ವೃದ್ಧರು-ಅಂಗವಿಕಲರಿಗೆ ನೇರ ಅವಕಾಶ
ಸಂಜೆ ನಾಲ್ಕರ ನಂತರ ತುರುಸಿನ ಮತದಾನ•ಚುನಾವಣಾ ಸಿಬ್ಬಂದಿಗೆ ಸಕಲ ಸೌಕರ್ಯ
Team Udayavani, Apr 24, 2019, 4:59 PM IST
ಯಲ್ಲಾಪುರ: ತಾಲೂಕಿನ ಚಂದ್ಗುಳಿ ಗ್ರಾಪಂ ವ್ಯಾಪ್ತಿಯ ಹುತ್ಕಂಡ ಮತಗಟ್ಟೆಯಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು.
ಯಲ್ಲಾಪುರ: ಲೋಕಸಭಾ ಚುನಾವಣೆ ತಾಲೂಕಿನಲ್ಲಿ ಅತ್ಯಂತ ಶಾಂತಿಯುತವಾಗಿ ಹಾಗೂ ಯಾವುದೇ ಅಡಚಣೆಗಳಲಿಲ್ಲದೇ ನಡೆಯಿತು. ಎಲ್ಲಿಯೂ ಮತಯಂತ್ರ ದೋಷ ಪ್ರಕರಣ ವರದಿಯಾಗಿಲ್ಲ. ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯಿತು.
ಮತದಾನ ಬೆಳಗ್ಗೆ ಪ್ರಾರಂಭದಿಂದ ಮಧ್ಯಾಹ್ನ 11ರ ವರೆಗೆ ಸಾಲಿನಲ್ಲಿ ಗಂಟೆಗಟ್ಟಲೆ ಕಾಲ ನಿಂತು ಮತ ಚಲಾಯಿಸಿದರು. 11ರ ಹೊತ್ತಿಗೆ ಕೇವಲ ಶೇ.13.42 ರಷ್ಟು ಮತದಾನವಾಯಿತು. 12ರ ನಂತರದ ಸುಡುಬಿಸಿಲಿನಲ್ಲಿ ಮತದಾರರು ಮತಗಟ್ಟೆಗೆ ತೀರಾ ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು. ಆದರೆ ಸಾಯಂಕಾಲ ನಾಲ್ಕು ಗಂಟೆಯ ಹೊತ್ತಿಗೆ ಸ್ವಲ್ಪ ತುರುಸಿನ ಮತದಾನ ಕಂಡುಬಂತು.
ಮತಗಟ್ಟೆಗಳಲ್ಲಿ ವೃದ್ಧರಿಗೆ, ಅಂಗವಿಕಲರಿಗೆ ಅಶಕ್ತರಿಗೆ ನೇರವಾಗಿಯೆ ಮತಗಟ್ಟೆಯೊಳಗೆ ಬಿಟ್ಟು ಮತದಾನ ಅವಕಾಶ ಕಲ್ಪಿಸಿದ್ದು ಕಂಡುಬಂತು. ವ್ಹೀಲ್ಚೇರ್‌ನ್ನು ಒದಗಿಸಿದ್ದರಿಂದ ಅಂಗವಿಕಲರಿಗೆ ಅನುಕೂಲವಾಯಿತು.
ಅಬ್ಬರಿಸಿದ ಗುಡುಗು, ಆಲಿಕಲ್ಲು ಸಹಿತ ಮಳೆ: ಮಧ್ಯಾಹ್ನ ಮೂರರ ಹೊತ್ತಿಗೆ ತಾಲೂಕಿನ ಕೆಲ ಮತಗಟ್ಟೆ ವಲಯದಲ್ಲಿ ಒಮ್ಮೆಗೆ ಗುಡುಗು ಸಿಡಿಲು ಅಬ್ಬರಿಸಿ ಆಲಿಕಲ್ಲು ಸಹಿತ ಮಳೆ ಸುರಿಯಿತು. ಮಳಲಗಾಂವ್, ಸಂಪಿಗೆಪಾಲ್, ಹುತ್ಕಂಡ, ಹುಣಶೆಟ್ಟಿಕೊಪ್ಪ ಭಾಗದ ಮತಗಟ್ಟೆ ಕೇಂದ್ರದಲ್ಲಿ ಮಳೆ ಅಬ್ಬರಿಸಿತಾದರೂ ಪಟ್ಟಣದಲ್ಲಿ ವರುಣನ ಕೃಪೆಯಾಗಲಿಲ್ಲ. ಈ ಸಮಯಕ್ಕೆ ವಿದ್ಯುತ್ ಕೈಕೊಟ್ಟಿತು. ಆದರೂ ಮತದಾನ ಪ್ರಕ್ರಿಯೆಗೆ ಯಾವುದೇ ಅಡಚಣೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.