ಬಿರು ಬಿಸಿಲಿಗೆ ಜನ ತತ್ತರ
ಕೊಂಡ್ಲಹಳ್ಳಿ: ಗ್ರಾಮದ ಜ್ಯೂಸ್ ಅಂಗಡಿಯೊಂದರ ಮುಂದೆ ಜನರು ಜ್ಯೂಸ್, ಮಜ್ಜಿಗೆ ಸೇವಿಸುತ್ತಿರುವುದು.
Team Udayavani, Apr 4, 2019, 1:35 PM IST
ಕೊಂಡ್ಲಹಳ್ಳಿ: ತಾಲೂಕಿನ ಕಸಬಾ ಹೋಬಳಿಯ ಕೊಂಡ್ಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರುಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ಝಳಕ್ಕೆ ಹೆದರಿ ಮನೆಯಿಂದ ಹೊರಗೆ ಕಾಲಿಡಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ಬೆಳಿಗ್ಗೆ 9 ಗಂಟೆಯಿಂದಲೇ ಬಿಸಿಲು ಬೀಳಲು ಆರಂಭವಾಗುತ್ತದೆ. ಝಳದಿಂದಾಗಿ ಬೆವರು ಒಸರಲು ಶುರು ಆಗುತ್ತದೆ. ಬಿಸಿಲಿನ ಝಳದಿಂದ ಹಿರಿಯರು, ವಯೋವೃದ್ಧರು ಪ್ರಯಾಸ ಪಡುವಂತಾಗಿದೆ. ಕೆಲವರು ಗಿಡ-ಮರಗಳ ಅಡಿ ಕುಳಿತು ಕಾಲ ಕಳೆಯುತ್ತಿದ್ದಾರೆ. ಮನೆಯಿಂದ ಹೊರಗೆ ಬರಬೇಕಾದರೆ ಛತ್ರಿ, ಟವೆಲ್ ಏನಾದರೂ ಇರಲೇಬೇಕು ಎಂಬಂತಾಗಿದೆ.
ಬಾಯಾರಿಕೆ ನೀಗಿಸಲು ಎಳನೀರು, ಮಜ್ಜಿಗೆ, ಹಣ್ಣು, ತಂಪು ಪಾನೀಯ ಮಾರಾಟ ಅಂಗಡಿಗಳಿಗೆ ಜನರು ಧಾವಿಸುತ್ತಿದ್ದಾರೆ. ಕಲ್ಲಂಗಡಿ, ಎಳನೀರು, ಜ್ಯೂಸ್ ವ್ಯಾಪಾರ ಜೋರಾಗಿ ನಡೆದಿದೆ. ಯುವಕರು ಹಾಗೂ ಬಾಲಕರು ಉರಿಬಿಸಿಲಿನ ತಾಪ ತಣಿಸಿಕೊಳ್ಳಲು ತೋಟ, ಕಪ್ಪಲೆಗಳ ನೀರಿನ ತೊಟ್ಟಿಗಳನ್ನು ಅರಸಿಕೊಂಡು ಹೋಗುತ್ತಿದ್ದಾರೆ. ಈ ಬಾರಿ ಬೇಸಿಗೆ ತಾಪ ತುಸು ಜಾಸ್ತಿಯೇ ಇದ್ದು, ಯಾವಾಗ ಬೇಸಿಗೆ ಕಳೆಯುತ್ತದೆಯೋ ಶಿವ ಶಿವ ಎಂದು ಜನರು ನಿಟ್ಟುಸಿರು ಬಿಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.