ಬೌದ್ಧ ಬಾಲ ಸಂಸ್ಕಾರಕ್ಕೆ ಚಾಲನೆ

ಕ್ಷಮೆ ಬೌದ್ಧ ಧರ್ಮದ ತಿರುಳುದ್ವೇಷ ಬಿಟ್ಟು ಪರಸ್ವರ ಪ್ರೀತಿಯಿಂದ ಬದುಕು ಸಾಗಿಸಿ

Team Udayavani, Apr 10, 2019, 3:12 PM IST

10-April-21

ವಿಜಯಪುರ: ಜಲನಗರದ ಸಾರಿಪುತ್ರ ಬುದ್ಧ ವಿಹಾರದಲ್ಲಿ ನಡೆಯುತ್ತಿರುವ ಬೌದ್ಧ ಬಾಲ ಸಂಸ್ಕಾರ ಶಿಬಿರದಲ್ಲಿ ಭಂತೆ ವರಜ್ಯೋತಿ ಪಬ್ಬಜ್ಜ ಮಾರ್ಗದರ್ಶನ ನೀಡಿದರು.

ವಿಜಯಪುರ: ಕ್ಷಮಾಗುಣಕ್ಕೆ ಬೌದ್ಧ ಧರ್ಮದಲ್ಲಿ ಮಹತ್ವದ ಸ್ಥಾನವಿದ್ದು, ಕ್ಷಮೆ ಯಾಚಿಸುವುದರಿಂದ ಮತ್ತು ಕ್ಷಮಿಸುವುದರಿಂದ ಮನುಷ್ಯ ದೊಡ್ಡವನೆನಿಸಿಕೊಳ್ಳುತ್ತಾನೆ ಎಂದು ಬೀದರ್‌ ಅಣದೂರಿನ ಬುದ್ಧ ಭೂಮಿ ಬುದ್ಧ ವಿಹಾರದ ಭಂತೆ ವರಜ್ಯೋತಿ ಹೇಳಿದರು.

ನಗರದ ಜಲನಗರದಲ್ಲಿ ಸಾರಿಪುತ್ರ ಬುದ್ಧ ವಿಹಾರದಲ್ಲಿ ನಡೆಯಲಿರುವ ಪಬ್ಬಜ್ಜ (ಬೌದ್ಧ ಬಾಲ ಸಂಸ್ಕಾರ) ಶಿಬಿರಕ್ಕೆ ಚಾಲನೆ ನೀಡಿ ಧರ್ಮೋಪದೇಶ ನೀಡಿದ ಅವರು, ವೈರಿಯನ್ನು ಶಾಂತಿಯಿಂದ ಗೆಲ್ಲಬೇಕೆಂಬುದು ಭಗವಾನ ಬುದ್ಧರ ಬೋಧನೆ, ಯಾರಲ್ಲೇ ಆಗಲಿ ಕ್ಷಮೆ ಕೇಳುವುದರಿಂದ ವೈರತ್ವವು ಶಮನವಾಗುತ್ತದೆ. ಮನಸ್ಸು ಹಗುರವಾಗುತ್ತದೆ.

ಕ್ಷಮೆ ಕೇಳುವುದರಿಂದ ಮತ್ತು ಕ್ಷಮೆ ನೀಡುವುದರಿಂದ ನಾವು ಸಣ್ಣವರಾಗುತ್ತೇವೆ ಎಂಬ ಭಾವನೆ ಬೇಡ ಎಂದರು. ವೈರತ್ವ ತೊರೆದು ಪರಸ್ಪರ ಪ್ರೀತಿ ತೋರುವುದರಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ನಾವೇಕೆ ಕ್ಷಮೆ ಕೇಳಬೇಕು ಎಂಬ ಮೊಂಡುತನ ಸಲ್ಲದು. ಕ್ಷಮೆ ಯಾಚನೆಯಿಂದ ನಮ್ಮ ವ್ಯಕ್ತಿತ್ವ ದೊಡ್ಡದಾಗುತ್ತದೆ ಮತ್ತು ಕ್ಷಮಾಗುಣವು ಮನುಷ್ಯನನ್ನು ಎತ್ತರದಲ್ಲಿ ನಿಲ್ಲಿಸುತ್ತದೆ ಎಂದರು.

ಭೂಮಿಯ ಮೇಲೆ, ಪ್ರಕೃತಿಯ ಮೇಲೆ ನಿತ್ಯವೂ ನಾವು ಎಷ್ಟೊಂದು ದೌರ್ಜನ್ಯ ಎಸಗುತ್ತೇವೆ. ಆದರೂ ನಿಸರ್ಗವು ನಮ್ಮ ಎಲ್ಲ ತಪ್ಪುಗಳನ್ನು ಕ್ಷಮಿಸುವಂತೆ ನಾವು ಕೂಡ ನಮಗೆ ಕೇಡು ಮಾಡಿದವರಿಗೂ ಕೆಟ್ಟದ್ದನ್ನು ಬಯಸದೆ ಕ್ಷಮಾಗುಣ ತೋರಬೇಕು ಎಂದು ಹೇಳಿದರು. ಬುದ್ಧ ವಿಹಾರ ನಿರ್ಮಾಣ ಸಮಿತಿ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಏಳು ದಿನಗಳ ಈ ಪಬ್ಬಜ್ಜ ಶಿಬಿರದಲ್ಲಿ ಸುಮಾರು 40 ಮಕ್ಕಳು ಪವಿತ್ರ ಚೀವರವನ್ನು ಧರಿಸಿ ಭಾಗವಹಿಸಿದ್ದಾರೆ.

ಶಿಬಿರ ಸಂಚಾಲಕರಾದ ಸಂತೋಷ ಶಹಾಪುರ, ವೆಂಕಟೇಶ ವಗ್ಯಾನವರ, ಸಂಜ್ಯೋತ ಔದಿ, ಅನಿಲ ಹೊಸಮನಿ,
ರಾಜಶೇಖರ ಯಡಹಳ್ಳಿ, ಮಹೇಶ ಕ್ಯಾತನ್‌, ಬಸವರಾಜ ಬ್ಯಾಳಿ, ಕೆ.ಎಂ.ಶಿವಶರಣ, ಸಾಬು ಚಲವಾದಿ, ಪೀರಪ್ಪ ನಡುವಿನಮನಿ, ನಾಗರಾಜ ಲಂಬು, ಬಸವರಾಜ ಚಲವಾದಿ, ಚಿದಾನಂದ ನಿಂಬಾಳ, ಶಶಿಕಾಂತ ಹೊನವಾಡಕರ, ಸಂತೋಷ ಸುತಗುಂಡಿ, ದಿಲೀಪ ಯಂಭತ್ನಾಳ, ಶಿವು ಮ್ಯಾಗೇರಿ, ಸಿದ್ದಮ್ಮ ನಡುವಿನಮನಿ, ಭಾಗ್ಯಶ್ರೀ ವಗ್ಯಾನವರ, ಶಾರದಾ ಹೊಸಮನಿ, ಸುಲೋಚನಾ ಚಲವಾದಿ, ಸುಜಾತಾ ಚಲವಾದಿ, ಭಾರತಿ ಹೊಸಮನಿ, ರೇಣುಕಾ ಶಹಾಪುರ, ಸಿದ್ದಮ್ಮ ಚಲವಾದಿ, ಮುಕ್ತಾಬಾಯಿ ಚಲವಾದಿ, ರಮಾ ಕ್ಯಾತನ್‌, ನಿರ್ಮಲಾ ಕಾಳೆ, ಅನಿತಾ ಔದಿ, ಸುಮಾ ತಡವಲಕರ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.