ಐತಿಹಾಸಿಕ ಸನ್ನತಿ ಬೌದ್ಧ ನೆಲೆಗೆ ಧಕ್ಕೆ

ಕೊಲ್ಲೂರಿನ ಕಾಲುವೆ ಬಳಿ ಭಾರಿ ಪ್ರಮಾಣದ ನೀರು•ಜಿಲ್ಲಾಡಳಿತ-ತಾಲೂಕಾಡಳಿತದಿಂದ ನೆರವು

Team Udayavani, Aug 10, 2019, 1:17 PM IST

10-Naveen-9

ವಾಡಿ: ಸನ್ನತಿ ಭೀಮಾ ಬ್ಯಾರೇಜ್‌ನಿಂದ ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿದ್ದು, ಕನಗನಹಳ್ಳಿ ದಂಡೆಯ ಐತಿಹಾಸಿಕ ಬೌದ್ಧ ನೆಲೆಗೆ ನೆರೆ ಭೀತಿ ಶುರುವಾಗಿದೆ.

ವಾಡಿ: ಈ ಭಾಗದ ಜೀವನದಿ ಭೀಮಾ ಸದ್ಯ ದಡ ಸೋಸಿ ಧುಮ್ಮಿಕ್ಕಿ ಹರಿಯುತ್ತಿದ್ದು, ಚಿತ್ತಾಪುರ ತಾಲೂಕಿನ ನದಿ ದಂಡೆ ಗ್ರಾಮಗಳಿಗೀಗ ನೆರೆಹಾವಳಿ ಭೀತಿ ಶುರುವಾಗಿದೆ. ನೀರಿಗಾಗಿ ತತ್ತರಿಸಿದ್ದ ಜನರೀಗ ಅದೇ ನೀರಿನ ಭಯದಿಂದ ನಿದ್ರೆಗೆಟ್ಟು ಕುಳಿತಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಡದೇ ಸುರಿಯುತ್ತಿರುವ ರಣಮಳೆಯಿಂದ ಕರ್ನಾಟಕದ ಜಲಾಶಯಗಳು ಭರ್ತಿಯಾಗಿದ್ದು, ರಾಜ್ಯದ ಕೃಷ್ಣಾ ಮತ್ತು ಭೀಮಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಉತ್ತರ ಕರ್ನಾಟಕದ ಜಿಲ್ಲೆಗಳು ನೆರೆಹಾವಳಿಯಿಂದ ತತ್ತರಿಸಿ ಹೋಗಿದ್ದರೆ, ಹೈದ್ರಾಬಾದ ಕರ್ನಾಟಕದ ಜನರ ಎದೆಯಲ್ಲಿ ನದಿಯೊಂದು ಓಡುವ ಮೂಲಕ ನೆಮ್ಮದಿಗೆ ಭಂಗ ತಂದೊಡ್ಡಿದೆ.

ಚಿತ್ತಾಪುರ ತಾಲೂಕಿನ ಕುಂದನೂರು, ಚಾಮನೂರು, ಕಡಬೂರು, ಮಾರಡಗಿ, ಕೊಲ್ಲೂರು, ಸನ್ನತಿ ಹಾಗೂ ಕನಗನಹಳ್ಳಿ ಗ್ರಾಮಗಳನ್ನು ಸ್ಪರ್ಷಿಸಿ ಹರಿಯುತ್ತಿರುವ ಭೀಮಾನದಿ, ಗ್ರಾಮವನ್ನು ಹೊಕ್ಕು ಜನರ ಬದುಕಿಗೆ ಧಕ್ಕೆ ತರುವ ಅಪಾಯ ಎದುರಾಗಿದೆ. ಒಡಲು ಹಿಗ್ಗಿಸಿಕೊಂಡು ಹರಿಯುತ್ತಿರುವ ಭೀಮೆ ಹಿನ್ನೀರು, ಭಣಗುಡುತ್ತಿರುವ ಕಾಗಿಣಾ ನದಿ ಪ್ರವೇಶ ಪಡೆದಿದೆ. ಹಿನ್ನೀರು ಇಂಗಳಗಿ ಗ್ರಾಮದ ವರೆಗೂ ನಿಂತಿರುವುದು ಕಂಡುಬಂದಿದೆ. ಕೊಲ್ಲೂರಿನ ಕೆನಾಲ್ ನಾಲೆ ಮೂಲಕ ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿದೆ.

