ಮೋದಿಯಿಂದ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದನೆ
ಶೋಭಾ ಕರಂದ್ಲಾಜೆಯವರಿಗೆ ಮಲೆನಾಡಿನ ಸಮಸ್ಯೆಗಳ ಅರಿವಿದೆ
Team Udayavani, Apr 11, 2019, 3:08 PM IST
ಆಲ್ದೂರು: ಪಟ್ಟಣದಲ್ಲಿ ಕಾಫಿಮಂಡಳಿ ಅಧ್ಯಕ್ಷ ಭೋಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಆಲ್ದೂರು: ಈ ಬಾರಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಕಾಳು ಮೆಣಸು ಧಾರಣೆ ಕುಸಿತ, ಹವಾಮಾನ ವೈಪರಿತ್ಯದಿಂದಾಗಿ ಕಾಫಿ ಉದ್ದಿಮೆ ಸಂಕಷ್ಟಕ್ಕೆ ತುತ್ತಾಗಿದೆ. ಈ ಬಗ್ಗೆ ಶೋಭಾ ಕರದ್ಲಾಂಜೆಯವರು ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು
ಚಿಕ್ಕಮಗಳೂರು ಜಿಲ್ಲೆಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೆಗೌಡ ಹೇಳಿದರು.
ಆಲ್ದೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೋಭಾ ಕರಂದ್ಲಾಜೆ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿಗೆ ಮಲೆನಾಡಿನ ಕಾಫಿಯ ವಾಸನೆ ಗೊತ್ತಿಲ್ಲ. ಅವರನ್ನು ಅಭ್ಯರ್ಥಿಯನ್ನಾಗಿ
ಮಾಡಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿಗಳ ನಡುವೆ ಹೊಂದಾಣಿಕೆಯಾಗುತ್ತಿಲ್ಲ. ನಮ್ಮ ಅಭ್ಯರ್ಥಿ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಕಾಫಿ ಉದ್ದಿಮೆಯ
ಬಗ್ಗೆ ಅವರಿಗೆ ಅರಿವಿದೆ ಎಂದರು.
ನಾವು ಹಿಂದಿನ ಬಾರಿಯ ಚುನಾವಣೆಯಲ್ಲಿ 1,83,000 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿದ್ದು ಈ ಬಾರಿ ನಮ್ಮ ಗೆಲವಿನ
ಅಂತರ 2,83,000 ಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಹೊರ ದೇಶದಲ್ಲಿ ಕಾಫಿ ಉತ್ಪಾದನೆ ಹೆಚ್ಚಾಗಿದ್ದು, ಇದು ಕಾಫಿ ಧಾರಣೆಯ ಮೇಲೆ ಪರಿಣಾಮ ಬೀರುತ್ತಿದೆ. ಎರಡು ಭಾರಿ ಕಾಫಿ ಬೆಳೆಗಾರರಿಗೆ ಸಬ್ಸಡಿ ನೀಡಿದ್ದು, ಮೂರನೇ ಹಂತದಲ್ಲಿ 269 ಕೋಟಿ ರೂ. ಬಿಡುಗಡೆಯಾಗಿದೆ. ನೀತಿ
ಸಂಹಿತೆಯಿರುವುದರಿಂದ ಚುನಾವಣೆ ಮುಗಿದ ನಂತರ ಸಬ್ಸಿಡಿ ನೀಡಲಾಗುವುದು ಎಂದರು.
ಕಾಫಿ ಬೋರ್ಡ್‌ಗಳಲ್ಲಿ ದುರುಪಯೋಗ ಕಂಡು ಬಂದ ಹಿನ್ನೆಲೆಯಲ್ಲಿ ಸಬ್ಸಿಡಿಯನ್ನು ರದ್ದು ಮಾಡಲಾಗಿದೆ. ಆದರೆ ಹನಿ ನೀರಾವರಿಗೆ ಶೇ.90
ದರದಲ್ಲಿ ಸಲಕರಣೆಗಳನ್ನು ನೀಡುತ್ತಿದೆ ಎಂದರು.
ಪಶ್ಚಿಮ ಘಟ್ಟ ಅರಣ್ಯ ಅಭಿವೃದ್ಧಿಯಾಗ ಬೇಕೆಂದರೆ ಈ ಭಾಗದಲ್ಲಿ ಕಾಫಿ ಉದ್ದಿಮೆ ಅಭಿವೃದ್ಧಿಯಾಗಬೇಕು. ಈ ಬಾರಿ ಕಾಫಿ ಮಂಡಳಿಯಿಂದ ಶಿಫಾರಸ್ಸು ಮಾಡಿದ್ದು, 25ಲಕ್ಷದವರೆಗೆ ಶೇ.3, 25 ಲಕ್ಷ ಮೇಲ್ಪಟ್ಟ ಬೆಳೆಗಾರರಿಗೆ ಶೇ.6 ದರದಲ್ಲಿ ಬ್ಯಾಂಕ್‌ಗಳು ಸಾಲ ನೀಡಿ ಕಾಫಿ ಉದ್ದಿಮೆಯನ್ನು ಬೆಳೆಸಲು ಸರ್ವ
ಪ್ರಯತ್ನ ಮಾಡಲಾಗುವುದು ಎಂದರು.
ಕಾಫಿ ಮಂಡಳಿಯ ಸದಸ್ಯರಾದ ಕಲ್ಲೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್ಯ, ಬಿಜೆಪಿ ಮುಖಂಡರಾದ ಪ್ರಸನ್ನ, ಸಂಧ್ಯನ್, ಶಿವಕುಮಾರ್ ಮತಿತ್ತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.