UAE ರಾಸ್ ಅಲ್ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು
Team Udayavani, Jun 29, 2024, 3:10 PM IST
ದುಬೈ:ಅರಬ್ ಸಂಯುಕ್ತ ಸಂಸ್ಥಾನದ ರಾಸ್ ಅಲ್ ಖೈಮಾ ಎಮಿರೇಟ್ಸ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯೋನ್ಮುಖವಾಗಿರುವ ರಾಕ್ ಕರ್ನಾಟಕ ಸಂಘ, ರಾಸ್ ಅಲ್ ಖೈಮಾದ ಅಶ್ರಯದಲ್ಲಿ ಜೂ.16ರಂದು ರಾಸ್ ಅಲ್ ಖೈಮಾ ಇಂಡಿಯನ್ ಅಸೋಸಿಯೇಶನ್ ಸಭಾಂಗಣದಲ್ಲಿ ಅನಿವಾಸಿ ಕನ್ನಡಿಗರ ಮಕ್ಕಳಿಗಾಗಿ ಪ್ರತಿಭಾನ್ವೇಷಣೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಬೆಳಗ್ಗೆ 10.00 ಗಂಟೆಗೆ ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾ ದ ಅಧ್ಯಕ್ಷರಾದ ಸಂತೋಷ್ ಹೆಗ್ಡೆ, ಮುಖ್ಯ ಅತಿಥಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸಮ್ಮುಖದಲ್ಲಿ ಯುಎಇ ಮತ್ತು ಭಾರತ ರಾಷ್ಟ್ರ ಗೀತೆ ಹಾಗೂ ಕರ್ನಾಟಕ ನಾಡ ಗೀತೆಯೊಂದಿಗೆ ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು.
ಅಬುದಾಭಿ ಕರ್ನಾಟಕ ಸಂಘದ ಅಧ್ಯಕ್ಷರು ಸರ್ವೋತ್ತಮ ಶೆಟ್ಟಿಯವರು, ಕರ್ನಾಟಕ ಸಂಘ ಶಾರ್ಜಾದ ಪೂರ್ವ ಅಧ್ಯಕ್ಷರು ಬಿ. ಕೆ. ಗಣೇಶ್ ರೈ, ಸಂಜನಾ, ಸುಕನ್ಯಾ ಶರತ್, ಸೋನಿಯಾ ಲೋಬೊ, ಶ್ರೀಲತಾ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಅಶೋಕ್ ಬೈಲೂರ್, ಸಂತೋಷ ಶೆಟ್ಟಿ ಪೊಳಲಿ ಸಮಾರಂಭದಲ್ಲಿ ಭಾಗಿಯಾಗಿದ್ದರು.
ನಾಲ್ಕು ವಿಭಾಗದಲ್ಲಿ ವಿವಿಧ ವಯೋಮಿತಿಯ ಮಕ್ಕಳು ಭಾಗವಹಿಸಿ ಮಕ್ಕಳಿಗೆ ಚಿತ್ರಿಸಲು ನೀಡಲಾಗಿದ್ದ ವಿಷಯ ಅಮ್ಮ, ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು, ಪರಿಸರ ಸಂರಕ್ಷಣೆ, ಸಹಿಷ್ಣುತೆ ಮತ್ತು ಸಹಬಾಳ್ವೆಯ ಬಗ್ಗೆ ಭಾಗವಹಿಸಿದ ಸ್ಪರ್ಧಿಗಳು ಅತ್ಯಂತ ಉತ್ಸಾಹದಿಂದ ಸುಂದರವಾದ ಚಿತ್ರಗಳನ್ನು ಮೂಡಿಸಿದ್ದರು. ತೀರ್ಪುಗಾರರಾಗಿ ಕ್ರಿಯಾತ್ಮಕ ಕಲಾ ನಿರ್ದೇಶಕರು ಬಿ. ಕೆ. ಗಣೇಶ್ ರೈ ಹಾಗೂ ರಾಸ್ ಅಲ್ ಖೈಮಾ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕಿ ಸಂಜನಾ ಭಾಗವಹಿಸಿದ್ದರು.
