗಲ್‌ ಮಾಹಿತಿಯೇ ಮೊದಲಾದ ಜ್ಞಾನಗಳು ಇಂದಿಗೆ ಹೇರಳ. ತೂಣೀರದಲ್ಲಿರುವ  ಬಾಣಗಳು ಇವು. ಬಳಸಲು ತಿಳಿಯದ ಬಾಣಗಳು ಕೆಲವಾದರೆ,  ತನಗೇ ತಿಳಿದಿದೆ ಎಂದು ಬಳಕೆಯಾಗುವ ಬಾಣಗಳೇ ಹೆಚ್ಚು.

* * *

ಇಂದಿನ ದಿನಗಳು ಅತೀವ ಮಾಹಿತಿಪೂರ್ಣ ಎಂಬುದು ಸತ್ಯ.  ಎಷ್ಟರ ಮಟ್ಟಿಗೆ ಮಾಹಿತಿಗಳು ಲಭ್ಯ ಎಂದರೆ, ಒಮ್ಮೊಮ್ಮೆ ಯಾವುದು ನಿಜ, ಯಾವುದು ಮಿಥ್ಯ ಎಂಬ ಗೊಂದಲಕ್ಕೆ ಸಿಲುಕುವಷ್ಟು.  ತಪ್ಪು ಮಾಹಿತಿಗಳು, ಗೊಂದಲಭರಿತ  ಮಾಹಿತಿಗಳು ಎಲ್ಲೆಡೆ ಚೆಲ್ಲಾಡಿದೆ. ಶಿಕ್ಷಕರ ದಿನದ  ಈ ಶುಭ ಸಂದರ್ಭದಲ್ಲಿ ನಾವು ತಪ್ಪು ಮಾಹಿತಿಗಳನ್ನು ತಡೆಗಟ್ಟುವುದಕ್ಕೆ ನಾಂದಿ ಹಾಡಬೇಕಿದೆ. ಗೊಂದಲಭರಿತ ಮಾಹಿತಿಗಳಿಗೆ ಅಂತ್ಯ ಹಾಡಬೇಕಿದೆ.  ಶಿಕ್ಷಣ ಎಂಬುದು ಕೇವಲ ಪಠ್ಯಕ್ಕೆ ಮೀಸಲಾಗಬಾರದು ಎಂಬ ಅಭಿಯಾನಕ್ಕೆ ಚಾಲನೆಯಾಗಬೇಕಿದೆ. ಕಲಿಯೋಣ, ಕಲಿಸೋಣ ಮುಖ್ಯವಾಗಿ ಗೌರವಿಸೋಣ.

-ಶ್ರೀನಾಥ್‌ ಭಲ್ಲೆ ,

ರಿಚ್ಮಂಡ್‌

ಟಾಪ್ ನ್ಯೂಸ್

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

Thiruvannamali

Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Nithin-gadkari

Nagpura: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 

Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್ 

Karkala: ನಂದಿಕೂರು-ಕೇರಳ ಹೈಟೆನ್ಷನ್ ವಿದ್ಯುತ್ ತಂತಿ ಯೋಜನೆ ಕಾಮಗಾರಿಗೆ ತಡೆ

Karkala: ನಂದಿಕೂರು-ಕೇರಳ ಹೈಟೆನ್ಷನ್ ವಿದ್ಯುತ್ ತಂತಿ ಯೋಜನೆ ಕಾಮಗಾರಿಗೆ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜರ್ಮನಿಯ ರೈನ್‌-ಮೈನ್‌ ಕನ್ನಡ ಸಂಘ:ಕನ್ನಡ ಕಂಪು, ಕನ್ನಡ ಡಿಂಡಿಮದ ಸಾಂಸ್ಕೃತಿಕ ಹಬ್ಬ

ಜರ್ಮನಿಯ ರೈನ್‌-ಮೈನ್‌ ಕನ್ನಡ ಸಂಘ:ಕನ್ನಡ ಕಂಪು, ಕನ್ನಡ ಡಿಂಡಿಮದ ಸಾಂಸ್ಕೃತಿಕ ಹಬ್ಬ

Moral Story: ಸೋಮಾರಿ ಅರಿತ ಸಮಯದ ಬೆಲೆ

Moral Story: ಸೋಮಾರಿ ಅರಿತ ಸಮಯದ ಬೆಲೆ

Desi Swara: ಅವ – ಇವ ಎಂಬ ಮಾತುಗಳ ಅವಯವ : ಪದಗಳ ವನ್ಯಲೋಕದಲ್ಲಿ

Desi Swara: ಅವ – ಇವ ಎಂಬ ಮಾತುಗಳ ಅವಯವ : ಪದಗಳ ವನ್ಯಲೋಕದಲ್ಲಿ

Desi Swara: ಭಾರತೀಯರಿಂದ ಆಯುರ್ವೇದ ದಿನಾಚರಣೆ

Desi Swara: ಭಾರತೀಯರಿಂದ ಆಯುರ್ವೇದ ದಿನಾಚರಣೆ

Desi Swara: ಮುದ್ದಣ್ಣನ ಶ್ರೀ ರಾಮಾಶ್ವಮೇಧಂ ಪುಸ್ತಕ ಸಮರ್ಪಣೆ

Desi Swara: ಮುದ್ದಣ್ಣನ ಶ್ರೀ ರಾಮಾಶ್ವಮೇಧಂ ಪುಸ್ತಕ ಸಮರ್ಪಣೆ

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

14

Punjalkatte: ಮಳೆಗೆ ಮನೆಯ ಗೋಡೆ ಕುಸಿತ

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

courts

Puttur: ರಸ್ತೆ ಬದಿಯಲ್ಲಿ ಶವ ಇರಿಸಿದ ಪ್ರಕರಣ; ಮೂವರಿಗೆ ಜಾಮೀನು

de

Karkala: ಕೌಟುಂಬಿಕ ಹಿಂಸೆ ಆರೋಪ; ವಿಷ ಸೇವಿಸಿದ್ದ ವಿವಾಹಿತ ಮಹಿಳೆ ಸಾವು

5

Karkala: ಅಪರಿಚಿತ ಬೈಕ್‌ ಸವಾರನಿಂದ ಚಿನ್ನದ ಸರ ಸುಲಿಗೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.