ಮೋದಿ ಪ್ರಧಾನಿಯಾಗಲು ದಲಿತರು ಬೆಂಬಲಿಸಲಿ: ಮೂರ್ತಿ
ಕಾಂಗ್ರೆಸ್ ಡಾ| ಅಂಬೇಡ್ಕರ್‌ನ್ನು ಸೋಲಿಸಿದಾಗ ನೆರವಿಗೆ ಬಂದಿತ್ತು ಬಿಜೆಪಿ
Team Udayavani, Apr 22, 2019, 2:56 PM IST
ವಿಜಯಪುರ: ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ. ಮೂರ್ತಿ ಮಾತನಾಡಿದರು.
ವಿಜಯಪುರ: ದೇಶಕ್ಕೆ ಉತ್ತಮ ಭವಿಷ್ಯ ರೂಪಿಸುವಲ್ಲಿ ನಿರತರಾದ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ದಲಿತರು ಬಿಜೆಪಿ ಬೆಂಬಲಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು ಹೇಳಿದರು.
ರವಿವಾರ ನಗರದಲ್ಲಿರುವ ಬಿಜೆಪಿ ಪ್ರಚಾರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಡಾ| ಅಂಬೇಡ್ಕರ್ ಅವರನ್ನು ಸೋಲಿಸಿದಾಗ ಜನಸಂಘದ ಶಾಮಪ್ರಸಾದ ಮುಖರ್ಜಿ ಅವರು ಬಾಬಾಸಾಹೇಬರನ್ನು ಪಶ್ಚಿಮ ಬಂಗಾಲದಿಂದ ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ಅವರ ಬೆಂಬಲಕ್ಕೆ ನಿಂತಿದ್ದನ್ನು ದೇಶದ ದಲಿತರು ಮರೆತಿಲ್ಲ ಎಂದರು.
ಅಂಬೇಡ್ಕರ್ ಮೃತಪಟ್ಟಾಗ ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಸ್ಥಳ ನೀಡಲು ಕಾಂಗ್ರೆಸ್ ನಿರಾಕರಿಸಿತು. ಪರಿಣಾಮ ಬಾಬಾಸಾಹೇಬರ ಶವವನ್ನು ಮುಂಬೈಗೆ ತಂದು ಸಮುದ್ರ ತೀರದಲ್ಲಿ ಅಂತ್ಯ ಸಂಸ್ಕಾರ ಮಾಡಲು ಕಾರಣರಾದವರ ದಲಿತ ವಿರೋಧಿ ನೀತಿ ಅಂದೇ ಬಹಿರಂಗವಾಗಿದೆ. 60 ವರ್ಷ ಆಳಿದ ಕಾಂಗ್ರೆಸ್ ದಲಿತರನ್ನು, ಅಲ್ಪಸಂಖ್ಯಾತರನ್ನು ತನ್ನ ಮತ ಬ್ಯಾಂಕ್ ಮಾಡಿಕೊಂಡು ವಂಚಿಸಿದ್ದು ಬಿಟ್ಟರೆ ಬೇರೇನನ್ನೂ ಮಾಡಿಲಿಲ್ಲ. ಆದರೆ ಬಿಜೆಪಿ ದಲಿತರನ್ನು ಎಂದೂ ಕಡೆಗಣಿಸಿಲ್ಲ, ಬದಲಾಗಿ ದಲಿತರನ್ನು ಗೌರವದಿಂದ ಕಂಡಿದೆ. ಅಂಬೇಡ್ಕರ್ ಬರದೆ ಸಂವಿಧಾನವನ್ನು ನರೇಂದ್ರ ಮೋದಿ ಅವರು ದೇಶ ಪ್ರವಿತ ಗ್ರಂಥ ಹೇಳಿದ್ದಾರೆ. ಬಾಬಾಸಾಹೇಬರ ಐದು ಸ್ಥಳಗಳನ್ನು ಸ್ಮಾರಕಗಳ ರೀತಿಯಲ್ಲಿ ಅಭಿವ್ರದ್ದಿ ಮಾಡಿ ಪ್ರವಾಸಿ ತಾಣಗಳಾಗಿ ಮಾಡಿದ್ದಾರೆ ಎಂದರು.