ಬೌದ್ಧ ನೆಲೆಗೆ ಧಕ್ಕೆ: ಸನ್ನತಿ ಭೀಮಾ ಬ್ಯಾರೇಜ್‌ಗೆ ಇರುವ ಎಲ್ಲಾ 40 ಗೇಟ್‌ಗಳನ್ನು ತೆರೆದು ನೀರು ಬಿಡಲಾಗುತ್ತಿದ್ದು, ಕನಗನಹಳ್ಳಿ ಗ್ರಾಮದ ನದಿ ದಂಡೆಯಲ್ಲಿ ಪತ್ತೆಯಾಗಿರುವ 3ನೇ ಶತಮಾನಕ್ಕೆ ಸೇರಿದ ಸಾಮ್ರಾಟ್ ಅಶೋಕನ ಕಾಲದ ಐತಿಹಾಸಿಕ ಬೌದ್ಧ ನೆಲೆಗೆ ನೆರೆ ಧಕ್ಕೆಯಾಗುವ ಸಾಧ್ಯತೆಯಿದೆ. ನೆಲದಡಿ ಹೂತ ಸ್ಥಿತಿಯಲ್ಲಿ ದೊರೆತಿರುವ ಬುದ್ಧವಿಹಾರ, ಸಾವಿರಾರು ಬುದ್ಧನ ಮೂರ್ತಿಗಳು, ಪಾಲಿ ಭಾಷೆಯಲ್ಲಿರುವ ಶಿಲಾಶಾಸನ, ಅಶೋಕನ ಮೂರ್ತಿ, ಬೌದ್ಧ ಧರ್ಮದ ಇತಿಹಾಸ ಹೇಳುವ ಅನೇಕ ಶಿಲ್ಪಕಲಾಕೃತಿಗಳನ್ನು ಒಂದೆಡೆ ಸಂಗ್ರಹ ಮಾಡಿಡಲಾಗಿದ್ದು, ಜಲ ಸಂಕಟದಿಂದ ಅವುಗಳನ್ನು ರಕ್ಷಣೆ ಮಾಡಬೇಕಾದ ಅಗತ್ಯವಿದೆ.

ಸದ್ಯ ಸನ್ನತಿ ಬೌದ್ಧ ನೆಲೆಯ ವಸ್ತು ಸಂಗ್ರಹಾಲಯದ ಕಟ್ಟಡಕ್ಕೆ ಭೀಮೆ ಸ್ಪರ್ಷ ಮಾಡಿದ್ದು, ಆತಂಕ ಮನೆಮಾಡಿದೆ. ನದಿ ದಡದಲ್ಲಿರುವ ಸನ್ನತಿ ಶಕ್ತಿದೇವತೆ ಚಂದ್ರಲಾ ಪರಮೇಶ್ವರಿ ದೇವಸ್ಥಾನಕ್ಕೆ ಸಧ್ಯ ಯಾವುದೇ ಧಕ್ಕೆಯಿಲ್ಲ. ನೀರು ನಿರಂತರವಾಗಿ ಹರಿದರೆ ಶಕ್ತಿದೇವತೆ ದೇಗುಲವೂ ಜಲಾವೃತಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಕ್ಷಣ ಕ್ಷಣಕ್ಕೂ ಭೀಮೆಯ ಒಡಲಿನ ಜಲಧಾರೆ ಮಟ್ಟ ಏರಿಕೆಯಾಗುತ್ತಿದ್ದು, ಗ್ರಾಮಸ್ಥರಲ್ಲಿ ಹೆದರಿಕೆ ಶುರುವಾಗಿದೆ. ಈ ಮಧ್ಯೆ ಜಿಲ್ಲಾಧಿಕಾರಿಗಳು, ಸೇಡಂ ಸಹಾಯಕ ಆಯುಕ್ತರು, ಚಿತ್ತಾಪುರ ತಹಶೀಲ್ದಾರರು ಹಾಗೂ ಪೊಲೀಸ್‌ ಅಧಿಕಾರಿಗಳು ನದಿ ದಂಡೆ ಗ್ರಾಮಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಜನರ ನೆರವಿಗೆ ಸಜ್ಜಾಗಿದ್ದಾರೆ.

ಟಾಪ್ ನ್ಯೂಸ್

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.