Relationships: ಸಂಬಂಧಗಳಲ್ಲಿ ಮಾಯವಾದ ಸಹಿಷ್ಣುತೆ : ಸಹಿಷ್ಣು ಗುಣದಿಂದಲೇ ಬಾಂಧವ್ಯದ ಪ್ರಗತಿ
ಇಬ್ಬರು ವ್ಯಕ್ತಿಗಳು ಒಡನಾಟ ಪ್ರಾರಂಭವಾದಾಗ ಭಿನ್ನಾಭಿಪ್ರಾಯಗಳು ಸಹಜ
Team Udayavani, Nov 30, 2024, 12:06 PM IST
“ಸಹಿಷ್ಣುತೆ’ ಎಂಬುವುದು ಜೀವಿಗಳ ಗುಣಗಳಲ್ಲೊಂದು. ಎಂತಹ ಕಷ್ಟಕಾಲದಲ್ಲೂ ಧೃತಿಗೆಡದೆ ನಗುನಗುತ್ತಾ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದಾಗಿದೆ. ಇಂದು ಪ್ರತಿಯೊಬ್ಬರೂ ತಮ್ಮ ಕಾಲ ಮೇಲೆ ತಾವು ನಿಂತುಕೊಂಡು ಯಾರು ಏನು ಹೇಳಿದರೇನು? ನಾನು ಮಾಡಿದ್ದೆ ಸರಿ ಎಂಬ ವಿಚಾರ ಮನಸಲ್ಲಿ ಅಚ್ಚೋತ್ತಿದೆ. ಒಬ್ಬರು ಹೇಳುವುದನ್ನು ಸರಿಯಾಗಿ ಕೇಳಿಸಿಕೊಳ್ಳುವಷ್ಟೂ ತಾಳ್ಮೆ ಇಲ್ಲದ ಈ ಕಾಲದಲ್ಲಿ ಇನ್ನು ಹೇಳುವುದನ್ನು ಪಾಲಿಸುವುದು ದೂರದ ಸಂಗತಿ.
ಯಾವುದೇ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಒಡನಾಟ ಪ್ರಾರಂಭವಾದಾಗ ಭಿನ್ನಾಭಿಪ್ರಾಯಗಳು ಸಹಜವಾದರೂ ಕೂಡ ಆ ಇಬ್ಬರು ಅನುಭವಿಕರಾಗಿದ್ದರೆ ಆ ಗಳಿಗೆಯಲ್ಲಿ ಮತ್ತೂಬ್ಬರು ಏನೆ ಹೇಳಿದರೂ ಸರಿ ಆಯಿತು ಎಂದು ಸುಮ್ಮನಾಗುತ್ತಾರೆ. ಆದರೆ ಸಹಿಷ್ಣುತೆ ಇಲ್ಲದವರು, ಯಾಕೆ ಹೀಗೇಕೆ , ಹಾಗೇಕೆ ಎಂದು ಮೂಗು ತೂರಿಸಿ ನಮಗೆ ನೀವು ಹೇಳುವುದರಲ್ಲಿ ಆಸಕ್ತಿಯೇ ಇಲ್ಲ ಎಂದು ಸಾಬೀತುಪಡಿಸುತ್ತಾರೆ. ಇದರಿಂದ ಒಂದು, ಹೇಳುವವರಿಗೆ ಬೇಸರ, ಅಪಮಾನವಾಗುತ್ತದೆ. ಇನ್ನೊಂದು ಹೇಳಿದ್ದನ್ನು ಕೇಳದೇ ತಮ್ಮದೇ ಸರಿ ಎಂದು ಅದನ್ನೇ ಪಾಲಿಸಿ ಮುಂದಿನ ಪೀಳಿಗೆಗೂ ಅದನ್ನೇ ಮುಂದುವರೆಸಿ ಮೌಲ್ಯಗಳನ್ನು ಮರೆಯುವಂತ ಪರಿಸ್ಥಿತಿ ಉಂಟಾಗುತ್ತದೆ.
