ಡಾ|ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ
ಎದುರಾಳಿ ಜಾಧವ-ಮೋದಿ ಅಲ್ಲ; ವಿಚಾರಧಾರೆ ಪ್ರತಿಸ್ಪರ್ಧಿಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ
Team Udayavani, Apr 5, 2019, 1:00 PM IST
ಕಲಬುರಗಿ: ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಗುರುವಾರ ನಾಮಪತ್ರ ಸಲ್ಲಿಸಿದರು.
ಕಲಬುರಗಿ: ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಗುರುವಾರ ನಾಲ್ಕು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಶಾಸಕ
ಹಾಗೂ ಪಕ್ಷದ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದ ಖರ್ಗೆ, ಎಲ್ಲ ಚುನಾವಣೆಗಳಂತೆ ಈ ಚುನಾವಣೆ ಎನಿಸುತ್ತಿದೆ. ಕಠಿಣತೆ ಇಲ್ಲ. ಮೂರನೇ ಬಾರಿಗೆ ಸಂಸತ್ ಪ್ರವೇಶಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಲಾಗುವುದು. ಅಲ್ಲದೇ ಒಟ್ಟಾರೆ 12ನೇ ಬಾರಿಗೆ ಜಯ ಗಳಿಸುವ ದೃಢ ವಿಶ್ವಾಸ ಹೊಂದಲಾಗಿದೆ ಎಂದರು.
ತಮಗೆ ಎದುರಾಳಿ ಮೋದಿ, ಡಾ| ಜಾಧವ ಅಲ್ಲ. ತಮಗೆ ಏನಿದ್ದರೂ ವಿಚಾರಧಾರೆ ಸಂಘರ್ಷ ಹಾಗೂ ಪ್ರಜಾಪ್ರಭುತ್ವ ಉಳಿವು ಮುಖ್ಯ. ಜನರು ಜಾಣರಿದ್ದಾರೆ. ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹಿಂದಿನ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಮತದಾರರು ಆಶೀರ್ವಾದ ಮಾಡುತ್ತಾರೆ. ಮುಖ್ಯವಾಗಿ ಕೆಳಹಂತದಲ್ಲಿ ಎಲ್ಲರೂ
ತಮ್ಮೊಂದಿಗೆ ಇದ್ದಾರೆ. ಅದು ಈ ಚುನಾವಣೆಯಲ್ಲೂ ಸಾಬೀತಾಗಲಿದೆ ಎಂದರು.
ನನಗೆ ಮಹಾರಾಷ್ಟ್ರದ ಕಾಂಗ್ರೆಸ್ ಉಸ್ತುವಾರಿ ಜತೆಗೆ ಅನೇಕ ಕಡೆ ಪ್ರಚಾರಕ್ಕೆ ಹೋಗಬೇಕಾಗಿದೆ. ಕಲಬುರಗಿ ಕ್ಷೇತ್ರದಲ್ಲಿ ತಮ್ಮ ಪರ ಪಕ್ಷದ ಶಾಸಕರು, ಕಾರ್ಯಕರ್ತರು ಚುನಾವಣೆ ಪ್ರಚಾರ ಕಾರ್ಯ ನಡೆಸುತ್ತಾರೆ. ಅವರೆಲ್ಲ ತಾವೇ ಸ್ಪರ್ಧಿಸಿದಂತೆ ಚುನಾವಣೆ ಪ್ರಚಾರ ಕಾರ್ಯ ನಿರ್ವಹಿಸುತ್ತಾರೆ. ಈಗಾಗಲೇ ನಾಮಪತ್ರ ಸಲ್ಲಿಸುವ ಮುಂಚೆ ಎಲ್ಲ ವಿಧಾನಸಭೆ ಕ್ಷೇತ್ರಗಳಿಗೆ ಒಮ್ಮೆ ಹೋಗಿ ಬರಲಾಗಿದೆ.
ನಾಮಪತ್ರ ಸಲ್ಲಿಕೆಯಾಅಗಿದ್ದು, ಇನ್ನೊಮ್ಮೆ ಕ್ಷೇತ್ರದಾದ್ಯಂತ ಹೋಗಲಾಗುವುದು. ಒಟ್ಟಾರೆ ಗೆಲುವು ತಮ್ಮದೇ. ಅಭಿವೃದ್ಧಿ ಕಾರ್ಯಗಳೇ ತಮಗೆ ಶ್ರೀರಕ್ಷೆ ಎಂದು ಪುನರುಚ್ಚರಿಸಿದರು.
ಲೋಕಸಭೆ ಚುನಾವಣೆಯನ್ನು ಈ ಮುಂಚೆ ವೀರೇಂದ್ರ ಪಾಟೀಲ ಅವರಿಂದ ಹಿಡಿದು ಇಕ್ಬಾಲ್ ಅಹ್ಮದ ಸರಡಗಿವರೆಗಿನ ಚುನಾವಣೆಗಳನ್ನು ತಾವೇ ಮುಂದೆ ನಿಂತು ಮಾಡಿದ್ದೇವೆ. ಅದೇ ರೀತಿ ಈ ಚುನಾವಣೆಯೂ ಸರಳ ಎನಿಸುತ್ತಿದೆ. ಚುನಾವಣೆ ಪಾರದರ್ಶಕತೆ ಹಾಗೂ ಪ್ರಜಾಸತ್ತಾತ್ಮಕತೆಯಿಂದ ನಡೆಯಬೇಕು.
ಮಾಧ್ಯಮಗಳು ತಮ್ಮ ಹೊಣೆಗಾರಿಕೆ ಪ್ರಸ್ತುತಪಡಿಸಬೇಕು ಎಂದರು. ನಾಮಪತ್ರ ಸಲ್ಲಿಕೆ ವೇಳೆ ಶಾಸಕರಾದ ಎಂ.ವೈ. ಪಾಟೀಲ,
ಖನೀಜ್ ಫಾತೀಮಾ, ಮಾಜಿ ಸಚಿವ ಕೆ.ಬಿ. ಶಾಣಪ್ಪ, ಮುಖಂಡ ತಿಪ್ಪಣ್ಣಪ್ಪ ಕಮಕನೂರ ಹಾಜರಿದ್ದರು. ನಂತರ ಮೆರವಣಿಗೆಯಲ್ಲಿ
ಪಾಲ್ಗೊಂಡ ಖರ್ಗೆ ಮೆರವಣಿಗೆಯುದ್ದಕ್ಕೂ ಮತಯಾಚಿಸಿದರು.
ಒಂಭತ್ತು ಸಲ ವಿಧಾನಸಭೆಗೆ ಹಾಗೂ ಎರಡು ಸಲ ಲೋಕಸಭೆ
ಚುನಾವಣೆಯಲ್ಲಿ ತಮ್ಮ ಗೆಲುವಿನಲ್ಲೇ ಜನರು ತಮ್ಮ ಗೆಲುವು ಕಂಡುಕೊಂಡಿ ದ್ದಾರೆ. ಜನರ ಗೆಲುವಿನಲ್ಲಿ ತಮ್ಮ ಗೆಲುವು ಕಂಡು
ಕೊಳ್ಳಲಾಗಿದೆ. ಈ ಚುನಾವಣೆ ಯಲ್ಲಿಯೂ ಜನರೇ ಗೆಲ್ಲುತ್ತಾರೆ ಹಾಗೂ ಗೆಲ್ಲಿಸುತ್ತಾರೆ.
ಮಲ್ಲಿಕಾರ್ಜುನ ಖರ್ಗೆ, ಸಂಸದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.