ಗಾಯನ ಸ್ಪರ್ಧೆಯಲ್ಲಿ ಹಲವು ಮಕ್ಕಳು ಭಾಗವಹಿಸಿದ್ದರು. ಸುಕನ್ಯಾ ಶರತ್ ಮತ್ತು ಡಾ| ರವಿ ಶಂಕರ್ ತಾಳಿತ್ತಾಯ ತೀರ್ಪುಗಾರರಗಿದ್ದರು. ನೃತ್ಯ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಮ್ಮ ತಮ್ಮ ಆಕರ್ಷಕ ನೃತ್ಯ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನ ಸೆಳೆದರು ತೀರ್ಪುಗಾರರಾಗಿ ಸೋನಿಯಾ ಲೋಬೊ ಮತ್ತು ಶ್ರೀಲತಾ ತೀರ್ಪು ನೀಡಿದರು.
ಸಮಾರೋಪ ಸಮಾರಂಭದಲ್ಲಿ ಸರ್ವೋತ್ತಮ ಶೆಟ್ಟಿಯವರು ರಾಕ್ ಕರ್ನಾಟಕ ಸಂಘದ ಕನ್ನಡ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ತೀರ್ಪುಗಾರರ ಪರವಾಗಿ ಬಿ. ಕೆ. ಗಣೇಶ್ ರೈಯವರು ಮಕ್ಕಳ ಪ್ರತಿಭೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ರಾಕ್ ಸಂಘಟನೆಯ ಕಾರ್ಯ ಯೋಜನೆಗಳನ್ನು ಶ್ಲಾಘಿಸಿದರು.
ಚಿತ್ರ ರಚನೆ ಮಾಡಿರುವ ಮಕ್ಕಳ ಚಿತ್ರಗಳ ಪ್ರದರ್ಶನ ಮಾಡಲಾಗಿತ್ತು. ವಿವಿಧ ವಿಭಾಗಳಲ್ಲಿ ಭಾಗವಹಿಸಿರುವ ಎಲ್ಲ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎಲ್ಲ ಪ್ರಾಯೋಜಕರುಗಳನ್ನು ಹಾಗೂ ರಾಕ್ ಸಿರೆಮಿಕ್ಸ್ ಸಂಸ್ಥೆಯ ಎಲ್. ಎಸ್. ಪಾಟೀಲ್ ಮತ್ತು ಕನ್ನಡಿಗರ ತಂಡವನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ದಿನಪೂರ್ತಿ ನಡೆದ ವಿವಿಧ ಕಾರ್ಯಕ್ರಮಗಳ ನಿರೂಪಣೆಯನ್ನು ಡಾ| ಕವಿತಾ ರಾವ್, ಸಿ. ಹರ್ಷ ಬಸವರಾಜ್, ಸವಿತಾ ಪ್ರಕಾಶ್, ಅಕ್ಷತಾ ಕಿಶೋರ್, ಅನುಪಮ ಕಲುºರ್ಗಿ, ಇಂದು ಆನಂದ್ ಅವರು ನೆರವೇರಿಸಿಕೊಟ್ಟರು. ರಾಕ್ ಕರ್ನಾಟಕ ಸಂಘದ ಅಧ್ಯಕ್ಷರ ಜತೆಗೆ ಉಪಾಧ್ಯಕ್ಷರಾದ ರಮೇಶ್ ರಂಗಪ್ಪ, ಕಾರ್ಯದರ್ಶಿ ಆಶಾ ಹೇಮಾದ್ರಿ, ಗೃಹಪಾಠ ಅಧ್ಯಕ್ಷರು ಡಾ| ಲೇಕಾ, ಸಾಂಸ್ಕೃತಿಕ ಕಾರ್ಯದರ್ಶಿ ಜಾನ್ ಇಮ್ಯಾನುವಲ್ ಹಾಗೂ ದೀಪಾ ಮತ್ತು ಇಂದೂ ಅವರ ಹಲವು ದಿನಗಳ ಪೂರ್ವಭಾವಿ ತಯಾರಿಯೊಂದಿಗೆ ನಡೆದ ಪ್ರತಿಭಾನೆಷಣೆ ಸ್ಪರ್ಧೆ ಅತ್ಯಂತ ಯಶಸ್ವಿಯಾಯಿತು.
ವರದಿ: ಬಿ. ಕೆ. ಗಣೇಶ್ ರೈ, ದುಬೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.