ಈ ರೀತಿಯ ಅಸಹಿಷ್ಣುತೆಯನ್ನು ನಾವು ಎಲ್ಲೆಲ್ಲಿ ನೋಡಬಹುದೆಂದರೆ, ಪತಿ-ಪತ್ನಿಯರಲ್ಲಿ. ಅಸಹಿಷ್ಣುತೆ ಎಂಬುವುದು ಪತಿ – ಪತ್ನಿಯರಲ್ಲಿ ತುಂಬಾ ಹೇರಳವಾಗಿ ಕಂಡು ಬರುತ್ತಿದೆ. ಪತಿ ಹೇಳುವುದು ಪತ್ನಿಗೆ ಸರಿಹೋಗುವುದಿಲ್ಲ. ಪತ್ನಿ ಹೇಳುವುದು ಪತಿಗೆ ಸರಿಹೋಗುವುದಿಲ್ಲ. ಹಾಗೇನಾದರೂ ಸರಿ ಹೋದರೆ ಅವರು ಕಡಿಮೆಯೆಂದರೂ 10 ವರ್ಷಗಳ ಕಾಲ ಒಟ್ಟಿಗೆ ಕಳೆಯುತ್ತಾರೆ. ಇಲ್ಲದೆ ಹೋದಲ್ಲಿ ಕೆಲವೇ ತಿಂಗಳುಗಳಲ್ಲಿ ಅಥವಾ ವರ್ಷಗಳಲ್ಲಿ ವಿಚ್ಛೇದನ ನೀಡಿ ಅವರವರ ಪಾಡಿಗೆ ಅವರಿರುತ್ತಾರೆ. ಹಾಗಾಗಿ ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರಲ್ಲಿ ಚಿಕ್ಕ ವಯಸ್ಸಿನ ಜೋಡಿಯಿರಲಿ, ದೊಡ್ಡ ವಯಸ್ಸಿನ ಜೋಡಿಯಿರಲಿ ವಿಚ್ಛೇದನ ಎಂಬುದು ಸರ್ವೇ ಸಾಮಾನ್ಯವಾಗಿ ಹೋಗಿದೆ.
ಪೋಷಕರು-ಮಕ್ಕಳು
ಇಂದಿನ ಮಕ್ಕಳಲ್ಲಿ ಸಹಿಷ್ಣುತೆ ಎಂಬುದು ಇಲ್ಲವೇ ಇಲ್ಲ ಎಂದು ಹೇಳಬಹುದು. ಪೋಷಕರು ಏನೆ ಹೇಳಿದರೂ ಎದುರುತ್ತರ ಕೊಡುವುದು, ಅದನ್ನು ಪಾಲಿಸದೇ ಇರುವುದು. ಏನೇ ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ಇರುವುದು. ಹಾಗಾಗಿ ಜೀವನದ ಮೌಲ್ಯಗಳು ತುಂಬಾ ಕಡಿಮೆಯಾಗುತ್ತ ಹೋಗುತ್ತಿವೆ. ಪೋಷಕಾರಿ ಯಾವುದೇ ಒಳ್ಳೆಯ ಅಭ್ಯಾಸವನ್ನು ಮಕ್ಕಳಿಗೆ ಕಲಿಸಬೇಕಾದರೆ, ಮಕ್ಕಳೂ ಕೂಡ ಅದಕ್ಕೆ ಸಹಕರಿಸಬೇಕು.
