ನಾಳೆ ಡಿಆರ್‌ಡಿಒಗೆ ಪ್ರಧಾನಿ ಮೋದಿ ಭೇಟಿ
ಪ್ರಧಾನಿಯಾದ ನಂತರ ಇದೇ ಮೊದಲ ಬಾರಿ ಆಗಮನ
Team Udayavani, Apr 8, 2019, 11:16 AM IST
ನಾಯಕನಹಟ್ಟಿ: ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಡಿಆರ್‌ಡಿಒ ಪ್ರದೇಶಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ನಾಯಕನಹಟ್ಟಿ: ಸಮೀಪದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರದೇಶಕ್ಕೆ ಪ್ರಧಾನಿ
ನರೇಂದ್ರ ಮೋದಿ ಏ. 9 ರಂದು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಡಿಆರ್‌ಡಿಒಗೆ ಭೇಟಿ ನೀಡಿ
ಪರಿಶೀಲಿಸಿದರು.
ಡಿಆರ್‌ಡಿಒ, ಐಐಎಸ್ಸಿ, ಬಿಎಆರ್ಸಿ, ಇಸ್ರೋ ಸೇರಿದಂತೆ ದೇಶದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳು ಹತ್ತು ಸಾವಿರ ಎಕರೆ ಪ್ರದೇಶದಲ್ಲಿವೆ. ಇದೇ ಮೊದಲ ಬಾರಿ ಪ್ರಧಾನಿಗಳು ಇಲ್ಲಿಗೆ ಭೇಟಿ
ನೀಡಲಿದ್ದಾರೆ. ಅದಕ್ಕಾಗಿ ಸೋಮವಾರ ಹಾಗೂ ಮಂಗಳವಾರ 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಡಿಆರ್‌ಡಿಒಗೆ ಭದ್ರತೆ ಒದಗಿಸಲಿದ್ದಾರೆ.
ಪ್ರಧಾನಿ ಮೋದಿ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಡಿಆರ್‌ಡಿಒ ವೈಮಾನಿಕ ನೆಲೆಗೆ ಮಂಗಳವಾರ ಮಧ್ಯಾಹ್ನ 12:30 ಕ್ಕೆ ಆಗಮಿಸಲಿದ್ದಾರೆ. ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ಎಂದು ಕರೆಯಲಾಗುವ ರನ್‌ವೇಯಲ್ಲಿ ವಿಶೇಷ ವಿಮಾನ
ಬಂದಿಳಿಯಲಿದೆ. ನಂತರ ಪ್ರಧಾನಿಯವರು ಇಲ್ಲಿನ ಪ್ರದೇಶದಲ್ಲಿ
ಕೈಗೊಂಡಿರುವ ಯೋಜನೆ ಹಾಗೂ ಸಂಶೋಧನೆಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆಯಲಿದ್ದಾರೆ. ನಂತರ ವಿಶೇಷ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಅಲ್ಲಿ ಒಂದೂವರೆ ಗಂಟೆ ಕಾಲ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿದ್ದಾರೆ.
ಪ್ರಧಾನಿಗಳ ಪ್ರವಾಸ ತಂಡದ ಸಿಬ್ಬಂದಿ ಈಗಾಗಲೇ ಮಾರ್ಗಸೂಚಿ
ಸಿದ್ಧಪಡಿಸಿದ್ದಾರೆ. ಪ್ರಧಾನಿ ಮೋದಿಯವರಿಗಾಗಿ ಎರಡು
ಹೆಲಿಕಾಪ್ಟರ್‌ಗಳು ಡಿಆರ್‌ಡಿಒ ರನ್ ವೇನಲ್ಲಿ ತಂಗಿವೆ. ಭಾನುವಾರ ಒಂದು ವಿಮಾನ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿ 45 ರಿಂದ ಡಿಆರ್‌ಡಿಒ ಪ್ರಮುಖ ಗೇಟ್ ಗೆ ತೆರಳಲಿರುವ 3.5 ಕಿಮೀ ರಸ್ತೆ
ಸೋಮವಾರ ಹಾಗೂ ಮಂಗಳವಾರ ಬಂದ್ ಆಗಲಿದೆ. ಗುರುತಿನ ಪತ್ರ ಹೊಂದಿರುವ ಡಿಆರ್‌ಡಿಒ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ಪ್ರವೇಶ ನಿಷೇಧಿಸಲಾಗಿದೆ.
ಭಾನುವಾರ ಬೆಳಿಗ್ಗೆ ಪೂರ್ವ ವಲಯ ಐಜಿಪಿ ಸೌಮೇಂದು
ಮುಖರ್ಜಿ, ಎಸ್ಪಿ ಡಾ| ಕೆ. ಅರುಣ್, ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ, ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ
ತಿಮ್ಮಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್‌ಐಗಳಾದ ಗುಡ್ಡಪ್ಪ, ಸತೀಶ್ ನಾಯಕ್, ರಘುನಾಥ್,
ಮೋಹನ್‌ಕುಮಾರ್, ರವಿ ಹಾಗೂ ಸಿಬ್ಬಂದಿಗಳು ಹಿರಿಯ
ಅ ಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಡಿಆರ್‌ಡಿಒ ವಿಜ್ಞಾನಿಗಳಾದ ಸರವಣ, ಬಾಲಸುಂದರಮ್ ಅವರು
ಡಿಆರ್‌ಡಿಒ ಪ್ರದೇಶದ ಬಗ್ಗೆ ಮಾಹಿತಿ ನೀಡಿದರು. ಸೋಮವಾರ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ರಿಹರ್ಸಲ್ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.