ಚಾಯ್ ವಾಲಾ ಪ್ರಧಾನಿ ಹುದ್ದೆ ಅಲಂಕರಿಸಲು ಸಂವಿಧಾನದಿಂದ ಸಾಧ್ಯವಾಗಿದೆ. ಈ ಚುನಾವಣೆ ದೇಶದ ಭದ್ರತೆ ಮತ್ತು ಅಭಿವೃದ್ಧಿಗಾಗಿ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ದೇಶ ರೋಸಿ ಹೋಗಿದೆ. ಅಪ್ಜಲ್ ಗುರು ಎಂಬುವವನ್ನು ಕಾಂಗ್ರೆಸ್ ರಕ್ಷಣೆ ಮಾಡಿತ್ತು. ಆದರೆ ಇಂದು ಸೈನಿಕರ ವಿಚಾರದಲ್ಲಿ ಮೋದಿ ಅವರು ತೆಗೆದುಕೊಂಡ ನಿರ್ಧಾರ ಶ್ಲಾಘನೀಯ ಎಂದರು.
ಇಂದು ನಾವು ಎಲ್ಲಿಯೇ ಪ್ರಚಾರಕ್ಕೆ ಹೋದರೂ ನರೇಂದ್ರ ಮೋದಿಯವರತ್ತ ಜನ ಒಲವು ತೋರುತ್ತಿದ್ದಾರೆ. ಮುಸ್ಲಿಂ ಬಂಧುಗಳಲ್ಲಿ ಕೂಡಾ ಬಹುತೇಕರು ದೇಶ ಭಕ್ತರಿದ್ದಾರೆ. ಅವರುಗಳು ಕೂಡಾ ನರೇಂದ್ರ ಮೋದಿ ಕೈ ಬಲಪಡಿಸಲು ಹೊರಟಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ದಲಿತ, ಬಡವರಿಗಾಗಿ ಹಲವರು ಜನಪ್ರೀಯ ಯೋಜನೆ ನೀಡಿದ್ದಾರೆ. ಮತ್ತೆ ಮೋದಿಯವರನ್ನು ಪ್ರಧಾನಿಯಾಗಿ ಮಾಡಿಲು ಸಂಸದ ರಮೇಶ ಜಿಗಜಿಣಗಿ ಅವರಿಗೆ ಮತ ನೀಡಬೇಕು. ಮೋದಿಯವರ ಕೈ ಬಲಪಡಿಸಬೇಕು. ಜಿಗಜಿಣಗಿ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಈ ಬಾರಿ ಅವರ ಗೆಲುವು ಖಚಿತ ಎಂದರು.
ಬಿಜೆಪಿ ಸಂವಿಧಾನ ಬದಲಾವಣೆ ಮಾಡಲು ಹೋರಟ್ಟಿದ್ದಾರೆಂಬ ಆರೋಪ ಸುಳ್ಳು. ಕಾಂಗ್ರೆಸ್ ಕೂಡ ಸಂವಿಧಾನಕ್ಕೆ ಕಾಲ ಕಾಲಕ್ಕೆ 95 ತಿದ್ದುಪಡಿ ಮಾಡಿದೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಾಯಿ ತಪ್ಪಿನಿಂದ ನೀಡಿರುವ ಸಂವಿಧಾನ ಬದಲಾವಣೆ ಹೇಳಿಕೆ ಕುರಿತು ಸಂಸತ್‌ನಲ್ಲೇ ಕ್ಷಮೆ ಯಾಚಿಸಿದ್ದು, ಅದೀಗ ಮುಗಿದ ಅಧ್ಯಾಯ. ಬಿಜೆಪಿಯಲ್ಲಿ ನಾಯಕತ್ವ ಗುಣ ಇರುವ ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಅಯಾ ಚುನಾವಣೆಯಲ್ಲಿ ಟಿಕೆಟ್ ನೀಡುತ್ತದೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಟಿಕೆಟ್ ಕೇಳಿಲ್ಲ ಎಂದು ವಿವರಿಸಿದರು.
ವೈ.ಸುಲೇಂದ್ರಗೌಡ, ಅರುಣ ಬಾಬು, ಶಿವಾನಂದ ಚಲುವಾದಿ, ಶಿವಾನಂದ ಮಖಣಾಪುರ, ಚಂದ್ರಶೇಖರ ಇದ್ದರು.
ಇಂದು ನಾವು ಎಲ್ಲಿಯೇ ಪ್ರಚಾರಕ್ಕೆ ಹೋದರೂ ನರೇಂದ್ರ ಮೋದಿಯವರತ್ತ ಜನ ಒಲವು ತೋರುತ್ತಿದ್ದಾರೆ. ಮುಸ್ಲಿಂ ಬಂಧುಗಳಲ್ಲಿ ಕೂಡಾ ಬಹುತೇಕರು ದೇಶ ಭಕ್ತರಿದ್ದಾರೆ. ಅವರುಗಳು ಕೂಡಾ ನರೇಂದ್ರ ಮೋದಿ ಕೈ ಬಲಪಡಿಸಲು ಹೊರಟಿದ್ದಾರೆ.
•ಚಿ.ನಾ. ರಾಮು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.