ಶಿಕ್ಷಕರು – ಮಕ್ಕಳು
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ದಾಸರು ಹೇಳಿದರೆ ಇಂದಿನ ಮಕ್ಕಳು ಗುರುಗಳನ್ನೇ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುವ ಕಾಲ ಬಂದಿದೆ. ಗುರುಗಳಿಗೆ ಗೌರವ ಆದರಗಳನ್ನು ಸಲ್ಲಿಸುವ ಬದಲು ಗುರುಗಳನ್ನು ಕಾರ್ಮಿಕರಂತೆ ನೋಡುತ್ತಾರೆ. ಹಾಗಾದರೆ ಗುರು-ಶಿಷ್ಯ ಸಂಬಂಧ ಗಟ್ಟಿಯಾಗುವ ಮೊದಲು ಸಂಬಂಧವೇ ಇಲ್ಲ ಎನ್ನುವ ಹಾಗೆ ಆಗಿಬಿಡುತ್ತದೆ. ಇಂದಿನ ಮಕ್ಕಳು ತಮಗೆ ಏನೆ ಮಾಹಿತಿ ಬೇಕಾದರೂ ಗೂಗಲ್ ನಲ್ಲಿ ಸಿಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ಗುರುಗಳಿಗೆ ಏನೂ ಗೊತ್ತಾಗುವುದಿಲ್ಲವೆಂದು ಹೀಯಾಳಿಸಿ ತಮಗೆಲ್ಲ ಗೊತ್ತು ಎಂಬ ಅಹಂಕಾರದಿಂದ ಮೆರೆಯುತ್ತಾರೆ.
ಗೆಳೆತನ
ಮುಂಚೆ ಗೆಳೆಯರೆಂದರೆ ತಮ್ಮ ಮನಸ್ಸಿನಲ್ಲಿರುವ ಎಲ್ಲ ವಿಷಯವನ್ನು ಹಂಚಿಕೊಂಡು ಏನೆ ತೊಂದರೆಗಳಿದ್ದರೂ ಗೆಳೆಯರ ಅಭಿಪ್ರಾಯ ಮತ್ತು ಸಹಾಯ ಕೇಳುತ್ತಿದ್ದರು. ಗೆಳೆಯರೂ ಕೂಡ ತಾಳ್ಮೆಯಿಂದ ಸಮಸ್ಯೆಯನ್ನು ಆಲಿಸಿ ಅದಕ್ಕೆ ಪರಿಹಾರ ಸೂಚಿಸುತ್ತಿದ್ದರು. ಈಗ ಗೆಳೆಯರ ಮಾತುಗಳನ್ನು ಕೇಳುವ ಸೌಜನ್ಯವಿಲ್ಲದೆ ಅವರನ್ನೇ ತೆಗಳಿ ಅವರ ಮೇಲೆ ನಕ್ಕು ಅವರಿಗೆ ನೋವುಂಟು ಮಾಡುವವರಿದ್ದಾರೆ.
ಸಹೋದರ ಸಹೋದರಿಯರಲ್ಲಿ
ಒಂದೇ ಮನೆಯಲ್ಲಿ ದಾಯಾದಿಗಳಿದ್ದರೆ ಪ್ರತೀ ದಿನವೂ ಒಂದಿಲ್ಲ ಒಂದು ಸಮಸ್ಯೆ ಇದ್ದೆ ಇರುತ್ತದೆ. ದಾಯಾದಿಗಳಲ್ಲಂತೂ ಸಹಿಷ್ಣುತೆ ಎಂಬ ಪದ ಅತೀ ಕಡಿಮೆಯಾಗಿ ಬಳಕೆಯಾಗುತ್ತದೆ. ಇವರಲ್ಲಿ ಸ್ವಲ್ಪ ಜಾಣತನವನ್ನು ಉಪಯೋಗಿಸುವವರು ಹೇಗೋ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಆಗದೆ ಇರುವವರು ಅವರು ಹೇಳಿದ್ದನ್ನು ಇಷ್ಟವಿರದಿದ್ದರೂ ಕೇಳುತ್ತಾರೆ.
ಸಹೋದ್ಯೋಗಿಗಳಲ್ಲಿ
ಸಹೋದ್ಯೋಗಿಗಳಲ್ಲಿ ಕೆಲವರು ಶಾಂತಿಪ್ರಿಯರಾದರೆ ಕೆಲವರು ಬೆಂಕಿಯನ್ನು ಹಚ್ಚುವರಿರುತ್ತಾರೆ. ಸ್ಪರ್ಧಾತ್ಮಕ ಮನೋಭಾವ ಅಥವಾ ವಾತಾವರಣದಲ್ಲಿ ಸಹಿಷ್ಣುತೆ ಎಬುದು ವಿರಳವಾಗಿದೆ. ಒಬ್ಬರ ಮಾತು ಕೇಳುವುದು ಬೇರೆ ವಿಷಯ ಏನಾದರೂ ಹೇಳಿದರೆ ನಿರ್ಲಕ್ಷಿಸುವುದು ಸಾಮಾನ್ಯವಾದ ವಿಷಯ.
ಅಕ್ಕ-ಪಕ್ಕದ ಮನೆಯವರಲ್ಲಿ
ನಾವು ಜೀವಿಸುವ ಮನೆಯಲ್ಲಿ ಶಾಂತಿಯಿರಬೇಕು. ಆದರೂ ಕೂಡ ಒಂದಿಲ್ಲ ಒಂದು ಕಾರಣದಿಂದ ಜಗಳಗಳು ಆಗುತ್ತಿರುತ್ತವೆ. ಇಲ್ಲಿ ಪ್ರತಿಯೊಬ್ಬರೂ, ಹಿಂದೆ ಮಾತನಾಡದೆ ಮುಂದೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ.
ಅಪರಿಚಿತರಲ್ಲಿ
ಪರಿಚಿತರಿದ್ದರೂ ಒಂದೂ ಮಾತು ಕೇಳದ ಈ ಕಾಲದಲ್ಲಿ ಅಪರಿಚಿತರು ಕೇಳುವುದು ದೂರದ ಮಾತು. ಅಲ್ಲಿ ಯಾವುದೇ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಮಾತನಾಡದೆ ಜಗಳ ಮಾಡಿ ಒಬ್ಬರನ್ನೊಬ್ಬರು ನೋಡದೆ ಇರುವುದಕ್ಕಿಂತ ಅಲ್ಪ ಸ್ವಲ್ಪ ಮಾತನಾಡುತ್ತಿರುವುದು ಒಳ್ಳೆಯದು. ಹಾಗಾದಲ್ಲಿ ಅವರು ನಮ್ಮ ಕಷ್ಟಕಾಲದಲ್ಲಿ ಸಹಾಯಕ್ಕೆ ಮುಂದೆ ಬರುತ್ತಾರೆ.
ಹೀಗೆ ಹತ್ತು ಹಲವಾರು ಕಡೆಗೆ ಸಹಿಷ್ಣುತೆ ಎಂಬುದು ಮಾಯವಾಗಿದೆ. ಈ ಸಹಿಷ್ಣುತೆಯನ್ನು ಬೆಳೆಸಬೇಕಾದರೆ ನಾವೆಲ್ಲ ಮುಂದಿನ ಪೀಳಿಗೆಗೆ ಧಾರೆ ಎರೆಯಲೇಬೇಕು. ಬನ್ನಿ ಸಹಿಷ್ಣುಗಳಾಗಿ ಸಹಿಷ್ಣುತೆ ಬೆಳೆಸೋಣ.
*ಜಯಾ ಛಬ್ಬಿ, ಮಸ್ಕತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explainer: Karnatakaದಿಂದ ಕಕ್ಷೆಗೆ-ಬಾಹ್ಯಾಕಾಶದಲ್ಲಿ ಡಾಕಿಂಗ್ ಕಸರತ್ತು…ISRO ಸಾಹಸ
Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ
Cool Moon: ಇದು ಚಂದ್ರನ ಕೂಲ್ ಅವತಾರ: ಚಂದಮಾಮ ಬಾರೋ ಚಕ್ಕುಲಿ ಮಾಮ ಬಾರೋ
ನೂರು ವರ್ಷ ಬದುಕುತ್ತೇನೆ ಎಂಬುದು ಗಮ್ಯವೇ?…ಎಲ್ಲದರ ಗಮ್ಯ ಒಂದೇ…ಆದರೂ ಒಂದೇ ಅಲ್ಲ !
Proba 3 Mission: ಕೃತಕ ಸೂರ್ಯ ಗ್ರಹಣಕ್ಕೆ ಸಿದ್ಧತೆ! ಏನಿದು ಪ್ರೋಬಾ 3 ಯೋಜನೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.